Vydyaloka

ಅಡ್ವರ್ಸ್ ಡ್ರಗ್ ರಿಯಾಕ್ಷನ್ (ಎಡಿಆರ್)- ಪ್ರತಿಕೂಲ ಔಷಧ ಪ್ರತಿಕ್ರಿಯೆಯ ಅಡ್ಡ ಪರಿಣಾಮಗಳು

ಪ್ರತಿಕೂಲ ಔಷಧ ಪ್ರತಿಕ್ರಿಯೆಯ ಅಡ್ಡ ಪರಿಣಾಮಗಳು

1. ಪ್ರತಿಕೂಲ ಔಷಧ ಪ್ರತಿಕ್ರಿಯೆ ಎಂದರೇನು?

ಪ್ರತಿಕೂಲ ಔಷಧ ಪ್ರತಿಕ್ರಿಯೆಯನ್ನು ಅಡ್ವರ್ಸ್ ಡ್ರಗ್ ರಿಯಾಕ್ಷನ್(ಎಡಿಆರ್) ಎಂದು ಕರೆಯುತ್ತಾರೆ. ಅನಾರೋಗ್ಯ ಅಥವಾ ರೋಗ ನಿವಾರಣೆಗಳಿಗೆ ಬಳಸುವ ಔಷಧಗಳ ಚಿಕಿತ್ಸೆಯಿಂದಾಗಿ ಉಂಟಾಗುವ ಬೇಡದ, ಉದ್ದೇಶವಲ್ಲದ ಹಾನಿಕಾರಕ ಪ್ರತಿಕ್ರಿಯೆಯನ್ನು ಎಡಿಆರ್ ಎನ್ನುತ್ತಾರೆ. ಈ ಸಮಸ್ಯೆಯು ಔಷಧಗಳ ಬಳಕೆಗೆ ಸಂಬಂಧಿಸಿದ್ದೆಂದು ಶಂಕಿಸಲಾಗಿದೆ. ಇದನ್ನು ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮ (ಸೈಡ್ ಎಫೆಕ್ಟ್) ಎಂದು ಹೇಳಬಹುದು ಅಥವಾ ಪ್ರತಿಕೂಲ ಔಷಧ ಪ್ರತಿಕ್ರಿಯೆ ಎನ್ನಬಹುದು.

2. ಔಷಧಿ ಪ್ರತಿಕ್ರಿಯೆಗಳು ಏಕೆ ಪ್ರಾಮುಖ್ಯತೆ ಎನಿಸುತ್ತದೆ?

• ಅನೇಕ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಮುಖ ಕಾರಣಗಳಲ್ಲಿ ಎಡಿಆರ್ ಕೂಡ ಒಂದು.

• ಎಡಿಆರ್ ಯಿಂದ ಉಂಟಾಗುವ ಹಾನಿಯ ತೀವ್ರತೆಯು ಅಲ್ಪ ಅಥವಾ ಯಾವುದೇ ಪರಿಣಾಮಗಳಿಲ್ಲದ ಸಂಗತಿಯಿಂದ ಹಿಡಿದು ತೀವ್ರ ಗಂಭೀರ ಪರಿಣಾಗಳ (ಉದಾ: ಮೂತ್ರಪಿಂಡ, ಲಿವರ್, ರಕ್ತಕೋಶಗಳು ಇತ್ಯಾದಿಯಂಥ ಅಂಗಗಳಿಗೆ ಹಾನಿ) ಹಾಗೂ ಒಮ್ಮೊಮ್ಮೆ ಸಾವುಗಳ ತನಕ ವ್ಯಾಪಕ ಶ್ರೇಣಿಯಲ್ಲಿರುತ್ತದೆ. ಗರ್ಭಾವಸ್ಥೆ ವೇಳೆ ಬಳಸುವ ಔಷಧಗಳು ಭ್ರೂಣಕ್ಕೆ ಹಾನಿ ಉಂಟು ಮಾಡಬಹುದು.

• ಬಹುತೇಕ ಔಷಧಿಗಳ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು.

• ಪ್ರಪಂಚದ ಪ್ರತಿಯೊಂದು ಭಾಗದ ಜನರೂ ಎಡಿಆರ್ ಗಳ ಪರಿಣಾಮಗಳಿಗೆ ಒಳಗಾಗುತ್ತಾರೆ.

• ಕೆಲವು ದೇಶಗಳಲ್ಲಿ ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆ ಹಾಗೂ ಉತ್ಪಾದಕತೆ ನಷ್ಟದಂಥ ಎಡಿಆರ್‍ಗೆ ಸಂಬಂಧಿಸಿದ ವೆಚ್ಚಗಳು ಔಷಧಿಗಳ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ.

• ಯಾವುದೇ ಔಷಧಿ ಇಂಥ ಹಾನಿಯಿಂದ ಮುಕ್ತವಾಗಿಲ್ಲ. ಎಡಿಆರ್‍ನಿಂದ, ಯಾವಾಗ, ಮತ್ತು ಯಾವ ಔಷಧದಿಂದ ಬಳಸುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಅಡ್ಡ ಪರಿಣಾಮಗಳು ಮತ್ತು ಹಾನಿಗಳ ವಿಚಕ್ಷಣೆ ಹಾಗೂ ಔಷಧಿಗಳ ಅನುಕೂಲಗಳ ಅಂದಾಜು ರೋಗಿಯ ಸುರಕ್ಷತೆಯನ್ನು ಪ್ರವರ್ತನಗೊಳಿಸುತ್ತದೆ.

3. ಪ್ರತಿಕೂಲ ಔಷಧ ಪ್ರತಿಕ್ರಿಯೆಗೆ ಕಾರಣವಾಗುವ ಅಂಶಗಳು ಯಾವುವು?

• ರೋಗಿಯ ಸ್ಥಿತಿಯ ಬಗ್ಗೆ ತಪ್ಪಾಗಿ ರೋಗ ನಿರ್ಧಾರ ಮಾಡುವಿಕೆ ; ಹಾಗಾಗಿ ಸರಿಯಲ್ಲದ, ದೋಷಪೂರಿತ ಮತ್ತು ಅನಗತ್ಯ ಔಷಧಗಳ ಬಳಕೆ.

• ತಪ್ಪು ಔಷಧಿಯನ್ನು ಸೂಚಿಸುವಿಕೆ ಅಥವಾ ಸರಿಯಾದ ಔಷಧದ ತಪ್ಪಾದ ಡೋಸೇಜ್.

• ಪತ್ತೆಯಾಗದ ವೈದ್ಯಕೀಯ, ವಂಶವಾಹಿನಿ ಅಥವಾ ಅಲರ್ಜಿ ಪರಿಸ್ಥಿತಿ ಇದ್ದು, ಅದು ಪ್ರತಿಕ್ರಿಯೆ-ಪರಿಣಾಮಕ್ಕೆ ಕಾರಣವಾಗಬಹುದು.

• ವೈದ್ಯರ ಸೂಚನೆಯೊಂದಿಗೆ ಅಥವಾ ಸೂಚನೆ ಇಲ್ಲದೇ ರೋಗಿಯಿಂದ ಸ್ವಯಂ ಔಷಧ ಸೇವನೆ.

• ಔಷಧಿಯನ್ನು ಸೇವಿಸುವಂತೆ ನೀಡಲಾದ ಸಲಹೆ-ಸೂಚನೆಗಳನ್ನು ಅನುಸರಿಸದಿರುವಿಕೆ.

• ಇತರ ಔಷಧಿಗಳೊಂದಿಗೆ ಪ್ರತಿಕ್ರಿಯೆಗಳು (ಸಾಂಪ್ರದಾಯಿಕ ಔಷಧಿಗಳು, ಜೀವಸತ್ವ ಪೋಷಕಾಂಶಗಳು ಇತ್ಯಾದಿ ಒಳಗೊಂಡ)

• ಕೆಲವು ಆಹಾರಗಳು ಮತ್ತು ಪೇಯಗಳು ಔಷಧಿಗಳೊಂದಿಗೆ ಸೇರಿಕೊಂಡು ಅವು ಅಲ್ಪ ಪರಿಣಾಮ ಬೀರುವಂತೆ ಮಾಡುತ್ತವೆ ಅಥವಾ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ.

• ಕಳಪೆ ಮಟ್ಟದ ಔಷಧಿಗಳ ಬಳಕೆ ಮತ್ತು ನಕಲಿ ಔಷಧಿಗಳ ಬಳಕೆ. ಇವುಗಳ ಸಂಯೋಜನೆ ಮತ್ತು ಅದರಲ್ಲಿನ ವಸ್ತುಗಳು ಸೂಕ್ತ ವೈಜ್ಞಾನಿಕ ಅಗತ್ಯಗಳನ್ನು ಸರಿದೂಗಿಸುವುದಿಲ್ಲ. ಇಂಥ ಔಷಧಿಗಳು ಅಪಾಯಕಾರಿ.

4. ನಿಮ್ಮಲ್ಲಿ ಪ್ರತಿಕೂಲ ಔಷಧ ಪ್ರತಿಕ್ರಿಯೆ ಆಗುತ್ತಿದೆ ಎಂದು ನೀವು ಯಾವಾಗ ಶಂಕಿಸಬಹುದು ?

ಯಾವುದೇ ಕಾರಣಗಳಿಗಾಗಿ ಯಾವುದೇ ಔಷಧಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ ನಂತರ ರೋಗಿಗೆ ಈ ಕೆಳಗೆ ಪಟ್ಟಿ ಮಾಡಿದ ಯಾವುದೇ ಬದಲಾವಣೆಗಳು ಕಾಣಿಸಿಕೊಂಡರೆ, ನಿಮ್ಮಲ್ಲಿ ಪ್ರತಿಕೂಲ ಔಷಧ ಪ್ರತಿಕ್ರಿಯೆ ಆಗುತ್ತಿದೆ ಎಂದು ನೀವು ಶಂಕಿಸಬಹುದು :

• ಯಾವುದೇ ಸ್ವರೂಪದ ಚರ್ಮದ ಗುಳ್ಳೆಗಳು

• ಉಸಿರಾಟದ ಪ್ರಮಾಣ, ಹೃದಯ ಬಡಿತ, ಶ್ರವಣ ಸಾಮಥ್ರ್ಯ ಅಥವಾ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ

• ಸ್ತಂಭನ

• ಅನಾಫಿಲಾಕ್ಸಿಸ್

• ಅತಿಸಾರ

• ಜ್ವರ

ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಔಷಧಿಗಳನ್ನು ನಿಲ್ಲಿಸಬೇಕು ಹಾಗೂ ಮುಂದಿನ ಸಲಹೆ-ಸೂಚನೆಗಾಗಿ ವೈದ್ಯರನ್ನು ಭೇಟಿಯಾಗಬೇಕು.

5. ಎಡಿಆರ್ ನ್ನು ತಡೆಗಟ್ಟುವಲ್ಲಿ ರೋಗಿಯ ಪಾತ್ರವೇನು ?

ಪ್ರತಿಕೂಲ ಔಷಧ ಪರಿಣಾಮಗಳನ್ನು ತಡೆಗಟ್ಟಲು ರೋಗಿ ಈ ಕೆಲವು ಸಂಗತಿಗಳು ನೆರವಾಗಬಹುದು :

ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದಕ್ಕೆ ಮುನ್ನ:

 ಎಲ್ಲ ವೈದ್ಯಕೀಯ ಸ್ಥಿತಿಯ ಹಿನ್ನೆಲೆಯಲ್ಲಿ ಅಸಮರ್ಪಕ ಔಷಧಗಳ ಬಳಕೆಯನ್ನು ತಪ್ಪಿಸಬೇಕು. ಎಷ್ಟೋ ಸಮಯದಲ್ಲಿ ವಿಶ್ರಾಂತಿ, ಆಹಾರ ಮತ್ತು ಜೀವನ ಶೈಲಿ ಬದಲಾವಣೆಗಳಂಥ ಸರಳ ಕ್ರಮಗಳು ಇಂಥ ಚಿಹ್ನೆ, ಲಕ್ಷಣಗಳನ್ನು ತೊಡೆದು ಹಾಕಲು ನೆರವಾಗುತ್ತದೆ. ಅನೇಕ ರೋಗಗಳು (ಉದಾ: ವೈರಾಣು ಜ್ವರ ಇತ್ಯಾದಿ) ಕೆಲವೇ ದಿನಗಳಲ್ಲಿ ಉಪಶಮನವಾಗುತ್ತದೆ. ಅಗಾಗ ಮತ್ತು ದೀರ್ಘಾವಧಿಗೆ ಓವರ್ ದಿ ಕೌಂಟರ್ (ಒಟಿಸಿ) ಔಷಧಿಗಳ ಬಳಕೆಯನ್ನು ಸಹ ತಪ್ಪಿಸಿ.

 ಈ ಹಿಂದೆ ನಿರ್ದಿಷ್ಟವಾಗಿ ಔಷಧಿಗಳಿಂದ ಉಂಟಾದ ಅಲರ್ಜಿಯ ಯಾವುದೇ ಹಿನ್ನೆಲೆಯ ವಿವರಗಳನ್ನು ನಿಮ್ಮ ವೈದ್ಯರಿಗೆ ಒದಗಿಸಿ.

 ಯಾವಾಗಲೂ ಅದೇ ವೈದ್ಯರನ್ನು (ಕುಟುಂಬ ವೈದ್ಯರು) ಭೇಟಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ವೈದ್ಯರು ರೋಗಿಗೆ ಚಿಕಿತ್ಸೆ ನೀಡುವಾಗ ರೋಗಿಯ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಇದು ವೈದ್ಯರಿಗೆ ನೆರವಾಗುತ್ತದೆ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮತ್ತು ಅನುಮಾನವಿದ್ದಾಗ ನಿಮ್ಮ ವೈದ್ಯರನ್ನು ನೀವು ಸಂಪರ್ಕಿಸಲು ಇದರಿಂದ ಅನುಕೂಲವಾಗುತ್ತದೆ.

 ಯಾವಾಗಲೂ ಒಂದೇ ಔಷಧಿ ಮಾರಾಟಗಾರರಿಂದ ಔಷಧಿಗಳನ್ನು ಖರೀದಿಸಿ. ಏಕೆಂದರೆ ನೀವು ಸೇವಿಸುವ ಔಷಧಗಳ ಬಗ್ಗೆ ಆ ಔಷಧಿ ಮಾರಾಟಗಾರರಿಗೆ ತಿಳಿದಿರುತ್ತದೆ ಹಾಗೂ ಔಷಧಿಗಳ ದುರುಪಯೋಗ ತಪ್ಪಿಸಲು ನಿಮಗೆ ಸಹಾಯವಾಗುತ್ತದೆ.

ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವ ವೇಳೆ :

ನೀವು ಈಗಾಗಲೇ ಬಳಸುತ್ತಿರುವ ಔಷಧಗಳ ಪಟ್ಟಿಯನ್ನು  ವೈದ್ಯರಿಗೆ ಸಲ್ಲಿಸಿ ಹಾಗೂ ಆ ಕುರಿತ ಅವರೊಂದಿಗೆ ಚರ್ಚಿಸಿ. ಸಂಭವನೀಯ ಔಷಧಿ ಪರಿಣಾಮಗಳ ಬಗ್ಗೆ ವಿಶೇಷವಾಗಿ ಸಮಾಲೋಚನೆ ನಡೆಸಿ. ಯಾವುದೇ ಔಷಧಿಗಳ ಸೂಚನೆಯೊಂದಿಗೆ, ಓಟಿಸಿ ಔಷಧಿಗಳು, ವಿಟಮಿನ್‍ಗಳು, ಗಿಡಮೂಲಿಕೆ ಪೋಷಕಾಂಶಗಳು, ಹಾಗೂ ಮೆಡಿಕಲ್ ಕ್ರೀಮ್ ಅಥವಾ ಆಯಿಂಟ್‍ಮೆಂಟ್ ಇವುಗಳನ್ನು ಸೇರಿಸಲಾಗಿಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ನಿಮಗೆ ಸೂಚಿಸಲಾದ ಔಷಧಿಗಳ ಬಗ್ಗೆ ಹಾಗೂ ವೈದ್ಯರು ನೀಡಿದ ಎಲ್ಲ ಸಲಹೆ ಸೂಚನೆಗಳ ಬಗ್ಗೆ ನಿಮಗೆ ಅರ್ಥವಾಗಿದೆಯೇ ಎಂದುದನ್ನು ಖಾತ್ರಿ ಮಾಡಿಕೊಳ್ಳಿ. ನಿಮಗೆ ಸಂಪೂರ್ಣ ಅರ್ಥವಾಗದಿದ್ದಲ್ಲಿ ವೈದ್ಯರನ್ನು ಮತ್ತೊಮ್ಮೆ ಕೇಳಲು ಹಿಂಜರಿಯಬೇಡಿ.

ವೈದ್ಯರು ನೀಡಿದ ಔಷಧಿಗಳನ್ನು ನಿಮ್ಮ ಫಾರ್ಮಸಿಸ್ಟ್ ಸರಿಯಾಗಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಿ. ನಿಮ್ಮ ವೈದ್ಯರಿಗೆ ತಿಳಿಸದೇ ಯಾವುದೇ ಪರ್ಯಾಯ ಔಷಧಿಗಳನ್ನು ಸ್ವೀಕರಿಸಬೇಡಿ. ಔಷಧಿಯೊಂದಿಗೆ ನೀಡಲಾಗುವ ಮಾಹಿತಿಯನ್ನು ಓದಲು ಪ್ರಯತ್ನಿಸಿ. ಯಾವುದೇ ಹೊಸ ಎಚ್ಚರಿಕೆಯನ್ನು ಸೇರಿಸಲಾಗಿದೆಯೇ ಎಂಬುದನ್ನು ನೋಡಲು ಅಗಾಗ ಅದನ್ನು ಮತ್ತೆ ಓದಿ ಹಾಗೂ ನಿಮಗೆ ಹೊಸ ಔಷಧಿ ಸೇರ್ಪಡೆಯಾದಾಗಲೆಲ್ಲ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ. ಕಂಪ್ಯೂಟರ್‍ಗಳ ಮೂಲಕ ನೀವು ಔಷಧಗಳ ಬಗ್ಗೆ ಕೆಲುವ ಮಾಹಿತಿಯನ್ನು ಸಂಗ್ರಹಿಸಬಹುದು.

ಯಾವುದೇ ಹೊಸ ಔಷಧ ಅಥವಾ ಪೋಷಕಾಂಶವನ್ನು ತೆಗೆದುಕೊಳ್ಳುವುದಕ್ಕೂ ಮುನ್ನ, ಅದರ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ನಿಮ್ಮ ವೈದ್ಯರು ಅಥವಾ ಫಾರ್ಮಾಸಿಸ್ಟ್‍ರನ್ನು ಕೇಳಿ.

 ಸರಿಯಾದ ಡೋಸ್, ಪ್ರಮಾಣ, ರೀತಿ ಮತ್ತು ಅಂತರವನ್ನು ಉಪಯೋಗಿಸಿ ಹಾಗೂ ನಿಮ್ಮ ವೈದ್ಯರು ನೀಡುವ ಎಲ್ಲ ಸಲಹೆ-ಸೂಚನೆಗಳನ್ನು ಅನುಸರಿಸಿ.

ನಿಮ್ಮ ವೈದ್ಯರು ನೀಡುವ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸಿ, ಏಕೆಂದರೆ, ವಿಶೇಷವಾಗಿ ಔಷಧಿಗಳಲ್ಲಿ ಅಗಾಗ ಕೆಲವು ತನಿಖೆಗಳು ಹಾಗೂ ತಪಾಸಣೆಗಳನ್ನು ನಡೆಸಬೇಕಾದ ಅಗತ್ಯವಿರುತ್ತದೆ. ಇದಕ್ಕೆ ದೀರ್ಘಾವಧಿ ಬೇಕಾಗಬಹುದು.
ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದ ನಂತರ :

 ಬಹುಶ: ಔಷಧಿ ಪ್ರತಿಕ್ರಿಯೆ ಕಾರಣಕ್ಕಾಗಿ ಕಂಡು ಬರಬಹುದಾದ ಯಾವುದೇ ಅಹಿತಕರ ಘಟನೆ, ಯಾವುದೇ ಹೊಸ ಚಿಹ್ನೆ-ಲಕ್ಷಣಗಳನ್ನು (ಮೇಲೆ ಪಟ್ಟಿ ಮಾಡಿರುವ) ಗಮನಿಸಿ ಹಾಗೂ ಅಂಥ ಔಷಧಿಗಳ ಸೇವನೆಯನ್ನು ನಿಲ್ಲಿಸಿ.

ನೀವು ಕಳೆದ 4 ವಾರಗಳಿಂದ ಸೇವಿಸುತ್ತಿರುವ ಎಲ್ಲ ಔಷಧಿಗಳು (ಸಲಹೆ ಮಾಡಿದ, ಸಲಹೆ ಮಾಡದ ಹಾಗೂ ಅಕ್ರಮ) ಮತ್ತು ಗಿಡಮೂಲಿಕೆ ಹಾಗೂ ವಿಟಮಿನ್ ಪೋಷಕಾಂಶಗಳ ಪಟ್ಟಿ ಮಾಡಿ. ನಿಮ್ಮ ವೈದ್ಯರು ಶಂಕಿತ ಔಷಧಿಗಳನ್ನು ನಿಲ್ಲಿಸುವಂತೆ ನಿಮಗೆ ಸೂಚಿಸಬಹುದು ಹಾಗೂ ಬೇರೆ ಯಾವುದಾದರು ಔಷಧಿ ಸೇವಿಸುವಂತೆ ಸಲಹೆ ನೀಡಬಹುದು.

ಭವಿಷ್ಯದ ಕಾರ್ಡ್‍ನನ್ನು ಕೊಂಡ್ಯೊಯಿರಿ (ಹಳದಿ ಚೀಟಿ). ಇದು ನಿಮ್ಮ ಔಷಧ ವಿವರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತದೆ.

Share this: