ವೈರಸ್ ನಿವಾರಣೆಗೆ ಸಹಕಾರಿಯಾಗಬಹುದಾದ ಮನೆಮದ್ದುಗಳು

ವೈರಸ್ ನಿವಾರಣೆಗೆ ಸಹಕಾರಿಯಾಗಬಹುದಾದ ಮನೆಮದ್ದುಗಳು ಭಾರತೀಯರ ಜೀವನಶೈಲಿಯಲ್ಲೇ ಇವೆ. ಕಷಾಯವನ್ನು ಕುಡಿದರೆ  ಹಲವಾರು ರೋಗಗಳನ್ನು ದೂರವಿಡಬಹುದು.

Dr.-Venkatramana-Hegde

ಭಾರತೀಯರ ಜೀವನಶೈಲಿಯಲ್ಲೇ ವೈರಸ್, ಬ್ಯಾಕ್ಟೀರಿಯಾಗಳನ್ನು ನಿವಾರಿಸುವಂತಹ ಆದೆಷ್ಟೋ ಅಂಶಗಳಿವೆ. ಬ್ರಿಟಿಷರು ಬಂದ ನಂತರವಷ್ಟೇ ನಾವೆಲ್ಲಾ ಟೀ ಕುಡಿಯಲು ಪ್ರಾರಂಭಿಸಿದ್ದು. ಅದಕ್ಕೂ ಮೊದಲು ನಾವೆಲ್ಲಾ ಸೇವಿಸುತ್ತಿದ್ದುದು ಕಷಾಯವನ್ನು. ಕೊತ್ತಂಬರಿ, ಜೀರಿಗೆ, ಶುಂಠಿ, ಕಾಳುಮೆಣಸು, ಅರಿಶಿನ, ಜೇಷ್ಠಮಧು ಮುಂತಾದ ಸಾಂಬಾರ ಪದಾರ್ಥಗಳನ್ನು ಹಾಕಿ ಮಾಡುತ್ತಿದ್ದ ಕಷಾಯವು ತುಂಬಾ ಒಳ್ಳೆಯ ವೈರಸ್ ನಿರೋಧಕ. ನಿತ್ಯ ಇವುಗಳ ಸೇವನೆ ಮಾಡುವವರಿಗೆ ವೈರಸ್ ಸುಲಭದಲ್ಲಿ ಹಾನಿ ಮಾಡಲಾಗದು. ಇಂದಿಗೂ ಅದೆಷ್ಟೋ ಹಳ್ಳಿಗಳಲ್ಲಿ ಇಂತಹ ಕಷಾಯವೇ ನಿತ್ಯ ಪೇಯ ಮತ್ತು ಬಹಳಷ್ಟು ವೈರಸ್ ಸಂಬಂಧಿತ ಸಮಸ್ಯೆಗಳಲ್ಲಿ ಇದೇ ಪ್ರಾಥಮಿಕ ಚಿಕಿತ್ಸೆ.

ವೈರಸ್ ನಿವಾರಣೆಗೆ  ಮನೆಮದ್ದುಗಳು:

1.ಅಮೃತಬಳ್ಳಿ, ಶುಂಠಿ ಮತ್ತು ಜೀರಿಗೆ: ವಾರಕ್ಕೊಮ್ಮೆ ಅಮೃತಬಳ್ಳಿ, ಶುಂಠಿ ಮತ್ತು ಜೀರಿಗೆಗಳ ಕಷಾಯವನ್ನು ಕುಡಿದರೆ ಕೇವಲ ವೈರಸ್ ಒಂದೇ ಅಲ್ಲ ಹಲವಾರು ರೋಗಗಳನ್ನು ದೂರವಿಡಬಹುದು.

2. ನೆಲನೆಲ್ಲಿ: ನೆಲನೆಲ್ಲಿಯನ್ನು ಆಗಾಗ ತಂಬುಳಿಯಾಗಿ ಬಳಸುವ ಪದ್ಧತಿ ಮಲೆನಾಡಿನ ಹಳ್ಳಿಗಳಲ್ಲಿದೆ. ಇದು ಒಂದು ರೀತಿಯ ಬಹುವೈರಸ್ ನಿರೋಧಕ ಎನ್ನಬಹುದು. ನೆಗಡಿ, ಲಿವರ್ ಸಮಸ್ಯೆಗಳು, ಗಂಟಲಿನ ಸಮಸ್ಯೆಗಳು, ಗಂಟುಗಳ ಸಮಸ್ಯೆಗಳು, ಜ್ವರ ಮುಂತಾದ ಹಲವು ಸಮಸ್ಯೆಗಳಿಗೆ ಕಾರಣವಾಗುವ ವಿವಿಧ ವೈರಸ್ ಗಳನ್ನು ನಾಶಪಡಿಸುವ ಶಕ್ತಿ ಈ ಗಿಡಕ್ಕಿದೆ. ಯಾವುದೇ ಅಡ್ಡಪರಿಣಾಮ ಬೀರದೇ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

3. ಕಿರಾತ ಕಡ್ಡಿ (ಚಿರಾಯತ): ಜ್ವರ, ನೆಗಡಿ, ವಾಂತಿ, ಅಜೀರ್ಣದ ಸಮಸ್ಯೆಗಳು ವೈರಸ್ ಕಾರಣದಿಂದ ಆಗುತ್ತಿದ್ದರೆ, ಕಿರಾತ ಕಡ್ಡಿ (ಚಿರಾಯತ)ದ ಕಷಾಯ ಮಾಡಿ ಕುಡಿಯುವುದರಿಂದ ತುಂಬಾ ಅನುಕೂಲವಾಗುತ್ತದೆ.

home-remedies

4. ತುಳಸಿ: ನಾಲ್ಕೈದು ತುಳಸಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ನೂರು ಮಿಲೀ ನೀರು ಹಾಕಿ ಕುದಿಸಿ ೨೫ ಮಿಲಿಗೆ ಇಳಿಸಿ ಸೋಸಿ ಅದಕ್ಕೆ ಬೆಲ್ಲ ಹಾಕಿ ಕುಡಿಯುವುದರಿಂದ ನೆಗಡಿ, ದಮ್ಮು, ಕಫ, ಕೆಮ್ಮುಗಳಿಗೆ ಕಾರಣವಾಗುವ ವೈರಸ್ ಗಳ ನಾಶಕ್ಕೆ ಅನುಕೂಲವಾಗುತ್ತದೆ.

5.ಸೋಂಪು: ಸೋಂಪು ಕೇವಲ ಊಟದ ನಂತರ ಬಾಯಿ ವಾಸನೆ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಬಳಸುವುದಲ್ಲ. ಅದು ಶ್ವಾಸಾಂಗವ್ಯೂಹದ ಮೇಲೆ ಆಕ್ರಮಣ ಮಾಡುವ ವೈರಸ್ ಗಳನ್ನು ಕೊಲ್ಲುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

6. ಬೆಳ್ಳುಳ್ಳಿ: ಬೆಳ್ಳುಳ್ಳಿ ಕೂಡಾ ಒಂದು ಒಳ್ಳೆಯ ಬಹುವೈರಸ್ ನಿರೋಧಕ. ಹಸಿ ಬೆಳ್ಳುಳ್ಳಿಯನ್ನು ಜಗಿಯುವುದರಿಂದ ಉಂಟಾಗುವ ಔಷಧೀಯ ಅಂಶವು ಹಲವು ವೈರಸ್ ಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕ. ಹಸಿ ಬೆಳ್ಳುಳ್ಳಿಯನ್ನು ತಿನ್ನಲು ಸಾಧ್ಯವಾಗದೇ ಹೋದರೆ ಬೆಳ್ಳುಳ್ಳಿಯ ಚಟ್ನಿಯಾದರೂ ಆದೀತು.

7. ಲಾವಂಚ ಮತ್ತು ಸೊಗದೇ ಬೇರು: ಮೇಲೆ ಹೇಳಿದ ಬಹುತೇಕ ಔಷಧಗಳು ಉಷ್ಣ ಗುಣವನ್ನು ಹೊಂದಿರುವಂಥವು. ಈ ಬೇಸಿಗೆಯಲ್ಲಿ ಅವು ಔಷ್ಣ್ಯವನ್ನು ಉಂಟುಮಾಡಬಹುದಾಗಿರುವುದರಿಂದ ಕಷಾಯ ಮಾಡುವಾಗ ಲಾವಂಚ ಮತ್ತು ಸೊಗದೇ ಬೇರನ್ನು ಬಳಸಬಹುದು. ಇವಕ್ಕೆ ಸ್ವಲ್ಪ ಮಟ್ಟಿಗೆ ವೈರಸ್ ನಿರೋಧಕ ಗುಣ ಕೂಡ ಇದೆ. ಜೊತೆಗೆ ದೇಹಕ್ಕೆ ತಂಪು ನೀಡುತ್ತವೆ ಮತ್ತು ಜ್ವರ, ತಲೆನೋವುಗಳನ್ನು ಗುಣಪಡಿಸುವ ಶಕ್ತಿ ಕೂಡ ಇದೆ.

8. ಜೇಷ್ಠಮಧು : ಜೇಷ್ಠಮಧು ಸಾರ್ಸ್, ಕೊರೊನಾ ವೈರಸ್ ವಿರುದ್ಧ ಅತ್ಯಂತ ಶಕ್ತಿಶಾಲಿ ನಿರೋಧಕ ಎಂಬುದು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಇದು ಕೂಡಾ ತಂಪು ಗುಣವನ್ನೇ ಹೊಂದಿದ್ದು ಇಡೀ ಶ್ವಾಸಾಂಗವ್ಯೂಹದ ಸಮಸ್ಯೆಗಳ ನಿವಾರಣೆಗೆ ಸಹಕಾರಿ.

immune aid

Dr-Venkatramana-Hegde-nisargamane
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!