ಗರ್ಭಿಣಿಯರಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ  ಸಮಸ್ಯೆ-ಸರಳ ಪರಿಹಾರ ಏನು?

ಗರ್ಭಿಣಿಯರಲ್ಲಿ ವಾಂತಿ  ಮತ್ತು ತಲೆಸುತ್ತುವಿಕೆ  ಸಮಸ್ಯೆಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ  ತೀರಾ ಸಾಧಾರಣ.ಕೆಲವೊಮ್ಮೆ ತೀವ್ರ ತಲೆಸುತ್ತುವಿಕೆ ಮತ್ತು ವಾಂತಿ ಕಾಣಿಸಿಕೊಂಡು ಅತಿಸಾರ ಮತ್ತು ಅಪೌಷ್ಟಿಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ಗರ್ಭಿಣಿಯರಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ  ಸಮಸ್ಯೆ-ಸರಳ ಪರಿಹಾರ ಏನು?/vomiting problem during pregnancy

ಗರ್ಭಿಣಿಯರಲ್ಲಿ ವಾಂತಿ  ಮತ್ತು ತಲೆಸುತ್ತುವಿಕೆ  ಸಮಸ್ಯೆಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ   ಸಾಮಾನ್ಯವಾಗಿ ಕಂಡುಬರುತ್ತದೆ. ಗರ್ಭಾವಸ್ಥೆಯ ಮೊದಲ 4ನೇ-8ನೇ ವಾರದಲ್ಲಿ ಇದು ಕಾಣಿಸಿಕೊಂಡು 16ನೇ ವಾರದಿಂದ 20ನೇ  ವಾರದ ತನಕ ಮುಂದುವರೆಯುತ್ತದೆ. ಬೆಳಗಿನ ಸಮಯದಲ್ಲಿ ತಲೆ ಸುತ್ತುವಿಕೆ ಮತ್ತು ವಾಂತಿ ತೀರಾ ಸಾಧಾರಣ. ಕೆಲವೊಮ್ಮೆ ತೀವ್ರ ತಲೆಸುತ್ತುವಿಕೆ ಮತ್ತು ವಾಂತಿ ಕಾಣಿಸಿಕೊಂಡು ಅತಿಸಾರ ಮತ್ತು ಅಪೌಷ್ಟಿಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ಕಾರಣಗಳು:

1. ಹಾರ್ಮೋನುಗಳ ಬದಲಾವಣೆ

2. ಅರಂಭಿಕ ಹಂತದ ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶ

3. ಭಾವನಾತ್ಮಕ ಒತ್ತಡ, ಪ್ರಯಾಣ ಅಥವಾ ಆಹಾರ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುವಿಕೆ

ತಲೆಸುತ್ತುವಿಕೆ ಮತ್ತು ವಾಂತಿ ನಿಯಂತ್ರಣಕ್ಕೆ ಸರಳ ಪರಿಹಾರ:

1. ಬೆಳಿಗ್ಗೆ ಹಾಸಿಗೆಯಿಂದ ಏಳುವುದಕ್ಕೂ ಮುನ್ನ ಡ್ರೈ ಟೋಸ್ಟ್ ಅಥವಾ ಸಾಧಾರಣ ಬಿಸ್ಕತ್ ಸೇವಿಸಬೇಕು.

2. ಮಲಗಿದಾಗ ನಿಧಾನವಾಗಿ ಏಳಲು ಸಮಯ ನೀಡಬೇಕು.

3. ಹಲವಾರು ಬಾರಿ ಬೃಹತ್ ಪ್ರಮಾಣದಲ್ಲಿ ಆಹಾರ ಸೇವಿಸುವ ಬದಲು ಅಗಾಗ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಆದರೆ, ಆಹಾರ ಸೇವಿಸುವುದನ್ನು ನಿಲ್ಲಿಸಬಾರದು.

4. ನಿಮಗೆ ವಾಕರಿಕೆ ಬರಿಸುವ ಆಹಾರ ಮತ್ತು ವಾಸನೆಯಿಂದ ಸಾಧ್ಯವಾದಷ್ಟು ದೂರವಿರಿ.

5. ದ್ರವ ರೂಪದ ಆಹಾರಗಳನ್ನು ಯೆಥೇಚ್ಚವಾಗಿ ಸೇವಿಸಿ.

6. ಅಗತ್ಯವಿರುವಾಗಲೆಲ್ಲ ನೀವು ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಚೆನ್ನಾಗಿ ನಿದ್ರಿಸಬೇಕು.

7. ಧಾನ್ಯಗಳು, ಕಾಳುಗಳು, ಬೀಜಗಳು ಮತ್ತು ಸೊಪ್ಪುಗಳಂಥ ಆಹಾರದಲ್ಲಿ ವಿಟಮಿನ್ ಬಿ16 ಸಮೃದ್ಧವಾಗಿರುತ್ತದೆ. ಶುಂಠಿ ಮತ್ತು ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.

Also Read: ಆಯುರ್ವೇದದಲ್ಲಿ ಬಾಣಂತಿಯರ ಆಹಾರ 

ನೀವು ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು ?

1. ತಲೆ ಸುತ್ತುವಿಕೆ ಮತ್ತು ವಾಂತಿ ಸಮಸ್ಯೆಯ ಲಕ್ಷಣಗಳನ್ನು ನಿವಾರಿಸುವಲ್ಲಿ ಮೇಲಿನ ಕ್ರಮಗಳು ವಿಫಲವಾದಾಗ ತಜ್ಞರನ್ನು ಸಂಪರ್ಕಿಸಬೇಕು.

2. ಒಂದು ದಿನಕ್ಕೆ ನೀವು ಮೂರಕ್ಕಿಂತ ಹೆಚ್ಚು ಬಾರಿ ವಾಂತಿ ಮಾಡಿಕೊಳ್ಳುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡಬೇಕು.

3. ನಿಮ್ಮ ಹೊಟ್ಟೆಯಲ್ಲಿ ಆಹಾರ ಮತ್ತು ದ್ರವ ಉಳಿಯದಿದ್ದರೆ/ಅತಿಸಾರ ಕಂಡು ಬಂದರೆ, ವೈದ್ಯರನ್ನು ಸಂಪರ್ಕಿಸಿ.

 

 

 

 

 

 

 

 

 

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!