Vydyaloka

ಡ್ರಿಂಕ್ ಪ್ರೈಮ್- ಸ್ಚಚ್ಚ ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಕೆ

ಡ್ರಿಂಕ್ ಪ್ರೈಮ್ ಸ್ಚಚ್ಚ , ಶುದ್ಧ, ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಕೆ ಸ್ಟಾರ್ಟ್‍ಅಪ್. ಕುಡಿಯಲು ಯೋಗ್ಯವಾದ ನೀರಿನ ಬಳಕೆ ಮೂಲಭೂತವಾಗಿ ಬೇಕಾಗಿರುವುದು ಈ ಸಾಂಕ್ರಾಮಿಕ ಕಾಲದಲ್ಲಿ ತುಂಬಾ ಅವಶ್ಯವಾಗಿದೆ. ಜನತೆಗೆ ಅವರದೇ ಮನೆಗಳ ನೀರನ್ನು ಶುದ್ಧೀಕರಿಸಿ ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತೇವೆಯೋ ಅಷ್ಟನ್ನು ಮಾತ್ರ ಪಾವತಿ ಮಾಡುವ ವಿಭಿನ್ನ ಮಾದರಿಯಲ್ಲಿ ಪರಿಚಯಿಸುತ್ತಿದೆ.

ಬೆಂಗಳೂರು: ಸ್ವಚ್ಚ, ಆರೋಗ್ಯಪೂರ್ಣ ಮತ್ತು ಕುಡಿಲು ಯೋಗ್ಯವಾದ ನೀರು ಸಿಗುವುದು ಬಹಳ ಅಪರೂಪ. ಅದರಲ್ಲೂ, ಬೆಂಗಳೂರಿನಂತಹ ಮಹಾನಗರಿಲ್ಲಿ ನೀರಿಗಾಗಿ ಪರದಾಡುವುದನ್ನು ನಾವು ದಿನನಿತ್ಯ ಕಾಣಬಹುದು. ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುವುದರಿಂದ ನಾನಾ ರೀತಿಯ ಕಾಯಿಲೆಗಳು ಬಂದು ಜನರು ಆಸ್ಪತ್ರೆಗಳಿಗೆ ಅಲೆದಾಡುವುದನ್ನು ಸಹ ನೋಡಿದ್ದೇವೆ. ಈ ಹಿನ್ನಲೆಯಲ್ಲಿ ಉತ್ತಮ ಗುಣಮಟ್ಟದ ಹಾಗೂ ನಗರದ ಜನತೆಗೆ ಸ್ಚಚ್ಚ, ಆರೋಗ್ಯಪೂರ್ಣ ನೀರನ್ನು ಒದಗಿಸಲು  ಡ್ರಿಂಕ್ ಪ್ರೈಮ್  ಸ್ಟಾರ್ಟ್‍ಅಪ್ ತಲೆಯೆತ್ತಿದೆ. ಡ್ರಿಂಕ್ ಪ್ರೈಮ್ ತನ್ನದೇ ಆದ ವಿಶಿಷ್ಟ ಬಗೆಯ ವಾಟರ್ ಪ್ಯೂರಿಫಯರ್ ಅನ್ನು ಮಾರುಕಟ್ಟಗೆ ಪರಿಚಯಿಸಿದ್ದು, ಇದೀಗ ಅದು ಎಲ್ಲೆಡೆ ಸಾಕಷ್ಟು ಜನಪ್ರಿತೆ ಸಹ ಪಡೆದುಕೊಂಡಿದೆ.

ಡ್ರಿಂಕ್ ಪ್ರೈಮ್ ಹೇಗೆ ಕಾರ್ಯನಿರ್ವಹಿಸುತ್ತದೆ:

ಡ್ರಿಂಕ್ ಪ್ರೈಮ್ ಸಂಸ್ಥೆಯು ನಗರದ ಜನತೆಗೆ ಅವರದೇ ಮನೆಗಳ ನೀರನ್ನು ಶುದ್ಧೀಕರಿಸಿ ಚಂದಾದಾರರಾಗಿ ನೀಡಲಾಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತೇವೆಯೋ ಅಷ್ಟನ್ನು ಮಾತ್ರ ಪಾವತಿ ಮಾಡುವ ವಿಭಿನ್ನ ಮಾದರಿಯಲ್ಲಿ ಪರಿಚಯಿಸುತ್ತಿದೆ. ಅಂದರೆ ತಂತಮ್ಮ ಮನೆಗಳಲ್ಲಿ ನೀರಿನ ಸೌಲಭ್ಯವನ್ನು ನೋಡಿಕೊಂಡು ವಾಟರ್ ಪ್ಯೂರಿಫಯರ್ ಮೂಲಕ ಒಂದು ತಿಂಗಳು ಅಥವಾ 3, 6 ಮತ್ತು ಒಂದು ವರ್ಷದ ಅವಧಿಗೆ ಚಂದಾ ಮೊತ್ತಕ್ಕೆ ನೀರನ್ನು ಬಳಕೆ ಮಾಡಬಹುದು.

ಡ್ರಿಂಕ್ ಪ್ರೈಮ್‍ನ ವಾಟರ್ ಪ್ಯೂರಿಫಯರ್‍ಗಳು ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೂಲಕ ಡೇಟಾ ಸಂಗ್ರಹಿಸಿ ಎಷ್ಟು ಪ್ರಮಾಣದ ನೀರು ಬಳಕೆಯಾಗಿದೆಯೋ ಎಂದು ತೋರಿಸುತ್ತದೆ ಹಾಗೂ ಮತ್ತೆ ರಿಚಾರ್ಜ್ ಮಾಡಲು ಸಹ ಅನುವು ಮಾಡಿಕೊಟ್ಟಿದೆ. ಇದೆಲ್ಲಾ ವ್ಯವಸ್ಥೆ ಇಂಟರ್‍ನೆಟ್ ಆಫ್ ಥಿಂಗ್ಸ್ (ಐಒಟಿ) ಮೂಲಕ ಕಾರ್ಯನಿರ್ವಹಿಸುತ್ತದೆ. ತನ್ಮೂಲಕ ನೀರನ್ನು ಆಗ್ಗಿಂದಾಗ್ಗೆ ಹೊರಗಡೆ ಹೋಗಿ ತರುವ ವ್ಯರ್ಥ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ಹೊಸ ಆವಿಷ್ಕಾರದ ರೂವಾರಿ ವಿಜೇಂದ್ರ ರೆಡ್ಡಿ ಮುತ್ಯಾಲ ಮತ್ತು ಮಾನಸ್ ರಂಜನ್ ಹೋಟ ಎಂಬ ಇಬ್ಬರು ಯುವ ಉತ್ಸಾಹಿ ಸಹ ಸಂಸ್ಥಾಪಕ ಉದ್ಯಮಿಗಳು.

ಈ ಬಗ್ಗೆ ಮಾತನಾಡುವ ವಿಜೇಂದ್ರ ಅವರು, “ನಮ್ಮ ನವೀನ ಮಾದರಿಯ ವಾಟರ್ ಪ್ಯೂರಿಫಯರ್‍ಗಳು ಚಂದಾ ಪಾವತಿ ಮಾಡಿ ಬಳಸುವ ಮೂಲಕ ಎಲ್ಲರಿಗೂ ಸ್ವಚ್ಚ, ಆರೋಗ್ಯಪೂರ್ಣ ಮತ್ತು ಕುಡಿಯಲು ಯೋಗ್ಯವಾದ ನೀರು ಸಿಗಲೆಂಬ ಅಭಿಲಾಶೆಯಿಂದ ಪ್ರಾರಂಭ ಮಾಡಿದ ಪ್ರಯತ್ನ. ಈಗಾಗಲೇ ದೇಶದ ವಿವಿಧ ನಗರಗಳಾದ ದೆಹಲಿ, ಫರೀದಾಬಾದ್, ನೋಯ್ಡ, ಗಾಜಿಯಾಬಾದ್, ಗುರುಗ್ರಾಮ, ಹೈದರಾಬಾದ್ ಮತ್ತು ನಮ್ಮ ಬೆಂಗಳೂರಿನಲ್ಲಿ ಬಹುತೇಕ ಮನೆಗಳಲ್ಲಿ ಡ್ರಿಂಕ್ ಪ್ರೈಮ್ ಅನ್ನು ಬಳಕೆ ಮಾಡುತ್ತಿರುವುದು ಸಂತಸ ತಂದಿದೆ,” ಎನ್ನುತ್ತಾರೆ.

ಎಲ್ಲರಿಗೂ ನೀರು ಅವಶ್ಯ. ಪ್ರತಿ ಜೀವಿಗೂ ಸ್ವಚ್ಚ, ಆರೋಗ್ಯಪೂರ್ಣ ಮತ್ತು ಕುಡಿಯಲು ಯೋಗ್ಯವಾದ ನೀರಿನ ಬಳಕೆ ಮೂಲಭೂತವಾಗಿ ಬೇಕಾಗಿರುವುದು ಈ ಸಾಂಕ್ರಾಮಿಕ ಕಾಲದಲ್ಲಿ ತುಂಬಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಇನ್ನು 3 ವರ್ಷಗಳಲ್ಲಿ ದೇಶದ್ಯಾಂತ 16 ಕಡೆಗಳಲ್ಲಿ ಡ್ರಿಂಕ್ ಪ್ರೈಮ್ ಪ್ರಾರಂಭ ಮಾಡುವ ಯೋಜನೆಯಿದೆ. ಈಗಾಗಲೇ ನಮ್ಮ ವಾಟರ್ ಪ್ಯೂರಿಫಯರ್ ಅನ್ನು ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಬಳಕೆ ಮಾಡುತ್ತಿರುವುದು ಹೆಮ್ಮೆಯ ವಿಚಾರ,” ಎನ್ನುತ್ತಾರೆ ಸಹ ಸಂಸ್ಥಾಪಕ ಮಾನಸ್. ಡ್ರಿಂಕ್ ಪ್ರೈಮ್ ಮೊಬೈಲ್ ಆಪ್ ಮೂಲಕ ಸ್ವಚ್ಚ, ಶುದ್ಧ, ಆರೋಗ್ಯಪೂರ್ಣ ಕುಡಿಯುವ ನೀರಿನ ಆರೋಗ್ಯದ ಬಗ್ಗೆ  ತಿಳಿದುಕೊಳ್ಳಬಹುದು. ಸಂಪೂರ್ಣವಾಗಿ ಚಂದಾ ಬಳಕೆ ಮಾಡಿ ಬೇಕೆಂದಾಗ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಕಸ್ಟಮೈಸ್ಡ್ ವಾಟರ್ ಪ್ಯೂರಿಫಿಕೇಶನ್ ಸಿಸ್ಟಂ:

1) ಗೋಡೆ ಅಥವಾ ಯಾವುದೇ ಕೌಂಟರ್‍ಗೆ ಸುಲಭವಾಗಿ ಫಿಕ್ಸ್ ಮಾಡಬಹುದು.
2) ಒಂದು ಗಂಟೆಯಲ್ಲಿ 15 ಲೀಟರ್‍ಗೂ ಹೆಚ್ಚು ನೀರನ್ನು ಶುದ್ದೀಕರಿಸುವುದು.
3) ಸ್ಟೋರೇಜ್ ಟ್ಯಾಂಕ್‍ನಲ್ಲಿ 10 ಲೀಟರ್‍ಗೂ ಹೆಚ್ಚು ನೀರನ್ನು ಶೇಖರಣ ಮಾಡಬಹುದು.
4) ನವೀನ ಮಾದರಿ ಮತ್ತು ಬಳಸಲು ಸುಲಭ
5) ಕೇವಲ 60 ವಾಟ್ಸ್ ವಿದ್ಯುತ್ ಬಳಕೆ.

ಹೆಚ್ಚಿನ ಮಾಹಿತಿಗೆ ಸಂಸ್ಥೆಯ: https://drinkprime.in ವೀಕ್ಷಿಸಿ.

Share this: