Vydyaloka

ಡಯಾಬಿಟಿಸ್ ಸೂಕ್ತ ನಿಯಂತ್ರಣ ಹೇಗೆ?

ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ.

  • ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು ಮಾಡಲಾಗಿದೆ.
  • ಅಂದಾಜು 1.5 ದಶಲಕ್ಷ ಸಾವುಗಳಿಗೆ ಡಯಾಬಿಟಿಸ್ ನೇರ ಕಾರಣವಾಗಿದೆ.
  • ಶೇಕಡ 80ಕ್ಕಿಂತ ಹೆಚ್ಚು ಡಯಾಬಿಟಿಸ್ ಸಾವುಗಳು ಕೆಳ ಮತ್ತು ಮಧ್ಯಮ ವರ್ಗದವರಲ್ಲಿ ಆದಾಯ ಸಂಭವಿಸುತ್ತಿದೆ.
  • 2030ರ ವೇಳೆಗೆ ವಿಶ್ವದಲ್ಲಿ ಡಯಾಬಿಟಿಸ್ ಸಾವಿಗೆ 7ನೇ ಪ್ರಮುಖ ಕಾರಣವಾಗಲಿದೆ.

ಡಯಾಬಿಟಿಸ್ ಅಥವಾ ಮಧುಮೇಹ (ಸಕ್ಕರೆ ಕಾಯಿಲೆ/ಸಿಹಿ ಮೂತ್ರ ರೋಗ) ಒಂದು ಬಹುಕಾಲ ಬೇರೂರುವ ರೋಗವಾಗಿದ್ದು, ಈ ಕೆಳಕಂಡ ಕಾರಣಗಳಿಂದ ಕಂಡುಬರುತ್ತದೆ.

ಇನ್ಸುಲಿನ್ ಒಂದು ಹಾರ್ಮೋನು ಆಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹೈಪರ್‌ಗ್ಲಿಸಿಮಿಯಾ ಅಥವಾ ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶವು ಅನಿಯಂತ್ರಿತ ಡಯಾಬಿಟಿಸ್‌ನ ಸಾಮಾನ್ಯ ಪರಿಣಾಮವಾಗಿದೆ ಹಾಗೂ ದೀರ್ಘ ಕಾಲದ ರೋಗವು ವಿಶೇಷವಾಗಿ ನರಗಳು ಮತ್ತು ರಕ್ತನಾಳ ಸೇರಿದಂತೆ ದೇಹದ ಅನೇಕ ವ್ಯವಸ್ಥೆಗಳಿಗೆ ಗಂಭೀರ ಸ್ವರೂಪದ ಹಾನಿಯುಂಟು ಮಾಡುತ್ತದೆ.
ಟೈಪ್ 1 ಡಯಾಬಿಟಿಸ್
ಟೈಪ್ 1 ಡಯಾಬಿಟಿಸ್ (ಈ ಹಿಂದೆ ಇನ್ಸುಲಿನ್ ಅವಲಂಬಿತ, ಬಾಲಾವಸ್ಥೆ ಅಥವಾ ಮಕ್ಕಳಲ್ಲಿ ಸಕ್ಕರೆ ರೋಗ ಬರುತ್ತದೆ ಎಂದು ಕರೆಯಲಾಗುತ್ತಿತ್ತು) ಮಧುಮೇಹವು ಕೊರತೆಯ ಇನ್ಸುಲಿನ್ ಉತ್ಪಾದನೆಯಿಂದ ಬರುವ ದೋಷವಾಗಿದ್ದು, ಪ್ರತಿದಿನ ಇನ್ಸುಲಿನ್ ನೀಡಬೇಕಾಗುತ್ತದೆ. ಇದರ ರೋಗಲಕ್ಷಣಗಳು ವಿಪರೀತ ಮೂತ್ರ ವಿಸರ್ಜನೆ (ಪಾಲಿಯೂರಿಯಾ), ಬಾಯಾರಿಕೆ (ಪಾಲಿ ಡಿಪಿಸಿಯಾ), ನಿರಂತರ ಹಸಿವು, ತೂಕ ಇಳಿಕೆ, ದೃಷ್ಟಿ ಬದಲಾವಣೆ ಹಾಗೂ ಆಯಾಸ ಇವುಗಳನ್ನು ಒಳಗೊಂಡಿರುತ್ತದೆ. ಈ ರೋಗಲಕ್ಷಣಗಳು ಹಠಾತ್ ಕಂಡುಬರಬಹುದು.
ಟೈಪ್ 2 ಡಯಾಬಿಟಿಸ್
ಟೈಪ್ 2 ಡಯಾಬಿಟಿಸ್ (ಈ ಹಿಂದೆ ಇದನ್ನು ಇನ್ಸುಲಿನ್ ರಹಿತ ಅವಲಂಬನೆ ಅಥವಾ ವಯಸ್ಕರಲ್ಲಿ ಕಂಡುಬರುತ್ತದೆ ಎಂದು ಕರೆಯಲಾಗುತ್ತಿತ್ತು) ಮಧುಮೇಹವು ಇನ್ಸುಲಿನ್ ಬಳಕೆಯಲ್ಲಿ ದೇಹವು ಅಸಮರ್ಥವಾಗುವುದರಿಂದ ಗೋಚರಿಸುತ್ತದೆ. ಅಧಿಕ ದೇಹ ತೂಕ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ವಿಶ್ವದಾದ್ಯಂತ ಡಯಾಬಿಟಿಸ್ ಹೊಂದಿರುವ ರೋಗಿಗಳಲ್ಲಿ ಶೇಕಡ 90ರಷ್ಟು ಮಂದಿ ಟೈಪ್ 2 ಡಯಾಬಿಟಸ್ ಹೊಂದಿರುತ್ತಾರೆ. ಇದರ ಚಿಹ್ನೆ ಮತ್ತು ರೋಗಲಕ್ಷಣಗಳು ಟೈಪ್ ೧ ಡಯಾಬಿಟಿಸ್‌ನಂತೆಯೇ ಇರುತ್ತದೆ. ಆದರೆ ಕಡಿಮೆ ಮಟ್ಟದಲ್ಲಿ ಗೋಚರಿಸುತ್ತದೆ. ಈ ರೀತಿಯ ಸಕ್ಕರೆ ರೋಗವು ದೇಹದಲ್ಲಿ ಸೇರಿಕೊಂಡು ಹಲವಾರು ವರ್ಷಗಳ ನಂತರ  ಹಾಗೂ ತೊಡಕುಗಳು ಈಗಾಗಲೇ ಉಲ್ಬಣಗೊಂಡ ನಂತರ ರೋಗವು ನಿರ್ಧರಿಸಲ್ಪಡುವುದು ಆತಂಕದ ಸಂಗತಿಯಾಗಿದೆ. ತೀರಾ ಇತ್ತೀಚಿನ ತನಕ, ಈ ರೀತಿ ಮಧುಮೇಹವು ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿತು. ಈಗ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ.
ಗರ್ಭಧಾರಣೆ ವೇಳೆ ಕಂಡುಬರುವ ಡಯಾಬಿಟಿಸ್
ಜೆಸ್ಟೆಷನಲ್ ಡಯಾಬಿಟಿಸ್ ಅಥವಾ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ಸಮಸ್ಯೆಯಲ್ಲಿ ಹೈಪರ್‌ಗ್ಲಿಸಿಮಿಯಾ ಅಂದರೆ ರಕ್ತದಲ್ಲಿನ ಸಕ್ಕರೆ ಅಂಶವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದರೆ ಡಯಾಬಿಟಿಸ್ ರೋಗನಿರ್ಧಾರ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಇದು ವಿಶೇಷವಾಗಿ ಗರ್ಭವತಿಯರಲ್ಲಿ ಕಂಡುಬರುತ್ತದೆ. ಜೆಸ್ಟೆಷನಲ್ ಡಯಾಬಿಟಿಸ್ ಹೊಂದಿರುವ ಮಹಿಳೆಯರಲ್ಲಿ ಗರ್ಭಧರಿಸಿದ ವೇಳೆ ಮತ್ತು ಹೆರಿಗೆ ವೇಳೆ ತೊಡಕುಗಳು ಗೋಚರಿಸುವ ಸಾಧ್ಯತೆ ಇರುತ್ತದೆ. ಭವಿಷ್ಯದಲ್ಲಿ ಇಂಥ ಮಹಿಳೆಯರಿಗೆ ಟೈಪ್ 2 ಡಯಾಬಿಟಿಸ್ ಸಂಭವ ಹೆಚ್ಚಾಗಿರುತ್ತದೆ. ಪ್ರಸವಪೂರ್ವ ತಪಾಸಣೆ ಮೂಲಕ ಜೆಸ್ಟೆಷನಲ್ ಡಯಾಬಿಟಿಸ್‌ನ ರೋಗ ನಿರ್ಧರಿಸಬಹುದು.
ಇಂಪೇರ‍್ಡ್ ಗ್ಲುಕೋಸ್ ಟಾಲೆರೆನ್ಸ್ (ಐಜಿಟಿ) ಮತ್ತು ಇಂಪೇರ‍್ಡ್ ಫಾಸ್ಟಿಮಗ್ ಗ್ಲೈಸಿಮಿಯಾ (ಐಎಫ್‌ಜಿ)
ಇಂಪೇರ‍್ಡ್ ಗ್ಲುಕೋಸ್ ಟಾಲೆರೆನ್ಸ್ (ಐಜಿಟಿ) ಮತ್ತು ಇಂಪೇರ‍್ಡ್ ಫಾಸ್ಟಿಮಗ್ ಗ್ಲೈಸಿಮಿಯಾ (ಐಎಫ್‌ಜಿ)-ಇದು ಸಾಮಾನ್ಯ ಮತ್ತು ಡಯಾಬಿಟಿಸ್ ನಡುವೆ ಪರಿವರ್ತನೆಯಲ್ಲಿ ಅಂತರಮಧ್ಯಂತರ ಸ್ಥಿತಿಗಳಾಗಿರುತ್ತದೆ. ಐಜಿಟಿ ಅಥವಾ ಐಎಫ್‌ಜಿ ಇರುವ ಜನರಲ್ಲಿ ಟೈಪ್ 2 ಡಯಾಬಿಟಿಸ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಡಯಾಬಿಟಿಸ್ ಪೂರ್ವದಲ್ಲಿ ರಕ್ತದಲ್ಲಿನ ಗ್ಲುಕೋಸ್ (ಸಕ್ಕರೆ) ಮಟ್ಟಗಳು ಸಾಮಾನ್ಯಕ್ಕಿಂತ ಅಧಿಕ ಮಟ್ಟದಲ್ಲಿರುವ ಸ್ಥಿತಿಯಾಗಿರುತ್ತದೆ. ಆದರೆ ಮಧುಮೇಹ ಎಂದು ಕರೆಯುವಷ್ಟು ಹೆಚ್ಚಾಗಿರುವುದಿಲ್ಲ. ಇದನ್ನು ಪತ್ತೆ ಮಾಡದಿದ್ದರೆ, ಇದು ಡಯಾಬಿಟಿಸ್‌ಗೆ ಎಡೆ ಮಾಡಿಕೊಡುತ್ತದೆ. ಮಧುಮೇಹ ಪೂರ್ವ ಸ್ಥಿತಿಯೊಂದಿಗೆ ಇರುವ ವ್ಯಕ್ತಿಗಳಲ್ಲಿ ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಭಿವೃದ್ಧಿಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು (ಓರಲ್ ಗ್ಲುಕೋಸ್ ಟಾಲರೆನ್ಸ್ ಟೆಸ್ಟ್-ಡಯಾಬಿಟಿಸ್/ಡಯಾಬಿಟಿಸ್ ಪೂರ್ವ ರೋಗ ನಿರ್ಧಾರಕ್ಕೆ ಬಳಸುವ ಒಂದು ಪರೀಕ್ಷೆ) ಹಾಗೂ ಗ್ಲೈಕೇಟೆಡ್ ಹೀಮೊಗ್ಲೋಬಿನ್ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. (ಈ ಪರೀಕ್ಷೆಯು 3 ತಿಂಗಳುಗಳಿಂದ  ಗ್ಲುಕೋಸ್ ಮಟ್ಟವನ್ನು ತಿಳಿಸುತ್ತದೆ). ಓರಲ್ ಗ್ಲುಕೋಸ್ ಟಾಲರೆನ್ಸ್ ಟೆಸ್ಟ್‌ಗಾಗಿ ಸ್ಟ್ಯಾಂಡರ‍್ಡ್ ಗ್ಲುಕೋಸ್‌ನನ್ನು ನೀಡಲಿದ್ದು,ಒಂದು ಕಪ್ ನೀರಿನೊಂದಿಗೆ ಕುಡಿಯಬೇಕಾಗುತ್ತದೆ.ಬಳಿಕ 2 ರಕ್ತ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಅಂದರೆ 0 ನಿಮಿಷ ಮತ್ತು 120 ನಿಮಿಷಗಳು (ಒಟ್ಟು 4 ಎಂಎಲ್). ೦ ನಿಮಿಷ ರಕ್ತ ಮಾದರಿಯು ರಕ್ತದಲ್ಲಿನ ಗ್ಲುಕೋಸ್ ಮತ್ತು ಗ್ಲೈಕೇಟೆಡ್ ಹೀಮೊಗ್ಲೋಬಿನ್ ತಪಾಸಣೆಗೆ ಬಳಸಲಾಗುತ್ತದೆ ಹಾಗೂ 120 ನಿಮಿಷಗಳ ರಕ್ತ ಮಾದರಿಯನ್ನು ರಕ್ತದಲ್ಲಿನ ಗ್ಲುಕೋಸ್ ತಪಾಸಣೆಗೆ ಉಪಯೋಗಿಸಲಾಗುತ್ತದೆ.
ಡಯಾಬಿಟಿಸ್‌ನ ಸಾಮಾನ್ಯ ಪರಿಣಾಮಗಳು
ಡಯಾಬಿಟಿಸ್‌ನ ತಡೆಗಟ್ಟುವಿಕೆ
ಟೈಪ್ 2 ಡಯಾಬಿಟಿಸ್‌ನನ್ನು ತಡೆಗಟ್ಟಲು ಅಥವಾ ವಿಳಂಬ ಮಾಡುವಲ್ಲಿ ಸರಳ ಜೀವನಶೈಲಿ ಕ್ರಮಗಳು ಪರಿಣಾಮಕಾರಿ. ಟೈಪ್ 2 ಡಯಾಬಿಟಿಸ್ ಮತ್ತು ಅದರ ತೊಡಕುಗಳನ್ನು ತಡೆಯಲು ಈ ಕೆಳಕಂಡ ಸಲಹೆಗಳನ್ನು ಪಾಲಿಸಬೇಕು.
ರೋಗ ನಿರ್ಧಾರ ಮತ್ತು ಚಿಕಿತ್ಸೆ











ಡಾ.ಚಲಪತಿ
ವೈದೇಹಿ ಆಸ್ಪತ್ರೆ
ವೈಟ್‌ಫೀಲ್ಡ್, ಬೆಂಗಳೂರು-66
ದೂ.: 080-28413381/2/3/4
http://www.vims.ac.in/
Share this: