Health Vision

ವನಿತೆಯರ ಜೀವನ ಶೈಲಿ

ನಮ್ಮ ವಾಣಿಜ್ಯ-ವಹಿವಾಟು, ಕುಟುಂಬಗಳು ಹಾಗೂ ಸಂಬಂಧಗಳ ನಡುವೆ ಬಹುತೇಕ ಆಧುನಿಕ ಮಹಿಳೆಯರು ಸಮಯದ ಅಭಾವದ ಬಹುಮುಖ ಜೀವನವನ್ನು ನಡೆಸಬೇಕಾಗುತ್ತದೆ. ಇದರ ಅರ್ಥ ಏನೆಂದರೆ, ನಾವು ಏಕ ಕಾಲದಲ್ಲಿ ಒಂದೇ ಒಂದು ಕೆಲಸದತ್ತ ಗಮನ ಕೇಂದ್ರೀಕರಿಸುವುದು ನಮಗೆ ಕಷ್ಟವಾಗುತ್ತಿದೆ. ಜೀವನವು ತುಂಬಾ ಪರಿಪೂರ್ಣ ಮತ್ತು ರೋಮಾಂಚನವಾದುದು. ಬದುಕಿನ ಅಮೂಲ್ಯ ಸಮಯವನ್ನು ಸರಿಯಾಗಿ ಅನುಭವಿಸಲು ಇಲ್ಲಿ ಕೆಲವು ಟಿಪ್ಸ್‍ಗಳನ್ನು ನೀಡಲಾಗಿದೆ:
ನಿಮ್ಮ ಜೀವನ ಶೈಲಿಯನ್ನು ವೃದ್ದಿಸಿಕೊಳ್ಳಿ : ನಿಮ್ಮ ಸಮಯ ಅಭಾವದ ಮತ್ತು ಒತ್ತಡದ ಜೀವನ ಶೈಲಿಯನ್ನು ಸುಧಾರಣೆ ಮಾಡಿಕೊಳ್ಳಿ. ಇದರಿಂದ ನಿಮಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಹಾಗೂ ನಿಮ್ಮ ಒತ್ತಡಗಳು ಮತ್ತು ಚಿಂತೆಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಮುಂಜಾನೆಯೇ ಏಳಿ, ಎರಡು ಲೋಟ ಬೆಚ್ಚಗಿನ ನೀರು ಕುಡಿಯಿರಿ. ಸಮೃದ್ದ ಉಪಾಹಾರ ಮಾಡಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ಪುಸ್ತಕಗಳನ್ನು ಓದಿ, ಸದಾ ಹಸನ್ಮುಖಿಗಳಾಗಿ, ನಿಮ್ಮ ಹವ್ಯಾಸಗಳನ್ನು ಕಂಡುಕೊಳ್ಳಿ. ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.
ಸಂಬಂಧಗಳು : ಸಂಬಂಧ-ಬಾಂಧವ್ಯವನ್ನು ಸಾಮಾನ್ಯವಾಗಿ ವ್ಯಕ್ತಿಗಳ ನಡುವಿನ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ. ಅಂದರೆ ಪ್ರೀತಿ-ಪ್ರಣಯದ ಸಂಬಂಧ, ಪೋಷಕರು-ಮಗುವಿನ ಬಾಂಧವ್ಯ, ವ್ಯಕ್ತಿಗತವಾಗಿ ಜನರ ಸಮೂಹದೊಂದಿಗೆ ಸಂಬಂಧಗಳನ್ನು ಹೊಂದಬಹುದು. ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯಗಳ ಪರಿಣಾಮವು ವ್ಯಕ್ತಿಯ ಆರೋಗ್ಯ ಮತ್ತು ಉತ್ತಮ ಮನಸ್ಥಿತಿಯ ಪ್ರಮುಖ ಭಾಗವಾಗಿದೆ.
ಪೋಷಣೆಯ ಪಾತ್ರ : ಮಹಿಳೆಯರು ಮಕ್ಕಳನ್ನು ಬೆಳೆಸುವುದರಲ್ಲಿ ಹಾಗೂ ಅವರ ಬೆಳವಣಿಗೆಯ ಹಂತಗಳಲ್ಲಿ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವ ಅಗತ್ಯವಿದೆ. ಮಗುವನ್ನು ಆತ್ಮವಿಶ್ವಾಸ ಹಾಗೂ ಎಲ್ಲದಕ್ಕೂ ಹೊಂದಿಕೊಂಡು ಹೋಗುವ ಉತ್ತಮ ಪ್ರಜೆಯನ್ನಾಗಿ ಬೆಳೆಸುವಲ್ಲಿ ಒಳ್ಳೆಯ ಮಾತೆ ಪ್ರಮುಖ ಪಾತ್ರ ವಹಿಸುತ್ತಾಳೆ. ಮಗುವಿನ ಉತ್ತಮ ಪೋಷಣೆಯ ಹೊಣೆ ನಿಮ್ಮ ಮೇಲಿರಲಿ. ಚಿಕ್ಕಂದಿನಿಂದಲೇ ಆರೋಗ್ಯಕರ ಆಹಾರ ಸೇವಿಸುವ ಅಭ್ಯಾಸಗಳನ್ನು ಅಭಿವೃದ್ದಿಗೊಳಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಮೀಸಲಿಡಿ. ಪೋಷಕರಾಗಿ ನಿಮ್ಮ ಮಗುವಿಗೆ ಉತ್ತಮ ಆದರ್ಶ ವ್ಯಕ್ತಿಯು ಮಕ್ಕಳ ಮಹಾ ಆದರ್ಶ ವ್ಯಕ್ತಿಯಾಗುತ್ತಾರೆ ಎಂಬುದನ್ನು ನೆನಪಿಡಿ.
ಸಮಯ ನಿರ್ವಹಣೆ : ಉದ್ಯೋಗಸ್ಥ ಮಾತೆಯರು ಗೃಹ ನಿರ್ವಹಣೆ, ಮಕ್ಕಳ ಪಾಲನೆ-ಪೋಷಣೆಗಳಲ್ಲಿ ವಿಶೇಷವಾಗಿ ತೊಡಗುವ ಸವಾಲಿನಿಂದ ಕೆಲವೊಮ್ಮೆ ಒತ್ತಡಕ್ಕೆ ಸಿಲುಕುತ್ತಾರೆ. ಒತ್ತಡದ ಜೀವನವನ್ನು ಸರಳಗೊಳಿಸಲು ಇಲ್ಲಿ ಮಾರ್ಗಗಳಿವೆ. ಈ ಒತ್ತಡದ ನಡುವೆಯೂ ಸ್ವಲ್ಪಮಟ್ಟಿಗೆ ಖುಷಿ ನೀಡುವ ಸಂಗತಿಯನ್ನು ನಿಮ್ಮದಾಗಿಸಿಕೊಳ್ಳಿ. ಯಾವ ಕೆಲಸ ಮೊದಲು ಮಾಡಬೇಕು ಎಂಬುದನ್ನು ನಿರ್ಧರಿಸಿ, ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಿ. ನಿಮ್ಮ ವೇಳಾಪಟ್ಟಿಯನ್ನು ಅನುಸರಿಸಿ. ನಾಳೆ ಮಾಡಬೇಕಾದ ಕೆಲಸ-ಕಾರ್ಯಗಳಿಗೆ ಇಂದಿನ ರಾತ್ರಿಯೇ ಸಿದ್ದರಾಗಿ. ನಿಮ್ಮ ಮೆನುವಿನ ಬಗ್ಗೆ ಯೋಜನೆ ರೂಪಿಸಿ. ಅದನ್ನು ಪಾಲಿಸಿ. ಆಗ ನಿಮ್ಮ ಕೆಲಸಗಳು ಲಯಬದ್ದವಾಗಿ ಸುಗಮ ರೀತಿಯಲ್ಲಿ ಸಾಗುತ್ತದೆ.
ಫ್ಯಾಷನ್ ಮತ್ತು ಬ್ಯೂಟಿ : ಎಡಬಿಡದ ಕೆಲಸಗಳು ಹಾಗೂ ಸಮಯದ ಅಭಾವವಿರುವ ಒತ್ತಡದ ಜೀವನಶೈಲಿಯೊಂದಿಗೆ ನಿರಂತರ ಹೋರಾಟ ನಡೆಸುವಾಗ ಪ್ರತಿ ಮಹಿಳೆಯರು ಫ್ಯಾಷನ್ ಮತ್ತು ಬ್ಯೂಟಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಫ್ಯಾಷನ್, ಕೂದಲು, ಮೇಕಪ್ ಅಪ್, ಚರ್ಮ ಆರೈಕೆ, ತೂಕ ನಿಯಂತ್ರಣ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಿ. ಮನೆಯಲ್ಲೇ ತಯಾರಿಸಿದ ಅರೋಗ್ಯಕರ ಆಹಾರವನ್ನು ಸೇವಿಸಿ. ಕನಿಷ್ಟ ಒಂದು ಕ್ರಿಯಾಶೀಲ ಹವ್ಯಾಸವನ್ನು ಪಾಲಿಸಿ, ಸಾಕಷ್ಟು ನೀರು ಕುಡಿಯಿರಿ. ಅರೋಗ್ಯಕರ ರಜಾದಿನಗಳು ಹಾಗೂ ಮನಸಿಗೆ ಮುದ ನೀಡುವ ಸಂಗತಿಗಳ ಬಗ್ಗೆ ಯೋಜನೆ ರೂಪಿಸಿ.
ಹೆಲ್ತ್ ಮತ್ತು ಫಿಟ್‍ನೆಸ್ : ಪಥ್ಯಾಹಾರ ಮತ್ತು ವ್ಯಾಯಾಮ ಏಕೆ ಮುಖ್ಯ ಎಂಬುದನ್ನು ತಿಳಿಯಿರಿ. ಅದರಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ. ನಿಮ್ಮ ಆರೋಗ್ಯಕರ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆ ಬಗ್ಗೆ ಆಸಕ್ತಿ ವಹಿಸಿ. ಸಂತೋಷ, ಉಲ್ಲಾಸ ಮತ್ತು ಖುಷಿಯೊಂದಿಗೆ ನಿಮ್ಮ ಆರೋಗ್ಯ ಮತ್ತು ಫಿಟ್‍ನೆಸ್‍ನನ್ನು ಉತ್ತೇಜಿಸಿ. ಕ್ರಿಯಾಶೀಲರಾಗಿರಲು ಹಾಗೂ ನಿಮ್ಮ ಸಮಗ್ರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುವ ಪ್ರಾಯೋಗಿಕ ಆಲೋಚನೆಗಳನ್ನು ಅನುಷ್ಠಾನಗೊಳಿಸಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಡಿಪಾರ್ಟ್‍ಮೆಂಟ್ ಆಫ್ ಗೈನೋಕೋಲಾಜಿ
ವೈದೇಹಿ ಆಸ್ಪತ್ರೆ
ವೈಟ್‍ಫೀಲ್ಡ್, ಬೆಂಗಳೂರು-560066
ಫೋನ್ : 080-28413381/2/3/4

Back To Top