Vydyaloka

ವಿಶೇಷಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಯಕ್ಷಗಾನ ಕಾರ್ಯಕ್ರಮ

ವಿಶೇಷಚೇತನ ಮಕ್ಕಳ ಸಮಾಜ ಸೇರ್ಪಡೆ ಅಂದರೆ inclusion in the society ಗಾಗಿ ಅರಿವು ಮೂಡಿಸುವ ಸಲುವಾಗಿ, ಅಮರ ಸೌಂದರ್ಯ ಫೌಂಡೇಶನ್ (ಬುದ್ಧಿಮಾಂದ್ಯ ಮಕ್ಕಳ ಶಾಲೆ) ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ *ಜಡಭರತ* ( ಶ್ರೀಧರ ಡಿ.ಯಸ್. ರಚನೆ) ಯಕ್ಷಗಾನ ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲು ತೀರ್ಮಾನಿಸಿದೆ.

ಬೆಂಗಳೂರು: ಹುಟ್ಟು ಆಕಸ್ಮಿಕ, ಇಂತಹುದೇ ರೂಪ ಧರಿಸಿ ಮಗುವೊಂದು ಜನಿಸಬಹುದೆಂಬ ಕಲ್ಪನೆ ಅಸಾಧ್ಯ. ಹೆಡ್ಡ , ದಡ್ಡ, ಹುಚ್ಚ , ಬುದ್ದಿಮಾಂದ್ಯ … ಇವು, ವಿಕೃತ ಮನಸ್ಸಿಗೆ ಖುಷಿ ಕೊಡುವ ಕೆಲವು ಶಬ್ದಗಳು . ಕಲಿಕಾ ಸಾಮರ್ಥ್ಯ ಕಡಿಮೆ ಇರುವ ಮಕ್ಕಳನ್ನು ಸಮಾಜದಲ್ಲಿ ಬುದ್ದಿವಂತರೆನಿಸುವವರು ಬೈದದ್ದನ್ನು ನಾವು ನೀವು ಕೇಳಿರಬಹುದು. ಬಹುಶಃ ಹೀಯಾಳಿಸಿದಾಗ ಆ ಮುಗ್ದ ಮನದಲ್ಲಿ ಎಂತಹ ನೋವು ಉಂಟಾಗಿರಬಹುದು ಅಲ್ಲವೆ?

ಶಾಲೆಯಲ್ಲಿರುವಾಗ ಕೆಲವು ಶಿಕ್ಷಕರು ಕಲಿಕಾ ಸಾಮರ್ಥ್ಯ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಹೀಗೆ ಬೈದದ್ದನ್ನು ನಾವು ನೀವು ಕೇಳಿರಬಹುದು. ಬಹುಶಃ ಆ ಶಿಕ್ಷಕರು ಇಂತಹ ವಿದ್ಯಾರ್ಥಿಗಳ ಏಳಿಗೆಗಾಗಿ ಹೀಗೆ ಹೇಳಿರಬಹುದು ಎಂದು ಭಾವಿಸೋಣ. ಆದರೆ ಎಲ್ಲಾ ಸ್ನೇಹಿತರು ಹಾಗೂ ಸಹಪಾಠಿಗಳ ಮುಂದೆ ಹೀಗೆ ಶಿಕ್ಷಕರು ಹೀಯಾಳಿಸಿದಾಗ ಆ ವಿದ್ಯಾರ್ಥಿಯ ಮನದಲ್ಲಿ ಎಂತಹ ನೋವು ಉಂಟಾಗಿರಬಹುದು ಅಲ್ಲವೆ? ಬೇರೆಯವರಂತೆ ತನಗೂ ಕಲಿಯುವ ಆಸೆ ಎಲ್ಲರಂತೆ ಬುದ್ಧಿವಂತ ಎನಿಸಿಕೊಳ್ಳಲು ಆಸೆ ಆದರೆ ಸಾಮರ್ಥ್ಯವಿಲ್ಲ. ಇದರ ಜೊತೆ ಪೋಷಕರಿಗೂ ಸಹ ಅದೇ ನೋವು ಕಾಡುತ್ತಿರುತ್ತದೆ.

ಇದು ವಿಶೇಷಚೇತನ ಮಕ್ಕಳ ಒಂದು ಸಣ್ಣ ಉದಾಹರಣೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಇನ್ನೂ ಹಲವು. ಸ್ವಲೀನತೆ ಅಂದರೆ ಆಟಿಸಂ (down syndrome), ಕಲಿಕಾ ಸಾಮರ್ಥ್ಯ ಕುಂಠಿತಗೊಂಡಿರುವುದು (Learning difficulties) ಮತ್ತು ಮಾನಸಿಕ ಕುಂಠಿತ (mental retardation) ಹೊಂದಿರುವ ಮಕ್ಕಳಿಗೆ ಶಿಕ್ಷಣ, ಥೆರಪಿ ಜೊತೆಗೆ ವೃತ್ತಿಪರ ತರಬೇತಿ ಕೊಟ್ಟು ಆ ಮಕ್ಕಳನ್ನು ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಹಾಗೂ ಏಳಿಗೆಗಾಗಿ ಮತ್ತು ಪೋಷಕರ ಸಹಾಯಕ್ಕಾಗಿ ಕಳೆದ 14 ವರ್ಷದಿಂದ ನಿರಂತರ ದುಡಿಯುತ್ತಿರುವ ಅಮರ ಸೌಂದರ್ಯ ಫೌಂಡೇಶನ್ ಇಂತಹ ಮಕ್ಕಳನ್ನು ಸಮಾಜದ ಸೇರ್ಪಡೆ ಅಂದರೆ inclusion in society ಗಾಗಿ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವಿವಿಧ ರೀತಿಯಲ್ಲಿ ಮಾಡಿಕೊಂಡು ಬಂದಿರುತ್ತದೆ.

ನಿರ್ಮಲಾ ಅಮರನಾಥ್ – ಅಮರ ಸೌಂದರ್ಯ ಫೌಂಡೇಶನ್ ಸ್ಥಾಪಕರು

ಈ ಬಾರಿ ಕೋವಿಡ್ ಸಮಸ್ಯೆ ಇರುವುದರಿಂದ ಇದರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ಪ್ರಸಾರಮಾಡಲು ಇಚ್ಚಿಸಿದ್ದು, ಸಮಾಜಮುಖಿ ಪ್ರಸಂಗಗಳನ್ನು ಒಳಗೊಂಡು ದೇಶವಿದೇಶಗಳಲ್ಲಿ ಹೆಸರುಮಾಡಿರುವ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ *ಜಡಭರತ* ಎಂಬ ಇತಿಹಾಸ ಪ್ರಸಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲು ತೀರ್ಮಾನಿಸಿದೆ. ಅಂದಾಜು 15 ರಿಂದ 20 ಸಾವಿರ ಜನ ವೀಕ್ಷಿಸುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮಕ್ಕೆ ಜೊತೆಯಾಗಿ ನಿಲ್ಲುವುದರೊಂದಿಗೆ ಕಲಾವಿದರ ಸಹಯಕ್ಕೂ ನಿಂತಂತಾಗುತ್ತದೆ.

ಬನ್ನಿ ಗೆಳೆಯರೇ ನಾವು ನೀವೆಲ್ಲ ಸೇರಿ ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗೆ ಹಾಗೂ ಪೋಷಕರ ಸಹಾಯಕ್ಕೆ ನಿಲ್ಲೋಣ. ಸಮಾಜಕ್ಕೆ ಸಣ್ಣ ಸೇವೆ ಮಾಡೋಣ. ಹೆಚ್ಚು ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಮಾಡಿ ನಮ್ಮ ಈ ಸಣ್ಣ ಪ್ರಯತ್ನವನ್ನು ಯಶಸ್ವಿಗೊಳಿಸೋಣ.  ಹೆಚ್ಚಿನ ಮಾಹಿತಿಗೆ ಮತ್ತು ನಮ್ಮ ಬೆಂಬಲಕ್ಕೆ ನಿಲ್ಲಲು ದಯವಿಟ್ಟು ಸಂಪರ್ಕಿಸಿ:
ಅಮರ ಸೌಂದರ್ಯ ಫೌಂಡೇಶನ್ (ವಿಶೇಷ ಚೇತನ ಮಕ್ಕಳ ಶಾಲೆ), 60, 4 A ಕ್ರಾಸ್, RMV ಬೆಂಗಳೂರು. ಫೋನ್ :  90715 56789 / 99450 90350.

Share this: