Vydyaloka

ಚರ್ಮ ಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆ

ಚರ್ಮ ಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಎಸ್ಜಿಮಾ/ ಡರ್ಮಟೈಟಿಸ್, ಸೋರಿಯಾಸಿಸ್, ಮೊಡವೆ, ಮುಂತಾದ ಚರ್ಮ ಸಮಸ್ಯೆಗಳಿಗೆ ಹೋಮಿಯೋಪತಿಯಲ್ಲಿ ಉತ್ತಮ ಔಷದ ಲಭ್ಯ.

ಎಸ್ಜಿಮಾ/ ಡರ್ಮಟೈಟಿಸ್: ಇದು 20 % ಶಾಲಾ ಮಕ್ಕಳು ಮತ್ತು 7- 8 % ರಷ್ಟು ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದು ಉರಿಯೂತವಾಗಿದ್ದು, ಇದರಲ್ಲಿ ಚರ್ಮ ಕೆಂಪಾಗುತ್ತವೆ, ಉರಿಯುತ್ತವೆ ಮತ್ತು ತುರಿಕೆ ಉಂಟಾಗುತ್ತದೆ. ಪೀಡಿತ ಭಾಗಗಳಲ್ಲಿ ಸಣ್ಣ, ದ್ರವ ತುಂಬಿದ ಗುಳ್ಳೆಗಳುಂಟಾಗುತ್ತದೆ. ಎಸ್ಜಿಮಾದಲ್ಲಿ ವಿವಿಧ ರೂಪಗಳಿವೆ.
 ಅಟೊಪಿಕ್ ಡರ್ಮಟೈಟಿಸ್ – ಇದು ಸಾಮಾನ್ಯವಾಗಿ ಮಕ್ಕಳಿಗೆ ಎರಡು ವರ್ಷವಾಗುವ ಮೊದಲೇ ಪ್ರಾರಂಭವಾಗಿ ಹದಿಹರೆಯದ ಮತ್ತು ಪ್ರೌಢಾವಸ್ಥೆಯಲ್ಲಿ ಉಲ್ಬಣಗೊಳ್ಳುವುದು.
 ಕಾಂಟ್ಯಾಕ್ಟ್ ಡರ್ಮಟೈಟಿಸ್- ವ್ಯಕ್ತಿಯು ಯಾವುದೇ ವಸ್ತುವಿಗೆ (ನಿಕಲ್, ರಬ್ಬರ್ ಅಥವಾ ವಿವಿಧ ಸಸ್ಯಗಳಿಗೆ) ಸೂಕ್ಷ್ಮತೆಯನ್ನು ಹೊಂದಿದ್ದರೆ ವಸ್ತುವಿನ ಸಂಪರ್ಕದಿಂದ ಈ ಚರ್ಮರೋಗ ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು.
ಸೆಬೊರ್ಹೋಯಿಕ್ ಡರ್ಮಟೈಟಿಸ್– ವಯಸ್ಕರಲ್ಲಿ ಮತ್ತು ಶಿಶುಗಳಲ್ಲಿ ಕಂಡುಬರುತ್ತದೆ. ಶಿಶುಗಳಲ್ಲಿ ಇದನ್ನು ಕ್ರೇಡಲ್ ಕ್ಯಾಪ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ನೆತ್ತಿಯ ಮೇಲೆ ಪರಿಣಾಮ ಬೀರುತ್ತದೆ. ನ್ಯಾಪಿ ಪ್ರದೇಶದ ಮೇಲೂ ಪರಿಣಾಮ ಬೀರಬಹುದು. ವಯಸ್ಕರಿಗೆ ಇದು ಸಾಮಾನ್ಯವಾಗಿ ಮುಖ ಮತ್ತು ನೆತ್ತಿಯ ಮೇಲೆ ಪರಿಣಾಮ ಬೀರುತ್ತದೆ.
ವೆರಿಕೋಸ್ ವೈನ್ಸ್ ಎಸ್ಜಿಮಾ– ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ವೆರಿಕೋಸ್ ವೈನ್ಸ್ ಆದಾಗ ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಾಗದೆ ಇದಾಗ ವೆರಿಕೋಸ್ ವೈನ್ಸ್ ಎಸ್ಜಿಮಾ ಸಂಭವಿಸುತ್ತದೆ. ಚರ್ಮವು ಕಪ್ಪಾಗುತ್ತದೆ, ತುರಿಕೆ ಮತ್ತು ಉರಿಯುತ ಉಂಟಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಅದು ಹುಣ್ಣಿಗೆ ಕಾರಣವಾಗಬಹುದು.

ಸೋರಿಯಾಸಿಸ್: ಇದು ಚರ್ಮದ ಮೇಲೆ ಕೆಂಪು ಬಣ್ಣವನ್ನು ಉಂಟುಮಾಡುತ್ತದೆ. ಇದು ದೊಡ್ಡ ಬಹುತೇಕ ಹೆಚ್ಚಿನ ಭಾಗಗಳಲ್ಲಿ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಆನುವಂಶಿಕವಾಗಿ ಬರುತ್ತದೆ. ಇದು ಕೆಲವು ಔಷಧಿಗಳಿಂದ (ಆಂಟಿಡಿಪ್ರೆಸೆಂಟ್, ಆಂಟಿಹೈಪರ್ಟೆನ್ಸಿವ್ ಮತ್ತು ಆಂಟಿಮಲೇರಿಯಲ್ ಡ್ರಗ್ಸ್, ಮತ್ತು ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕುಗಳಿಂದ)ಪ್ರಚೋದಿಸಲ್ಪಡಬಹುದು.

ಮೊಡವೆ: ಅತಿಯಾದ ಎಣ್ಣೆ ಗ್ರಂಥಿಗಳು ಮತ್ತು ಸತ್ತ ಜೀವಕೋಶಗಳು ರಂಧ್ರಗಳನ್ನು ಮುಚ್ಚಿ ಮೊಡವೆಗಳಾಗಿ ಮಾರ್ಪಡುತ್ತವೆ. ಹೆಚ್ಚಾಗಿ ಹದಿಹರೆಯದಲ್ಲಿ ಸಂಭವಿಸುತ್ತದೆ. ಮುಖ, ಕುತ್ತಿಗೆ, ಬೆನ್ನು ಮತ್ತು ಭುಜಗಳ ಮೇಲೆ ಸಂಭವಿಸುವ ಸಾಧ್ಯತೆ ಹೆಚ್ಚು. ಚಿಕಿತ್ಸೆ ನೀಡದೆ ಬಿಟ್ಟರೆ ಕಲೆಗಳು ಅಥವಾ ಗುರುತುಗಳನ್ನು ಉಂಟುಮಾಡಬಹುದು.

ಸ್ಕೇಬೀಸ್: ಸಣ್ಣ ಹುಳಗಳು ಚರ್ಮವನ್ನು ಕೊರೆಯುವ ಕಾರಣ ತುರಿಕೆ ಉಂಟಾಗುತ್ತದೆ. ಬೆರಳುಗಳು, ಮಣಿಕಟ್ಟುಗಳು, ಮೊಣಕೈಗಳು ಮತ್ತು ಪೃಷ್ಠದ ಮೇಲೆ ತೀವ್ರವಾದ ತುರಿಕೆ, ರಾಶ್ ಅನ್ನು ಉಂಟುಮಾಡುತ್ತದೆ.

ಒಣ ಚರ್ಮ ಸಾಮಾನ್ಯ ಸಾಬೂನುಗಳ ಬಳಕೆ, ಅತಿ ಶೀತ, ಬಿಸಿ ಅಥವಾ ಶುಷ್ಕ ಹವಾಮಾನ, ಯಾವುದೇ ರಾಸಾಯನಿಕಗಳ ಬಳಕೆಯಿಂದಾಗಿ ಒಣ ಚರ್ಮ ಸಮಸ್ಯೆ ಉಂಟಾಗುತ್ತದೆ.

ಫಂಗಲ್ ಉಗುರು ಸೋಂಕು: ಶಿಲೀಂಧ್ರವು ಉಗುರುಗಳ ಬಳಿ, ಕೆಳಗೆ ಮತ್ತು ಸುತ್ತಲೂ, ಸಾಮಾನ್ಯವಾಗಿ ಪಾದಗಳಲ್ಲಿ ವಾಸಿಸುತ್ತದೆ. ಶಿಲೀಂಧ್ರಗಳು ಉಗುರಿನ ಅಂಚುಗಳಲ್ಲಿ ಸೇರಿಕೊಳ್ಳುತ್ತವೆ. ಉಗುರುಗಳ ಮೇಲ್ಪದರ ಬಿಳಿ-ಹಳದಿ ಯಾಗುತ್ತದೆ.

ವಿಟಲಿಗೋ (ಲ್ಯುಕೋಡರ್ಮಾ): ವಿಟಲಿಗೋ ಚರ್ಮದಲ್ಲಿನ ವರ್ಣದ್ರವ್ಯದ ಮೆಲನಿನ್ ನಷ್ಟವಾಗುವುದು. ಇದರಿಂದಾಗಿ ಚರ್ಮದ ಅಲ್ಲಲ್ಲಿ ಬಿಳಿ ತೇಪೆಗಳು ಗೋಚರಿಸುವುದು. ಇದು ಸಾಮಾನ್ಯವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಂಡ ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ವಿಟಲಿಗೋ ಇರುವವರು ಆಗಾಗ್ಗೆ ತಮ್ಮ ಕೂದಲಿನ ಬಣ್ಣವನ್ನೂ ಕಳೆದುಕೊಳ್ಳುತ್ತಾರೆ. ಕೆಲವರಿಗೆ ರೋಗಲಕ್ಷಣಗಳು ಹಲವು ವರ್ಷಗಳಿಂದ ನಿಧಾನವಾಗಿ ಹರಡಬಹುದು.

Also read :ಹೋಮಿಯೋಪಥಿ 

ಡಾ ಗಾಯತ್ರಿ ವಡಪಲ್ಲಿ
ಸವಿ ಬಿಂದು
ಹೋಮಿಯೋಪತಿ ಮತ್ತು ಏಸ್ಥೆಟಿಕ್ಸ್ ಕ್ಲಿನಿಕ್
Ph : +91 96119 96600 / 96119 96611
Ph: +91 80 7965 7776
www.savibindu.com

Share this: