Vydyaloka

ವೈದ್ಯಲೋಕ ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರ ಸ್ಪರ್ಧೆಗಳು – 2026

Vydyalōka vyaṅgyacitra mattu chāyācitra spardhegaḷu – 2026 #vydyaloka #healthvision #cartoon #photography #competition

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ “ವೈದ್ಯಲೋಕ ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರ ಸ್ಪರ್ಧೆಗಳು – 2026”. 

ಬೆಂಗಳೂರು: ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ “ರಾಜ್ಯ ಮಟ್ಟದ ವೈದ್ಯಲೋಕ ವ್ಯಂಗ್ಯಚಿತ್ರ ಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆ – 2026” ಅನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ. ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ಮತ್ತು ಮೀಡಿಯಾ ಐಕಾನ್ ಈ ಸ್ಪರ್ಧೆಗಳಿಗೆ ಸಹಯೋಗ ನೀಡುತ್ತಿವೆ.

ಸ್ಪರ್ಧೆಗಳ ಉದ್ದೇಶ:
ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರಗಳ ಮೂಲಕ ಆರೋಗ್ಯಕರ ಜೀವನಶೈಲಿ, ಸ್ವಚ್ಛತೆ, ಮಾಲಿನ್ಯ ನಿಯಂತ್ರಣ, ಧೂಮಪಾನ-ಮದ್ಯಪಾನದ ದುಷ್ಪರಿಣಾಮ, ಯೋಗ-ವ್ಯಾಯಾಮ, ಪೌಷ್ಟಿಕ ಆಹಾರ, ಸಾರ್ವಜನಿಕ ಆರೋಗ್ಯ ಸೇವೆಗಳು ಮತ್ತು ಆಸ್ಪತ್ರೆಗಳ ವಾಸ್ತವ ಸ್ಥಿತಿಯಂತಹ ವಿಷಯಗಳನ್ನು ಸೃಜನಾತ್ಮಕವಾಗಿ ಸಮಾಜಕ್ಕೆ ತಲುಪಿಸುವುದು ಈ ಸ್ಪರ್ಧೆಗಳ ಮುಖ್ಯ ಉದ್ದೇಶವಾಗಿದೆ.

ಯಾರು ಭಾಗವಹಿಸಬಹುದು:
• ವ್ಯಂಗ್ಯಚಿತ್ರ ಸ್ಪರ್ಧೆ: ಎಲ್ಲಾ ವ್ಯಂಗ್ಯಚಿತ್ರಕಾರರು, ವೈದ್ಯರು, ಆರೋಗ್ಯ ವೃತ್ತಿಪರರು, ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು.
• ಛಾಯಾಚಿತ್ರ ಸ್ಪರ್ಧೆ: ಛಾಯಾಗ್ರಾಹಕರು, ವೈದ್ಯರು, ಆರೋಗ್ಯ ವೃತ್ತಿಪರರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಛಾಯಾಗ್ರಾಹಕರು.

ಪ್ರಮುಖ ವಿಷಯಗಳು:
ಆರೋಗ್ಯ ಸಮಸ್ಯೆಗಳು, ಪರಿಸರ ಆರೋಗ್ಯ, ಸ್ವಚ್ಛತೆ-ನೈರ್ಮಲ್ಯ, ಯೋಗ-ವ್ಯಾಯಾಮ, ಪೌಷ್ಟಿಕ ಆಹಾರ, ಧೂಮಪಾನ-ಮದ್ಯಪಾನ-ಮಾದಕ ವ್ಯಸನದ ವಿರುದ್ಧ ಜಾಗೃತಿ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತರ ಸೇವೆ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸೃಜನಾತ್ಮಕ ವಿಷಯ.

ಸಾಮಾನ್ಯ ನಿಯಮಗಳು:
• ಒಬ್ಬ ಸ್ಪರ್ಧಿ ಪ್ರತಿ ಸ್ಪರ್ಧೆಗೆ ಗರಿಷ್ಠ 3 ಚಿತ್ರಗಳನ್ನು ಮಾತ್ರ ಕಳುಹಿಸಬಹುದು.
• ಎಲ್ಲಾ ಚಿತ್ರಗಳು ಸ್ವರಚಿತ/ಸ್ವತಃ ತೆಗೆದ ಮೂಲ ಕೃತಿಗಳಾಗಿರಬೇಕು ಮತ್ತು ಈ ಹಿಂದೆ ಪ್ರಕಟವಾಗಿರಬಾರದು.
• ವ್ಯಂಗ್ಯಚಿತ್ರಗಳು A4/A3 ಗಾತ್ರ, 300 DPI. ಛಾಯಾಚಿತ್ರಗಳು ಉತ್ತಮ ಗುಣಮಟ್ಟದ JPEG/PNG.
• ಪ್ರತಿ ಚಿತ್ರದೊಂದಿಗೆ ವಿಷಯದ ಬಗ್ಗೆ 2-3 ಸಾಲಿನ ವಿವರಣೆ ಕಡ್ಡಾಯ.
• ಸ್ಪರ್ಧಿಯ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಲಗತ್ತಿಸಬೇಕು.
• ಎಲ್ಲಾ ವ್ಯಂಗ್ಯಚಿತ್ರಗಳನ್ನು ಮತ್ತು ಛಾಯಾಚಿತ್ರಗಳನ್ನು ಇ-ಮೇಲ್ ಮೂಲಕವೇ ಕಳುಹಿಸತಕ್ಕದ್ದು.

ಬಹುಮಾನಗಳು:
ಪ್ರತಿ ಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ 2 ಸಮಾಧಾನಕರ ಬಹುಮಾನಗಳಿವೆ. ವಿಜೇತರಿಗೆ ಬಹುಮಾನ, ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಆಯ್ಕೆಯಾದ ಎಲ್ಲಾ ಚಿತ್ರಗಳನ್ನು ಕರ್ನಾಟಕದ ಪ್ರಮುಖ ಆರೋಗ್ಯ ಮಾಸಪತ್ರಿಕೆ ‘ವೈದ್ಯಲೋಕ’ದಲ್ಲಿ ಪ್ರಕಟಿಸಲಾಗುವುದು.

ಕೊನೆಯ ದಿನಾಂಕ: ಎರಡೂ ಸ್ಪರ್ಧೆಗಳಿಗೆ ಚಿತ್ರ ಕಳುಹಿಸಲು ಕೊನೆಯ ದಿನಾಂಕ 31 ಆಗಸ್ಟ್ 2026.

“ನಿಮ್ಮ ಪೆನ್ನು ಮತ್ತು ಕ್ಯಾಮೆರಾದ ಮೂಲಕ ಆರೋಗ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸಿ!”

ಸಂಚಾಲಕರು
ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್
ಬೆಂಗಳೂರು ಹೆಲ್ತ್ ಫೌಂಡೇಶನ್.

ಕಳುಹಿಸಬೇಕಾದ ವಿಳಾಸ:
ಇ-ಮೇಲ್: mediaicon@ymail.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀಕೃಷ್ಣ ಎಂ: 81975 54373
ಎನ್.ವಿ. ರಮೇಶ್: 98455 65238

Share this: