ನಗರದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಜ್ಯ ಪ್ರಾದೇಶಿಕ ಮತ್ತು ತರಬೇತಿ ಕೇಂದ್ರ ಹಾಗೂ ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ಆಯೋಜಿಸಲಾಗಿದ್ದ, ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಯೋಸಹಜವಾಗಿ ಬೇಗ ಆಕರ್ಷಣೆಗೆ ಒಳಗಾಗುತ್ತಾರೆ. ಒಂದು ಬಾರಿ ಮಾದಕ ವಸ್ತುಗಳಿಗೆ ಶರಣಾದರೆ ಮತ್ತೆ ಅದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಕೆಲವು ಚಲನಚಿತ್ರಗಳ ದೃಶ್ಯಗಳು ವಿದ್ಯಾರ್ಥಿಗಳನ್ನು ಮಾದಕ ವಸ್ತಗಳ ಕಡೆಗೆ ಸೆಳೆಯುತ್ತವೆ. ಆದ್ದರಿಂದ ಅಂತಹ ಚಲನಚಿತ್ರಗಳಿಂದ ದೂರವಿರಬೇಕು. ಮಾದಕ ವಸ್ತುಗಳಿಂದ ದೂರವಿರುವ ಜೊತೆಗೆ ನಿಮ್ಮ ಜೊತೆಗಿರುವವರಿಗೂ ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ತಾಜ್ ಉನ್ನೀಸಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜವಾಬ್ಧಾರಿಯನ್ನು ಅರಿತು ನಡೆಯಬೇಕು. ಯಾವುದೇ ವ್ಯಕ್ತಿ ಮಾದಕ ವಸ್ತುವಿಗೆ ಶರಣಾಗಿದ್ದರೆ ಅದರಿಂದ ಹೊರತರಲು ಪ್ರಯತ್ನಿಸಬೇಕು. ಬದುಕಿನಲ್ಲಿ ನಾವೆಲ್ಲರೂ ನಮ್ಮ ಜವಾಬ್ಧಾರಿಗಳನ್ನು ಪೂರೈಸಬೇಕು. ಇಲ್ಲದಿದ್ದರೆ ನಾವು ಪ್ರಾಣಿಗಳಿಗೂ ಕಡೆಯಾಗುತ್ತೇವೆ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ವಿ.ಎಂ ಶಶಿಕುಮಾರ್, ಪ್ರೊ.ಹುನಗುಂದ, ಡಾ.ಗಂಗಾಧರ್ ವರ್ಮ ಮತ್ತಿತರರಿದ್ದರು.