Vydyaloka

ವೈದ್ಯರ ದಿನಾಚರಣೆ – ಜೀವ ಉಳಿಸುವ ವೈದ್ಯರಿಗೆ ಗೌರವ ಅರ್ಪಣೆ

ಬೆಂಗಳೂರು , ಜುಲೈ, 13: ಜೀವ ರಕ್ಷಕರು ಹಾಗೂ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಋಣ ಸಂದಾಯ ಮಾಡುವ ವೈದ್ಯರಿಗೆ ಗೌರವ ಸಲ್ಲಿಸುವುದು ನಾಗರೀಕ ಸಮಾಜದ ಕರ್ತವ್ಯ.
ಈ ಹಿನ್ನೆಲೆಯಲ್ಲಿ ನಾಡಿನ ಜನಪ್ರಿಯ ಆರೋಗ್ಯ ಮಾಸ ಪತ್ರಿಕೆಗಳಾದ ವೈದ್ಯ ಲೋಕ (ಕನ್ನಡ)ಹಾಗೂ ಹೆಲ್ತ್ ವಿಷನ್ (ಇಂಗ್ಲಿಷ) , ಭಾರತೀಯ ವೈದ್ಯಕೀಯ ಸಂಘ ಹಾಗೂ ‘ಸಾಯಿ ಹಸ್ತ’ ಸ್ವಯಂ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಯ ಸಮೀಪದ ಐಎಮ್ಎ ಸಭಾಂಗಣದಲ್ಲಿ ಶುಕ್ರವಾರ (14-07-2023) ಸಂಜೆ ಮೂರು ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
ವೈದ್ಯಕೀಯ ಕ್ಷೇತ್ರದ ಗಣ್ಯರು, ಸಾಧಕರು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಆರೋಗ್ಯ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಾಡಿನ ಗಣ್ಯ ವ್ಯದ್ಯರುಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಸೇವಾ ಹಸ್ತ ಸಂಸ್ಥೆಯ ಮನೀಶ್ ಸೂರ್ಯ ಹೇಳಿದ್ದಾರೆ

 

Share this: