Vydyaloka

ಉತ್ತಮ ಜಲಚಿಕಿತ್ಸೆ – ಉಷಃಪಾನ

ಸ್ವಾಸ್ಠ್ಯರಕ್ಷಣೆಗಾಗಿ, ಸುದೀರ್ಘ ಆರೋಗ್ಯಕರ ಜೀವನಕ್ಕಾಗಿ ಉತ್ತಮ ದಿನಚರಿಯನ್ನು ಪಾಲಿಸುವುದು ಅತ್ಯವಶ್ಯ. ಆಯುರ್ವೇದದಲ್ಲಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಆರೋಗ್ಯದ ದೃಷ್ಟಿಯಿಂದ ಪಾಲಿಸಬೇಕಾದ ನಿಯಮಗಳನ್ನು, ಆರೋಗ್ಯದ ಸಿದ್ದ ಸೂತ್ರಗಳನ್ನು ದಿನಚರಿಯಲ್ಲಿ ನಿರ್ದೇಶಿಸಲಾಗಿದೆ.
ಅದರಂತೆ ಬ್ರಹ್ಮಮುಹೂರ್ತದಲ್ಲಿ ಬೆಳಿಗ್ಗೆ ಏಳುವುದರೊಂದಿಗೆ ದಿನಚರಿ ಪ್ರಾರಂಭವಾಗುವುದು. ಬ್ರಹ್ಮಮುಹೂರ್ತವು ಪ್ರದೇಶದಿಂದ ಪ್ರದೇಶಲ್ಲಿ ಭಿನ್ನವಾದರೂ, ಅಂದಾಜು ಸೂರ್ಯೋದಕ್ಕೆ ಮುಂಚಿನ 2 ಮುಹೂರ್ತ ಅಂದರೆ ಸೂರ್ಯೋದಯಕ್ಕೆ ಮುಂಚಿನ 1.30 ಗಂಟೆಯ ಕಾಲವನ್ನು ಬ್ರಹ್ಮಮುಹೂರ್ತ ಎನ್ನಲಾಗುವುದು. ಆರೋಗ್ಯ ಹಾಗೂ ಆಧ್ಯಾತ್ಮಿಕ ಸಿದ್ದಿಗೆ ಬ್ರಹ್ಮಮುಹೂರ್ತ ಬಹಳ ಪ್ರಶಸ್ತ ಸಮಯವಾಗಿದೆ.
ಈ ಕಾಲದಲ್ಲಿ ಸೇವಿಸುವ ನೀರನ್ನು ಉಷಃಪಾನ ಎನ್ನಲಾಗುವುದು. ರಾತ್ರಿಪರ್ಯಂತ ಶುದ್ದವಾದ ನೀರನ್ನು ಶೇಖರಿಸಿ ಉಷಃ ಕಾಲದಲ್ಲಿ ಅಥವಾ ಬ್ರಹ್ಮಮುಹೂರ್ತದಲ್ಲಿ ಸೇವಿಸಲು ತಿಳಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಉಷಃಪಾನವು ಮಹತ್ವದ್ದಾಗಿದ್ದು, ಮನಸನ್ನು ಉಲ್ಲಾಸಭರಿತವಾಗಿಸಿ, ದೇಹಕ್ಕೆ ನವಶಕ್ತಿಯನ್ನು ತುಂಬುತ್ತದೆ. ಅಲ್ಲದೇ ಹಲವಾರು ಆರೋಗ್ಯದ ಲಾಭವನ್ನು ಉಷಾಪಾನದಿಂದ ಪಡೆದುಕೊಳ್ಳಬಹುದು.
ಆಯುರ್ವೇದದ ಆಚಾರ್ಯರಾದ ಭಾವಪ್ರಕಾಶರು ಉಷಃಪಾನದ ಮಹತ್ವವನ್ನು ತಿಳಿಸುತ್ತಾ, ಯಾರು ಸೂರ್ಯೋದಯಕ್ಕೂ ಮುನ್ನ 8 ಪ್ರಸ್ರುತಿ (ಅಂದಾಜು 1.5 ಲೀ) ನೀರನ್ನು ಸೇವಿಸುವರೋ, ಅವರು ಸರ್ವರೋಗಗಳಿಂದ ಮುಕ್ತರಾಗಿ, ಶಾತಾಯುಷ್ಯ ಜೀವಿಸುವುದರೊಂದಿಗೆ, ದುರ್ಬಲತೆ ಹಾಗೂ ವೃದ್ದಾಪ್ಯದಿಂದ ದೂರವಾಗುತ್ತಾರೆ ಎಂದು ತಿಳಿಸಿದ್ದಾರೆ.
ಸೇವಿಸುವ ವಿಧಾನ
ಹಿಂದಿನರಾತ್ರಿ ಶುದ್ದವಾದ ನೀರನ್ನು ತಾಮ್ರ ಅಥವಾ ಕಂಚಿನ ಪಾತ್ರೆಯಲ್ಲಿ ಶೇಖರಿಸಿಡಬೇಕು. ಬೇಸಿಗೆಯಲ್ಲಿ ಮಡಿಕೆ ನೀರನ್ನು ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ನೀರನ್ನು ಉಪಯೋಗಿಸಬಹುದು. ಬೆಳಿಗ್ಗೆ ಬ್ರಹ್ಮಮುಹೂರ್ತದಲ್ಲಿ ಹಲ್ಲು ಉಜ್ಜದೆ, ಮಲವಿಸರ್ಜನೆ ಮಾಡುವ ಮೊದಲು. ಸುಖಾಸನದಲ್ಲಿ ಕುಳಿತು ಸಣ್ಣ ಸಣ್ಣ ಗುಟುಕುಗಳಾಗಿ ನೀರನ್ನು ಬಾಯಲ್ಲಿ ಇರಿಸಿ ದೇರ್ಘಶ್ವಾಸದೊಂದಿಗೆ ನೀರನ್ನು ಸೇವಿಸಬೇಕು.
ಕೆಮ್ಮು, ದಮ್ಮು, ಶ್ವಾಸಕೋಶತೊಂದರೆಯ ರೋಗಿಗಳು ಕಾಯಿಸಿ ಆರಿಸಿದ ನೀರನ್ನು ಅಥವಾ ಬೆಚ್ಚನೆಯ ನೀರನ್ನು ಸೇವಿಸಬಹುದು. ನೀರನ್ನು ಸೇವಿಸಿದ ತಕ್ಷಣ ಆಹಾರವನ್ನು ಸೇವಿಸಬಾರದು.

ಉಪಯೋಗಗಳು

ಹಲವು ರೋಗಗಳಲ್ಲಿ ಇದರ ಉಪಯೋಗಗಳು

– ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ಞರು, ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊ.: 9964022654   email : drsharmamysr@gmail.com

Share this: