Vydyaloka

ಪೌಷ್ಠಿಕ ಆಹಾರವನ್ನೇ ಏಕೆ ತಿನ್ನಬೇಕು?

ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ. ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ ಅನುಗುಣವಾಗಿ, ಗೊತ್ತುಪಡಿಸಿದ ಹಾಗೂ ತೆಗೆದುಕೊಳ್ಳುವ ಆಹಾರವೇ ಪೌಷ್ಟಿಕತೆ. ಸದ್ಯದ ಹಾಗೂ ಮುಂದಿನ ತಲೆಮಾರುಗಳ ಉಳಿವು, ಆರೋಗ್ಯ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಮುಖ್ಯ ವಿಷಯ ಇದು. ತಮ್ಮ ತೂಕ ಕಡಿಮೆ ಮಾಡಿಕೊಳ್ಳುವವರು ಅಥವಾ ದೇಹದ ಆಕಾರ ಮತ್ತ್ತು ಪಡೆಯ ಬಯಸುವ ಜನ ಮಾತ್ರ ಸರಿಯಾಗಿ ತಿನ್ನಬೇಕು ಎಂಬುದು ಸರಿಯಲ್ಲ. ಕಾಹಿಲೆಗಳನ್ನು ದೂರ ಇಟ್ಟು ಆರೋಗ್ಯಕರ ದೇಹ ಹೊಂದಲು, ಪ್ರತಿಯೊಬ್ಬರ ಜೀವನ ಶೈಲಿಯಲ್ಲೇ ಇದು ಒಳಹೊಕ್ಕಬೇಕು.
ಉತ್ತಮ ಪೌಷ್ಠಿಕ ಆಹಾರ ಹಾಗೂ ನಿತ್ಯ ಶಾರೀರಿಕ ಚಟುವಟಕೆಗಳ ಜೊತೆಗಾರಿಕೆಯೇ, ಉತ್ತಮ ಆರೋಗ್ಯದ ಆಧಾರ ಸ್ತಂಭ. ಆರೋಗ್ಯವಂತ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಸಾಕಷ್ಟು ಪೌಷ್ಠಿಕತೆ ಹೊಂದಿರುವ ಜನ ಹೆಚ್ಚು ಉತ್ಪಾದಕತೆ ಹೊಂದಿರುತ್ತಾರೆ. ಒಳ್ಳೆಯ ಪೌಷ್ಠಿಕತೆ ಇರದಿದ್ದರೆ, ರೋಗನಿರೋಧಕ ಶಕ್ತಿ ಕಡಿಮೆಯಾಗಿ, ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿ, ಶಾರಿರಿಕ ಹಾಗೂ ಮಾನಸಿಕ ಅಭಿವೃದ್ಧಿ ಕುಂಠಿತವಾಗಿ, ಉತ್ವಾದಕತೆ ಕಡಿಮೆಯಾಗುತ್ತದೆ. ಒಳ್ಳೆಯ ಪೌಷ್ಠಿಕತೆ ಆರೋಗ್ಯವಂತ ವ್ಯಕ್ತಿಗಳನ್ನು ಸಿದ್ಧ ಮಾಡುತ್ತದೆ. ಇದು ಕ್ರಮೇಣ ಆರೋಗ್ಯವಂತ ದೇಶ ಸೃಷ್ಟಿಸುತ್ತದೆ. ಸಮತೋಲ ಆಹಾರವೆಂದರೆ ವಿಶೇಷ ಪೌಷ್ಠಿಕತೆ ಹೊಂದಿರುತ್ತದೆ. ಅವು ಸಸಾರಜನಕ, ಪಿಷ್ಠ, ಕೊಬ್ಬು, ಜೀವಸತ್ವಗಳು, ಖನಿಜಗಳು ಹಾಗೂ ನೀರು. ಇವೆಲ್ಲ ಜೀವಿಸಲು ಅತ್ಯಾವಶ್ಯಕ. ದೇಹದ ಬೆಳವಣಿಗೆ, ದೈಹಿಕ ಕ್ರಿಯೆಗಳು ಹಾಗೂ ಜೀವಕೋಶಗಳ ದುರಸ್ತಿಗೆ ಪೌಷ್ಠಿಕತೆ ಬೇಕೇ ಬೇಕು.
ಕೃತಕ ಸಿಹಿ ನೀಡುವ ವಸ್ತುಗಳು, ಸಕ್ಕರೆ, ಕೆಫಿನ್ ಹಾಗೂ ರುಚಿ -ಪರಿಮಳಗಳು ಯಾವ ಪೌಷ್ಠಿಕ ಅಂಶಗಳನ್ನೂ ಹೊಂದಿರದೇ ದೇಹಕ್ಕೆ ಕೆಡುಕು ಮಾಡಬಲ್ಲವು ಕಚ್ಛಾ ರಸಗಳಲ್ಲಿರುವ ಕೇಂದ್ರೀಕೃತ ಜೀವಸತ್ವಗಳು, ಖನಿಜಗಳು, ಸಕ್ಕರೆ ಹಾಗೂ ಸಸಾರಜನಕಗಳು, ರಕ್ತಪ್ರವಾಹದಲ್ಲಿ ಬೇಗ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಜೀರ್ಣಾಂಗ ವ್ಯವಸ್ಥೆ ಮೇಲೆ ಹೆಚ್ಚಿನ ಭಾರ ಹಾಕುವುದಿಲ್ಲ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಥವಾ ಸುಣ್ಣದಂಶ ಅವಶ್ಯ. ಕ್ಯಾಲ್ಸಿಯಂನಿಂದ ಶ್ರೀಮಂತವಾಗಿರುವ ಆಹಾರ ಪದಾರ್ಥಗಳು- ಹಾಲು ಹಾಗೂ ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪುಗಳು, ಹಾಗೂ ಮೊಟ್ಟೆ .

ಪೌಷ್ಠಿಕತೆಗಾಗಿ ಕಿವಿ ಮಾತುಗಳು:-

ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238

Share this: