Vydyaloka

ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗಲು ಕಾರಣಗಳು ಯಾವುವು?

ಹಲ್ಲು ಕಿತ್ತ ಬಳಿಕ ರಕ್ತ ಒಸರುವುದು ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಹಲ್ಲು ಕಿತ್ತ ಬಳಿಕ ರಕ್ತ ಬಂದಿಲ್ಲವೆಂದರೆ ಹಲ್ಲು ಕಿತ್ತ ಗಾಯ ಒಣಗದು. ಹೀಗೆ ಒಸರಿದ ರಕ್ತ ಹೆಪ್ಪುಗಟ್ಟಿ ಕ್ರಮೇಣ ಅದರ ಮೇಲೆ ಜೀವಕೋಶಗಳು ಬೆಳೆದು, ಹಲ್ಲು ಕಿತ್ತ ಜಾಗ ಹೊಸ ಅಂಗಾಂಶಗಳಿಂದ ತುಂಬಿ ಗಾಯ ಒಣಗುತ್ತದೆ. ಆದರೆ ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ಅತಿಯಾದ ರಕ್ತಸ್ರಾವವಾಗುವ ಸಾದ್ಯತೆಯೂ ಇದೆ. ಹೀಗೆ ರಕ್ತಸ್ರಾವವಾಗಲು ಹಲವಾರು ಕಾರಣಗಳಿವೆ. ದೇಹ ಸಂಬಂಧಿ ಕಾರಣಗಳು ಮತ್ತು ಸ್ಥಳೀಯ ಕಾರಣಗಳು  ಎಂಬುದಾಗಿ ವಿಂಗಡಿಸಲಾಗಿದೆ.

ಸ್ಥಳೀಯ ಕಾರಣಗಳು

ದೇಹ ಸಂಬಂಧಿ ಕಾರಣಗಳು

ಸಾಮಾನ್ಯವಾಗಿ ಹಲ್ಲು ಕಿತ್ತಾಗ 10 ರಿಂದ 30 ಮಿ.ಲೀ ರಕ್ತ ಸೋರಿ ಹೋಗುತ್ತದೆ. ಹಲ್ಲು ಕಿತ್ತ ಬಳಿಕ ಜೋರಾಗಿ ರಕ್ತ ಬರುತ್ತಿದ್ದಲ್ಲಿ ಹೊಲಿಗೆ ಹಾಕಿ, ಒತ್ತಡ ಹೇರಿ ಇಲ್ಲವೇ ಔಷಧಿ ನೀಡಿ ರಕ್ತಸ್ರಾವವನ್ನು ನಿಲ್ಲಿಸಲಾಗುತ್ತದೆ. ಹಲ್ಲು ಕಿತ್ತು ಸುಮಾರು ಅರ್ಧಗಂಟೆಗಳ ಬಳಿಕವೂ ರಕ್ತಸ್ರಾವವಾಗುತ್ತಿದ್ದಲ್ಲಿ, ಯಾವ ಕಾರಣಕ್ಕಾಗಿ ರಕ್ತ ಬರುತ್ತಿದೆ ಎಂಬುದನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡತಕ್ಕದ್ದು. ಪ್ರತಿಬಾರಿ ಹಲ್ಲು ಕೀಳುವಾಗಲೂ ವೈದ್ಯರು, ರೋಗಿಯ ರೋಗದ ಬಗೆಗಿನ ಸಂಪೂರ್ಣ ಮಾಹಿತಿ ಪಡೆಯತಕ್ಕದ್ದು ಮತ್ತು ದಾಖಲಿಸಬೇಕು. ಅದೇ ರೀತಿ ರೋಗಿಗಳು ಕೂಡ ವೈದ್ಯರ ಬಳಿ ಸಂಪೂರ್ಣವಾಗಿ, ತಮ್ಮ ರೋಗದ ಬಗೆಗಿನ ಮಾಹಿತಿ ನೀಡಬೇಕು. 

 

ಡಾ|| ಮುರಲೀ ಮೋಹನ್ ಚೂಂತಾರು

 

Share this: