Vydyaloka

ಅಧಿಕ ರಕ್ತದೊತ್ತಡ ನಿಯಂತ್ರಣ ಹೇಗೆ?

ಸರಳ ಜೀವನಶೈಲಿ ಬದಲಾವಣೆಗಳು ಅಧಿಕ ರಕ್ತದೊತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಡಿಯೋವ್ಯಾಸ್ಕುಲರ್ ಗಂಡಾಂತರವನ್ನು ತಡೆಗಟ್ಟುತ್ತದೆ. ಆದ್ದರಿಂದ ಒಂದೇ ಹೃದಯ ಮತ್ತು ಒಂದೇ ಜೀವನ ಇರುವ ಕಾರಣ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ ಪ್ರವಹಿಸುವಿಕೆ ಎಂದರ್ಥ. ಅಪಧಮನಿಗಳು ರಕ್ತನಾಳಗಳಾಗಿದ್ದು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುತ್ತವೆ. ಇಡೀ ದಿನ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಸಾಮಾನ್ಯ ರಕ್ತದೊತ್ತಡವು 120ಎಂಎಂಎಚ್‍ಜಿ ಸಿಸ್ಟೋಲಿಕ್ (ಸಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಸಂಕುಚಿತವಾದಾಗ ರಕ್ತನಾಳಗಳ ಮೇಲೆ ಬೀಳುವ ಒತ್ತಡ) ಹಾಗೂ 80ಎಂಎಂಎಚ್‍ಜಿ ಡಿಸ್ಟೋಲಿಕ್ ರಕ್ತದೊತ್ತಡ (ಡಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಬಡಿತದ ನಡುವೆ ಹೃದಯ ವಿಶ್ರಮಿಸಿದಾಗ ಉಂಟಾಗುವ ಒತ್ತಡ ಎಂದರ್ಥ).ರಕ್ತದ ಒತ್ತಡದಲ್ಲಿ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಕಾರ್ಡಿಯೋವ್ಯಾಸ್ಕುಲರ್ ರೋಗಗಳು, ಮೂತ್ರಪಿಂಡ ರೋಗಗಳು ಮತ್ತು ಪಾಶ್ರ್ವವಾಯು ಗಂಡಾಂತರವನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣ:

ಅಧಿಕ ರಕ್ತದೊತ್ತಡ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸಾಂದರ್ಭಿಕವಾಗಿ ತಲೆನೋವು ಉಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಥವಾ ಮೌನ ಹಂತಕ ಎಂದು ಕರೆಯಲಾಗುತ್ತದೆ. ಯಾವುದೇ ಚಿಹ್ನೆ ಅಥವಾ ಲಕ್ಷಣಗಳು ಇಲ್ಲದೇ ಹೃದಯ, ರಕ್ತನಾಳಗಳು, ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಇದು ಹಾನಿಯನ್ನು ಮುಂದುವರೆಸುವುದರಿಂದ ಹೀಗೆ ಬಣ್ಣಿಲಾಗಿದೆ. ಬಹುತೇಕ ರಕ್ತದೊತ್ತಡದ ಪ್ರಕರಣಗಳಲ್ಲಿ ರಕ್ತದೊತ್ತಡ ಇರುವುದೇ ತಿಳಿಯದ ಕಾರಣ ಅಗಾಗ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸುವುದು ತುಂಬಾ ಮುಖ್ಯವಾಗಿರುತ್ತದೆ.ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಗಂಡಾಂತರದ ಸಂಗತಿಗಳೆಂದರೆ

ಯಾವುದೇ ಚಿಕಿತ್ಸೆಯನ್ನು ಪಡೆಯಲು ವಿಫಲವಾದರೆ ಏನು ತೊಡಕುಗಳು ಉಂಟಾಗುತ್ತವೆ?

ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವುದು ಹೇಗೆ?

ಚಿಕಿತ್ಸೆ ಆಯ್ಕೆಗಳು

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: