Vydyaloka

ಭ್ರೂಣ ಹತ್ಯೆ ಕಾನೂನು ಬಾಹಿರ

ಮೆಡಿಕಲ್ ವಿಜ್ಞಾನಿಗಳ ಪ್ರಕಾರ ಗರ್ಭಧಾರಣೆ ಎನ್ನುವುದು ಪ್ರಕೃತಿದತ್ತವಾದ ನೈಸರ್ಗಿಕವಾದ ಒಂದು ಸಹಜ ಪ್ರಕ್ರಿಯೆ ಆಗಿದೆ. ಹಾಗಾದರೆ ಗರ್ಭಪಾತ ಎಂದರೇನು? ಗರ್ಭಪಾತ ಎಂದರೆ ತಾಯಿಯ ಗರ್ಭಕೋಶದಿಂದ ಭ್ರೂಣವು 9 ತಿಂಗಳ ಅವಧಿಗೆ ಮುನ್ನ ಹೊರಬರುವ ಸ್ಥಿತಿಯನ್ನು ಗರ್ಭಪಾತ ಎನ್ನುತ್ತೇವೆ.
ಗರ್ಭಪಾತದಲ್ಲಿ 2 ವಿಧಗಳಿವೆ.
ಬೇರೆ ಬೇರೆ ಕಾರಣಗಳಿಂದಾಗಿ ತನ್ನಿಂದ ತಾನೇ ನ್ಯಾಚುರಲ್ ಆಗಿ ಗರ್ಭಪಾತ ಆಗುವುದು. ಉದಾಹರಣೆಗೆ ತಾಯಿ ಯಾವುದಾದರೂ ಖಾಯಿಲೆಗೆ ಗುರಿಯಾದಾಗ, ತಾಯಿ ಹೆದರಿ ಶಾಕ್ ಆದಾಗ, ಗರ್ಭಕೋಶಕ್ಕೆ ಸೋಂಕು ತಗುಲಿದಾಗ, ಗರ್ಭಕೋಶಕ್ಕೆ ಜೋರಾಗಿ ಏಟು ಬಿದ್ದಾಗ ಗರ್ಭಪಾತವಾಗುವುದು.
ಎರಡನೆ ವಿಧ ಬಲವಂತವಾಗಿ ಅಂದರೆ forcefully ಗರ್ಭಪಾತ ಮಾಡಿಸಿಕೊಳ್ಳುವುದು. ಉದಾಹರಣೆಗೆ ಇಂಜೆಕ್ಷನ್ ಅಥವಾ ಗುಳಿಗೆ ತಿಂದು ಗರ್ಭಪಾತ ಮಾಡಿಸಿಕೊಳ್ಳುವುದು. ಡಾಕ್ಟರ್ ಸಹಾಯ ಪಡೆದು ಮೈನರ್ ಅಪರೇಶನ್ ಮಾಡಿಸಿಕೊಂಡು ಗರ್ಭಪಾತ ಮಾಡಿಸಿಕೊಳ್ಳುವುದು.
ನಮ್ಮ ಭಾರತದಲ್ಲಿ ಹೆಚ್ಚಾಗಿ ಭ್ರೂಣದ ಲಿಂಗವನ್ನು ಪತ್ತೇ ಮಾಡಿ ಹೆಣ್ಣು ಮಗು ಎಂದು ಗೊತ್ತಾದಾಗ forcefully ಗರ್ಭಪಾತ ಮಾಡಲಾಗುತ್ತದೆ. ಇದು illegal ಅಂದರೆ ಕಾನೂನು ಬಾಹಿರ. ಗರ್ಭಪಾತ ಒಂದು ಅಮಾನುಷ ಕೃತ್ಯ. ಕೊಲೆ ಮಾಡಿದಷ್ಟೇ ಘೋರ. ಹೆಣ್ಣು ಮಗುವಿನ ಭ್ರೂಣ ಹತ್ಯೆಗೆ ಒಪ್ಪಿಗೆ ನೀಡಿದ ತಾಯಿಗೆ, ಜೊತೆಗೆ ಗರ್ಭಪಾತ ಮಾಡಿಸಲು ಮುಂದಾದ ಡಾಕ್ಟರ್ಸ್, ನರ್ಸ್‍ಗಳಿಗೆ, ಸಂಬಂಧಿಕರಿಗೆ ಶಿಕ್ಷೆ ವಿಧಿಸಬೇಕು.
ನಮ್ಮ ಭಾರತದಲ್ಲಿ ಸುಸಂಸ್ಕೃತರು, ವಿದ್ಯಾವಂತರು ಎಷ್ಟು ಜನರಿದ್ದಾರೋ, ಅಷ್ಟೇ ಮೂಢನಂಬಿಕೆಗಳ ದಾಸರು, ಅವಿದ್ಯಾವಂತರೂ ಇದ್ದಾರೆ. ಹಾಗಾಗಿ ಹೆಣ್ಣನ್ನು ಒಂದು ಭೋಗದ ವಸ್ತುವಿನಂತೆ ನೋಡಲಾಗುತ್ತದೆ. ಹೆಣ್ಣು ಖರ್ಚಿಗೆ ದಾರಿ ಎಂದುಕೊಳ್ಳುವವರೇ ಜಾಸ್ತಿ.
ಭಾರತ ಪುರುಷ ಪ್ರಧಾನ ದೇಶ, ಸ್ವಾತಂತ್ರ್ಯ ಬಂದು 73 ವರುಷ ಕಳೆದರು ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಕೇವಲ ಬಾಯಿ ಮಾತಲ್ಲಿ ಮಾತ್ರ. ಹೆಣ್ಣು ಪ್ರತಿ ಹೆಜ್ಜೆಗೂ ಶೋಷಣೆಗೆ ಗುರಿಯಾಗುತ್ತಾಳೆ. ಅತ್ತೆ, ಮಾವ, ಸಂಬಂಧಿಕರು, ಕೆಲವೊಮ್ಮೆ ಸ್ವಂತ ಅಪ್ಪ. ಅಣ್ಣಂದಿರು, ನೆರೆಹೊರೆವರ ಕೆಂಗಣ್ಣಿಗೆ ಗುರಿಯಾಗಿ ಶೋಷಿಸಲ್ಪಡುತ್ತಾಳೆ. ಉದ್ಯೋಗಸ್ಥ ಮಹಿಳೆಯರು ಹಿರಿಯ ಅಧಿಕಾರಿಗಳಿಂದ, ಸಹದ್ಯೋಗಿಗಳಿಂದ ವಿವಿಧ ಹಂತಗಳನ್ನು ಶೋಷಣೆಗೆ ಗುರಿ ಆಗುತ್ತಾಳೆ. ಕಾಮಪಿಶಾಚಿಗಳ ತೃಷೆಗೆ ಬಲಿಯಾಗುವ ಅದೆಷ್ಟೋ ಹೆಣ್ಣು ಮಕ್ಕಳ ಕಥೆ ವಾರ್ತಾಪತ್ತಿಕೆಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ನಾವೆಲ್ಲ ಓದಿದ್ದೇವೆ, ನೋಡಿದ್ದೇವೆ, ಕೇಳಿದ್ದೇವೆ ಉದಾ: ದೆಹಲಿಯಲ್ಲಿ ನಡೆದ ಆರುಷಿ ಪ್ರಕರಣ.
ಗರ್ಭಪಾತ ಮಾಡಿಸಿಕೊಳ್ಳಲು ಇನ್ನೊಂದು ಮುಖ್ಯ ಕಾರಣ ವಯಸ್ಸಾಗಿ ಸತ್ತಾಗ ಮುಕ್ತಿ ಸಿಗಲು ಪಿಂಡ ಪ್ರಧಾನ ಮಾಡಲ ಗಂಡು ಮಗು ಬೇಕು ಎಂಬ ಮೂಢನಂಬಿಕೆ. 3-4 ಹೆಣ್ಣು ಮಕ್ಕಳಿದ್ದರೂ ಗಂಡು ಮಗುವಿಗಾಗಿ ಮತ್ತೆ ಮತ್ತೆ ಗರ್ಭವತಿ ಆಗುವುದು, ಭ್ರೂಣದ ಲಿಂಗಪತ್ತೆ ಹೆಣ್ಣೆಂದಾದರೆ ಗರ್ಭಪಾತ ಮಾಡಿಸಿಕೊಳ್ಳುವುದು,
ನಮ್ಮ ಭಾರತದಲ್ಲಿ ಗರ್ಭಪಾತ ತಡೆಗಟ್ಟುವುದಕ್ಕಾಗಿ MTP act 1971ರಲ್ಲಿ ಜಾರಿಗೆ ಬಂತು. ಆದರೆ 1972ರಲ್ಲಿ ಅನುಷ್ಠಾನಕ್ಕೆ ಬಂತು. ಎಂದರೆ Medical ಟರ್ಮಿನೇಶನ್ ಆಫ್ ಪ್ರಗ್ನೆನ್ಸಿ act ಎಂದು ಅರ್ಥ. ಈ ಖಾಯಿದೆ ಪ್ರಕಾರ ಗರ್ಭಪಾತ ಮಾಡಿಸಿಕೊಳ್ಳುವುದು ಹೆಣ್ಣಿನ ವೈಯಕ್ತಿಕ ವಿಚಾರ. ಆದರೆ ತಾಯಿ ಗರ್ಭ ಧರಿಸಿ 12 ವಾರದ ಒಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದು. ಆದರೆ 12 ವಾರ ಕಳೆದ ನಂತರ ಅದರಲ್ಲೂ 20 ವಾರದ ನಂತರ ಭ್ರೂಣದ ಲಿಂಗಪತ್ತೆ ಮಾಡಿ ಹೆಣ್ಣು ಎಂದು ಗೊತ್ತಾದ ಬಳಿಕ ಗರ್ಭಪಾತ ಮಾಡಿಸುವಂತಿಲ್ಲ. ಹೆಣ್ಣು ಸಮಾಜದ ಕಣ್ಣು. ಒಂದು ಹೆಣ್ಣು ಮಗುವಾಗಿ, ಸಹೋದರಿ, ಹೆಂಡತಿ, ಅಮ್ಮ, ಅತ್ತೆ, ಅತ್ತಿಗೆ ಹೀಗೆ ಎಲ್ಲಾ ಪಾತ್ರಗಳು ಸರಿತೂಗಿಸಬಲ್ಲ ದೇವತೆ. ಆದ್ದರಿಂದ ಹೆಣ್ಣಿಲ್ಲದೆ ಮುಂದಿನ ಜನಾಂಗ ಬೆಳೆಯಲಾರದು. ಆದ್ದರಿಂದಲೇ “ಯತ್ತ ನಾರ್ಯಂತು ಪೂಜ್ಯಂತೇ ರಮಂತೆ ತತ್ರ ದೇವತಾ” ಎಂದು ವೇದದಲ್ಲಿ ಹೇಳಿ ಸ್ತ್ರೀಯರನ್ನು ಗೌರವಿಸಿದ್ದಾರೆ.
MTP Act ಪ್ರಕಾರ ಅತ್ಯಾಚಾರಕ್ಕೆ ಒಳಗಾಗಿ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭವತಿ ಆದರೆ, ಹೊಟ್ಟೆಯಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆ, ಅಂಗವಿಕಲತೆ ಸಮಸ್ಯೆ ಇದ್ದರೆ, ತಾಯಿಯೇ ಅನಾರೋಗ್ಯಸ್ಥಿತಿಯಲ್ಲಿದ್ದರೆ ಮಾತ್ರ ಡಾಕ್ಟರ್ಸರರವರ ಶಿಫಾರಸ್ಸು ಮೇಲೆ ಗರ್ಭಪಾತ ಮಾಡಿಸಿಕೊಳ್ಳಬಹುದು.
ಆದರೆ, ದುಡ್ಡಿನ ವ್ಯಾಮೋಹದಿಮದ ಕೆಲವು ಆಸ್ವತ್ರೆಗಳಲ್ಲಿ ಕೆಲವು ಡಾಕ್ಟರ್ಸ ಸುಳ್ಳು ರೆಕಾರ್ಡ್ ಸೃಷ್ಠಿಮಾಡಿ ಗರ್ಭಪಾತ ಮಾಡಿಸುತ್ತಾರೆ. ಇದು ಆಕ್ಷಮ್ಯ ಅಪರಾಧ ಮತ್ತು illegal. ಸಮೀಕ್ಷೆ ಪ್ರಕಾರ ಇಂದು ಶೇಕಡ 6.4 ದಶಲಕ್ಷ ಗರ್ಭಪಾತಗಳು ಪ್ರತಿವರುಷ ನಡೆಯುತ್ತವೆ. ಇದರಲ್ಲಿ ಶೇಕಡ 3.6 ಅಸುರಕ್ಷ ಗರ್ಭಪಾತಗಳಾಗುತ್ತವೆ. ನಮ್ಮ ಭಾರತದಲ್ಲಿ 13/100 ಜನ ತಾಯಂದಿರು ಗರ್ಭಪಾತದ ಸಮಯದಲ್ಲಿ ಸಾವನ್ನುಪ್ಪುತ್ತಿದಾರೆ.
ಈ ಗರ್ಭಪಾತವೆಂಗ ಅಮಾನುಷ ಕೃತ್ಯವನ್ನು ತಡೆಯಲು ಮತ್ತು ಹೆಣ್ಣು ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ, ಆರೋಗ್ಯವನ್ನು ಕಾಪಾಡುವುದಕ್ಕಾಗಿ ಸ್ವಾರ್ಥಕ್ಕಾಗಿ ಮಾಡುವ ಗರ್ಭಪಾತವು ಕಾನೂನು ಬಾಹಿರ, illegal ಎಂಬುದರಲ್ಲಿ ಸಂದೇಹವಿಲ್ಲ.

ನಾರಾಯಣಿ ಭಟ್

Share this: