Vydyaloka

ಜೊಯಾನ್‍ನಿಂದ ತುರ್ತು ಆಂಬುಲೆನ್ಸ್ ಸೇವೆ ಆರಂಭ

ಜೊಯಾನ್‍ನಿಂದ ತುರ್ತು ಆಂಬುಲೆನ್ಸ್ಬೆಂಗಳೂರು: ಜೊಯಾನ್‍ನಿಂದ ತುರ್ತು ಆಂಬುಲೆನ್ಸ್ ಸೇವೆ ಆರಂಭ. ಅಪಘಾತ ಸೇರಿದಂತೆ ಅನಾರೋಗ್ಯ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದ ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ, ಆಂಬುಲೆನ್ಸ್ ಸಂಚಾರಕ್ಕೆ ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದರು.

ನಗರದ ಕಮ್ಮನಹಳ್ಳಿಯಲ್ಲಿರುವ ಜಿಯಾನ್ ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಜಿಯಾನ್ ಆಸ್ಪತ್ರೆ ಈ ಪ್ರದೇಶದಲ್ಲಿ 15 ವರ್ಷಗಳಿಂದ ಬಡವ- ಧನಿಕನೆನ್ನದೆ ಸರ್ವರನ್ನೂ ಸಮಾನವಾಗಿ ಕಂಡು ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದರಲ್ಲದೆ, ತಮ್ಮ ಕ್ಷೇತ್ರದಲ್ಲಿ ಈ ಆಸ್ಪತ್ರೆಯು ಎರಡು ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸುತ್ತಿರುವುದು ತಮಗೆ ಹರ್ಷ ತಂದಿದೆ ಎಂದರು.

ಇಂದು ಬೃಹತ್ ಆಸ್ಪತ್ರೆಗಳ ನಡುವೆ ಮಧ್ಯಮ ಆಸ್ಪತ್ರೆಗಳನ್ನು ನಡೆಸುವುದು ಕಷ್ಟಕರವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಜಿಯಾನ್ ಆಸ್ಪತ್ರೆ ಸಾರಿಗೆ, ಸಂಬಳ, ಕಟ್ಟಡ ಬಾಡಿಗೆ ಸೇರಿದಂತೆ ರೋಗಿಗಳಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜೊಯಾನ್‍ನಿಂದ ತುರ್ತು ಆಂಬುಲೆನ್ಸ್ ಸೇವೆ ಆರಂಭ. ಇದೇ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅಪ್ಪಯ್ಯ, ಜಿಯಾನ್ ಆಸ್ಪತ್ರೆಯಲ್ಲಿ ಭೇದಭಾವ ಇಲ್ಲದಂತೆ ಚಿಕಿತ್ಸೆ ನೀಡಲಾಗುತ್ತಿದೆ, ಇಂತಹ ಆಸ್ಪತ್ರೆ ಆಂಬುಲೆನ್ಸ್ ಸೇವೆ ಆರಂಭಿಸಿರುವುದು ಇನ್ನಷ್ಟು ಮಂದಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಕಮ್ಮನಹಳ್ಳಿ ಮಾತ್ರವಲ್ಲದೆ, ದೂರದ ಪ್ರದೇಶಗಳಿಗೂ ತೆರಳಲು ಅತ್ಯಾಧುನಿಕ ವ್ಯವಸ್ಥೆಗಳ ಆಂಬುಲೆನ್ಸ್ ಸಿದ್ಧವಿದೆ ಎಂದು ಹೇಳಿದ ಆಸ್ಪತ್ರೆಯ ನಿರ್ದೇಶಕ ಪಿ.ಪಿ. ರಾಧಾಕೃಷ್ಣ, ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ತಮ್ಮ ಆಸ್ಪತ್ರೆ ವೈದ್ಯರೂ ಸಹ ಸದಾ ಸಿದ್ಧರಿರುತ್ತಾರೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಸಂಪರ್ಕ ಸಂಖ್ಯೆಗಳನ್ನೂ ಆಸ್ಪತ್ರೆ ಹೊಂದಿದೆ ಎಂದು ತಿಳಿಸಿದರು.

ಆರೋಗ್ಯ ಸೇವೆಗಳು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಜಿಯಾನ್ ಆಸ್ಪತ್ರೆ, 2021ರ ವೇಳೆಗೆ ಇನ್ನೂ ಐದು ಆಂಬುಲೆನ್ಸ್ ಸೇವೆಗಳನ್ನು ಆರಂಭಿಸಲು ಉದ್ದೇಶಿಸಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಆಶಾ ಜಯರಾಂ ತಿಳಿಸಿದರು.

ರೋಗಿ, ರೋಗಿಯ ಕುಟುಂಬ ಮತ್ತು ವೈದ್ಯ ವೃಂದ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ರೋಗಿಯ ಚೈತನ್ಯ ಹೆಚ್ಚುತ್ತದೆ. ಇಂತಹ ಪ್ರಯತ್ನದಲ್ಲಿ ಜಿಯಾನ್ ಆಸ್ಪತ್ರೆ ಮುಂದಡಿ ಇರಿಸಿದ್ದು, ತಮ್ಮ ಆಸ್ಪತ್ರೆಯು ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವಲ್ಲಿ ಪ್ರಮುಖಪಾತ್ರವಹಿಸಿದೆ ಎಂದು ಆಶಾ ತಿಳಿಸಿದರು.

ಸಮಾರಂಭದಲ್ಲಿ ಟ್ರಸ್ಟ್ ಫಾರ್ಮಸಿ ಅಧ್ಯಕ್ಷ ಗೋತ್ರಾ ಸೇರಿದಂತೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮತ್ತು ಗಣ್ಯರು ಉಪಸ್ಥಿತರಿದ್ದರು.

Share this: