ರುಚಿಕರವಾದ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ)
ಪದಾರ್ಥಗಳು:
ಸುಮೇರು ಫ್ರೋಜನ್ ಪನೀರ್ – 200 ಗ್ರಾಂ
ಮೈದಾ ಹಿಟ್ಟು – 60 ಗ್ರಾಂ
ಕಾರ್ನ್ ಪ್ಲೋರ್ – 60 ಗ್ರಾಂ
ಹುರಿಯಲು ತುಪ್ಪ ಅಥವಾ ಸಂಸ್ಕರಿಸಿದ ಎಣ್ಣೆ 250 – 300 ಮಿಲಿ
ಹಾಲು – 240 ಎಂ.ಎಲ್
ಉಪ್ಪು 1 ಚಿಟಿಕೆ
ಸಕ್ಕರೆ – 250 ಗ್ರಾಂ
ಕೇವ್ರಾ ನೀರು – 3 ಹನಿಗಳು
ನೀರು (ಬಳಕೆಯ ಪ್ರಕಾರ)
ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳು ಸರಿಸುಮಾರು 60 ಗ್ರಾಂ
ಸಿದ್ಧಪಡಿಸುವ ವಿಧಾನ :
- ಮಧ್ಯಮ ಗಾತ್ರದ ಬಟ್ಟಲಿನಲ್ಲಿ ಸುಮೇರು ಅವರ ಹೆಪ್ಪುಗಟ್ಟಿದ ಪನೀರ್ ಅನ್ನು ತುರಿದುಕೊಳ್ಳಿ
- ಅದಕ್ಕೆ ಮೈದಾ ಮತ್ತು ಕಾರ್ನ್ ಫ್ಲಾರ್ ನ ಹಾಕಿ ಕಲಿಸಿಕೊಳ್ಳಿ.
- ನಂತರ, ಒಂದು ಮಿಕ್ಸರ್ ನಲ್ಲಿ ಹಾಲು ಮತ್ತು ಪನೀರ್ ಮಿಶ್ರಣವನ್ನು ನಯವಾದ ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ.
- ಮತ್ತೊಂದು ನಾನ್-ಸ್ಟಿಕ್ ಕಡಾಯಿಯಲ್ಲಿ ಕರಿಯಲು ತುಪ್ಪ / ಎಣ್ಣೆಯನ್ನು ತಾಪಮಾನವು 160 * C ತಲುಪುವವರೆಗೆ ಕಾಯಿಸಿಕೊಳ್ಳಿ.
- ಸುಮಾರು 50 ಮಿಲಿಯಷ್ಟು ಮಿಕ್ಸಿ ಮಾಡಿಟ್ಟು ಕೊಂಡ ಸುಮೇರು ಪನೀರ್ ಮಿಶ್ರಣದ ಹಿಟ್ಟುನ್ನು ಚಿಕ್ಕ ಹಪ್ಪಳದ ಆಕಾರ ಮಾಡಿಕೊಂಡು ಎಣ್ಣೆಗೆ ಕರಿಯಲು ಹಾಕಿ. ಚಿನ್ನದ/ ಕಂದು ಬಣ್ಣ ಬರುವವರೆಗೆ ಅದನ್ನು ನಿಧಾನವಾಗಿ ತಿರುಗಿಸಿ ಡೀಪ್ ಫ್ರೈ ಮಾಡಿಕೊಳ್ಳಿ.
- ಎಣ್ಣೆಯನ್ನು ಹೀರಿಕೊಳ್ಳಲು ಕಜ್ಜಾಯ/ಮಾಲ್ಪುವಾಗಳನ್ನು ಹುರಿದ ನಂತರ ಟಿಶ್ಯು ಪೇಪರ್ ಮೇಲೆ ಹಾಕಿ.
- ಅಷ್ಟರಲ್ಲಿ ಸಕ್ಕರೆ, ನೀರು ಬೆರೆಸಿ ನಾನ್-ಸ್ಟಿಕ್ ಪ್ಯಾನ್ನಲ್ಲಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ, ಅದಕ್ಕೆ ಕೆವ್ರಾ ನೀರನ್ನು ಸೇರಿಸಿ.
- ಸಕ್ಕರೆ ಪಾಕ ಸಿದ್ಧವಾದ ನಂತರ, ಕಜ್ಜಾಯ/ಮಾಲ್ಪುವಾಗಳನ್ನು ಸಕ್ಕರೆ ಪಾಕಕ್ಕೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಬಿಡಿ. ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳಿಂದ ಅಲಂಕರಿಸಿ ಮತ್ತು ರುಚಿಯಾದ ಆಕರ್ಷಕವಾದ ಕಜ್ಜಾಯ/ಮಾಲ್ಪುವಾ ಸೇವಿಸಿ.
ಲೇಖಕರು: ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್,
ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್