ಅಪೋಲೊ ಕ್ರೆಡಲ್ ನಿಂದ ತಾಯಂದಿರು ಮತ್ತು ಶಿಶುಗಳ ಸುರಕ್ಷತೆಗೆ “ಸುರಕ್ಷಿತ ಒಪಿಡಿ” (ಹೊರ ರೋಗಿ ವಿಭಾಗ) ಪ್ರಾರಂಭವಾಗಿದೆ. ಸೋಂಕು ಹರಡುವಿಕೆಯ ಭೀತಿಯನ್ನು ಕಡಿಮೆ ಮಾಡಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮೂಡುವ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ಅಪೋಲೊ ಕ್ರೆಡಲ್ ಸುರಕ್ಷತೆಯ ನಿಯಮಗಳೊಂದಿಗೆ “ಸುರಕ್ಷಿತ ಒಪಿಡಿ”ಪ್ರಾರಂಭಿಸಿದೆ.
ಸಮಾಲೋಚನೆ ಉದ್ದೇಶಗಳಿಗಾಗಿ ತನ್ನ ಕ್ರೆಡಲ್ ವಿಭಾಗಕ್ಕೆ ಭೇಟಿ ನೀಡುವ ಸಾರ್ವಜನಿಕರು, ರೋಗಿಗಳ ಸುರಕ್ಷತೆಯು ಮುಖ್ಯವಾಗಿದ್ದು, ದೇಶಾದ್ಯಂತ COVID ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ವೈರಸ್ ಹರಡುವ ಭೀತಿಯಿಂದಾಗಿ ತಪಾಸಣೆ ಮತ್ತು ಸಮಾಲೋಚನೆಗಾಗಿ ತಾಯಂದಿರು ತಮ್ಮ ಶಿಶುಗಳೊಂದಿಗೆ ಆಸ್ಪತ್ರೆಗಳಿಗೆ ಭೇಟಿ ನೀಡುವುದೆ ಒಂದು ಸಮಸ್ಯೆಯಾಗಿತ್ತು, ಈಗ “ಸುರಕ್ಷಿತ ಒಪಿಡಿ” ಪ್ರಾರಂಭದಿಂದಾಗಿ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆಯಾಗಿರುವುದು ಅಪೋಲೊ ಸಮೂಹಕ್ಕಿರುವ ಕಾಳಜಿಯನ್ನು ಒತ್ತಿಹೇಳುತ್ತದೆ. ವೈದ್ಯರ ಸಲಹೆಯ ಮೇರೆಗೆ, ಕ್ರೆಡೆಲ್ ಕೇಂದ್ರಗಳಿಗೆ ಅಥವಾ ಇನ್ನಾವುದೇ ಸಮಾಲೋಚನಾ ವಿಭಾಗಕ್ಕೆ ಭೇಟಿ ನೀಡುವ ಕಾಯಿಲೆಯ ಚಿಕಿತ್ಸೆ ಮತ್ತು ರೋಗನಿರ್ಣಯವನ್ನು ಒಪಿಡಿ ವಿಭಾಗದಿಂದಲೇ ಪ್ರಕರಣಗಳು ಸೂಚಿತವಾಗುತ್ತದೆ.
“ಸುರಕ್ಷಿತ ಒಪಿಡಿ” ಉಪಕ್ರಮದ ಕುರಿತು ಮಾತನಾಡಿದ ಅಪೋಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಅಜಯ್ ಹೆಚ್ ಗಂಗೋಲಿ, “ಗುಣಾತ್ಮಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಅಪೋಲೊ ಸಮೂಹ ಯಾವಾಗಲೂ ಮುಂಚೂಣಿಯಲ್ಲಿದೆ. ಸುರಕ್ಷಿತ ಒಪಿಡಿಯು, ಸಮಾಲೋಚನೆ ಮತ್ತು ಪರೀಕ್ಷೆಗಳಿಗಾಗಿ ನಮ್ಮ ಕೇಂದ್ರಗಳಿಗೆ ಭೇಟಿ ನೀಡುವವರಿಗೆ, ಅತ್ಯುನ್ನತ ಅನುಭವ ನೀಡಲು ಮತ್ತು ನಮ್ಮ ಆವರಣದ ಸುರಕ್ಷತೆಯ ಬಗ್ಗೆ ಧೈರ್ಯ ತುಂಬುವ ಮತ್ತೊಂದು ಹೆಜ್ಜೆಯಾಗಿದೆ. ಸೋಂಕು ಹರಡುವಿಕೆಯ ಭೀತಿಯನ್ನು ಕಡಿಮೆ ಮಾಡಿ ನಮ್ಮ ಕೇಂದ್ರಗಳಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮೂಡುವ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ನಾವು ವಿಸ್ತಾರವಾದ ಕ್ರಮಗಳನ್ನು ಕೈಗೊಂಡಿದ್ದೇವೆ ” ಎಂದರು.
ಸುರಕ್ಷಿತ ಒಪಿಡಿಯ ಸೇವೆಯು ಹೈದರಾಬಾದ್, ಮತ್ತು ಬೆಂಗಳೂರು, ದೆಹಲಿ ಮತ್ತು ಅಮೃತಸರದಲ್ಲಿನ ಅಪೋಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಯಾವುದೇ ಸೇವೆಗೆ ಪೂರ್ವಾನುಮತಿಗಳನ್ನು www.apollocradle.com ಗೆ ಲಾಗ್ ಇನ್ ಮಾಡುವ ಮೂಲಕ ಅಥವಾ ಸಹಾಯವಾಣಿ 1860 500 4424 ಅನ್ನು ಡಯಲ್ ಮಾಡುವ ಮೂಲಕ ಪಡೆಯ ಬಹುದು. ಅಪೋಲೊ ವಾಸ್ತವ ಸಮಾಲೋಚನೆಗಾಗಿ ಅಥವಾ ಆನ್ಲೈನ್ನಲ್ಲಿ ಔಷಧಿಯನ್ನು ಪಡೆಯಲು 24/7 ಅಪ್ಲಿಕೇಶನ್ ಅನ್ನು ಗ್ರಾಹಕರು ಡೌನ್ಲೋಡ್ ಮಾಡಬಹುದು.