Vydyaloka

ಅಶ್ವಗಂಧಾ : ಭಾರತದ ಜಿನ್‍ಸೆಂಗ್

ಅಶ್ವಗಂಧಾ ಅಂದರೆ  ಭಾರತದ ಜಿನ್‍ಸೆಂಗ್.  ಇದನ್ನು ಹಲವಾರು ರೋಗಗಳಲ್ಲಿ  ಬಳಸಬಹುದು.ಇದರ ಬೇರಿನಲ್ಲಿ ನಿಃಶಕ್ತಿ, ಕೀಲು ನೋವು, ವೀರ್ಯಾಣುಗಳ ಕೊರತೆಗಳನ್ನು ನಿವಾರಿಸುವ ಗುಣವಿದೆ.

ಅಶ್ವಗಂಧಾ ಇದನ್ನು ಕನ್ನಡದಲ್ಲಿ ‘ಹಿರೇಮದ್ದಿನ ಗಿಡ’, ‘ಅಶ್ವಗಂಧಿ’ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಅಶ್ವಗಂಧ ಎಂದರೆ ಕುದುರೆಯ (ಮೂತ್ರದ) ವಾಸನೆಯುಳ್ಳದ್ದು. ಎಂದರೆ ಈ ವಾಸನೆ ಹಸಿಯಾದ ಈ ಗಿಡದ ಬೇರಿನಿಂದ ಹೊರ ಸೂಸುತ್ತದೆ. ಈ ಗಿಡದ ಬೇರು ಉಪಯೋಗಿಸಲ್ಪಡುವ ಬಹು ಮುಖ್ಯ ಅಂಶ. ಈ ಬೇರನ್ನು ಔಷಧ ಹಾಗೂ ಪೌಷ್ಠಿಕ ವಸ್ತುವಾಗಿ ಎಲ್ಲಾ ಸಂದರ್ಭದಲ್ಲಿ ಉಪಯೋಗಿಸಬಹುದು.

ಆದ್ದರಿಂದಲೇ ಕನ್ನಡದಲ್ಲಿ ಒಂದು ಗಾದೆ ಇದೆ. ‘ಹೆಸರಿಲ್ಲದ ರೋಗಕ್ಕೆ ಹಿರೇಮದ್ದಿನ ಬೇರು’. ಅಂದರೆ ಹಲವಾರು ರೋಗಗಳಲ್ಲಿ ಇದನ್ನು ಬಳಸಬಹುದು. ಹಲವಾರು ರೋಗಗಳಲ್ಲಿ ಉಪಯೋಗಿಸಿ, ಶಕ್ತಿವರ್ಧಕ ಮುಂತಾದ ಗುಣಗಳಿರುವ ಕಾರಣದಿಂದ ಇದನ್ನು ಇತ್ತೀಚಿನ ದಿನಗಳಲ್ಲಿ “ಭಾರತದ ಜಿನ್‍ಸೆಂಗ್” ಎಂದು ಕರೆಯುವ ವಾಡಿಕೆ. ಇದರ ಬೇರಿನಲ್ಲಿ ನಿಃಶಕ್ತಿ, ಕೀಲು ನೋವು, ವೀರ್ಯಾಣುಗಳ ಕೊರತೆಗಳನ್ನು ನಿವಾರಿಸುವ ಗುಣವಿದೆ. ಇದನ್ನು ಉಪಯೋಗಿಸುವ ಕ್ರಮ ಹೀಗಿದೆ.

1. ಬೇರನ್ನು ಕಿತ್ತು ತಂದು ನೀರಿನಲ್ಲಿ ಚೆನ್ನಾಗಿ ತೊಳೆದು ನೆರಳಿನಲ್ಲಿ ಸಂಪೂರ್ಣ ಒಣಗಿಸಿ ಕುಟ್ಟಿ ಪುಡಿ ಮಾಡಿ, ಶುಭ್ರವಾದ ಬಟ್ಟೆಯಲ್ಲಿ ಜರಡಿ ಹಿಡಿದು ಬಂದ ನುಣ್ಣಗಿನ ಪುಡಿಯನ್ನು ತುಪ್ಪ ಮತ್ತು ಜೇನಿನೊಂದಿಗೆ ಸೇವಿಸಿ ಹಸುವಿನ ಹಾಲು ಕುಡಿಯುವುದರಿಂದ ನಪುಂಸಕತೆ, ಬಲಹೀನತೆ ಮುಂತಾದ ತೊಂದರೆಗಳಿಗೆ ಉತ್ತಮ ಔಷಧವಾಗಿದೆ.

2. ಅಶ್ವಗಂಧಿಯ ಪುಡಿಯೊಂದಿಗೆ 4 ಪಟ್ಟು ಹಾಲನ್ನು ಮತ್ತು 32 ಪಟ್ಟು ನೀರನ್ನು ಸೇರಿಸಿ, ಮಂದ ಉರಿಯಲ್ಲಿ ನೀರಿನ ಭಾಗ ಆರುವವರೆಗೆ ಕುದಿಸಿ.ಹಾಲನ್ನು, ಸಕ್ಕರೆ ಮತ್ತು ತುಪ್ಪದೊಂದಿಗೆ ಸೇವಿಸಲು ಉತ್ತಮ ಪೌಷ್ಠಿಕ ಆಹಾರ ಪೇಯವೆನಿಸುತ್ತದೆ.

3. ಬೇರನ್ನು ಪುಡಿ ಮಾಡಿ ಅದಕ್ಕೆ 4 ಪಟ್ಟು ನೀರು ಬೆರೆಸಿ, ಕಾಲು ಭಾಗದವರೆಗೆ ಕುದಿಸಿ ಬರುವಂತಹ ಕಷಾಯವನ್ನು ಗಾಯಗಳನ್ನು ತೊಳೆಯಲು, ಕಲೆ ಇಲ್ಲದಂತೆ ವಾಸಿಯಾಗುತ್ತದೆ.

4. ಹೆಣ್ಣು ಮಕ್ಕಳ ತೊಂದರೆಗಳಾದ ಬಿಳಿ ಸೆರಗು, ಕೆಂಪು ಸೆರಗುಗಳಲ್ಲಿ ಕಲ್ಲು ಸಕ್ಕರೆ ಮತ್ತು ಹಾಲಿನೊಂದಿಗೆ ಅಶ್ವಗಂಧಿಯ ಪುಡಿಯನ್ನು ಸೇವಿಸುವುದು ಉತ್ತಮ.

5. ಇದನ್ನು ಉಪಯೋಗಿಸಿ ಹಲವಾರು ಔಷಧಗಳನ್ನು ತಯಾರಿಸಲಾಗುತ್ತದೆ. ಅವುಗಳೆಂದರೆ ಅಶ್ವಗಂಧಾವಲೇಹ, ಅಶ್ವಗಂಧಾರಿಷ್ಟ, ಬಲಾಶ್ವಗಂಧಾದಿ ತೈಲ ಇತ್ಯಾದಿ.

Also Read: ಡಾ. ಶಾಂತಗಿರಿ ಮಲ್ಲಪ್ಪ – ವೈದ್ಯಕೀಯ ಕ್ಷೇತ್ರದ ಧ್ರುವತಾರೆ 

ಡಾ. ಶಾಂತಗಿರಿ ಮಲ್ಲಪ್ಪ
ಶಾಂತಗಿರಿ ಹೆಲ್ತ್  ಸೆಂಟರ್,
ಬಾಣಸವಾಡಿ, ಬೆಂಗಳೂರು.
ಮೊ: 94496 62344

 

Share this: