Vydyaloka

ಭಗವಂತನ ನಿಸರ್ಗದತ್ತ ಔಷಧಾಲಯ

ಆಹಾರದಿಂದಲೇ ಆರೋಗ್ಯ

ತೈತ್ತರಿಯ ಉಪನಿಷತ್ತು 5000 ವರ್ಷಗಳ ಹಿಂದೆ ಬರೆದಿರುವುದು. ನಮ್ಮ ಆತ್ಮವು ಖಔಗಐ ಪಂಚಕೋಶಗಳಿಂದ ಸುತ್ತುವರೆದಿದೆ. ಈ ಪಂಚಕೋಶಗಳು ನಾವು ಹುಟ್ಟುವ ಮೊದಲು ಇರಲಿಲ್ಲ. ನಾವು ಮರಣಿಸಿದ ನಂತರವೂ ಇರುವುದಿಲ್ಲ. ಆತ್ಮವು ನಾವು ಹುಟ್ಟುವ ಮೊದಲು ಇತ್ತು. ನಾವು ಮರಣಿಸಿದ ನಂತರವೂ ಇರುತ್ತದೆ. ಆತ್ಮ ಈ ನಮ್ಮ ನಶ್ವರ ಶರೀರವನ್ನು ಬಿಟ್ಟು ಮತ್ತೊಂದು ಹೊಸ ನಶ್ವರವಾಗುವ ದೇಹಕ್ಕೆ ಸೇರಿಕೊಳ್ಳುತ್ತದೆ. ಮೃತ ಶರೀರವು ಕೊಳೆಯುತ್ತಾ ಈ ಪಂಚಭೂತಗಳಲ್ಲಿ ಮರೆಯಾಗುತ್ತದೆ. ತೈತ್ತರಿಯ ಉಪನಿಷತ್ತು ಮತ್ತು ಯೋಗಶಾಸ್ತ್ರಗಳಲ್ಲಿ ವಿವರಿಸಿದ ಪಂಚಕೋಶಗಳು
(1) ಅನ್ನಮಯಕೋಶ (2) ಪ್ರಾಣಮಯಕೋಶ (3) ಮನೋಮಯ ಕೋಶ (4) ವಿಜ್ಞಾನಕೋಶ ಮತ್ತು (5) ಆನಂದಮಯ ಕೋಶ.
ಅನ್ನಮಯ ಕೋಶ : ಅನ್ನಮಯ ಕೋಶವು ನಾವು ಊಟಮಾಡುವ ಆಹಾರದಿಂದ ತಯಾರಾದ ಕೋಶ. ಇದು ನಮ್ಮ ಕಣ್ಣಿಗೆ ಕಾಣುವ ಭೌತಿಕ ಶರೀರ.
ಪ್ರತಿಯೊಬ್ಬರು ಈ ಅನ್ನಮಯಕೋಶವನ್ನು ಕಾಣುವರು. ಮುಟ್ಟುವರು ಮತ್ತು ಪ್ರತಿಯೊಬ್ಬರ ಅನುಭವಕ್ಕೆ ಬರುವುದು. ಈ ಕೋಶವು ನಮ್ಮ ದೇಹದ ಹೊದಿಕೆಯಾದ ಚರ್ಮ, ಲೋಳೆಪರಿ (Skin and Mucous Membrane) ನಮ್ಮ ದೇಹಕ್ಕೆ ಆಧಾರಸ್ಥಂಭವಾದ ಎಲುಬು, ಮಾಂಸ, ಶರೀರದ ಅವಯವಗಳಾದ ಮಿದುಳು, ಹೃದಯ, ಪುಪ್ಪಸ, ಜಠರ, ಮೂತ್ರಕೋಶ, ಮೂತ್ರ ಜನಕಾಂಗ, ರಕ್ತ, ಕಣ್ಣು, ಮೂರು ಮತ್ತು ಕಿವಿಗಳಿಂದ ಆದ ಶರೀರಕ್ಕೆ ಅನ್ನಮಯ ಕೋಶ ಎನ್ನುತ್ತೇವೆ.
ಈ ಅನ್ನಮಯ ಕೋಶದಲ್ಲಿ ಏನಾದರೂ ಕೊರತೆ ಉಂಟಾದರೆ, ನಮ್ಮ ದೇಹ್ಕಕೆ ತೊಂದರೆಯಾಗುತ್ತದೆ. ಶರೀರವು ರೋಗದಿಂದ ನರಳುತ್ತದೆ. ಉಳಿದ ನಾಲ್ಕು ಕೋಶಗಳಲ್ಲಿಯೂ ಕೂಡ ನ್ಯೂನತೆ ಕಂಡುಬರುತ್ತದೆ. ಈ ಅನ್ನಮಯ ಕೋಶವು ನಾಲ್ಕು ಸೂಕ್ಷ್ಮ ಕೋಶಗಳಿಂದ ಸುತ್ತುವರೆದಿದೆ. ನಾಲ್ಕು ಕೋಶಗಳು ಸಾಮಾನ್ಯ ಜನರಿಗೆ ಕಾಣುವುದಿಲ್ಲ. ಯೋಗಿಗಳು, ಸಿದ್ಧಪುರುಷರು ಮತ್ತು ಪ್ರಾಣಿಕ್ ಚಿಕಿತ್ಸೆ ಮಾಡುವವರು ಈ ಕೋಶಗಳನ್ನು ಗ್ರಹಿಸಬಲ್ಲರು. ವಿಶೇಷವಾದ ಆಕಾರ ತಂತ್ರಕೌಶಲ್ಯ ಛಾಯಚಿತ್ರ – `ಕಿರ್ಲಿಯಾನ್ ಛಾಯಾಚಿತ್ರ’ದ ಮೂಲಕ ಈ ಕೋಶಗಳನ್ನು ಚಿತ್ರಿಸಬಹುದು.
ಅನ್ನಮಯಕೋಶವನ್ನು ಪ್ರಾಣಮಯ ಕೋಶವು ಸುತ್ತುವರೆದಿದೆ. ಪ್ರಾಣಮಯಕೋಶವು ನಾವು ತೆಗೆದುಕೊಳ್ಳುವ ಉಸಿರಿನಿಂದ ಆದ ವಿಶೇಷಕೋಶವು. ಈ ಕೋಶವನ್ನು ಮನೋಮಯ – ಅಂದರೆ ನಮ್ಮ ಭಾವನೆಗಳನ್ನು ಪ್ರತಿಬಿಂಬಿಸುವ ಭಾವನಾತ್ಮಕ ಕೋಶವು ಸುತ್ತುವರೆದಿರುತ್ತದೆ. ಈ ಕೋಶವನ್ನು ವಿಜ್ಞಾನಮಯ ಕೋಶ – ಬೌದ್ಧಿಕ ಜ್ಞಾನಕೋಶವು ಸುತ್ತುವರೆದಿದೆ. ಈ ಕೋಶವನ್ನು ಐದನೆಯ ಕೋಶ – ಆನಂದಮಯ ಕೋಶವು ಸುತ್ತುವರೆದಿರುತ್ತದೆ.
ಅನ್ನಮಯಕೋಶವು ನಮ್ಮ ಸ್ಥೂಲ ಶರೀರ. ಇದು ಎಲ್ಲ ಕೋಶಗಳಲ್ಲಿ ಅತಿ ಹೆಚ್ಚು ದಟ್ಟನೆಯ ಕೋಶವಾಗಿದ್ದು, ಸಾಮಾನ್ಯ ಜನರಿಗೆ ತಿಳಿಯುವ ಶರೀರವಾಗಿದೆ. ತಾಯಿಯ ಗರ್ಭದಲ್ಲಿ ವೀಯರ್ಾಣು ಮತ್ತ ಅಂಡಾಣು ಎರಡು ಸಂಯೋಗ ಹೊಂದಿ, ಅವು ಬೆಳೆದು ಸಂಪೂರ್ಣ ಶಿಶುವಾಗಿ ಜನ್ಮ ತಾಳಿ ನಮ್ಮ ಇವತ್ತಿನ ರೂಪಕ್ಕೆ ಬೆಳೆಯುತ್ತವೆ.
ನಾವು ಊಟಮಾಡುವ ಆಹಾರವು ಬಾಯಿಯಲ್ಲಿಯ ಹಲ್ಲುಗಳಿಂದ, ನಾಲಿಗೆ ಮತ್ತು ಲಾಲಾರಸದಿಂದ ಸ್ವಲ್ಪ ಮಟ್ಟಿಗೆ ಪಚನವಾಗಿ ಹೊಟ್ಟೆ ಮತ್ತು ಜಠರಕ್ಕೆ ಬರುತ್ತದೆ. ಹೊಟ್ಟೆ ಮತ್ತು ಜಠರದಲ್ಲಿ ಪೂರ್ಣ ಪಚನವಾಗಿ ರಕ್ತನಾಳಗಳ ಮೂಲಕ ಯಕೃತ್ ಸೇರುತ್ತದೆ. ಯಕೃತ್ದಲ್ಲಿ ನಮ್ಮ ದೇಹಕ್ಕೆ ಬೇಕಾದ ಪುಷ್ಠಿಕಾರಕ ದ್ರವ ತಯಾರು ಆಗುತ್ತದೆ.
ಈ ಪುಷ್ಠಿಕಾರಕ ದ್ರವವು ರಕ್ತನಾಳಗಳ ಮೂಲಕ ವೃಷಾಣುಗಳಿಗೆ (Testis) ತಲುಪಿ, ವೃಷಾಣುಗಳಲ್ಲಿ ವೀಯರ್ಾಣುವಾಗಿ ಪರಿವರ್ತನೆಯಾಗುತ್ತದೆ. ಪುಷ್ಠಿಕಾರಕ ದ್ರವವು ಸ್ತ್ರೀಯ ಅಂಡಾಶಯ (Ovary) ತಲುಪಿ, ಅಂಡಾಣುವಾಗಿ ಪರಿವರ್ತನೆಯಾಗುತ್ತದೆ. ವೀಯರ್ಾಣು ಮತ್ತು ಅಂಡಾಣು ಎರಡು ನಮ್ಮ ಆಹಾರದಿಂದಲೇ ಅಭಿವೃದ್ಧಿಯಾಗಿರುತ್ತವೆ. ತಾಯಿಯ ಗರ್ಭಕೋಶದಲ್ಲಿ ವೀಯರ್ಾಣು ಮತ್ತು ಅಂಡಾಣುವಿನಿಂದ ಉತ್ಪನ್ನವಾಗುವ ಜೀವಾಣುವು ಕೂಡ ನಾವು ಊಟಮಾಡುವ ಆಹಾರದಿಂದಲೇ ಬೆಳೆಯುತ್ತದೆ. ಅಂದರೆ ನಮ್ಮ ಅನ್ನಮಯಕೋಶವು ನಾವು ಊಟಮಾಡುವ ಆಹಾರದಿಂದಲೇ ಉತ್ಪನ್ನವಾಗಿರುತ್ತದೆ. ನಮ್ಮ ಈ ಅನ್ನಮಯಕೋಶವು ಸಂಪೂರ್ಣವಾಗಿ ಕ್ರಮಬದ್ಧವಾಗಿ ಇರಬೇಕಾದರೆ ನಾವು ಪ್ರತಿ 4 ರಿಂದ 6 ತಾಸುಗಳಿಗೊಮ್ಮೆ ಆಹಾರವನ್ನು ಸೇವಿಸುತ್ತಲೇ ಇರಬೇಕು. ನಾವು ಆಹಾರವನ್ನು ತಿನ್ನುವುದು ಕಡಿಮೆ ಮಾಡಿದರೆ ನಮ್ಮ ಅನ್ನಮಯ ಕೋಶದಲ್ಲಿ ನ್ಯೂನ್ಯತೆಗಳು ಕಾಣಿಸಿಕೊಳ್ಳುತ್ತವೆ. ಈ ನ್ಯೂನ್ಯತೆಗಳಿಂದ ನಮ್ಮ ದೇಹಕ್ಕೆ ಕಷ್ಟವಾಗಿ, ರೋಗಗಳಿಂದ ಭಾದೆಪಡುತ್ತೇವೆ. ಅನ್ನಕೋಶದಲ್ಲಿನ ತೊಂದರೆಯು ಬೇರೆ ಕೋಶಗಳಿಗೆ ಹಬ್ಬಬಹುದು.
ನಮ್ಮ ಆಹಾರ : ನಾವು ಸೇವಿಸುವ ಆಹಾರವು ಗಿಡ ಮರಗಳಿಂದ, ಇಲ್ಲವೆ ಪಶುಪಕ್ಷಿಗಳಿಂದ ಸಿಗುತ್ತದೆ. ಪ್ರತಿಯೊಂದು ಜೀವಿಗೂ ಆಹಾರ ಬೇಕು. ಪ್ರತಿಯೊಂದು ಜೀವಿಯ ಆಹಾರವು ಪಂಚಮಹಾಭೂಗಳಾದ ಪ್ರಥ್ವಿ, ನೀರು, ಗಾಳಿ, ಸೂರ್ಯ ಮತ್ತು ಆಕಾಶಗಳಿಂದ ಪಡೆದುಕೊಳ್ಳತ್ತವೆ. ಗಿಡವು ತನ್ನ ಬೇರುಗಳಿಂದ ಮಣ್ಣಿನಲ್ಲಿಯ ಪೌಷ್ಠಿಕ ಅಂಶಗಳನ್ನು ಮತ್ತು ನೀರನ್ನು ಹೀರಿಕೊಳ್ಳುತ್ತದೆ. ಗಿಡದಲ್ಲಿಯ ಎಲೆಗಳು ಸೂರ್ಯರಶ್ಮಿ, ಗಾಳಿಯ ಸಹಾಯದಿಂದ ಹೀರಿಕೊಂಡ ಪೌಷ್ಠಿಕ ಅಂಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಆಹಾರವಾಗಿ ಪರಿವತರ್ಿಸುತ್ತದೆ. ಈ ಕ್ರಿಯೆಯಿಂದ ಗಿಡಗಳು ಮಾನವರಿಗೆ ಬೇಕಾದ ಹಣ್ಣುಗಳನ್ನು, ಕಾಳುಗಳನ್ನು ಮತ್ತು ತರಕಾರಿಗಳನ್ನು ಉತ್ಪನ್ನ ಮಾಡುತ್ತವೆ. ಪ್ರಾಣಿಗಳು ಹಣ್ಣು, ಕಾಳುಗಳು ಮತ್ತು ತರಕಾರಿಗಳನ್ನು ತಿಂದು ಮತ್ತು ಇತರ ಪ್ರಾಣಿಗಳನ್ನು ತಿಂದು ತಮ್ಮ ದೇಹ ಬೆಳೆಸಿಕೊಳ್ಳುತ್ತವೆ. ಗಿಡಮರಗಳ ಮತ್ತು ಪ್ರಾಣಿಗಳ ದೇಹವು ಅದರದೇ ಆದ ಅನ್ನಮಯಕೋಶ ಹೊಂದಿದೆ.
ಮನುಷ್ಯ ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ತಿಂದು ತನ್ನ ದೇಹವನ್ನು ಬೆಳೆಸಿಕೊಳ್ಳುತ್ತಾನೆ. ಮನುಷ್ಯರ ದೇಹ ಎಂದರೆ ಮನುಷ್ಯರ ಅನ್ನಮಯಕೋಶವು. ಮನುಷ್ಯರ ಅನ್ನಮಯಕೋಶವು ಗಿಡಮರಗಳ ಮತ್ತು ಪ್ರಾಣಿಗಳ ಅನ್ನಮಯಕೋಶವನ್ನು ತಿಂದು ಬೆಳೆಯುತ್ತದೆ. ಒಬ್ಬರ ಅನ್ನಮಯಕೋಶವು ಇನ್ನೊಬ್ಬರ ಆಹಾರವಾಗುತ್ತದೆ. ಒಬ್ಬರ ಜೀವವನ್ನು ತಿಂದು ಇನ್ನೊಬ್ಬರು ಬೆಳೆಯುತ್ತಾರೆ. ನಾವು ಊಟಮಾಡುವ ಆಹಾರವೇ ಸತ್ಯ. ಈ ಆಹಾರವು ಪಂಚಮಹಾಭೂತಗಳಿಂದ ಬರುತ್ತದೆ.
ನಮ್ಮ ಅನ್ನಮಯಕೋಶವನ್ನು ಬೆಳೆಸುವುದು ಮತ್ತು ಕಾಪಾಡಿಕೊಂಡು ಜೀವನಮಾಡಲು ಪ್ರತಿನಿತ್ಯ 4 ರಿಂದ 6 ತಾಸುಗಳಿಗೊಮ್ಮೆ ಆಹಾರ ಸೇವಿಸಬೇಕು. ನಾವು ಊಟ ಮಾಡುವ ಆಹಾರವು ನಮ್ಮ ಅನ್ನಮಯ ಕೋಶವನ್ನು ಬೆಳೆಸುತ್ತದೆ. ನಮ್ಮ ಆಹಾರವು ಸರಳವಾಗಿದ್ದು, ತಾಜಾವಾಗಿದ್ದು, ಸಾತ್ವಿಕವಾಗಿದ್ದರೆ, ನಮ್ಮ ಅನ್ನಮಯ ಕೋಶವು ಚೆನ್ನಾಗಿರುತ್ತದೆ. ನಾವು ಕೊಳೆತುಹೋದ, ಹಾಳಾದ ಆಹಾರವನ್ನು ಸೇವಿಸಿದರೆ, ಅನ್ನಮಯಕೋಶದಲ್ಲಿ ನ್ಯೂನ್ಯತೆಗಳು ಉಂಟಾಗುತ್ತವೆ. ಈ ನ್ಯೂನ್ಯತೆಗಳಿಂದ ನಮಗೆ ತೊಂದರೆಗಳಾಗಿ ರೋಗಗಳು ಬರುತ್ತವೆ.
ಭಗವಂತನು ನ್ಯೂನ್ಯತೆಗಳಿಂದ ನರಳುವ ಅನ್ನಮಯ ಕೋಶಕ್ಕೆ ಸಾಕಷ್ಟು ಜೌಷಧಿರೂಪದಲ್ಲಿರುವ ಆಹಾರವನ್ನು ನಿಸರ್ಗದಲ್ಲಿ ಕೊಟ್ಟಿರುವನು. ಸರಿಯಾದ ಆಹಾರವನ್ನು ನಾವು ಸೇವಿಸಿದರೆ, ನಮ್ಮ ಅನ್ನಮಯಕೋಶವು ಚೇತರಿಸಿಕೊಂಡು ತನ್ನ ನ್ಯೂನ್ಯತೆಗಳನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿ ನಮ್ಮನ್ನು ರೋಗಗಳಿಂದ ಮುಕ್ತಮಾಡುತ್ತದೆ.
ನಮ್ಮ ಋಷಿಮುನಿಗಳು ತಮ್ಮ ಅನುಭವದಿಂದ ಕಂಡುಕೊಂಡ ಸತ್ಯವನ್ನು ನಮಗೆ ತಿಳಿಸಿರುವರು. “ನಮ್ಮ ದೇಹದ ಯಾವ ಅವಯವವನ್ನು ನಮ್ಮ ಆಹಾರದಲ್ಲಿಯ ಹಣ್ಣುಗಳು ಮತ್ತು ತರಕಾರಿಗಳು ಹೋಲುತ್ತವೆಎಯೋ ಅಂತಹ ಹಣ್ಣು, ತರಕಾರಿಗಳನ್ನು ಸೇವಿಸಿದಾಗ ಆ ಅವಯವವು ಚೆನ್ನಾಗಿ ಬೆಳೆದು ಉತ್ತಮವಾಗಿ ಕೆಲಸಮಾಡುತ್ತದೆ ಎಂದ ತಿಳಿಸಿರುವರು.”
ನಮ್ಮ ದೇಹದಲ್ಲಿರುವ ಅವಯವಗಳನ್ನು ಹೋಲುವ ಆಹಾರ ಮತ್ತು ಆ ಆಹಾರದಲ್ಲಿರುವ ಪೌಷ್ಠಿಕ ಅಂಶಗಳನ್ನು ಅರ್ಥಮಾಡಿಕೊಳ್ಳೋಣ.
ಅಕ್ರೋಟ-WALNUT : ಅಕ್ರೋಟ ನಮ್ಮ ಮಿದುಳನ್ನು ಹೋಲುತ್ತದೆ. ಅಕ್ರೋಟದ ಹೊರ ಹೊದಿಕೆಯು, ಮಿದುಳನ್ನು ರಕ್ಷಿಸುವ ಎಲುಬಿನ ಹಾಗೆ ಗಟ್ಟಿಯಾಗಿ ಎರಡು ಪದರಿನಿಂದ ತಯಾರಾಗಿದೆ. ಈ ಕವಚವನ್ನು ತೆಗೆದಾಗ ಈ ಕವಚದ ಒಳಗಡೆ ನಮ್ಮ ಮಿದುಳನ್ನು ಹೋಲುವ ತಿರುಳು ಇರುತ್ತದೆ. ಈ ತಿರುಳನ್ನು ಪರೀಕ್ಷಿಸಿದಾಗ ಮಿದುಳಿನಲ್ಲಿರುವಂತೆ ಎಡ ಮತ್ತು ಬಲ ಹಣ್ಣಿನ ಭಾಗವು, ಸುಕ್ಕು ಮತ್ತು ಮಡಿಕೆಳಿಂದ ಕೂಡಿರುತ್ತದೆ. ಇದು ದೊಡ್ಡ ಮಿದುಳು – CEREBRUM ಹೋಲುತ್ತದೆ. ಇದರ ಕೆಳಭಾಗವು ಚಿಕ್ಕ ಮಿದುಳು – CEREBELLUM ಹೋಲುತ್ತದೆ. ನಮ್ಮ ಪೂರ್ವಜರು ಪ್ರತಿದಿನ 2 ರಿಂದ 4 ಅಕ್ರೋಟ ತಿನ್ನುವುದರಿಂದ ಮಿದುಳು ಪೂರ್ಣ ಬೆಳೆದು ಸಮರ್ಪಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿರುವರು. ಇದರ ಸತ್ಯವನ್ನು ತಿಳಿಯಲು ಅಕ್ರೋಟವನ್ನು ವಿಶ್ಲೇಷಿಸಿದಾಗ, ಅಕ್ರೋಟದಲ್ಲಿ ಮಿದುಳು ಮತ್ತು ನರಮಂಡಲವನ್ನು ರಕ್ಷಿಸುವ ಪೌಷ್ಠಿಕ ಅಂಶಗಳಾದ – ಲಿನೋಲಿಕ್ ಎಸಿಡ್, ಲಿನೋಲಿಯಕ್ ಎಸಿಡ್, ವಿಟಾಮಿನ್ ಈ, ವಿಟಾಮಿನ್ ಬಿ ಕಾಂಪ್ಲೆಕ್ಸ್ ಮತ್ತು ಮೆಲೊಟೊನಿನ್ ಇರುವುದು ತಿಳಿಯುತ್ತದೆ. ಈ ಎಲ್ಲ ಪೌಷ್ಠಿಕ ಅಂಶಗಳಿಂದ ಮಗುವಿನ ಬುದ್ಧಿ ಶಕ್ತಿ, ಗ್ರಾಹಕ ಶಕ್ತಿ ಹೆಚ್ಚುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ದಿನನಿತ್ಯ ಬರುವ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ನಮ್ಮ ಪೂವರ್ಿಕರು ಅಕ್ರೋಟವನ್ನು “ಗುರುವಿನ ಕಾಯಿ”- NUT OF JUPITER ಎಂದು ಪ್ರಶಂಸೆ ಮಾಡಿರುವರು ಮತ್ತು ಪ್ರತಿದಿನ ಮಕ್ಕಳಿಗೆ ತಿನ್ನಲು ಕೊಡಲು ಸೂಚಿಸಿರುವರು. ಇವತ್ತಿನ ವೈಜ್ಞಾನಿಕ ಸಂಶೋಧನೆ, ನಮ್ಮ ಋಷಿಮುನಿಗಳು ತಿಳಿಸಿರುವ ಸತ್ಯವನ್ನು ರುಜುವಾತುಪಡಿಸುತ್ತದೆ.
ಅವರೆಕಾಯಿ, ಅಲಸಂದಿ -BEANS: ಅವರೆಕಾಯಿ ನೋಡಲು ಮೂತ್ರಪಿಂಡದಂತೆ (KIDNEY) ಕಾಣುತ್ತದೆ. ಮೂತ್ರಪಿಂಡವು ಕ್ರಮಬದ್ಧವಾಗಿ ಕೆಲಸ ನಿರ್ವಹಿಸಲು ಅವರೆಕಾಯಿ, ಅಲಸಂದಿ ಮತ್ತು ಹುರಳಿಕಾಳುಗಳನ್ನು ತಿನ್ನಬೇಕು. ಈ ಕಾಳುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಸೋಡಿಯಂ ಇರುವುದರಿಂದ ಮತ್ತು ಹೆಚ್ಚು ಪ್ರಮಾಣದಲ್ಲಿ ಪೊಟ್ಯಾಸಿಯಂ, ಪಾಸ್ಪರಸ್, ಮೆಗ್ನೀಶಿಯಂ, ಮೆಂಗನಿಸ್, ಕಬ್ಬಿಣ, ತಾಮ್ರ, ಮತ್ತು ವಿಟಾಮಿನ್ ಬಿ. ಕಾಂಪ್ಲೆಕ್ಸ್ ಇರುವುರಿಂದ ಮೂತ್ರಪಿಂಡದ ಆರೋಗ್ಯ ಸುಧಾರಿಸುತ್ತದೆ.
ದ್ರಾಕ್ಷಿ-Grapes : ದ್ರಾಕ್ಷಿ ಹಣ್ಣು ಗೊಂಚಲು ಆಗಿ ಬಳ್ಳಿಗೆ ತೂಗುಬಿದ್ದಿರುತ್ತದೆ. ದೇಹದಲ್ಲಿ ಬಹಳಷ್ಟು ಕೋಶಗಳು, ರಕ್ತಕಣಗಳು ಗೊಂಚಲಾಗಿ ರಕ್ತದಲ್ಲಿ ತೂಗಾಡುತ್ತಿರುತ್ತವೆ. ದ್ರಾಕ್ಷಿ ಹಣ್ಣಿನಲ್ಲಿರುವ ರಿಸರ್ವರ್ಟ್ರಾಲ ಪ್ರತಿಯೊಂದು ಕೋಶಪರದೆಯ ಬೆಳವಣಿಗೆಗೆ ಬೇಕಾಗುತ್ತದೆ. ವಿಟಮಿನ್ ಸಿ ಕೂಡ ಕೋಶಗಳ ಬೆಳವಣಿಗೆಗೆ ಬೇಕಾಗುತ್ತದೆ.
ಗಜ್ಜರಿ – Carrot : ಗಜ್ಜರಿಯನ್ನು ಕತ್ತರಿಸಿ, ಹೋಳು ಮಾಡಿದಾಗ ಹೋಳಿನ ನಡುವಿನ ಭಾಗವು ಕಣ್ಣಿನ ನಡುವೆ ಕಾಣುವ ಕಣ್ಣಿನ ಗೊಂಬೆಯ (PUPIL) ಹಾಗೆ ಮತ್ತು ಅದರ ಸುತ್ತಲಿನ ಭಾಗವು, ಕಣ್ಣಿನ ಗೊಂಬೆಯ ಸುತ್ತಲು ಇರುವ ವೃತ್ತಾಕಾರದಂತೆ (IRIS) ಕಾಣುತ್ತದೆ. ಗಜ್ಜರಿ ತಿನ್ನುವುದರಿಂದ ಕಣ್ಣಿನ ಆರೋಗ್ಯವು ವೃದ್ಧಿಯಾಗುತ್ತದೆ. ಇವತ್ತು ಗಜ್ಜರಿಯನ್ನು ವಿಶ್ಲೇಷಿಸಿದಾಗ, ಗಜ್ಜರಿಯಲ್ಲಿರುವ ಬಿಟಾ-ಕೆರೋಟಿನ್, ಕಣ್ಣಿನ ಆರೋಗ್ಯಕ್ಕೆ ಕಾರಣ ಎಂದು ತಿಳಿಯುತ್ತದೆ. ಬಿಟಾ ಕೆರೋಟಿನ್ ದೇಹದಲ್ಲಿ ವಿಟಾಮಿನ್ ಎ ಆಗಿ ಪರಿವರ್ತನೆಗೊಂಡು ಕಣ್ಣಿನಲ್ಲಿ ರೊಡಪಸಿನ್ ಆಗಿ ಮಂದ ಬೆಳಕಿನಲ್ಲಿ ಕಣ್ಣು ಕಾಣುವಂತೆ ಸಹಾಯಮಾಡುತ್ತದೆ.
ಬೆಣ್ಣೆಹಣ್ಣು -Butter Fruit – Avocado : ಬೆಣ್ಣೆಹಣ್ಣು ಹೆಣ್ಣುಮಕ್ಕಳ ಗರ್ಭಕೋಶದಂತೆ ಕಾಣುತ್ತದೆ. ಹೂ ಪೂರ್ಣಬೆಳೆದು, ಹಣ್ಣು ಆಗಲು 9 ತಿಂಗಳು ಬೇಕಾಗುತ್ತದೆ. ಬೆಣ್ಣೆ ಹಣ್ಣಿನಲ್ಲಿ, ಹೆಚ್ಚು ವಿಟಾಮಿನ್ ಈ ಮತ್ತು ವಿಶೇಷವಾದ ಕೊಬ್ಬು ಇರುವುದರಿಂದ, ಅಂಡಾಶಯಗಳು – ಪುಷ್ಠಿಕಾರಕ ಸತ್ವಗಳಾದ – ಇಸ್ಟ್ರೋಜನ್ ಮತ್ತು ಪ್ರೊಜೆಸ್ಟೊರೋನ್ (Estrogen & Progesteron) ಉತ್ಪಾದಿಸಿ ಗರ್ಭಕೋಶವು ಸಶಕ್ತವಾಗಿ ಬೆಳೆಯುವಂತೆ ಸಹಾಯ ಮಾಡುತ್ತದೆ.
ಅಂಜೂರದ ಹಣ್ಣು – ಅತ್ತಿಹಣ್ಣು – Figs : ಅಂಜೂರದ ಹಣ್ಣಿನ ಒಳಭಾಗದಲ್ಲಿ ಹಣ್ಣಿನ ಬೀಜಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ವೀಯರ್ಾಣುಗಳಂತೆ ಕಾಣಿಸುತ್ತವೆ. ಅಂಜೂರದ ಹಣ್ಣು ವೃಷಣುವಿನಂತೆ (Testis) ಅಂಜೂರದ ಹಣ್ಣಿನಲ್ಲಿರುವ Phytocumarin -> Psoralens, ವೃಷಾಣುವನ್ನು ಪ್ರಚೋದಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ವೀಯರ್ಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚುಮಾಡುತ್ತದೆ. ಚರ್ಮದಲ್ಲಿ ಬಿಳಿತೊನ್ನು ಬರದಂತೆ, ಮೆಲೆಸೊಸೈಟಗಳನ್ನು ಪ್ರಚೋದಿಸಿ ಹೆಚ್ಚು ವರ್ಣದ್ರವ್ಯವನ್ನು ಉತ್ಪಾದಿಸಿ, ಚರ್ಮಕ್ಕೆ ಬಿಳಿತೊನ್ನು ಆಗದಂತೆ ಕಾಪಾಡುತ್ತದೆ.
ಸಿಹಿಗೆಣಸು : SWEET POTATO, ಇದು ನೋಡಲು ಮೇದೋಜ್ಜಿರಕ – PANCREAS ಗ್ರಂಥಿಯ ಹಾಗೇ ಕಾಣಿಸುತ್ತದೆ. ಇದರಲ್ಲಿರುವ ರಸಾಯನಿಕಗಳಾದ ಅಂಥೊಸೈನಿನ್, ರಕ್ತದಲ್ಲಿಯ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
ಉಳ್ಳಾಗಡ್ಡೆ-ಈರುಳ್ಳಿ-ONION. ಬಹು ಪದರುಗಳಿಂದ ದುಂಡಗೆ ಇರುವ ಈ ಗಡ್ಡೆಯನ್ನು ಕತ್ತರಿಸಿದಾಗ, ಉತ್ಪನ್ನವಾಗುವ, ಬಹುಬೇಗ ಆವಿಯಾಗುವ ಸಲ್ಪಾನಿಕ್ ಆಸಿಡ್, ಕಣ್ಣುಗಳಲ್ಲಿ, ಮೂಗಿನಲ್ಲಿ ಉರಿ ಉಂಟುಮಾಡಿ, ಕಣ್ಣಿನಲ್ಲಿ, ಮೂಗಿನಲ್ಲಿ ನೀರು ಸೋರಿಸಿ, ಸೀನುವಿಕೆಯನ್ನು ಉಂಟು ಮಾಡುತ್ತದೆ. ಈರುಳ್ಳಿಯನ್ನು ತಿನ್ನುವುದರಿಂದ, ಪ್ರತಿಯೊಂದು ಕೋಶಗಳಲ್ಲಿ ಉತ್ಪನ್ನವಾಗುವ ಕಲ್ಮಶವನ್ನು ಹೊರಹಾಕುತ್ತದೆ ಮತ್ತು ಸೌಮ್ಯ ವಿರೇಚಕವು.
ಬೆಳ್ಳುಳ್ಳಿ-ಲಶುನ – GARLIC : ಬೆಳ್ಳುಳ್ಳಿಯಲ್ಲಿರುವ ಸಲ್ಪರ್ಯುಕ್ತ ಸಿಸ್ಟಿನ್, ಥಾಯೊಸಲ್ಪಟ, ಆಲಿಸಿನ್, ಹೈಡ್ರೋಜಿನ್ ಸಲ್ಪಯಡ್ ಮತ್ತು ಇತರ ರಸಾಯನಿಕಗಳು, ನಮ್ಮ ಹೃದಯ ಮತ್ತು ರಕ್ತನಾಳಗಳು, ನಮ್ಮ ಹೃದಯ ಮತ್ತು ರಕ್ತನಾಳಗಳನ್ನು ರಕ್ಷಿಸುತ್ತವೆ. ರಕ್ತನಾಳದಲ್ಲಿ ರಕ್ತವು ಹೆಪ್ಪುಗಟ್ಟದಂತೆ ತಡೆದು, ರಕ್ತವು ನೀರಿನಂತೆ ಸರಳವಾಗಿ ಹರಿಯಲು ಸಹಾಯ ಮಾಡುತ್ತದೆ. ವಯಸ್ಸಾದ ಹಾಗೆ ಬರುವ ಮನಸ್ಸಿನ ಉನ್ಮಾದ, ಚಿತ್ತವೈಕಲ್ಯವನ್ನು – DEMENTIA ಬರದಂತೆ ತಡೆಯುತ್ತದೆ. ALZHEIMER ಕಾಯಿಲೆಯನ್ನು ಕೂಡ ಬೆಳ್ಳುಳ್ಳಿ ತಡೆಗಟ್ಟುತ್ತದೆ.
ಬಾಳೆಹಣ್ಣು -BANANA- ಬಾಳೆಹಣ್ಣು ಭಾಗಶಃ ಪಚನವಾಗಿದ್ದು, ದಪ್ಪನಾದ, ಸುಲಿಯಬಲ್ಲ ಸಿಪ್ಪೆಯಿಂದ ಮುಚ್ಚಿಕೊಂಡಿರುತ್ತದೆ. ಬಾಳೆಹಣ್ಣಿನಲ್ಲಿ ಕೊಬ್ಬು ಮತ್ತು ಉಪ್ಪಿನಾಂಶ ಇರುವುದಿಲ್ಲ. ಬಾಳೆಹಣ್ಣಿನಲ್ಲಿ ಹೆಚ್ಚು ಪೊಟ್ಯಾಷಿಯಂ ಇರುವುದರಿಂದ, ಹೃದಯದ ಮಾಂಸಗಳು, ನರಗಳ ಪ್ರಚೋದನೆಗೆ ಸರಿಯಾಗಿ ಸ್ಪಂದಿಸುತ್ತವೆ. ಹೃದಯದ ಕೆಲಸ ಮತ್ತು ನರಮಂಡಳದ ಕೆಲಸ ಸುಗಮವಾಗುತ್ತದೆ. ರಕ್ತದ ಒತ್ತಡವು ಕಡಿಮೆಯಾಗುತ್ತದೆ. ಇದು ಸೌಮ್ಯ ವಿರೇಚಕವು.
ಕೊನೆಯ ಮಾತು : ತೈತ್ತರಿಯ ಉಪನಿಷತ್ತು ಮತ್ತು ನಮ್ಮ ಋಷಿಮುನಿಗಳು ತಿಳಿಸಿರುವಂತೆ, ಊಟ ಬಲ್ಲವನಿಗೆ ರೋಗವಿಲ್ಲ, ಊಟದಿಂದ ನಮ್ಮ ಜೀವನ ಮತ್ತು ಊಟವು ನಮ್ಮ ಔಷಧಿ. ಹಿತವಾದುದನ್ನು ತಿನ್ನಬೇಕು, ಮಿತವಾಗಿ ತಿನ್ನಬೇಕು. ಸಾವಕಾಶವಾಗಿ ತಿನ್ನಬೇಕು, ಋತುಮಾನಗಳಿಗೆ ತಕ್ಕಂತೆ ತಿನ್ನಬೇಕು. ಆರೋಗ್ಯವಾಗಿ ಜೀವನ ಮಾಡಬೇಕು. ಎಲ್ಲರು ಕೂಡ ನಗು ನಗುತ ಸಂತೋಷದಿಂದ ಇರಬೇಕು

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್,

# 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5.   Email: info@vims.ac.in 

Share this: