Vydyaloka

ಡಯಾಬೆಟಿಕ್ ರೆಟಿನೋಪಥಿ

ರೆಟಿನ ಬಗ್ಗೆ ತಿಳಿಯಿರಿ ನಿಮ್ಮ ದೃಷ್ಟಿ ರಕ್ಷಿಸಿ
ಹಿಂದಿನ ಸಂಚಿಕೆಯಿಂದ….
ಡಯಾಬಿಟಿಕ್ ರೆಟಿನೋಪಥಿ ನೇತ್ರ ಸಮಸ್ಯೆಯಾಗಿದ್ದು, ಟೈಪ್ 1 ಅಥವಾ ಟೈಪ್ 2 ಡಯಾಬಿಟಸ್‍ನಿಮದ ಉಂಟಾಗಬಹುದಾಗಿರುತ್ತದೆ. ರೆಟಿನದಲ್ಲಿನ ಸೂಕ್ಷ್ಮ ರಕ್ತನಾಳಗಳಿಗೆ ಡಯಾಬಿಟಿಸ್ ಹಾನಿ ಮಾಡಿದಾಗ ರೆಟಿನೋಪಥಿ ಕಂಡುಬರುತ್ತದೆ. ದುರ್ಬಲಗೊಂಡ ರಕ್ತನಾಳಗಳು ದ್ರವ ಅಥವಾ ರಕ್ತವನ್ನು ಸೋರಿಕೆ ಮಾಡುತ್ತವೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದ ಮಂದಿಯಲ್ಲಿ ಡಯಾಬಿಟಿಕ್ ರೆಟಿನೋಪಥಿ ಗಂಡಾಂತರ ಹೆಚ್ಚಾಗಿರುತ್ತದೆ. ಡಯಾಬಿಟಿಸ್ ಅವಧಿ ಹೆಚ್ಚಾದಷ್ಟೂ ಡಯಾಬಿಟಿಕ್ ರೆಟಿನೋಪಥಿ ಗಂಡಾಂತರ ಅಧಿಕವಾಗಿರುತ್ತದೆ. ಇದರೊಂದಿಗೆ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ರಕ್ತ ಹೀನತೆ, ಮೂತ್ರಪಿಂಡ ರೋಗವೂ, ಉಲ್ಬಣಗೊಳ್ಳಬಹುದು. ಆದ್ದರಿಂದ
ಡಯಾಬಿಟಿಸ್ ಇದ್ದರೆ, ನಿಮ್ಮ ನೇತ್ರ ತಜ್ಞರಿಂದ ವಾರ್ಷಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ನಿಮಗೆ ಡಯಾಬಿಟಿಕ್ ರೆಟಿನೋಪಥಿ ಅಭಿವೃದ್ದಿಗೊಂಡಿದ್ದರೆ, ನಿಮ್ಮ ನೇತ್ರ ವೈದ್ಯರ ಸಲಹೆ ಮತ್ತು ಶಿಫಾರಸಿನ ಮೇಲೆ ಅಗಾಗ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಗಾಗುವುದು ಕಡ್ಡಾಯ. ಈ ರೋಗದ ತೀವ್ರತೆ ಆಧಾರದ ಮೇಲೆ ನಿಮ್ಮ ಆಸ್ಪತ್ರೆ ಭೇಟಿ, ಪರೀಕ್ಷೆ ಮತ್ತು ಚಿಕಿತ್ಸೆಗಳ ಅಂತರವು ಅವಲಂಬಿಸಿರುತ್ತದೆ.
ಡಯಾಬಿಟಿಕ್ ರೆಟಿನೋಪಥಿಯ ಚಿಹ್ನೆಗಳು ಮತ್ತು ಲಕ್ಷಣಗಳೇನು ?
ಆರಂಭಿಕ ಹಂತಗಳಲ್ಲಿ, ನಿರ್ದಿಷ್ಟವಾಗಿ ರೆಟಿನಾದ ಮಧ್ಯ ಭಾಗವು ರೋಗದ ತೀವ್ರತೆಗೆ ಒಳಪಡದೇ ಇದ್ದಾಗ, ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳು ಕಂಡುಬರದೇ ಇರಬಹುದು. ರೆಟಿನೋಪಥಿ ತೀವ್ರತೆ ಮುಂದುವರಿದಂತೆ, ನಿಮಗೆ ದೃಷ್ಟಿ ಮಬ್ಬಾಗುವಿಕೆ, ದೃಷ್ಟಿಯಲ್ಲಿ ಕಪ್ಪು ಚುಕ್ಕಿಗಳು, ಪುಟ್ಟ ದಾರದಂಥ ಆಕೃತಿಗಳು ಅಥವಾ ಜೇಡರ ಬಲೆಯಂಥ ಆಕೃತಿಗಳು ಕಾಣಿಸಬಹುದು. ಕಣ್ಣಿನ ಸೂಕ್ಷ್ಮ ರಕ್ತನಾಳಗಳಿಂದ ರಕ್ತ ಸೋರುವಿಕೆಯು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ದೃಷ್ಟಿ ನಶಿಸಿ ಹೋಗುವಂತೆ ಮಾಡಬಹುದು. ಈ ರೋಗದಲ್ಲಿ ನೋವು ಸಾಮಾನ್ಯ ಲಕ್ಷಣವಾಗಿರುವುದಿಲ್ಲ.
ಡಯಾಬಿಟಿಕ್ ರೆಟಿನೋಪಥಿಯ ವಿಧಗಳು ಯಾವುವು?
ಡಯಾಬಿಟಿಕ್ ರೆಟಿನೋಪಥಿಯಲ್ಲಿ ಎರಡು ವಿಧಗಳಿವೆ, ಅವುಗಳೆಂದರೆ : ನಾನ್-ಪ್ರೊಲಿಫರೇಟಿವ್ (ಎನ್‍ಪಿಡಿಆರ್) ಹಾಗೂ ಪ್ರೊಲಿಫರೇಟಿವ್ (ಪಿಡಿಆರ್). ಇವುಗಳನ್ನು ಕ್ರಮವಾಗಿ ವೃದ್ದಿಯಾಗುತ್ತಿರುವಿಕೆ ಅಥವಾ ತೀವ್ರ ಹಂತ ತಲುಪಿರುವಿಕೆ ಎನ್ನಬಹುದು. ನಾನ್-ಪ್ರೊಲಿಫರೇಟಿವ್ ರೆಟಿನೋಪಥಿ ಅಂದರೆ ರೋಗದ ಆರಂಭಿಕ ಹಂತಗಳು ಎಂದರ್ಥ, ಪ್ರೊಲಿಫರೇಟಿವ್ ಡಯಾಬಿಟಿಕ್ ರೆಟಿನೋಪಥಿ ಎಂದರೆ ತೀವ್ರ, ಮುಂದುವರಿದ ಅಥವಾ ಪ್ರಗತಿ ಹೊಂದಿದ ಹಂತ ಎಂದರ್ಥ.
ಲೇಸರ್ ಚಿಕಿತ್ಸೆ ಎಂದರೇನು ? ಲೇಸರ್ ಚಿಕಿತ್ಸೆ ನಂತರ ದೃಷ್ಟಿ ಮರುಕಳಿಸುತ್ತದೆಯೇ
ಈ ಚಿಕಿತ್ಸೆಯ ಮುಖ್ಯ ಉದ್ದೇಶವೆಂದರೆ ಕೇಂದ್ರ ದೃಷ್ಟಿಯನ್ನು ರಕ್ಷಿಸುವುದಾಗಿರುತ್ತದೆ. ಇದು ನಶಿಸಿ ಹೋದ ದೃಷ್ಟಿಯನ್ನು ಮರುಕಳಿಸುವಂತೆ ಮಾಡುವುದಿಲ್ಲವಾದರೂ, ಮತ್ತಷ್ಟು ಹದಗೆಡುವುದನ್ನು ತಡೆಗಟ್ಟಬಹುದಾಗಿರುತ್ತದೆ. ಆಗಾಗ ನೇತ್ರ ಪರೀಕ್ಷೆಗಳಿಗೆ ಒಳಪಡುವ ಮೂಲಕ ಆರಂಭದಲ್ಲೇ ಡಯಾಬಿಟಿಕ್ ರೆಟಿನೋಪಥಿ ರೋಗ ನಿರ್ಧಾರವನ್ನು ದೃಢಪಡಿಸಿಕೊಳ್ಳುವುದು ಅಗತ್ಯ ಎಂದು ಹೇಳುವುದು ಇದೇ ಕಾರಣಕ್ಕಾಗಿ.
ಲೇಸರ್ ಫೋಟೋಕೊವಾಗುಲೇಷನ್ ಚಿಕಿತ್ಸೆಯು ಲೋಮನಾಳಗಳನ್ನು ಬಂದ್ ಮಾಡಲು ಪುಟ್ಟದಾಗಿ ಸುಡುವಿಕೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕಾಲಕ್ರಮೇಣ ಇಂಥ ಕಲೆಗಳು ಸಾಮಾನ್ಯವಾಗಿ ಮಸುಕಾಗಿ ನಂತರ ಕಣ್ಮರೆಯಾಗುತ್ತವೆ. ಬಹು ಬಾರಿ ಲೇಸರ್ ಚಿಕಿತ್ಸೆಗೆ ಒಳಗಾದ ನಂತರ ಕೆಲವು ರೋಗಿಗಳಲ್ಲಿ ಮಬ್ಬು ಬೆಳಕಿನಲ್ಲಿ ದೃಷ್ಟಿ ಹಾಯಿಸುವಾಗ ಮತ್ತು ಓದುವಾಗ ತೊಂದರೆಗಳ ಅನುಭವವಾಗುತ್ತದೆ.
ಎಷ್ಟು ಬಾರಿ ಲೇಸರ್ ಚಿಕಿತ್ಸೆಗೆ ಒಳಗಾಗಬೇಕು.?
ಸಾಮಾನ್ಯವಾಗಿ 2-3 ಬಾರಿ ನಡೆಸಲಾಗುತ್ತದೆ. ಆದರೆ, ಪ್ಯಾಸ್ಕಲ್ (ಪ್ಯಾಟ್ರನ್ ಸ್ಕ್ಯಾನ್ ಲೇಸರ್) ವಿಧಾನದಲ್ಲಿ ಇಡೀ ಚಿಕಿತ್ಸೆ ಪ್ರಕ್ರಿಯೆಯು ಒಂದೇ ಬಾರಿ ಪೂರ್ಣಗೊಳ್ಳುತ್ತದೆ. ಆದಾಗ್ಯೂ ಇದು ರೋಗಿಯಿಂದ ರೋಗಿಗೆ ವ್ಯತ್ಯಾಸದಿಂದ ಕೂಡಿರುತ್ತದೆ. ಡಯಾಬಿಟಿಕ್ ರೆಟಿನೋಪಥಿಯ ತೀವ್ರತೆಯು ಎಷ್ಟು ಬಾರಿ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಬಹು ಮುಖ್ಯವಾದ ಅಂಶವಾಗಿರುತ್ತದೆ.
ಆಂಟಿ-ವಿಎಫ್‍ಜಿ ಎಜೆಂಟ್‍ಗಳು ಎಂದರೇನು, ಹಾಗೂ ಡಯಾಬಿಟಿಸ್ ರೆಟಿನೋಪಥಿ ನಿರ್ವಹಣೆಯಲ್ಲಿ ಅವುಗಳ ಪಾತ್ರವೇನು ?
ಆಂಟಿ – ವಿಇಜಿಎಫ್‍ಗಳು (ಲುಸೆನ್‍ಟಿಸ್, ಅವಾಸ್ಟಿನ್, ರಜುಮಾಬ್) ಏಜೆಂಟ್‍ಗಳು ಡಯಾಬಿಟಿಕ್ ರೆಟಿನೋಪಥಿಯ ವಿವಿಧ ಹಂತಗಳಿಗಾಗಿ ಚಿಕಿತ್ಸೆಯ ಹೊಸ ನಮೂನೆಗಳಾಗಿ ಹೊರಹೊಮ್ಮಿವೆ. ಈ ಏಜೆಂಟ್‍ಗಳನ್ನು ಕಣ್ಣಿಗೆ ಸೇರಿಸಲಾಗುತ್ತದೆ (ಇಂಟ್ರಾವೆಟ್ರಿಯಲ್ ಇಂಜೆಕ್ಷನ್). ಇದನ್ನು ಸಾಮಾನ್ಯವಾಗಿ ಡಯಾಬಿಟಿಕ್ ಮ್ಯಾಕುಲೋಪಥಿ ಮತ್ತು ಪ್ರೊಲಿಫರೇಟಿವ್ ಡಯಾಬಿಟಿಕ್ ರೆಟಿನೋಪಥಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಡಯಾಬಿಟಿಕ್ ವಿಟ್ರಿಯೋಸ್ ಹೆಮೊರೇಜ್ ಮತ್ತು ಅಕ್ಷಿಪಟಲ ಪ್ರತ್ಯೇಕಿಸುವುದಕ್ಕಾಗಿ ಸರ್ಜರಿಗೆ ಮೊದಲು ತಾತ್ಕಾಲಿಕವಾಗಿ ಇದನ್ನು ಬಳಸಬಹುದಾಗಿರುತ್ತದೆ.
ವಿಟ್ರೆಕ್ಟೋಮಿ ಎಂದರೇನು ?
ವಿಟ್ರೆಕ್ಟೋಮಿ ಒಂದು ಶಸ್ತ್ರಚಿಕಿತ್ಸೆ ವಿಧಾನವಾಗಿದ್ದು, ಇದರಲ್ಲಿ ಟ್ರಾಕ್ಷನಲ್ ರೆಟಿನಲ್ ಡಿಟ್ಯಾಚ್‍ಮೆಂಟ್ (ಅಕ್ಷಿಪಟ ಪ್ರತ್ಯೇಕವಾಗುವಿಕೆಗೆ) ಕಾರಣವಾಗುವ ಮುಸುಕಾದ, ರಕ್ತ ತುಂಬಿದ ಪಾರದರ್ಶಕ ಮತ್ತು ಗಾಯವಾದ ಜೀವಕೋಶ ಕಣ್ಣಿನಿಂದ ತೆಗೆದು ಹಾಕುವ ಚಿಕಿತ್ಸೆಯಾಗಿರುತ್ತದೆ.
ಅಕ್ಷಿಪಟಲ ಪ್ರತ್ಯೇಕವಾಗುವಿಕೆ
ರೆಟಿನ ಅಥವಾ ಅಕ್ಷಿಪಟಲವು ನರ ಸಂವೇದಿ ಜೀವಕೋಶವಾಗಿದೆ. ಕಣ್ಣಿನ ಗೋಡೆಯ ಒಳಗೆ ರೆಟಿನಾ ಅಥವಾ ಕಣ್ಣಿನ ಬೆಳಕು ಸಂವೇದಿ ಅಂಗಾಂಶವಾಗಿದ್ದು, ಬಂಡೆಯ ಗೋಡೆಯ ಮೇಲೆ ವಾಲ್ ಪೇಪರ್‍ನಂತೆ ಇರುತ್ತದೆ. ಕ್ಯಾಮೆರಾದಲ್ಲಿನ ಫಿಲ್ಮ್‍ನಂತೆ, ನಿಮ್ಮ ಕಣ್ಣಿನ ಒಳಗೆ ಬರುವ ಬೆಳಕನ್ನು ರೆಟಿನ ದೃಷ್ಟಿಯಾಗಿ ಪರಿವರ್ತಿಸುತ್ತದೆ. ರೆಟಿನ ಮಧ್ಯಭಾಗವನ್ನು ಮ್ಯಾಕುಲಾ ಎನ್ನುವರು. ಅಕ್ಷಿಪಟಲ ಅಥವಾ ಮ್ಯಾಕುಲಾ, ರೆಟಿನಾದ ಭಾಗವಾಗಿದ್ದು, ಅದು ನಿಮ್ಮ ಸ್ಪಷ್ಟ ದೃಷ್ಟಿಗೆ ನೆರವಾಗಿ, ನೀವು ದೃಶ್ಯವನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಅವಕಾಶ ಮಾಡಿಕೊಡುತ್ತದೆ. ಮ್ಯಾಕುಲಾದ ಒಂದು ಭಾಗವು ದೃಷ್ಟಿ ಗ್ರಹಿಸುವ ಮತ್ತು ಮುಖವನ್ನು ಗುರುತಿಸುವ ಇತ್ಯಾದಿಯಂಥ ಉತ್ತಮ ಸವಿವರ ದೃಷ್ಟಿ ಸಾಮಥ್ರ್ಯವನ್ನು ಹೊಂದಿರುತ್ತದೆ. ರೆಟಿನದ ಉಳಿದ ಭಾಗವು ಸಮಾನಾಂತರ ರೆಟಿನಾವಾಗಿದ್ದು, ಪಾಶ್ರ್ವ ದೃಷ್ಟಿಗೆ ಸಹಕಾರಿಯಾಗಿದೆ.
ರೆಟಿನ ಪ್ರತ್ಯೇಕಗೊಂಡಾಗ ಅಥವಾ ಬೇರ್ಪಟ್ಟಾಗ, ಅದು ಕಣ್ಣಿನ ಗೋಡೆಯ ಹಿಂದಿನಿಂದ ಪ್ರತ್ಯೇಕಗೊಳ್ಳುತ್ತದೆ. ಹಾಗೂ ಅದರ ರಕ್ತ ಪೂರೈಕೆಯಿಂದ ಮತ್ತು ಪೋಷಕಾಂಶ ಮೂಲದಿಂದ ಹೊರಬರುತ್ತದೆ. ರೆಟಿನ ಅವನತಿಯತ್ತ ಸಾಗುತ್ತದೆ ಹಾಗೂ ಅದು ಪ್ರತ್ಯೇಕವಾಗಿಯೇ ಉಳಿದರೆ ಮೊದಲಿನಂತೆ ಕಾರ್ಯ ನಿರ್ವಹಿಸುವ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತದೆ. ಮ್ಯಾಕುಲಾ ಪ್ರತ್ಯೇಕವಾಗಿಯೇ ಉಳಿದಿದ್ದರೆ, ಕೇಂದ್ರ ದೃಷ್ಟಿಯು ನಶಿಸುತ್ತದೆ. ರೆಟಿನ ಪ್ರತ್ಯೇಕವಾಗುವಿಕೆಯನ್ನು ಮುಖ್ಯವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. :
ಎಕ್ಸುಡೇಟಿವ್ ರೆಟಿನಲ್ ಡಿಟ್ಯಾಚ್‍ಮೆಂಟ್ (ಸ್ರವಿಸುವ ಅಕ್ಪಿಪಟಲ ಪ್ರತ್ಯೇಕವಾಗುವಿಕೆ) : ರೆಟಿನ ಅಡಿಯಲ್ಲಿ ದ್ರವದ ಸೋರಿಕೆಯಿಂದಾಗಿ ಈ ಪ್ರತ್ಯೇಕವಾಗುವಿಕೆ ಕಂಡುಬರುತ್ತದೆ. ಈ ದ್ರವವನ್ನು ಒಸರುವಿಕೆ ಅಥವಾ ಜಿನುಗುವ ದ್ರವ ಎಂದು ಕರೆಯಲಾಗುತ್ತದೆ. ಗಡ್ಡೆಗಳು ಅಥವಾ ಉರಿಯೂತದ ದೋಷಗಳಿಂದ ಸ್ರವಿಸುವಿಕೆ ಅಕ್ಷಿಪಟಲ ಪ್ರತ್ಯೇಕವಾಗುವಿಕೆ ಕಂಡುಬರುತ್ತದೆ.
ಮುಂದುವರಿಯುವುದು…
Share this: