ಚೀನಾದ ಶಿಂಗ್ ಝಿಯಾಂಗ್ ಸಡನ್ ಸ್ಥಬ್ದ..! ಕಾರಣ ಕೊರೋನಾ ಅಥವಾ ಇನ್ಯಾವುದೇ ವೈರಾಣಾ?ಎನ್ನುವ ಅನುಮಾನ ಇದೀಗ ವಿಶ್ವ ಸಮುದಾಯಕ್ಕೆ ಎದುರಾಗಿದೆ. ಏಕೆಂದರೆ ಇದ್ದಕ್ಕಿದ್ದ ಹಾಗೆ ರಿಸ್ಟ್ರಿಕ್ಷನ್ ಹಾಕಲಾಗುತ್ತಿದೆ, ಇದ್ದಕ್ಕಿದ್ದ ಹಾಗೆ ಲಕ್ಷಾಂತರ ಜನರ ಪರೀಕ್ಷೆ ನಡೆಸಲಾಗುತ್ತಿದೆ, ಏನಾಗಿದೆ ಎನ್ನುವ ಬಗ್ಗೆ ಸರಕಾರ ಯಾವ ವಿಷಯವನ್ನೂ ಹೇಳುತ್ತಿಲ್ಲ.
ಚೀನಾದಲ್ಲಿ ನಡೆದಿದ್ದೇನು?
ಈ ಹಿಂದೆ ವುಹಾನ್ ಮಾರ್ಕೆಟ್‍ನಲ್ಲಿ ಶುರುವಾಗಿದ್ದ ಕೊರೋನಾ ಇದೀಗ ಚೀನಾದ ಶಿಂಗ್ ಝಿಯಾಂಗ್ ಪ್ರಾಂತ್ಯದ ಕಾಶ್‍ಘರ್‍ಎನ್ನುವ ನಗರದಲ್ಲಿ ಶುರುವಾಗಿದೆ. ಇಲ್ಲಿಗ ಸುಮಾರು 137 ಜನರಿಗೆ ಹೊಸತಾಗಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಚೀನಾದ ಹೆಲ್ತ್ ಕಮಿಶನ್ ಹೇಳಿಕೆ ನೀಡಿದೆ. ಹೀಗೆ ದೃಢಪಟ್ಟ ಎಲ್ಲಾ ಪ್ರಕರಣಗಳು ಗಾರ್ಮೆಂಟ್ ಫ್ಯಾಕ್ಟರಿಯೊಂದರ ಲಿಂಕ್ ಹೊಂದಿವೆ. ಇದರಲ್ಲಿ ವಿಶೇಷವೆಂದರೆ ಎಲ್ಲಾ ಪ್ರಕರಣಗಳಲ್ಲಿಯೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲವಂತೆ! ಸಾಮಾನ್ಯವಾಗಿ ಚೀನಾ ದೇಶದಲ್ಲಿ ಕೊರೋನಾ ರೋಗದ ಲಕ್ಷಣಗಳು ಇಲ್ಲದಿದ್ದರೆ ಅಲ್ಲಿಯ ಸರಕಾರ ಅದನ್ನು ಪಾಸಿಟಿವ್ ಎಂದು ಪರಿಗಣಿಸುವುದಿಲ್ಲ.
ಆದರೆ ಇದೀಗ ಶಿಂಗ್ ಝಿಯಾಂಗ್ ಪ್ರಾಂತ್ಯದ 17 ವರ್ಷದ ಹುಡುಗಿಗೆ ಕೊರೋನಾ ರೋಗ ಲಕ್ಷಣಗಳು ಕಂಡು ಬಂದು ಸೋಂಕು ಇರುವುದು ದೃಢಪಟ್ಟಿದೆ. ಇದುಚೀನಾದಲ್ಲಿಅಕ್ಟೋಬರ್ 14ರ ನಂತರಕಂಡುಬಂದ ಮೊದಲ ಪ್ರಕರಣವಾಗಿದೆ. ಇದರ ಬೆನ್ನಲ್ಲೇ ಚೀನಾದ ಸರಕಾರ ಶಿಂಗ್ ಝಿಯಾಂಗ್ ಪ್ರಾಂತ್ಯದ ಸುಮಾರು 50 ಲಕ್ಷ ಜನರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸುವ ಕಾರ್ಯಾಚರಣೆಯನ್ನು ಆರಂಭ ಮಾಡಿದೆ. ಇದುವರೆಗೆ ಹೊಸತಾಗಿ 30 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ 137 ಜನರಿಗೆ ಪಾಸಿಟಿವ್ ಕಂಡುಬಂದಿದೆ. ಉಳಿದವರಿಗೆ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮಾನ ಮೂಡಿಸಿದ ವಿಚಾರವೇನು?
ಶನಿವಾರ 17ರ ಬಾಲಕಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲಿಯೇ ಕಾಶ್‍ಘರ್ ವಿಮಾನ ನಿಲ್ದಾಣದ ಎಲ್ಲಾ ವಿಮಾನಗಳ ಹಾರಾಟವನ್ನು ತಕ್ಷಣ ರದ್ದುಪಡಿಸಲಾಗಿದೆ. ಪೊಲೀಸರು ಕೂಡಾ ಮಾಸ್ಕ್ ಧರಿಸಲೇಬೇಕು ಎಂದು ಸರಕಾರ ಆದೇಶ ಹೊರಡಿಸಿತು. ವದಂತಿಗಳನ್ನು ಹಬ್ಬಿಸಬೇಡಿ ಮತ್ತು ನಂಬಬೇಡಿ ಎಂದು ಚೀನಾದ ಸೋಷಿಯಲ್ ಮೀಡಿಯಾಗಳ ಮೂಲಕ ಅಲ್ಲಿನ ಜನರಿಗೆ ಹೇಳಲಾಯಿತು. ಈ ಎಲ್ಲಾ ವಿದ್ಯಮಾನಗಳಿಂದ ಕಾಶ್‍ಘರ್ ನಿವಾಸಿಗಳು ನಿಜಕ್ಕೂ ಗೊಂದಲಗೊಳಗಾಗಿದ್ದಾರೆ. ಏಕೆಂದರೆ ಇದ್ದಕ್ಕಿದ್ದ ಹಾಗೆ ರಿಸ್ಟ್ರಿಕ್ಷನ್ ಹಾಕಲಾಗುತ್ತಿದೆ, ಇದ್ದಕ್ಕಿದ್ದ ಹಾಗೆ ಲಕ್ಷಾಂತರ ಜನರ ಪರೀಕ್ಷೆ ನಡೆಸಲಾಗುತ್ತಿದೆ, ಏನಾಗಿದೆ ಎನ್ನುವ ಬಗ್ಗೆ ಸರಕಾರ ಯಾವ ವಿಷಯವನ್ನೂ ಹೇಳುತ್ತಿಲ್ಲ, ವಿಮಾನ ಯಾನ ಸೇರಿದಂತೆ ಎಲ್ಲಾ ರೀತಿಯಿಂದ ಪ್ರಾಂತ್ಯದ ಹೊರ ಹೋಗುವ ಮತ್ತು ಒಳಬರುವ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ.
ಚೀನಾದಲ್ಲಿ ಇದುವರೆಗೆ ಸರಕಾರಿ ಲೆಕ್ಕದ ಪ್ರಕಾರ ಕೇವಲ 85810 ಪ್ರಕರಣಗಳು ಮಾತ್ರ ಕೊರೋನಾ ಸೋಂಕಿಗೆ ಒಳಗಾದವರು; ಅದರಲ್ಲಿ 4634 ಜನರು ಮಾತ್ರ ಮೃತಪಟ್ಟಿದ್ದಾರೆ. ಈ ಅಂಕಿಸಂಖ್ಯೆಗಳ ಬಗ್ಗೆ ಕೂಡಾ ಎಲ್ಲರಿಗೂ ಅನುಮಾನಗಳಿವೆ. ಇಡೀ ವಿಶ್ವದ ಎಲ್ಲಾ ದೇಶಗಳಲ್ಲಿಯೂ ವ್ಯಾಪಕವಾಗಿ ಹರಡಿರುವ ಕೊರೋನಾ ಸೋಂಕು, ಲಕ್ಷಾಂತರ ಜನರನ್ನು ಬಲಿ ಹಾಕಿರುವ ಈ ಸಾಂಕ್ರಾಮಿಕ, ಚೀನಾದಂತ ಬೃಹತ್ ಜನಸಂಖ್ಯೆಯ ದೇಶದಲ್ಲಿ ಒಂದು ಲಕ್ಷಜನರಿಗೂ ವ್ಯಾಪಿಸಿಲ್ಲ ಎಂದರೆ ನಂಬುವುದು ಕಷ್ಟವೇ! ಹಾಗಾಗಿ ವಿಶ್ವ ಸಮುದಾಯ ಇದನ್ನು ನಂಬುತ್ತಿಲ್ಲ. ಮೇಲಾಗಿ ಚೀನಾದ ಶಿಂಗ್ ಝಿಯಾಂಗ್ ಪ್ರಾಂತ್ಯ ಒಂದು ನಿಗೂಢ ಪ್ರದೇಶವೆಂದೆ ಹೇಳಲಾಗುತ್ತಿದೆ. ಏಕೆಂದರೆ ಅಲ್ಲಿ ಇರುವ ಲಕ್ಷಾಂತರ ಉಯಿಘರ್ ಮುಸ್ಲಿಮರಿಗೆ ಧರ್ಮ ಪರಿವರ್ತನೆ, ಮನಪರಿವರ್ತನೆಗೆ ಅಂತಲೇ ಬೃಹತ್ ಕ್ಯಾಂಪ್‍ಗಳನ್ನು ಹಾಕಿದೆ ಚೀನಾದ ಸರ್ಕಾರ..! ಇಂತಹ ಪ್ರದೇಶದಲ್ಲಿ ಕಾಯಿಲೆ ಒಮ್ಮೆಲೇ ಸ್ಪೋಟಗೊಂಡಿದ್ದು, ಅದು ಕಾಯಿಲೆಯೇ ಅಥವಾ ದೂರ್ತ ಚೀನಾ ಬೇರೇನಾದರೂ ಆಟ ಕಟ್ಟಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.