ಕೊರೋನಾ ಕಾರ್ಮಿಕರಿಗೆ ಕಾಡದಿರಲಿ.ಕೊರೋನಾ ಸೊಂಕಿನ ತಾಂಡವದಲ್ಲಿ ಶ್ರಮಿಕ ವರ್ಗದ ಭಯಾನಕ ಪರಿಸ್ಥಿತಿ ಜಗತ್ತಿನ ಮುಂದೆ ಬರುತ್ತಿದೆ.ದಿನಗೂಲಿ ಮೇಲೆ ಬದುಕುವ ಈ ಜನರಿಗೆ ಲಾಕಡೌನ್ ದೊಡ್ಡ ಹೊಡೆತವನ್ನೆ ನೀಡಿದೆ.
ಶ್ರಮಿಕ ವರ್ಗಕ್ಕೆ ನಿಜಕ್ಕೂ ನ್ಯಾಯ ಸಿಕ್ಕಿದೆಯಾ..?
1 ಮೇ 1886ಕ್ಕೆ ಇಂದಿನ ಬಲಾಢ್ಯ ರಾಷ್ಟ್ರ ಅಮೇರಿಕಾದಿಂದ ಆರಂಭಗೊಂಡ ಕಾರ್ಮಿಕರ ಹೋರಾಟ 1 ಮೇ 1923 ರಂದು ಭಾರತಕ್ಕೆ ತಲುಪಿತು. ಅದರಂತೆ ಅದು ವಿಶ್ವವನ್ನು ವ್ಯಾಪಿಸಿತು. ಕಾರ್ಲಮಾಕ್ರ್ಸ, ಲೆನಿನ್‍ರಂತಹ ನಾಯಕರಿಂದ ಹಿಡಿದು ಇಂದಿನ ಕಮ್ಯೂನಿಸ್ಟರು ಮತ್ತು ಸುಧಾರಣಾವಾದಿಗಳು ಕಾರ್ಮಿಕರ ಹಕ್ಕುಗಳ ಕುರಿತು ಹೋರಾಟ ಮಾಡುತ್ತಲೆ ಬಂದರು. ದೇಶದ ಅಧಿಕಾರ ಕಾರ್ಮಿಕರ ಕೈಯಲ್ಲಿರಬೇಕು ಎಂದು ಹೇಳಿದರು. ಅದರಂತೆ ಇಂದು ಹಲವು ದೇಶಗಳ ನಾಯಕರು ಅವರ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇವೆಲ್ಲವುಗಳ ಮಧ್ಯ ನಾವು ಈ ದಿನವನ್ನು ಆಚರಿಸುವಾಗ,.. ಶುಭಾಶಯ ಕೊಡುವಾಗ,.. ಶ್ರಮಿಕ ವರ್ಗಕ್ಕೆ ನಿಜಕ್ಕೂ ನ್ಯಾಯ ಸಿಕ್ಕಿದೆಯಾ..? ಅಥವಾ ಅವರು ಸಮಾಜದಲ್ಲಿ ತೆಲೆ ಎತ್ತಿ ಬದುಕುತಿದ್ದಾರಾ..? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ, ಬಹುತೇಕ ಕಾರ ಹುಣ್ಣೆಮೆಗೆ ಎತ್ತನ್ನು ಶೃಂಗರಿಸಿ, ಪೂಜೆ ಮಾಡಿ ಉಳಿದ ದಿನ ಚಾಬೂಕಿನ ಏಟು ಕೊಡುವಂತೆ ಭಾಸವಾಗುತ್ತದೆ.
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿದೆ:
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿದೆ, ಅದಕ್ಕಾಗಿ ನಿಮ್ಮ ಪರಿಸರದಲ್ಲಿ ಬಾಲಕಾರ್ಮಿಕರು ಕಾಣಿಸಿದರೆ ಅವರನ್ನು ಶಾಲೆಗೆ ಸೇರಿಸಿ ಎಂದು ಸರಕಾರ ಹೇಳುತ್ತದೆ. ಆದರೆ ಅದು ಇಂದಿಗೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಕಾರಣ ಶ್ರಮಿಕ ವರ್ಗದ ಆರ್ಥಿಕ ಬಿಕ್ಕಟ್ಟನ್ನು ಸರಕಾರ ಬಗೆ ಹರಿಸುವ ಕಾರ್ಯ ಮಾಡುತ್ತಿಲ್ಲ. ಇಂದಿಗೂ ಶ್ರೀಮಂತರು ಲಿಂಗ ತಾರತ್ಯಮ್ಯದ ಕೂಲಿಯನ್ನೆ ಕೊಡುತ್ತಾರೆ. ಬದಲಾಗುತ್ತಿರುವ ಜಾಗತಿಕರಣದಲ್ಲಿ ಈತನ ಶ್ರಮ ಮತ್ತು ಕೌಶಲ್ಯಕ್ಕೆ ಬೆಲೆ ಸಿಗದಂತಾಗಿದೆ. ಆತ ತುಟ್ಟಿ ಮಾರುಕಟ್ಟೆಯ ಜಗತ್ತಿನಲ್ಲಿ ಬದಕಲು ಇಂದಿಗೂ ದೊಡ್ಡ ಹೋರಾಟ ಮಾಡುತ್ತಲೆ ಇದ್ದಾನೆ.
ಅದರಲ್ಲಿ ಇಂದಿನ ಕೊರೋನಾ ಸೊಂಕಿನ ತಾಂಡವದಲ್ಲಿ ಶ್ರಮಿಕ ವರ್ಗದ ಭಯಾನಕ ಪರಿಸ್ಥಿತಿ ಜಗತ್ತಿನ ಮುಂದೆ ಬರುತ್ತಿದೆ. ಕೊರೋನಾ ಹುಟ್ಟು ಚೀನಾದ ವುಹಾನ್ ಪ್ರಾಂತ. ಅಲ್ಲಿಯೆ ಅತೀ ಹೆಚ್ಚು ಕಾರ್ಮಿಕರು ವಾಸವಾಗಿದ್ದರು. ಕಮ್ಯೂನಿಸ್ಟ ವಿಚಾಸರಣಿ ಈ ದೇಶ, ಕಾರ್ಮಿಕರ ಅಪಾರ ಸಾವು ಕಣ್ಣಿನಿಂದ ನೋಡುತಿತ್ತು. ಆದರೆ ಅವರಿಗಾಗಿ ಬೇಗ ಯಾವ ಉಪಾಯೋಜನೆ ಮಾಡಲೆ ಇಲ್ಲ. ಅದೆ ಶ್ರೀಮಂತರಿರುವ ಬೀಜಿಂಗ್ ಮತ್ತು ಶಾಂಘಾಯಿ ಪಟ್ಟಣಗಳನ್ನು ಸೀಲ್‍ಡೌನ್ ಮಾಡಿತ್ತು. ಅದರಂತೆ ಅದು ಇಂದು ಜಗತ್ತಿನಾದ್ಯಂತ ದೊಡ್ಡ ಮಾರಿಯಾಗಿ ಹಬ್ಬಿಕೊಂಡಿದೆ. ನಾವು ಒಂದು ವೇಳೆ ಸೂಕ್ಷ್ಮವಾಗಿ ನೋಡಿದರೆ, ಎಲ್ಲಕ್ಕಿಂತ ಹೆಚ್ಚು ಪ್ರಭಾವಕ್ಕೆ ಒಳಗಾದವರು ಕಾರ್ಮಿಕರು ಎಂಬುದು ಗೊತ್ತಾಗುತ್ತದೆ.
ದಿನಗೂಲಿ ಜನರಿಗೆ ಲಾಕಡೌನ್ ದೊಡ್ಡ ಹೊಡೆತ:
ವಿಶ್ವ ಖಾಧ್ಯ ಸಂಘವು ಈ ವರ್ಷ ಜಗತ್ತಿನಾದ್ಯಂತ ಸುಮಾರು 40 ರಿಂದ 45 ಕೋಟಿ ಜನರು ಹಸಿವಿನಿಂದ ಬಳಲುತ್ತಾರೆ ಎಂದು ಹೇಳಿದೆ. ಹೆಚ್ಚು ಕಡಿಮೆ ಇದೆಲ್ಲಾ ಶ್ರಮಿಕ ವರ್ಗವೆ. ಅದಕ್ಕಾಗಿ ಇಂದು ಜಗತ್ತಿನ ಎಲ್ಲ ದೇಶಗಳು ಇವರಿಗಾಗಿ ಬೇಗ ದೊಡ್ಡ ಕಾರ್ಯ ನಿಯೋಜನೆ ಮಾಡಿಕೊಳ್ಳಬೇಕಿದೆ. ಜಗತ್ತಿನ ಅರ್ಥವ್ಯವಸ್ಥೆ ಕೊರೋನಾದಿಂದ ನಡುಗುತ್ತಿದೆ ಆದರೆ ನಮ್ಮ ಭಾರತದ ಅರ್ಥವ್ಯವಸ್ಥೆ ಮೇಲೆ ಜಗತ್ತಿನ ಭರವಸೆ ಇದೆ. ಏಕೆಂದರೆ ಇಲ್ಲಿ ಯುವಕ ಮತ್ತು ಶ್ರಮಿಕರ ವರ್ಗ ತುಂಬ ದೊಡ್ಡದು ಮತ್ತು ಅಷ್ಟೆ ಕ್ರಿಯಾಶೀಲವು ಕೂಡ. ಅದಕ್ಕಾಗಿ ನಾವು ಭಾರತಿಯರು ಶ್ರಮಿಕರ ಬದುಕಿಗೆ ಸ್ಥೈರ್ಯ ಕೊಡುವ ಕಾರ್ಯ ಮಾಡಬೇಕಿದೆ. ಅವರ ಶ್ರಮ ಇಲ್ಲದೆ ದೇಶದ ಪ್ರಗತಿ ಅಸಾಧ್ಯ ಎಂಬುದನ್ನು ಅರಿತುಕೊಂಡು, ಈ ವರ್ಗವನ್ನು ಕೊರೋನಾ ಮಹಾಮಾರಿ ಪ್ರಭಾವದಿಂದ ರಕ್ಷಿಸಿ ಪುನಃಶ್ ಚೇತನ ತುಂಬಬೇಕಿದೆ. ಇದುವೆ ನಾವು ಈ ವರ್ಷ ಕಾರ್ಮಿಕ ದಿನಕ್ಕೆ ಕೊಡುವ ದೊಡ್ಡ ಕಾಣಿಕೆ.
ಮಲಿಕಜಾನ್ ಶೇಖ್
‘ಜಾನ್ ಹೌಸ್’, ಪ್ಲಾಟ್ ಕ್ರ.709/31,
ಬಾಸಲೇಗಾಂವ ರೋಡ, ಅಕ್ಕಲಕೋಟ- 413216
ಸಂಪರ್ಕ: 94234 68808