ಏರಿತ್ಮಿಯಾ ವಿಧಗಳು:
- ಏರಿಯಲ್ ಫ್ಯಾಬ್ರಿಲೇಷನ್ – ಹೃದಯ ಮೇಲಿನ ಭಾಗವು ಅಸಮರ್ಪಕವಾಗಿ ಸಂಕುಚಿತಗೊಳ್ಳುವಿಕೆ(ಇದು ಪಾಶ್ರ್ವವಾಯು ಸಾಧ್ಯತೆಯನ್ನು ಹೆಚ್ಚಿಸಬಹುದು).
- ಬ್ರಾಡ್ಯಿಯರ್ಡಿಯಾ-ಹೃದಯ ಬಡಿತವು ತುಂಬಾ ನಿಧಾನವಾಗಿರುತ್ತದೆ (ಪ್ರತಿ ನಿಮಿಷಕ್ಕೆ 60 ಬಡಿತಗಳಿಗಿಂತಲೂ ಕಡಿಮೆ)
- ವಹನ ದೋಷಗಳು-ಹೃದಯವು ಸಾಮಾನ್ಯವಾಗಿ ಬಡಿತವಾಗದಿರುವಿಕೆ.
- ಅವಧಿಗೆ ಮುನ್ನವೇ ಸಂಕೋಚನ – ಮುನ್ನವೇ ಹೃದಯ ಬಡಿತ.
- ಟ್ಯಾಚಿಕಾರ್ಡಿಯಾ – ಹೃದಯ ಬಡಿತವು ಸಾಮಾನ್ಯಕ್ಕಿಂತ ವೇಗವಾಗಿ ಬಡಿತವಾಗುತ್ತದೆ. (ಪ್ರತಿ ನಿಮಿಷಕ್ಕೆ 100ಕ್ಕೂ ಬಡಿತಗಳಿಗಿಂತಲೂ ಕಡಿಮೆ)
- ವೆಂಟ್ರಿಕಲ್ ಫ್ಯಾಬ್ರಿಲೇಷನ್ – ಹೃದಯ ಕೆಳಭಾಗದ ಅಸಮರ್ಪಕ ಸಂಕೋಚನ
ಎರಿತ್ಮಿಯಾ ಲಕ್ಷಣಗಳು ಮತ್ತು ಚಿಹ್ನೆಗಳು:
- ವೇಗದ ಅಥವಾ ನಿಧಾನದ ಹೃದಯ ಬಡಿತ
- ಹೃದಯಬಡಿತದಲ್ಲಿ ವ್ಯತ್ಯಾಸ
- ಹೃದಯ ಬಡಿತದ ಜಿಗಿತ
- ಹಗುರ ಶಿರೋಭ್ರಮಣೆ ಅಥವಾ ತಲೆತಿರುಗುವಿಕೆ
- ಎದೆ ನೋವು
- ಉಸಿರಾಟದಲ್ಲಿ ತೊಂದರೆ
- ಬೆವರುವಿಕೆ
ಕಾರಣಗಳು:
- ಕೆರಳಿಸುವ ಹೃದಯ ಕೋಶಗಳು : ಕೆಲವೊಮ್ಮೆ ಹೃದಯ ಕೋಶಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಸಮರ್ಪಕವಾಗಿ ಸಂದೇಶ ರವಾನಿಸುವ ವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಸಂದೇಶಗಳನ್ನು ರವಾನಿಸಲು ಆರಂಭಿಸುತ್ತವೆ. ಇದು ಹೃದಯಕ್ಕೆ ಗೊಂದಲ ಉಂಟು ಮಾಡಿ ಅಸಮರ್ಪಕ ಹೃದಯ ಬಡಿತಕ್ಕೆ ಕಾರಣವಾಗುತ್ತದೆ.
- ಬಂದ್ ಆಗುವ ಸಿಗ್ನಲ್ಗಳು : ಹೃದಯ ಬಡಿತವನ್ನು ನಿಯಂತ್ರಿಸುವ ವಿದ್ಯುತ್ ಸಂದೇಶಗಳು ಬಂದ್ ಆಗುತ್ತವೆ. ಇದು ನಿಧಾನಗತಿಯ ಹೃದಯ ಬಡಿತಕ್ಕೆ ಕಾರಣವಾಗುತ್ತದೆ.
- ಅಸಾಧಾರಣ ಮಾರ್ಗ : ಕೆಲವೊಮ್ಮೆ ವಿದ್ಯುತ್ ಸಂದೇಶಗಳು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಆರಂಭವಾಗುತ್ತದೆ, ಆದರೆ ಅದಕ್ಕೆ ಅಡ್ಡಿಯಾಗಿ ಹಾದಿ ತಪ್ಪುತ್ತದೆ. ಹೀಗಾಗಿ ಅವು ಸರಿಯಾದ ಮಾರ್ಗವನ್ನು ಅನುಸರಿಸುವುದಿಲ್ಲ ಮತ್ತು ಎರಿತ್ಮಿಯಾ ಅಂದರೆ ಹೃದಯ ಬಡಿತವು ತುಂಬಾ ನಿಧಾನ ಅಥವಾ ತುಂಬಾ ವೇಗ ಅಥವಾ ದೋಷಪೂರಿತವಾಗಲು ಎಡೆ ಮಾಡಿಕೊಡುತ್ತದೆ.
- ಇತರ ಉದ್ದೀಪನ ಕಾರಣಗಳು : ಹೃದ್ರೋಗಗಳು, ಧೂಮಪಾನ, ಮಾದಕ ವಸ್ತು, ವಿಪರೀತ ಆಲ್ಕೋಹಾಲ್ ಅಥವಾ ಕೆಪೇನ್ ಸೇವನೆ, ವಂಶವಾಹಿ ದೋಷಗಳು, ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಥೈರಾಯ್ಡ್ ದೋಷಗಳು, ಒತ್ತಡ, ಕೆಲವು ಔಷಧಿಗಳು ಮತ್ತು ಪೋಷಕಾಂಶ ವಸ್ತುಗಳು.
ರೋಗ ನಿರ್ಧಾರ
ಎರಿತ್ಮಿಯಾಗಾಗಿ ಕೆಲವು ಸಾಮಾನ್ಯ ಪರೀಕ್ಷೆಗಳು ಇವುಗಳನ್ನು ಒಳಗೊಂಡಿರುತ್ತದೆ :
- ಹೋಲ್ಟರ್ ಮಾನಿಟರ್ಗಳು ಎಲೆಕ್ಟ್ರೋಕಾರ್ಡಿಯೋಗ್ರಾಫಿಕ್ ಸಿಗ್ನಲ್ಗಳನ್ನು 24 ಗಂಟೆಗಳು ಅಥವಾ ಅದಕ್ಕೂ ಹೆಚ್ಚು ಕಾಲ ನಿರಂತರವಾಗಿ ದಾಖಲಿಸುತ್ತದೆ.
- ಟ್ರಾನ್ಸ್ಟೆಲಿಫೋನಿಕ್ ಮಾನಿಟರ್ – ಇವೆಂಟ್ ಮಾನಿಟರ್ಗಳನ್ನು ಕೈಪಟ್ಟಿ, ಬೆರಳು ಕ್ಲಿಪ್ ಅಥವಾ ಫ್ಯಾಚ್ಗಳಿಗೆ ಜೋಡಿಸಲಾಗುತ್ತದೆ. ಒಂದು ಅಥವಾ ಎರಡು ತಿಂಗಳ ಕಾಲ ಇದನ್ನು ತೋಳುಗಳ ಕೆಳಗೆ ಧರಿಸಬೇಕು.
- ಟ್ರೇಡ್ಮಿಲ್ ಪರೀಕ್ಷೆ – ಟ್ರೇಡ್ಮಿಲ್ ಮೇಲೆ ನಡೆಯುವ ಅಥವಾ ಓಡುವ ಮೂಲಕ ಅಥವಾ ನಿಲುಗಡೆಯಾದ ಬೈಸಿಕಲ್ ಸವಾರಿ ಮೂಲಕ ವ್ಯಕ್ತಿಯ ಹೃದಯ ಪ್ರಮಾಣ ಮತ್ತು ಬಡಿತದ ಮೇಲೆ ನಿಗಾವಹಿಸಲಾಗುತ್ತದೆ.
- ಟಿಲ್ಟ್-ಟೇಬಲ್ ಟೆಸ್ಟ್ – ರಕ್ತನಾಳದ ಒಳಗೆ ಬಿಪಿ ನಿಗಾವಹಿಸಲು ಅಪಧಮನಿಗೆ ಟ್ಯೂಬ್ ಇರಿಸಲಾಗುತ್ತದೆ.
- ಎಲೆಕ್ಟ್ರೋಫಿಸಿಯೋಲಾಜಿಕ್ ಟೆಸ್ಟಿಂಗ್(ಇಪಿ ಅಧ್ಯಯನ) – ಇದನ್ನು ಸ್ಥಳೀಯ ಅನಸ್ತೇಶಿಯಾ ಅಡಿ ನಡೆಸಲಾಗುತ್ತದೆ. ಫ್ಲೂರೋಸ್ಕೋಪ್ ಬಳಸಿ ಹೃದಯಕ್ಕೆ ಸಮನಾಂತರ ನಾಳಗಳ(ಅಥವಾ ರಕ್ತ ನಾಳಗಳ) ಮೂಲಕ ತಾತ್ಕಾಲಿಕ ಎಲೆಕ್ಟ್ರೋಡ್ ಟ್ಯೂಬ್ಗಳನ್ನು ಸುತ್ತಲಾಗುತ್ತದೆ.
- ಎಸೊಫಾಗೀಲ್ಎಲೆಕ್ಟ್ರೋಫಿಸಿಯೋಲಾಜಿಕ್ ವಿಧಾನ – ಇದೊಂದು ತೆಳು, ಸ್ಥಿತಿಸ್ಥಾಪಕ ಗುಣದ ನಾಳವಾಗಿದ್ದು, ಇದನ್ನು ಮೂಗಿನ ಹೊಳ್ಳೆಗೆ ತೂರಿಸಲಾಗುತ್ತದೆ ಹಾಗೂ ಆಯಿಸೋಫಾಗಸ್ನಲ್ಲಿ (ಬಾಯಿ ಮತ್ತು ಉದರವನ್ನು ಈ ಟ್ಯೂಬ್ ಸಂಪರ್ಕಿಸುತ್ತದೆ) ಇರಿಸಲಾಗುತ್ತದೆ.
- ಎಕೋಕಾರ್ಡಿಯೋಗ್ರಾಂ – ಹೃದಯದ ಗಾತ್ರ, ವಿನ್ಯಾಸ ಮತ್ತು ಚಲನೆಯನ್ನು ಪರೀಕ್ಷಿಸಲು ಆಲ್ಟ್ರಾಸೌಂಡ್ ತಂರಗಳನ್ನು ಬಳಸಲಾಗುತ್ತದೆ.
ಚಿಕಿತ್ಸೆ
ಹಾರ್ಟ್ ಎರಿತ್ಮಿಯಾ ಚಿಕಿತ್ಸೆಗಾಗಿ ಇರುವ ಬಹು ಸಾಮಾನ್ಯ ಆಯ್ಕೆಗಳೆಂದರೆ :
- ಆಂಟಿಏರಿತ್ಮಿಯಾ ಔಷಧಿ ಚಿಕಿತ್ಸೆ
- ಪೇಸ್ಮೇಕರ್ಗಳು
- ಇನ್ಫ್ಲಾಂಟೆಬರ್ ಡಿಫೈಬ್ರಿಲೇಟರ್ಗಳು
- ಅಬ್ಲಾಷನ್ ವಿಧಾನಗಳು
ಏರಿತ್ಮಿಯಾ ತೊಡುಕುಗಳು
- ಪಾಶ್ರ್ವವಾಯು : ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡದಿದ್ದಲ್ಲಿ ರಕ್ತವು ಶೇಖರಣೆಯಾಗಿ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ರಕ್ತ ಹೆಪ್ಪುಗಟ್ಟಿರುವಿಕೆಯಲ್ಲಿ ಯಾವುದಾದರೂ ಒಂದು ಸ್ಥಾನಪಲ್ಲಟವಾಗಿ ಮೆದುಳಿನ ನರಕ್ಕೆ ಚಲಿಸಬಹುದಾಗಿರುತ್ತದೆ. ಅದು ಅಲ್ಲಿ ಸಂಗ್ರಹಗೊಂಡು ನರದ ಕಾರ್ಯಕ್ಕೆ ಅಡಿಯಾಗುವುದರಿಂದ ಪಾಶ್ರ್ವವಾಯು ಅಥವಾ ಅರ್ಧಾಂಗವಾಯುವಿಗೆ ಕಾರಣವಾಗುತ್ತದೆ. ಸ್ಟ್ರೋಕ್ನಿಂದ ಮೆದುಳಿಗೆ ಹಾನಿಯಾಗುತ್ತದೆ ಹಾಗೂ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ.
- ಹೃದಯ ವೈಫಲ್ಯ : ದೀರ್ಘ ಕಾಲದ ಬ್ರಾಡ್ಯಿಯರ್ಡಿಯಾ – ಹೃದಯ ಬಡಿತವು ತುಂಬಾ ನಿಧಾನವಾಗುವಿಕೆ (ಪ್ರತಿ ನಿಮಿಷಕ್ಕೆ 60 ಬಡಿತಗಳಿಗಿಂತಲೂ ಕಡಿಮೆ) ಹಾಗೂ ಟ್ಯಾಚಿಕಾರ್ಡಿಯಾ – ಹೃದಯ ಬಡಿತವು ಸಾಮಾನ್ಯಕ್ಕಿಂತ ವೇಗವಾಗಿ ಬಡಿತವಾಗುವಿಕೆ (ಪ್ರತಿ ನಿಮಿಷಕ್ಕೆ 100ಕ್ಕೂ ಬಡಿತಗಳಿಗಿಂತಲೂ ಕಡಿಮೆ) ತನ್ನ ಅಂಗಗಳಿಗೆ ಹೃದಯದಿಂದ ರಕ್ತವನ್ನು ಪಂಪ್ ಮಾಡುವಿಕೆಯಲ್ಲಿ ಅಸರ್ಮಪಕತೆ ಕಂಡುಬರುತ್ತದೆ. ಇದು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com