Vydyaloka

ಬ್ರೈನ್ ಈಟಿಂಗ್ ಅಮೀಬಾ – ಇದೀಗ ಮತ್ತೊಂದು ಮಾನವ ಶತ್ರು

ಬ್ರೈನ್ ಈಟಿಂಗ್ ಅಮೀಬಾ ಇದೀಗ ಹೊಸದಾಗಿ ಭಯ ಸೃಷ್ಟಿಸುತ್ತಿರುವ  ರೋಗ, ಮತ್ತೊಂದು ಮಾನವ ಶತ್ರು. ಅಮೀಬಾ ನಮ್ಮ ಮೂಗಿನ ಮೂಲಕ ಮೆದುಳಿಗೆ ಸೇರಿಕೊಂಡು ಬಿಡುತ್ತೆ. ಅಲ್ಲಿದ್ದು ನಮ್ಮ ಮೆದುಳನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ವೆ !

ಚೀನೀ ವೈರಾಣುವಿನ ಹೊಡೆತವನ್ನೇ ತಡೆಯಲಾಗುತ್ತಿಲ್ಲ, ಅಂತಹುದರಲ್ಲಿ ಮತ್ತೊಂದು ಭಯಾನಕ ರೋಗದ ಕುರಿತು ವಿಶ್ವದ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ವಿಶ್ವಾದ್ಯಂತ ಈಗಾಗಲೇ 1 ಮಿಲಿಯನ್‍ಗೂ ಅಧಿಕ ಜನರು ಕೋವಿಡ್- 19 ಸಾಂಕ್ರಾಮಿಕಕ್ಕೆ ಬಲಿಯಾಗಿರುವುದು ನಮಗೆಲ್ಲಾ ತಿಳಿದೇ ಇದೆ. ಈ ರೋಗ ಅಮರಿಕೊಂಡವರಲ್ಲಿ ಸಾಯುವವರ ಸಂಖ್ಯೆ ಶೇಕಡಾ 4ರಷ್ಟಿದೆ. ಇಂಥಾ ಹೊತ್ತಲ್ಲೇ ಮತ್ತೊಂದು ಮಹಾ ರೋಗ ವಿಶ್ವದಲ್ಲಿ ಭಾರೀ ಹವಾ ಸೃಷ್ಟಿಸಲು ರೆಡಿಯಾದಂತಿದೆ.

ಈ ವರೆಗಿನ ದಾಖಲೆಗಳ ಪ್ರಕಾರ ಹೊಸದಾಗಿ ಭಯ ಸೃಷ್ಟಿಸುತ್ತಿರುವ ಆ ರೋಗ ಬಂದವರಲ್ಲಿ ಮರಣ ಪ್ರಮಾಣ ಶೇಕಡಾ 97..! ಅದ್ಯಾವ್ದಪ್ಪಾ ಆ ಭಯಾನಕ ರೋಗ ಅಂತೀರಾ? ಇವತ್ತಿನ ಆ ರೋಗಕ್ಕೆ ಕಾರಣವಾಗ್ತಿರೋದು ನಾಗ್ಲೇರಿಯಾ ಫ್ಲವೇರಿ ಅಥವಾ ಮೆದುಳು ತಿನ್ನುವ ಅಮೀಬಾ. ಅಮೇರಿಕಾದ ಟೆಕ್ಸಾಸ್‍ನಲ್ಲಿ ಅಮಿಬಾವೊಂದು ಈಜಲು ಹೋಗಿದ್ದ ಬಾಲಕಿಯ ಮೆದುಳನ್ನೇ ತಿಂದಿರುವ ಘಟನೆಯುವರದಿಯಾಗಿದೆ.

ಇದರಿಂದ ಅಮೇರಿಕಾ ಮಾತ್ರವಲ್ಲ, ಆಸ್ಟ್ರೇಲಿಯಾ ಹಾಗೂ ಯೂರೋಪಿನ ಜನರನ್ನೂ ಬೆಚ್ಚಿಸಬೀಳಿಸಿದೆ.ಬಹುತೇಕ ನೀರಿನಲ್ಲಿ ಇರುವ ಕಣ್ಣಿಗೆ ಕಾಣದ ಏಕಕೋಶೀಯ ಜೀವಿ ಈ ಅಮೀಬಾ ನಮಗೇನೂ ಹೊಸತಲ್ಲ, ಕುಡಿಯುವ ನೀರಿನಿಂದ ಹರಡುವ ಕೆಲವು ಸಣ್ಣಪುಟ್ಟ ಹೊಟ್ಟೆ ಕೆಡುವಂತಹ ಸಮಸ್ಯೆಗಳಿಗೆ ಅಮೀಬಿಯಾಸಿಸ್ ಎಂದು ಹೇಳಿರುವುದನ್ನು ನಾವು ಕೇಳಿದ್ದೇವೆ. ಬಹುತೇಕ ಎಲ್ಲರೂ ಆ ಸಮಸ್ಯೆಯನ್ನು ಅನುಭವಿಸಿರುತ್ತೀವಿ ಕೂಡಾ.

ಆದರೆ ಅಮೇರಿಕಾದಲ್ಲಿ ನಡೆದ ಘಟನೆ ನಾವಂದುಕೊಂಡಷ್ಟು ಸರಳವಾಗಿಲ್ಲ. ಏಕೆಂದರೆ ನೀರಿನಲ್ಲಿದ್ದ ಈ ಅಮೀಬಾ ನಮ್ಮ ಮೂಗಿನ ಮೂಲಕ ಮೆದುಳಿಗೆ ಸೇರಿಕೊಂಡು ಬಿಡುತ್ತೆ. ಅಲ್ಲಿದ್ದು ನಮ್ಮ ಮೆದುಳನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ವೆ ! ಹಾಗಾಗಿ ಈ ಜಾತಿಯ ಅಮೀಬಾವನ್ನು ಬ್ರೈನ್ ಈಟಿಂಗ್ ಅಮೀಬಾ ಅಂತಲೇ ಕರೆಯುತ್ತಾರೆ.

ಬ್ರೈನ್ ಈಟಿಂಗ್ ಅಮೀಬಾ ರೋಗ ಲಕ್ಷಣಗಳೇನು?

ಅಮೀಬಾವು ಮಾನವನ ಮೆದುಳಿಗೆ ಸೇರಿಕೊಂಡು ತನ್ನ ಕಾರ್ಯ ಆರಂಭಿಸಿದರೆ ಮೊದಲಿಗೆ ಮೆದುಳಿನಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಆನಂತರ ವಾಂತಿ ಶುರುವಾಗುತ್ತೆ. ತಲೆನೋವು, ಶೀತ, ಮೂಗು ಕಟ್ಟಿಕೊಳ್ಳುವುದು ಹೀಗೆ ಒಂದರ ಹಿಂದೊಂದರಂತೆ ಸಮಸ್ಯೆಗಳು ಶುರುವಾಗುತ್ತವೆ. ಕೊನೆಕೊನೆಗೆ ನಮ್ಮ ಕತ್ತು ಅಲ್ಲಾಡಿಸದ ಹಾಗೆ ಕೂಡಾ ಮಾಡಿ ಬಿಡುತ್ತೆ ಈ ಅಮೀಬಾ. ನಂತರ ರೋಗಿಯ ಬ್ರೇನ್ ಟಿಶ್ಯೂವನ್ನೇ ನಿಷ್ಕ್ರಿಯಗೊಳಿಸಿಬಿಡುತ್ತದೆ.

ಆನಂತರ ಈ ಸಮಸ್ಯೆಯಿಂದ ಉಳಿಸುವುದು ಅಸಾಧ್ಯ ಎನ್ನಿಸಿಬಿಡುತ್ತದೆ. ಹಾಗೇನಾದರೂ ಆ ಮನುಷ್ಯ ಈ ರೋಗದಿಂದ ಬದುಕುಳಿಯಬೇಕು ಅಂತಂದ್ರೆ ಆತನಲ್ಲಿ ಅಪರಿಮಿತ ಮನೋಸ್ಥೈರ್ಯ ಹಾಗೂ ದೇಹದಲ್ಲಿ ಬಹಳಷ್ಟು ರೋಗ ನಿರೋಧಕ ಶಕ್ತಿ ಹೊಂದಿದ್ದರೆ ಮಾತ್ರ ಸಾಧ್ಯ. ಏಕೆಂದರೆ ಈವರೆಗೂ ಈ ಕಾಯಿಲೆಗೆ ಯಾವುದೇ ಲಸಿಕೆ ಕಂಡುಹಿಡಿಯಲಾಗಿಲ್ಲ ಹಾಗೂ ಇದಕ್ಕೆ ನಿಖರವಾದ ಔಷಧಗಳೂ ಕೂಡಾ ಇಲ್ಲ.

ಮೊದಲು ಈ ರೋಗ ಕಾಣಿಸಿಕೊಂಡಿದ್ದು ಎಲ್ಲಿ?

ಈ ರೊಗ ಇಂದಿಗೇ ಹೊಸತಲ್ಲ. ಈ ರೋಗ ತನ್ನ ಇರುವನ್ನು 55 ವರ್ಷಗಳ ಹಿಂದೆಯೇ ತೋರ್ಪಡಿಸಿತ್ತು. ಈ ಮೊದಲು 1965ರಲ್ಲಿ ಇದು ಕಾಣಿಸಿಕೊಂಡಿದ್ದು ಆಸ್ಟ್ರೇಲಿಯಾದಲ್ಲಿ. ಆನಂತರ ಅಮೇರಿಕಾ ಸೇರಿದಂತೆ ವಿಶ್ವದ ನಾನಾಕಡೆ ಈ ರೋಗ ಕಾಣಿಸಿಕೊಂಡಿದೆ. ಕಳೆದ 50 ವರ್ಷಗಳಲ್ಲಿ ಅಮೇರಿಕಾದ 127 ಜನರಿಗೆ ಈ ರೋಗ ಕಾಣಿಸಿಕೊಂಡಿದ್ದು, ಅದರಲ್ಲಿ ಬದುಕುಳಿದವರು ಕೇವಲ ನಾಲ್ಕು ಜನರು ಮಾತ್ರ. ಅಲ್ಲಿಂದ ಇಲ್ಲಿಯವರೆಗೂ ಇದು ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಹೀಗಾಗಿಯೇ ಈ ಸಮಸ್ಯೆ ಅಂದರೆ ಅಲ್ಲಿಯ ಜನ ಬೆಚ್ಚಿಬೀಳೋದಕ್ಕೆ ಶುರು ಮಾಡ್ತಾರೆ. ಇನ್ನೊಂದು ಅಚ್ಚರಿಯ ಮಾಹಿತಿ ಏನಂದ್ರೆ 2008ರಲ್ಲಿ ಪಾಕಿಸ್ತಾನದಲ್ಲಿಯೂ ಈ ರೀತಿಯ ಕೇಸೊಂದು ವರದಿಯಾಗಿತ್ತು.

ಎಲ್ಲಿ ಇರುತ್ತವೆ ಈ ಮೆದುಳು ತಿನ್ನುವ ಅಮೀಬಾ?

ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರದ ಮಾಹಿತಿಯ ಪ್ರಕಾರ ಸಾಮಾನ್ಯವಾಗಿ ಈ ಅಮಿಬಾಗಳು ಬೆಚ್ಚನೆಯ ತಿಳಿ ನೀರಿರುವ ಕೆರೆ, ನದಿಯಲ್ಲಿ ಜೀವಿಸುತ್ತದೆ. ಬೆಚ್ಚಗಿನ ಸಿಹಿನೀರಿನಲ್ಲಿ ಅಂದರೆ ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳಲ್ಲಿ ಸಹಾ ಇರಬಲ್ಲುದು ಈ ಅಮೀಬಾಗಳು. ಅಷ್ಟಲ್ಲದೆ ಮಣ್ಣಿನಲ್ಲಿಯೂ ಸಹಾ ಕಂಡುಬರುವ ಅಮಿಬಾ ಸೋಂಕುಂಟು ಮಾಡುವ ಥರ್ಮೋಫಿಲಿಕ್ ಜೀವಿ.

ಇಷ್ಟೇ ಅಲ್ಲದೆ ಸ್ವಿಮ್ಮಿಂಗ್ ಫೂಲ್‍ಗಳು ಹಾಗೂ ಫ್ಯಾಂಟಸಿ ಪಾರ್ಕ್ ನೀರಿನಲ್ಲಿಯೂ ಇರಬಲ್ಲುದು. ಅದೂ ಅಲ್ಲದೆ ಮನೆಯಲ್ಲಿ ಬರುವ ನೀರಿನಲ್ಲಿಯೂ ಕೂಡಾ ಈ ಅಮೀಬಾ ಇರುವ ಸಾಧ್ಯತೆ ಇರುತ್ತದೆ ಎನ್ನುತ್ತಿದೆ ತಜ್ಞರ ವರದಿಗಳು. ಈ ಅಮೀಬಾ ಸುಮಾರು 25 ಡಿಗ್ರಿಯಿಂದ 40ಡಿಗ್ರಿ ಸೆಲ್ಸಿಯಸ್ ನೀರಿನ ತಾಪಮಾನದಲ್ಲಿಯೂಬದುಕಬಲ್ಲದ್ದಾಗಿದೆ. ಹೆಚ್ಚಿನ ತಾಪಮಾನದಲ್ಲಿ ಅಲ್ಪಾವಧಿಗೆ ಬದುಕಬಲ್ಲದು.

ಈ ಅಮೀಬಾಗಳು ಮುಖ್ಯವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‍ನ ಬೇಸಿಗೆಯ ತಿಂಗಳುಗಳಲ್ಲಿ ಕಂಡುಬರುತ್ತವೆ. ದೀರ್ಘಕಾಲದವರೆಗೆ ಬಿಸಿಯಾಗಿರುವ ಪ್ರದೇಶದಲ್ಲಿ ಈ ಸೋಂಕುಗಳು ಸಾಮಾನ್ಯವಾಗಿ ಸಂಭವಿಸುತ್ತವೆ, ಕುಡಿಯುವ ಶುದ್ಧ ನೀರಿನಲ್ಲಿಯೇ ಈ ಅಮೀಬಾ ಇರುವುದು ಹೆಚ್ಚು.

ಸಮಾಧಾನಕರ ಅಂಶಗಳು

ಈ ಸಮಸ್ಯೆ ಇಲ್ಲಿಯವರೆಗೆ ಭಾರತದಲ್ಲಿ ಒಂದೂ ಇಲ್ಲ ಎನ್ನುವುದು ತುಸು ಸಮಾಧಾನ ತರುವ ವಿಷಯ. ಅದಲ್ಲದೆ ಈ ಅಮೀಬಾ ಕೋವಿಡ್ ವೈರಾಣುವಿನ ರೀತಿ ವ್ಯಾಪಕವಾಗಿ ಹರಡುವುದಿಲ್ಲ ಎನ್ನುವುದು ಮತ್ತೊಂದು ಸಮಾಧಾನಕರ ಅಂಶ. ಅಂದರೆ ಮನುಷ್ಯರಿಂದ ಮನುಷ್ಯರಿಗೆ ಈ ರೋಗ ಹರಡಲಾರದು. ಅಲ್ಲದೇ ಈ ಅಮೀಬಾಗಳು ಸಮುದ್ರದಲ್ಲಿ ಬದುಕುವುದಿಲ್ಲ.

 

Share this: