Vydyaloka

ಕವನಗಳು

ಜೋರು
ಸಂತೋಷ ದುಃಖ ಆಸೆ ನಿರಾಸೆ
ಕುಡಿತಕ್ಕೆ ಕಾರಣಗಳು ನೂರು
ಹಾಗಾಗಿಯೇ ಯಾವಾಗಲೂ
ಹೆಂಡದಂಗಡಿಯಲ್ಲಿ ಬಿಜಿನೆಸ್ಸು ಜೋರು

ಸಲಹೆ
ಬೆಲೆಯೇರಿಕೆ, ಅನ್ಯಾಯ, ಅಕ್ರಮಗಳ ವಿರುದ್ಧ
ಹಗಲಿಡೀ ಸೇರಿ ಹೋರಾಡಿ
ದಣಿವಾರಿಸಿಕೊಳ್ಳಲು ಬೆಲೆ ಹೆಚ್ಚಿದ್ದರೂ
ರಾತ್ರಿಯಿಡೀ ಕುಡಿದು ತೂರಾಡಿ

ಮನದ ಗಾಯ
ನಿಜಕ್ಕೂ ಕುಡಿವುದ ಬಿಡಬೇಕಿದೆ
ಆದರೆ ಮಾಯದ ಗಾಯಗಳಿಗೆ
ಮನದಾಳದ ನೋವುಗಳಿಗೆ
ಮದ್ಯಸಾರವನ್ನೇ ಹಚ್ಚಿ ತೊಳೆಯಬೇಕಿದೆ

ಅರ್ಥ
ನಾ ಹೇಳಲಿಲ್ಲವೆ ನಮ್ಮೂರ ಈ ಬಾರು
ಏಳು ಗಂಟೆಗೇ ತೆರೆದುಕೊಳ್ಳುತ್ತದೆ
ಒಂದೊಂದೇ ಪೆಗ್ಗು ಏರುತ್ತ ಹೋದಂತೆ
ಮಾತೂ ಅರ್ಥ ಕಳೆದುಕೊಳ್ಳುತ್ತದೆ

ಅಲ್ಪತೃಪ್ತ
ಒಂದು ರಗ್ಗು ಇದ್ರೆ ಸಾಕು
ಮಾಗಿ ಚಳಿಯ ತಡೆಯಲು
ಒಂದು ಪೆಗ್ಗು ಇದ್ರೆ ಸಾಕು
ಮನದ ನೋವ ಮರೆಯಲು

ಕುಡಿಯದವನೊಬ್ಬ
ಕುಡಿವ ಗೆಳೆಯರ ನಡುವೆ
ಕುಡಿಯದವನೊಬ್ಬ ಬೇಕು
ಪಾರ್ಟಿ ಮುಗಿದ ಮೇಲೆ
ಅಡ್ಡ್ರೆಸ್ಸು ಹೇಳಿ ಆಟೋ ಹತ್ತಿಸಬೇಕು

ದಾಹ
ಜೀವನದಲ್ಲಿ ಎಷ್ಟು ಈಜಿದರೂ
ಪದೇ ಪದೇ ನೋವತಿನ್ನುವ ದೇಹ
ಅದಕ್ಕೇ ಇರಬೇಕು
ಎಷ್ಟು ಕುಡಿದರೂ ತೀರದ ದಾಹ

ಡಾ.ಗಣೇಶ್ ಹೆಗಡೆ, ನೀಲೆಸರ
ಪ್ರಾದೇಶಿಕ ಸಂಶೋಧನಾಧಿಕಾರಿ
ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ, ಶಿರಸಿ, ಕರ್ನಾಟಕ
ಮೊಬೈಲ್ : 09448 995595, E-mail: g.hegdevet@gmail.com

Share this: