Vydyaloka

ಆಯುಷ್‌ ಟಿ.ವಿ  ಯಿಂದ ಫಿಟ್‌ ಬಾಸ್‌

ಆಯುಷ್‌ ಟಿ.ವಿ  ಯಿಂದ ಫಿಟ್‌ ಬಾಸ್‌ – ಮೊಟ್ಟ ಮೊದಲ ಆರೋಗ್ಯದ ಕುರಿತಾದ ರಿಯಾಲಿಟ್‌ ಷೋ.  ಇಡೀ ಜಗತ್ತಿನ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಚುರೋಪತಿ, ಆರ್ಯುವೇದ ಮತ್ತು ಯೋಗದ ಮೂಲಕ ಫಿಟ್‌ ಆಗೋ, ಮೆಗಾ ರಿಯಲ್‌ ರಿಯಾಲಿಟಿ ಷೋ…. ಕ್ಷೇಮವನ ಅರ್ಪಿಸುವ “ಫಿಟ್‌ ಬಾಸ್”……‌

ಆಯುಷ್‌ ಟಿ.ವಿ ಕಳೆದ 6 ವರ್ಷಗಳಿಂದ ಆರೋಗ್ಯಕರ ಜೀವನ ಶೈಲಿಗಾಗಿ ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದ್ದು. ಪ್ರಸ್ತುತ ಕರ್ನಾಟಕದ ಜನಪ್ರಿಯ ಖಾಸಗಿ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮೊಟ್ಟಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಷೋ “ಫಿಟ್‌ ಬಾಸ್‌”.

ಇಪ್ಪತ್ತೊಂದು ಜನ, ಇಪ್ಪತ್ತೊಂದು ದಿನ, ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಭಾಗವಹಿಸುತ್ತಾರೆ, ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್‌ ಮಾಡಿಕೊಳ್ಳುತ್ತಾ, ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯವನ್ನು ತಿಳಿಯೋ ಜರ್ನಿಗೆ ಬರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನೋಡುಗರಿಗೂ ಸಹ ವೈಜ್ಞಾನಿಕವಾಗಿ ತಮ್ಮ ಸ್ಥೂಲಕಾಯದ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಿಕೊಳ್ಳುತ್ತಾರೆ ಎಂಬುದನ್ನು ಸಹ ತಿಳಿದುಕೊಳುವುದು ಅತ್ಯಂತ ಆಸಕ್ತಿದಾಯಕ ವಿಚಾರ. ದೇಹದ ತೂಕ ಹೆಚ್ಚಲು ಕಾರಣವಾದಂತಹ ನಲವತ್ತಕ್ಕೂ ಹೆಚ್ಚು ಪ್ರಮುಖ ಕಾರಣಗಳ ಬಗ್ಗೆ ಸಹ ಸ್ಪರ್ಧಿಗಳು ತಿಳಿಯುತ್ತಾರೆ.

 ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಜಗತ್ತಿನ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಚುರೋಪತಿ, ಆರ್ಯುವೇದ ಮತ್ತು ಯೋಗದ ಮೂಲಕ ಫಿಟ್‌ ಆಗೋ, ಮೆಗಾ ರಿಯಲ್‌ ರಿಯಾಲಿಟಿ ಷೋ…. ಕ್ಷೇಮವನ ಅರ್ಪಿಸುವ “ಫಿಟ್‌ ಬಾಸ್”……‌

ಪ್ರಮುಖವಾಗಿ ಕಾರ್ಯಕ್ರಮದ ಮುಖ್ಯ ಉದ್ದೇಶ ಯಾರೋ ಒಬ್ಬರನ್ನು ಗೆಲ್ಲಿಸೋದು ಮಾತ್ರವಲ್ಲದೇ ಭಾಗವಹಿಸಿದ ಪ್ರತಿಯೊಬ್ಬರನ್ನು ವಿಜೇತರನ್ನಾಗಿ ಮಾಡುವುದಾಗಿದೆ. ಗೆಲುವಿನ ಪಟ್ಟ ಒಬ್ಬನಿಗೆ ಮಾತ್ರ ಸಿಕ್ಕರೂ ಭಾಗವಹಿಸಿದ ಪ್ರತಿಯೊಬ್ಬರೂ ಇದರಲ್ಲಿ ವಿಜೇತರೆ… ಸಕಾರಾತ್ಮಕವಾಗಿ ನಾಡಿನ ಜನತೆಗೆ ವೈಜ್ಞಾನಿಕ ಮಾಹಿತಿಯೊಂದಿಗೆ  ಅವರ ದೇಹ ಮನಸ್ಸನ್ನು ಸಬಲ ಮಾಡುವ ಕಾರ್ಯಕ್ರಮವು ಇದಾಗಿದೆ.

ನಮ್ಮ ಪಾರಂಪರಿಕ ಔಷದ ಪದ್ದತಿಗಳಲ್ಲಿ ಒಂದಾದ ನ್ಯಾಚುರೋಪತಿ ಚಿಕಿತ್ಸೆ ಯನ್ನು ಒಳಗೊಂಡ  ವಿಶೇಷ ರಿಯಾಲಿಟಿ ಷೋ ಇದಾಗಿದ್ದು,  ಈ ಕಾರ್ಯಕ್ರಮದ ಮೂಲಕ ಸ್ಥೂಲಕಾಯ ಕಡಿಮೆಮಾಡುವ ನಿಟ್ಟಿನಲ್ಲಿ ಹಾಗೂ ಆರೋಗ್ಯದಾಯಕ ಜೀವನ ಶೈಲಿ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ವಿಶೇಷ ಕಾರ್ಯಕ್ರಮಕ್ಕೆ  ದೇಶದ ವಿವಿಧ ರಾಜ್ಯಗಳ ಸ್ಫರ್ಧಿಗಳು ಭಾಗವಹಿಸಲಿದ್ದು. 21 ದಿನಗಳ ಕಾಲ ನಡೆಯುವ ಈ ಸ್ಫರ್ಧೆಯಲ್ಲಿ ವೈದ್ಯರುಗಳು ನ್ಯಾಚುರೋಪತಿ ಚಿಕಿತ್ಸ ಪದ್ದತಿ ಮೂಲಕ ತೂಕ ಕಡಿಮೆ ಮಾಡಲು ಅನುಸರಿಸಬೇಕಾದ ಆಹಾರ ಪದ್ದತಿ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ತಿಳಿಸಲಿದ್ದಾರೆ.

 ಇದರಿಂದ ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಸರಳ ರೂಪದಲ್ಲಿ ಆರೋಗ್ಯಯುತವಾದ ಚಿಕಿತ್ಸಾ ಪದ್ದತಿಯನ್ನು ಹಾಗೂ ಸರಳವಾದಂತಹ ಆರೋಗ್ಯ ಜೀವನ ಶೈಲಿ ಹೊಂದಲು ಈ ಕಾರ್ಯಕ್ರಮವು ಪ್ರೇರಣದಾಯಕವಾಗಲಿದೆ.

21 ದಿನಗಳ ವಿಶೇಷ ಜರ್ನಿಯಲ್ಲಿ ನ್ಯಾಚೂರೋಪತಿ ಪದ್ದತಿ ಅನ್ವಯ ವಿವಿಧ ಚಿಕಿತ್ಸಾ ಶೈಲಿ ಹಾಗೂ ವೈವಿಧ್ಯಮಯ ಆಹಾರ ಪದ್ದತಿಯನ್ನು ಸ್ಪರ್ಧಿಗಳಿಗೆ ನೀಡುವ ಮೂಲಕ ಅವರ ಸದೃಡ ಆರೋಗ್ಯವನ್ನು ಹೊಂದುವಂತೆ ಮಾಡುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.

ಆಯುಷ್‌ ಟಿ.ವಿ  ಯಿಂದ ಫಿಟ್‌ ಬಾಸ್‌

 

Share this: