Vydyaloka

ಚಳಿಗಾಲವನ್ನು ಹಿತಕರವಾಗಿ ಅನುಭವಿಸಲು ನೀವೇನು ಮಾಡಬೇಕು?

ಗಡ ಗಡ ಮೈ ನಡುಗಿಸುವ ಚಳಿ ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಚಳಿಗಾಲ ಬಂತೆದರೆ ಯಾಕಪ್ಪಾ ಬಂತು? ಎನ್ನುವವರೇ ಹೆಚ್ಚು. ಬಿಸಲು, ಮಳೆಯಿಂದ ಹೇಗಾದರೂ ಸಹಿಸಿಕೊಳ್ಳಬಹುದು ಆದರೆ ಚಳಿಯಿಂದಾಗುವ ಬಾಧಕಗಳನ್ನು ಅನುಭವಿಸುವುದು ಸ್ವಲ್ಪ ಅಸಾಧ್ಯವೇ ಸರಿ. ಚಳಿಗಾಲದಲ್ಲಿ ಹಗಲು ಬೆಚ್ಚಗೆ ಇರುತ್ತದೆ. ಆದರೆ ರಾತ್ರಿ ಸಮಯದಲ್ಲಂತೂ ಕಾಲು ಹೊರಗೆ ಇಟ್ಟರೆ ಸಾಕು ತಣ್ಣಗಾಗಿ ಬಿಡುತ್ತದೆ.
ನಿಜ ಹೇಳಬೇಕೆಂದರೆ ಚಳಿಗಾಲ ಅನಾರೋಗ್ಯ ಸಮಸ್ಯೆಗಳಿಗೆ ಅಸ್ಪದ ಮಾಡಿಕೊಡುತ್ತದೆ. ನೆಗಡಿ, ಜ್ವರ, ಆಯಾಸ, ಉಬ್ಬಸ ಹೆಚ್ಚಬಹುದು. ಮಾನಸಿಕವಾಗಿಯೂ ಸ್ವಲ್ಪ ಅಲಸಿಕೆ ಬರಬಹುದು. ಇದರಿಂದಾಗಿ ನಾವು ದೈನಂದಿನ ಜೀವನ ಶೈಲಿ, ಆರೋಗ್ಯ ಸಂರಕ್ಷಣಾ ವಿಷಯದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಬೇಕಾದ ಕಾಲವಿದು. ನೀರು ಕುಡಿಯಬೇಕು ಚಳಿಗಾಲದಲ್ಲಿ ಹೆಚ್ಚಾಗಿ ಎದುರಾಗುವ ಸಮಸ್ಯೆ ಎಂದರೆ ಆವಿಯಾಗುವ ನೀರು. ದೇಹದಿಂದ ನೀರೆಲ್ಲವೂ ಆವಿಯಾಗಿ ಹೋಗುವುದು (ಡಿಹೈಡ್ರೇಷನ್) ಹೊರಗಿನ ವಾತಾವರಣ ಮತ್ತಷ್ಟು ಹೆಚ್ಚಾಗಿದ್ದಾಗ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಆದ್ದರಿಂದ ಈ ಸೀಜನ್‍ನಲ್ಲಿ ಬಾಯಾರಿಕೆ ಆಗದೆ ಹೋದರೂ ತಪ್ಪದೇ ನೀರನ್ನು ಕುಡಿಯಬೇಕು. ಹಣ್ಣಿನ ರಸ ಕುಡಿದರೂ ತೊಂದರೆಯಿಲ್ಲ.

ಆಹಾರ ಸೇವನೆ

ಈ ಸೀಜನ್‍ನಲ್ಲಿ ವೈರಸ್‍ಗಳು ವಿಜೃಂಭಿಸಿ ನೆಗಡಿ-ಪ್ಲೂನಂತಹ ಜ್ವರ ಬರುವ ಸಂಭವ ಹೆಚ್ಚು. ಆದ್ದರಿಂದ ರೋಗ ನಿರೋಧ ಶಕ್ತಿ ಹೆಚ್ಚಾಗುವಂತೆ ಮಾಡುವ ಹಣ್ಣು-ತರಕಾರಿಗಳಿಂದ ಕೂಡಿದ ಆಹಾರ ಸೇವನೆ, ಜೊತೆಗೆ ವ್ಯಾಯಾಮ ಮಾಡಬೇಕು. ಕೆಲವರಲ್ಲಿ ಚಳಿಗಾಲವು ಡಿಪ್ರೆಷನ್ ಉಂಟು ಮಾಡುತ್ತದೆ. ಇದನ್ನು ಸೀಜನಲ್ ಅಫೆಕ್ಟಿವ್ ಡಿಜಾರ್ಡರ್ (ಎಸ್‍ಎಡಿ) ಎಂದು ಕರೆಯುತ್ತಾರೆ. ವೈದ್ಯರ ಸಲಹೆಯೊಂದಿಗೆ ದಿನವೂ ಸ್ವಲ್ಪ ಸಮಯ ಬೆಳಗಿನ ಸೂರ್ಯ ರರ್ಶಿಯಲ್ಲಿ ಓಡಾಡುವುದು ಉತ್ತಮ. ಹೃದಯದ ಆರೋಗ್ಯ ಚಳಿ ವಾತಾವರಣ ಹೃದಯದ ಭಾರವನ್ನು ಹೆಚ್ಚಿಸುತ್ತದೆ. ಒಂದು ವೇಳೆ ಹೈಬಿಪಿ ಅಥವಾ ಲೋಬಿಪಿಯಾಗಲಿ, ಹೃದಯದ ನೋವಾಗಲಿ ಸ್ವಲ್ಪ ಕಾಣಿಸಕೊಂಡರೆ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳಿತು.
ಚಳಿಯನ್ನು ಎದುರಿಸಲು ಶರೀರ ಸಾಕಷ್ಟು ಎಚ್ಚರಿಕೆವಹಿಸಬೇಕಿರುತ್ತದೆ. ಕನಿಷ್ಠ ಮಲಗುವ ಕೋಣೆಯಾದರೂ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಚರ್ಮ ಸಂರಕ್ಷಣೆ ತಂಪಾದ ಚಳಿಗಾಲದಲ್ಲಿ ತೇವ ಕಡಿಮೆ ಇರುವುದರಿಂದ ಚರ್ಮ ಶುಷ್ಕಗೊಂಡು ಒಣಗಿದಂತಿರುತ್ತದೆ. ನವೆಯಿಂದ ಚರ್ಮ ಬಿರುಕು ಬಿಡುತ್ತದೆ. ಇದರಿಂದ ಬ್ಯಾಕ್ಟರೀಯಾ, ಫಂಗಸ್‍ನಂತಹವು ಒಳಗೆ ಸೇರಿ ಇನ್‍ಫೆಕ್ಷನ್‍ಗಳಾಗುತ್ತವೆ. ಆದ್ದರಿಂದ ಮುಖ, ಕೈ ಕಾಲುಗಳು ಪಾದಗಳಂತಹ ಚಳಿಗೆ ಗುರಿಯಾಗರುವ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಮಾಯಿಶ್ಚರೈಜರ್ ಲೇಪಿಸಿಕೊಳ್ಳಬೇಕು.
ಮದ್ಯ ಒಳ್ಳೆಯದಲ.್ಲ ಚಳಿಯಲ್ಲಿ ಬೆಚ್ಚಗೆ ಇರುತ್ತದೆ ಎಂದು ಆಲ್ಕೋಹಾಲ್, ಕಾಫಿಯಂತಹ ಕೆಫಿನ್ ಪಾನೀಯಗಳನ್ನು ಹೆಚ್ಚಾಗಿ ಕುಡಿಯುವುದು ಒಳ್ಳೆಯದಲ್ಲ. ಇವು ಶರೀರದಲ್ಲಿನ ಉಷ್ಣತೆಯನ್ನು ಮತ್ತಷ್ಟು ವೇಗವಾಗಿ ಹೊರಬರುವಂತೆ ಮಾಡುತ್ತದೆ. ಸೊಪ್ಪು, ಈರಳ್ಳಿ, ತಾಜಾ ಹಣ್ಣುಗಳ, ಬೆಚ್ಚಗಿನ ಹಾಲು, ಬೆಣ್ಣೆ ಉಪಯುಕ್ತ. ವ್ಯಾಯಾಮ ಮುಖ್ಯ ಚಳಿಗಾಲದಲ್ಲಿ ವ್ಯಾಯಾಮ ಮಾಡಿದಾಗ ಹೆಚ್ಚು ಕ್ಯಾಲರಿಗಳು ಖರ್ಚಾಗುತ್ತವೆ. ಚಳಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಬೆಚ್ಚಗಾಗಲು ಶರೀರ ಕೆಲಸ ಮಾಡುವುದರಿಂದ ಬೇಸಿಗೆಗೆ ಹೋಲಿಸಿದರೆ ಈ ಸೀಜನ್‍ನಲ್ಲಿ ಶೇ. 50ರವರೆಗೂ ಕ್ಯಾಲರಿ ಖರ್ಚಾಗುತ್ತದೆ. ಇಲ್ಲದೆ ಹೋದರೆ ಶರೀರವು ಸ್ವಲ್ಪ ಬೆಚ್ಚುಗೆ ಆಗುವವರೆಗೂ ನಿಧಾನವಾಗಿ ನಡಿಗೆ ಮಾಡುವುದು ಒಳಿತು. ಆದರೆ ಮುಂಜಾನೆ ನಡೆಯುವ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಬೇಸಿಗೆ, ಮಳೆಗಾಲದಂತೆ ಚಳಿಗಾಲದಲ್ಲೂ ಕೆಲವು ಆನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮತ್ತು ದೈಹಿಕ ಆರೈಕೆಯೂ ಅಷ್ಟೇ ಮುಖ್ಯ. ಚಳಿಗಾಲದಲ್ಲಿ ಜನರನ್ನು ಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ಶೀತ ಮತ್ತು ಚರ್ಮ ಸಮಸ್ಯೆಗಳು. ವಾತಾವರಣದಲ್ಲಿ ಆದ್ರ್ರತೆ ಕಡಿಮೆ ಇರುವುದರಿಂದ ಚರ್ಮಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳು ಬರಬಹುದು. ಅಲ್ಲದೇ ಈಗಿರುವ ಚರ್ಮ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಗಳೂ ಹೆಚ್ಚು.
ತುಟಿಯ ಬಿರಿಯುವಿಕೆ ಚಳಿಗಾಲದಲ್ಲಿ ಸಾಮಾನ್ಯ. ತುಟಿಗಳ ಮೇಲೆ ಅಗಾಗ ನಾಲಿಗೆಯಿಂದ ಸವರುವುದು, ತುಟಿಯ ಮೇಲ್ಪದರವನ್ನು ಕಚ್ಚುವುದು ಬೇಡ. ತುಟಿಗಳು ಒಣಗಿವೆ ಎನಿಸಿದರೆ ಪೆಟ್ರೋಲಿಯಂ ಜೆಲ್ಲಿ ಲೇಪಿಸಿಕೊಳ್ಳಿ. ಮಹಿಳೆಯರು ಬಳಸುವ ಲಿಪ್‍ಸ್ಟಿಕ್ ತುಟಿಯ ಚರ್ಮವನ್ನು ಬಾಗುವಂತೆ ಮಾಡುವುದರಿಂದ ಚಳಿಗಾಲ ಮುಗಿಯುವ ತನಕ ಅದರಿಂದ ದೂರವಿರಬೇಕು. ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ಕಾರ್ಯಗಳ ನಿಮಿತ್ತ ಮನೆಯಿಂದ ಹೊರಗೆ ಇರುವವರು ವ್ಯಾನಿಟಿ ಬ್ಯಾಗ್‍ಗಳಲ್ಲಿ ಜೆಲ್ಲಿಯ ಟ್ಯೂಬ್ ಇಟ್ಟುಕೊಳ್ಳುವುದು ಉತ್ತಮ.
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕೆಂದು ಮನ ಬಯಸುತ್ತದೆ. ಇನ್ನಷ್ಟು, ಮತ್ತಷ್ಟು ಮಾಡುತ್ತಲೇ ಇರಬೇಕೆನಿಸುತ್ತದೆ. ಚಳಿಗಾಲದಲ್ಲಿ ಅತಿಯಾದ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ. ಏಕೆಂದರೆ ಬಿಸಿ ನೀರು ನಿಮ್ಮ ಚರ್ಮದ ತೇವವನ್ನು ಕಸಿಯುತ್ತದೆ. ಚಳಿಗಾಲದಲ್ಲಿ ಸ್ನಾನದ ಅವಧಿಯನ್ನು ಮೊಟಕುಗೊಳಿಸುವುದೇ ಉತ್ತಮ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಹದವಾದ ಬಿಸಿ ನೀರು, ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿ. ಮುಖ ತೊಳೆದುಕೊಂಡರೆ ಮೃದುವಾದ ಸೋಪ್ ಬಳಸಿ. ತಣ್ಣೀರಿನಿಂದ ಮುಖ ತೊಳೆದುಕೊಂಡರೆ ಅದು ಬಿರಿಯುವುದಾಗಲಿ ಅಥವಾ ಉರಿಯುವಂಥ ಸಮಸ್ಯೆಯಾಗಲಿ ಇರುವುದಿಲ್ಲ. ಸ್ನಾನದ ನಂತರ ಕಾಲುಗಳಿಗೆ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಕಾಲುಗಳಿಗೆ ಒಳ್ಳೆಯದು.
ಸ್ನಾನಕ್ಕೆ ಮುನ್ನ ಹತ್ತರಿಂದ ಹದಿನೈದು ನಿಮಷಗಳ ಕಾಲ ಕೊಬ್ಬರಿ ಅಥವಾ ಆಲಿವ್ ಎಣ್ಣೆಯಿಂದ ಶರೀರಕ್ಕೆ ಮರ್ದನ ಮಾಡಿಕೊಂಡರೆ ಚರ್ಮ ಒಡೆಯದೆ, ಹೊಳಪನ್ನು ಪಡೆದುಕೊಳ್ಳುತ್ತದೆ. ಈ ಸೀಜನ್‍ನಲ್ಲಿ ತಣ್ಣೀರಿನ ಸ್ನಾನ ಕಷ್ಟವೇ ಸರಿ. ಹಾಗೆಯೇ ಅತಿಯಾದ ಬಿಸಿ ನೀರಿನಿಂದಲೂ ಸ್ನಾನ ಮಾಡಬಾರದು. ಬಿಸಿ ನೀರು ಚರ್ಮದ ಮೇಲೆ ತೇವವನ್ನು ತೊಲಗಿಸುತ್ತದೆ. ಆದ್ದರಿಂದ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಉತ್ತಮ.
ನೀರಿನಂಶ ಹೊಂದಿರುವ ಮಾಯಿಶ್ಚರೈಸರ್‍ಗಿಂತ ಎಣ್ಣೆ ಅಂಶ ಹೊಂದಿರುವ ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮ ಮೃದುತ್ವವನ್ನು ಕಾಪಾಡಿಕೊಳ್ಳಬಹುದು. ಇದು ಚರ್ಮದ ಮೇಲೆ ಆದ್ರ್ರತೆಯ ಪದರ ನಿರ್ಮಾಣ ಮಾಡುತ್ತದೆ. ಇದರಿಂದಾಗಿ ಚರ್ಮ ಒಣಗುವಿಕೆಯಿಂದ ಪಾರಾಗಬಹುದು. ನೀವು ಖರೀದಿಸುವ ಲೋಷನ್‍ಗಳ ಲೇಬಲ್ ಮೇಲೆ ನೈಟ್‍ಕ್ರಿಮ್ ಎಮದು ಬರೆದಿದ್ದರೆ ಅದು ಎಣ್ಣೆ ಅಂಶ ಹೊಂದಿರುವ ಮಾಯಿಶ್ಚರೈಸರ್ ಎಂದರ್ಥ. ಸೋಪಿನಲ್ಲೂ ಸಹ ಗಾಢತೆ ಕಡಿಮೆ ಇದ್ದು, ಎಣ್ಣೆ ಹೆಚ್ಚಾಗಿರುವುದನ್ನುಆಯ್ಕೆ ಮಾಡಿಕೊಳ್ಳಬೇಕು. ಸ್ನಾನ ಮಾಡಿದ ಬಳಿಕ ಚರ್ಮ ಇನ್ನೂ ಒದ್ದೆಯಾಗಿರುವಾಗಲೇ ಮುಖ, ಕೈಗಳು, ಮುಂಗೈಗಳಿಗೆ ಮಾಯಿಶ್ಚರೈಜರ್ ಕ್ರೀಂ ಲೇಪಿಸಿಕೊಳ್ಳಬೇಕು. ಇದರಿಂದ ಚರ್ಮದ ಮೇಲ್ಪದರ ಆದ್ರ್ರತೆ ಹಾಗೆ ಉಳಿದಿರುತ್ತದೆ. ಶುಷ್ಕಗೊಳ್ಳದಂತೆ, ನವೆ ಉಂಟಾಗದಂತಿರುತ್ತದೆ. ತುಟಿಗಳಿಗೆ ಸ್ವಚ್ಛವಾದ ತುಪ್ಪ ಇಲ್ಲವೇ ಪೆಟ್ರೋಲಿಯಂ ಜೆಲ್ಲಿಯಂತಹವನ್ನು ಲೇಪಿಸಿಕೊಳ್ಳುವುದು ಒಳಿತು.

ಚರ್ಮದ ಮೃದುತ್ವ ರಕ್ಷಣೆ

ಸನ್ ಸ್ಕ್ರೀನ್‍ಗಳ ಉಪಯೋಗ

ತ್ವಚ್ಚೆಯ ಆರೈಕೆಗೆ ಹಿತಕರ ಸಲಹೆ


ಡಾ|| ಮಂಜುಶ್ರೀ

ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ ೬೬,
ಶಾನ್‌ಬಾನ್ ಟ್ರೇಡರ‍್ಸ್ ಎದುರು, ತಡಂಬೈಲು
ಸುರತ್ಕಲ್-575014 ದೂ:9482249762
Share this: