Vydyaloka

ಬ್ರೈನ್ ಟ್ಯೂಮರ್ ಇದ್ದ ಬಾಲಕಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಹೊಸ ಬದುಕು

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಬೆಂಗಳೂರು ಮೂಲದ ಸುಮಾರು 21 ವರ್ಷ ವಯಸ್ಸಿನ ರೆಫ್ರೆಕ್ಟರಿ ಎಪಿಲೆಪ್ಸಿ (ಅಪಸ್ಮಾರ) ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಹೊಸ ಬದುಕು ನಿಡಿದೆ. ಬೆಂಗಳೂರಿನ ನಿವಾಸಿಯಾಗಿರುವ ಬಾಲಕಿಯು ನಿಯಮಿತವಾಗಿ ಅತೀವ ತಲೆನೋವಿನಿಂದ ಬಳಲುತ್ತಿದ್ದರು. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯುವ ಆಸ್ಪತ್ರೆ ಕುರಿತ ಅವರ ವಿಚಾರಣೆಯು ಅಂತಿಮವಾಗಿ ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿತ್ತು.ಅಗತ್ಯ ಆರೋಗ್ಯ ತಪಾಸಣೆಯನ್ನು ಕೈಗೊಂಡ ಬಳಿಕ ಬಾಲಕಿಯ ಮೆದುಳಿನಲ್ಲಿ ಗಡ್ಡೆ ಇರುವುದು ಕಂಡುಬಂದಿದ್ದು, ಇದು ಪುನರಾವರ್ತಿತ ನೋವಿಗೆ ಕಾರಣವಾಗಿತ್ತು. ಆಕೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ಶಿಫಾರಸು ಮಾಡಿದರು. ಈಗ, ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿಯು ಆರೋಗ್ಯಕರವಾದ ಬದುಕು ಸಾಗಿಸುತ್ತಿದ್ದು, ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

ಈ ಪ್ರಕರಣ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಮೆಡಿಕಲ್ ಸೆಂಟರ್‍ನ ಕನ್ಸಲ್ಟಂಟ್ ನ್ಯೂರೋಸರ್ಜನ್ ಡಾ.ಕೋಮಲ್ ಪ್ರಸಾದ್ ಅವರು, ‘ಎಪಿಲೆಪ್ಸಿ ಸಾಮಾನ್ಯವಾಗಿ ಕಂಡುಬರುವ ನರರೋಗ ಸಮಸ್ಯೆ. ಭಾರತದಲ್ಲಿ ಸುಮಾರು 12 ಮಿಲಿಯನ್ ಜನರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುರದೃಷ್ಟವಶಾತ್, ಅನೇಕ ಪ್ರಕರಣಗಳಲ್ಲಿ ರೋಗ ಪತ್ತೆಯಾಗದೇ ಸಮಸ್ಯೆಗೆ ಗುರಿಯಾಗುತ್ತಾರೆ. ಇದಕ್ಕೆ ಹಣಕಾಸು ಸಮಸ್ಯೆಯ ಜೊತೆಗೆ ಜಾಗೃತಿಯ ಕೊರತೆಯೂ ಕಾರಣವಾಗಿದೆ. ಎಪಿಲೆಪ್ಸಿಯಿಂದ ಬಳಲುತ್ತಿರುವ ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ತೀವ್ರ ಪ್ರಮಾಣದ ತಲೆಭಾರ ಸಮಸ್ಯೆಗೆ ಗುರಿಯಾಗುತ್ತಾರೆ. ಇದು, ಅವರ ಅಧ್ಯಯನ, ಜೀವನದ ಗುಣಮಟ್ಟ, ಅವರ ಕುಟುಂಬದ ನೆಮ್ಮದಿಯ ಮೇಲೆ ಪರಿಣಾಮ ಬೀರಲಿದೆ. ಎಪಿಲೆಪ್ಸಿಯಿಂದ ಬಳಲುವ ಜನರ ಕುಟುಂಬವು ಸಾಮಾಜಿಕ ನೋವು, ತಾರತಮ್ಯದಿಂದಲೂ ಬಳಲುತ್ತದೆ. ಆದರೆ, ಈ ಪ್ರಕರಣದಲ್ಲಿ ಬಾಲಕಿಯ ಕುಟುಂಬ ಅಂಥ ಪರಿಣಾಮಗಳಿಗೆ ತುತ್ತಾಗಲಿಲ್ಲ. ಆಕೆಗೆ ಆಗಾಗ್ಗೆ ತಲೆಭಾರ ಸಮಸ್ಯೆ ಎದುರಾಗಲು, ಮೆದುಳಿನ ಬಲಭಾಗದಲ್ಲಿ ಗಂಟು ಇದ್ದುದೇ ಕಾರಣ. ಬಾಲಕಿಯು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸ್ತುತ ಸಾಮಾನ್ಯವಾದ ಜೀವನ ಸಾಗಿಸುತ್ತಿದ್ದಾರೆ’ ಎಂದರು.

ಎಪಿಲೆಪ್ಸಿ ಇದೆ ಎಂಬುದು ತಿಳಿದ ಬಳಿಕ ರೋಗಿ ಎಂದಿನ ಸ್ವತಂತ್ರ ಬದುಕು ಬಾಳಲಿಲ್ಲ. ಅಗತ್ಯ ಬೆಂಬಲವಿಲ್ಲದೆ ಕಾಲೇಜು, ಇತರೆ ಕಡೆಗಳಿಗೆ ಹೋಗುವಂತೆಯೇ ಇರಲಿಲ್ಲ. ಆಕೆಯು ತಮ್ಮ ಗೆಳತಿಯರಿಂದ ದೂರ ಉಳಿದು, ಅಜ್ಞಾತ ಸ್ಥಳದಲ್ಲಿ ಇರುವಂತೆ ಆಗಿತ್ತು. ಒಬ್ಬ ತಾಯಿಯಾಗಿ ನಾನು ಕೂಡಾ ಭಾವನಾತ್ಮಕವಾಗಿ ಕುಗ್ಗಿಹೋಗಿದ್ದೆ. ಆಕೆಗೆ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ನನಗೆ ಆರ್ಥಿಕವಾದ ಬಲವೂ ಇರಲಿಲ್ಲ. ಆದರೆ, ಡಾ. ಕೋಮಲ್ ಪ್ರಸಾದ್ ಅವರ ಮೇಲ್ವಿಚಾರಣೆಯ ಪರಿಣಾಮ ನಾರಾಯಣ ಹೆಲ್ತ್ ಸಿಟಿಯಲ್ಲಿ ಉತ್ತಮ ಚಿಕಿತ್ಸೆ ದೊರೆತಿದ್ದು, ಇವರು ಕರ್ನಾಟಕ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಅಗತ್ಯ ಹಣಕಾಸು ನೆರವು ಒದಗಿಸಲು ಮುಂದಾದರು. ಇಂದು ನನ್ನ ಮಗಳು ಆಕೆ ಸಾಮಾನ್ಯವಾದ ಬದುಕನ್ನು ಸಾಗಿಸುತ್ತಿದ್ದಾಳೆ’ ಎಂದು ರೋಗಿಯ ತಾಯಿ ಸಂತಸ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಎಪಿಲೆಪ್ಸಿ ವಿರುದ್ಧ ಹೋರಾಡಲು ಜಾಗೃತಿಯ ಅರಿವು ಅಗತ್ಯ. ಅಂತರರಾಷ್ಟ್ರೀಯ ಎಪಿಲೆಪ್ಸಿ ಡೇ (ಪ್ರತಿ ವರ್ಷ ಫೆಬ್ರುವರಿ 11ರಂದು) .  ಈ ರೋಗ ಕುರಿತು ಜಾಗೃತಿ ಮೂಡಿಸಲು ಒಂದು ವೇದಿಕೆಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಎಪಿಲೆಪ್ಸಿಗೆ ಚಿಕಿತ್ಸೆ ಸಾಧ್ಯವಿದೆ. ಸಕಾಲದಲ್ಲಿ ರೋಗವನ್ನು ಗುರುತಿಸಿ, ಚಿಕಿತ್ಸೆಯನ್ನು ಪಡೆಯುವುದು ಅಗತ್ಯವಾಗಿದೆ. ನಾರಾಯಣ ಹೆಲ್ತ್ ಸಿಟಿ ತನ್ನ ಅತ್ಯಾಧುನಿಕವಾದ ಚಿಕಿತ್ಸಾ ಸೌಲಭ್ಯದಿಂದಾಗಿ ಈ ರೋಗಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವಲ್ಲಿ ಒಂದು ಹೆಜ್ಜೆ ಮುಂದಿದೆ. ಅಲ್ಲದೆ, ಈ ರೋಗ ಕುರಿತು ಜಾಗೃತಿ ಮೂಡಿಸಲು ಒತ್ತು ನೀಡುತ್ತಿದೆ.

 

Share this: