Health Vision

Health Vision

SUBSCRIBE

Magazine

Click Here

ಆತ್ಮಹತ್ಯೆ ತಡೆಗಟ್ಟಬಹುದಾ?

“ಆತ್ಮಹತ್ಯೆ ತಡೆಗಟ್ಟುವಿಕೆ”- ನಮ್ಮನಿಮ್ಮೆಲರ ಧ್ಯೇಯ ವಾಕ್ಯವಾದರೆ ಒಂದು ಸಢೃಡವಾದ ಸಮಾಜ ಹಾಗು ವಿಶ್ವವನ್ನ ಕಟ್ಟುವಲ್ಲಿ ನೆರವಾಗುತ್ತದೆ. ಇಂದು ಎಷ್ಟೋ ಜನರು ಗೊತ್ತಿದ್ದೊ ಗೊತ್ತಿಲ್ಲದೆಯೋ ಇದಕ್ಕೆ ಶರಣಾಗಿ ಅಮೂಲ್ಯವಾದ ಜೀವನ ಕಳೆದುಕೊಳ್ಳುತ್ತಿದ್ದಾರೆ.

 • ಇದು ಎಲ್ಲಿ ಮತ್ತು ಹೇಗೆ ಉದ್ಭವಿಸುತ್ತದೆ?
  ಆತ್ಮಹತ್ಯೆ ವಿಚಾರವು ಮಿದುಳಿನ ಲವಣಾಂಶಗಳಾದ ಸರ್ಟೋನಿನ್ ಹಾಗು ಡೋಪಮಿನ್ ಗಳ ಉತ್ಪಾದನೆಯಲ್ಲಿ ವ್ಯತ್ಯಾಸ ಕಂಡು ಬಂದಾಗ ಬರುತ್ತದೆ. ಇದರ ಮುನ್ಸೂಚಕಗಳು ಕೆಳಗಿನಂತೆ ಇವೆ:
  ಮುಂಚೆ ಇದ್ದ ಉತ್ಸಾಹ ಕಡಿಮೆಯಾಗುತ್ತ ಹೋಗುತ್ತದೆ
  ಅತಿಯಾದ ನಿರಂತರ ಬೇಜಾರು ಅಥವಾ ನಿರಂತರ ದುಃಖ
  ಜೀವಿಸೋದು ವ್ಯರ್ಥವೆನಿಸುವುದು
  ನಿದ್ದೆ ಹಾಗು ಹಸಿವಿನಲ್ಲಿ ವ್ಯತ್ಯಾಸ ಉಂಟಾಗುವುದು
  ದೈನಂದಿನ ಚಟುವಟಿಕೆ, ಮನೆಗೆಲಸ ಇತ್ಯಾದಿ ಕೆಲಸಗಳಲ್ಲಿ ಉತ್ಸಾಹ ಇಲ್ಲದಿರುವುದು
  ಪಾಪ ಪ್ರಜ್ಞೆ ಹಾಗು ನಿಶ್ಪ್ರಯೋಜಕತೆಯ ಭಾವ
  ಕಿರಿ ಕಿರಿ, ತಳಮಳ, ಅತಿಯಾದ ಆಯಾಸ ಹಾಗು ಏಕಾಗ್ರತೆ ಕೊರತೆ.

 ಯಾರಲ್ಲಿ ಕಂಡು ಬರಬಹುದು?
ಕಿರಿಯ ವಯಸ್ಸಿನಿಂದ ಹಿಡಿದು ಹಿರಿಯ ವಯಸ್ಸಿನವರೆಗೆ ಯಾರಲ್ಲಿಯಾದರೂ ಕಂಡುಬರಬಹುದು. ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಆತ್ಮಹತ್ಯೆ ವಿಚಾರ ಕಂಡುಬಂದರೆ, ಗಂಡು ಹುಡುಗರಲ್ಲಿ ಆತ್ಮಹತ್ಯೆಯ ಪ್ರಯತ್ನ ಹೆಚ್ಚಾಗಿರುತ್ತದೆ. ಬಹುಶಃ ಇದು ಹಾರ್ಮೋನ್ ಗಳ ವ್ಯತ್ಯಾಸ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.
ಕೆಲವೊಂದು ಬಾರಿ ನಾವು ಕಂಡಿರುತ್ತೇವೆ ಅಥವಾ ಕೇಳಿರುತ್ತೇವೆ ಇಷ್ಟು ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡರೆ? ಎಂದು ಅದಕ್ಕೆ ಮುಖ್ಯ ಕಾರಣ ತೀವ್ರ ಖಿನ್ನತೆ ಎಂಬ ಮಾನಸಿಕ ಕಾಯಿಲೆ.ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ (ಅಂದರೆ ವಂಶಸ್ಥರಲ್ಲಿ ಯಾರಿಗಾದರೂ ಮಾನಸಿಕ ಕಾಯಿಲೆ ಇರುವಿಕೆ ಅಥವಾ ಆತ್ಮಹತ್ಯೆ ವಿಚಾರ ಇರುವಿಕೆ ಅಥವಾ ಮಾಡಿಕೊಂಡಿರುವಿಕೆ) ಮತ್ತು ಪರಿಸರದ ಪ್ರಭಾವ. ಆದಕಾರಣ ಮನುಷ್ಯನನ್ನ ತೆಗಳದೆ ಕಾಯಿಲೆ ಅಂತ ಪರಿಗಣಿಸಿ ಸೂಕ್ತ ಪರಿಹಾರ ಕಂಡುಕೊಂಡರೆ ಬಾಳು ಬೆಳಗುತ್ತದೆ.
ಇನ್ನುಳಿದ ಮಾನಸಿಕ ಕಾಯಿಲೆಯಲ್ಲೂ ಸಹ ಈ ಆತ್ಮಹತ್ಯೆ ವಿಚಾರ ಕಂಡುಬರಬಹುದು. ಅವು ಇಚ್ಚಿತ್ತ ಮನಸ್ಸು (ಸಂಶಯ, ದ್ವನಿ ಕೇಳುವುದು ಕೆಲವೊಮ್ಮೆ ಈ ದ್ವನಿಗಳು ಆತ್ಮಹತ್ಯೆಗೂ ಕೂಡ ಪ್ರೇರೇಪಿಸಬಹುದು, ತನ್ನೊಳಗೆ ತಾನಿರುವುದು ಇತ್ಯಾದಿ), ಬೈಪೋಲಾರ್ ಖಿನ್ನತೆ (ಅತೀ ದುಃಖ ಹಾಗು ಅತೀ ಖುಷಿಯ ಎರಡು ವಿಧ ಒಬ್ಬರಲ್ಲಿ ಬೇರೆ ಬೇರೆ ಸಮಯದಲ್ಲಿ ಕಾಣಿಸುವಿಕೆ, ಅತಿಯಾದ ಸಿಟ್ಟು, ಅಸಭ್ಯ ಮಾತು ಇತ್ಯಾದಿ), ಗೀಳು (ಪದೆ ಪದೆ ಬೇಡವಾದ ವಿಚಾರ ಬರುವುದು ಹಾಗು ಮಾಡಿದ್ದೆ ಮಾಡುವುದು), ಸಂಕೀರ್ಣ ಪ್ರತಿಕ್ರಿಯೆ (complicated grief reaction, ಇದ್ದಕ್ಕಿದ್ದ ಹಾಗೆ ಆತ್ಮೀಯರನ್ನ ಕಳೆದುಕೊಂಡಾಗ ಆಗುವ ಪ್ರತಿಕ್ರಿಯೆ) ಇತ್ಯಾದಿ ಮಾನಸಿಕ ಕಾಯಿಲೆಗಳಲ್ಲಿ ಸಹ ಆತ್ಮಹತ್ಯೆ್ಯೆ ವಿಚಾರ ಕಂಡುಬರುತ್ತದೆ. ಆದರೆ ಕಾಯಿಲೆ ಅಥವಾ ಕಾರಣ ಏನೆ ಇರಲಿ ಔಷಧೋಪಚಾರ ಹಾಗು ಆಪ್ತ ಸಮಾಲೋಚನೆಯಿಂದ ತಹಬದಿಗೆ ತರಬಹುದು.

 ಸೂಕ್ತ ಪರಿಹಾರ ಇದೆಯೆ?
ಖಂಡಿತ. ಸೂಕ್ತ ಚಿಕಿತ್ಸೆ ಇದೆ. ಸರಿಯಾದ ಸಮಯಕ್ಕೆ ತೆಗೆದುಕೊಂಡಾಗ ಶಾಶ್ವತವಾಗಿ ಶಮನ ಮಾಡಬಹುದು.

ಚಿಕಿತ್ಸೆಯ ವಿಧಾನಗಳು: ಮಾತ್ರೆಗಳು, ಚುಚ್ಚು ಮದ್ದುಗಳು (ಇನ್ಜೆಕ್ಷನ್ ಗಳು), ವಿದ್ಯುತ್ ಕಂಪನ ಚಿಕಿತ್ಸೆಗಳು ಮತ್ತು ಆಪ್ತಸಮಾಲೋಚನೆ.
ಚಿಕಿತ್ಸೆಯ ಕೆಲವು ತಪ್ಪು ತಿಳುವಳಿಕೆಗಳು:
ಕಿಡ್ನಿ ತೊಂದರೆಯಾಗುತ್ತದೆ, ಮಾತ್ರೆಗಳ ಮೇಲೆ ಅವಲಂಬನೆ ಆಗಿಬಿಡುತ್ತದೆ ಇತ್ಯಾದಿ.ಖಂಡಿತ ಈ ಥರನಾದವುಗಳು ಇರುವುದಿಲ್ಲ ಅಲ್ಲದೆ ಇವು ಎಷ್ಟು ಸುರಕ್ಷಿತ ಎಂದರೆ ಗರ್ಭಿಣಿಯರಲ್ಲಿ, ಕಿಡ್ನಿ ತೊಂದರೆ ಒಳಪಟ್ಟವರಲ್ಲಿ, ಮಕ್ಕಳಲ್ಲಿಯೂ ಸಹ ಯಾವುದೇ ಅಪಾಯಕಾರಿಯಾದ ಅಡ್ಡ ಪರಿಣಾಮಗಳು ಇಲ್ಲದೆ ಉಪಯೋಗಿಸಬಹುದು.

ಪರಿಹಾರ ಎಷ್ಟು ದಿನಗಳ ವರೆಗೆ?
ಈ ಮಾನಸಿಕ ಕಾಯಿಲೆಗಳು ಸಹ ರಕ್ತದೊತ್ತಡ ಹಾಗು ಮಧುಮೇಹಥರನಾದ ಕಾಯಿಲೆ ಎಂದು ಪರಿಗಣಿಸಲಾಗಿದೆ. ಹಾಗಿದ್ದರೆ ಚಿಕಿತ್ಸೆಯು ಸಹ ಇವುಗಳ ಹಾಗೆ ಇರುತ್ತದೆ. ಕೆಲವೊಂದು ಹೇಳಿಕೆಯ ಪ್ರಕಾರ ಮೊದಲ ಸಲ ಕಾಯಿಲೆ ಕಾಣಿಸಿಕೊಂಡಾಗ ಸರಿ ಸುಮಾರು ಆರರಿಂದ ಒಂಬತ್ತು ತಿಂಗಳುಗಳವರೆಗೆ ಕೊಟ್ಟು ಕಡಿಮೆ ಮಾಡಬಹುದಾಗಿದೆ.

ಯಾವ ವಯಸ್ಸಿನಲ್ಲಿ ಇದನ್ನ ತಡೆಗಟ್ಟಬಹುದು?
ಒಂದು ಅಧ್ಯಯನದ ಪ್ರಕಾರ ಕ್ರಿಸ್ತ್ಚಿಯನ್ ಸಮುದಾಯದಲ್ಲಿ ಆತ್ಮಹತ್ಯೆ್ಯೆ ಪ್ರಮಾಣ ಕಡಿಮೆ ಇರುತ್ತದೆ ಎಂದು ಉಲ್ಲೇಖಿಸಲಾಗಿದೆ ಇದಕ್ಕೆ ಕಾರಣ ಅವರು ಚಿಕ್ಕ ವಯಸ್ಸಿನಲ್ಲಿಯೆ ಇದರ ಬಗ್ಗೆ ಸರಿ ತಪ್ಪುಗಳ ತಿಳುವಳಿಕೆ ಮೂಡಿಸಿರುವುದೆ ಒಂದು ಪ್ರಬಲವಾದ ಕಾರಣ ಎಂದು ತಿಳುದು ಬಂದಿದೆ. ಹಾಗಿದ್ದರೆ ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ಹಿಂದೇಟು ಸಲ್ಲದು.

ಒಂದು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಚರ್ಚಿಸೋಣ:
ಒಬ್ಬ ಎಳೆಯ ವಯಸ್ಸಿನ ಹುಡುಗಿ ಸುಮಾರು ವರ್ಷಗಳಿಂದ ಸರಿಸುಮಾರು ತನಗೆ ತಿಳುವಳಿಕೆ ಬಂದಾಗಿಂದ ಖುಷಿ ಅನ್ನೋದೇ ಇಲ್ಲವಾಗಿದೆ. ಇದಕ್ಕೆ ಕಾರಣ ಸಂಬಂಧಿಕರಿಂದ ಅವಳು ಅನುಭವಿಸಿದ ದೈಹಿಕ ಕಿರುಕುಳ. ಹೇಗೋ ಮನೆಯವರ ಸಹಕಾರದಿಂದ ಹಾಗು ಸ್ನೇಹಿತರ ಸಹಯೋಗದಿಂದ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆಯುತ್ತಾಳೆ. ಒಂದು ಒಳ್ಳೆಯ ಕಂಪನಿಯಲ್ಲಿ ಕೂಡ ಕೆಲಸ ಪಡೆಯುತ್ತಾಳೆ. ಹೀಗೆ ಆರೇಳು ತಿಂಗಳು ಕಳೆಯುತ್ತೆ ಯಾಕೋ ಯೇನೊ ಕೆಲಸದಲ್ಲಿ ನೆಮ್ಮದಿ ಇಲ್ಲ. ಕೇವಲ ಕಳೆದು ಹೋದ ಕಹಿ ನೆನಪುಗಳು, ಮುಂದೆ ಜೀವನ ವ್ಯರ್ಥವಾಗಿ ಸೂನ್ಯವೆನಿಸತೊಡಗಿದೆ, ಅಸಮಾಧಾನ, ನಿದ್ರೆಯಲ್ಲಿ ತೊಂದರೆ ಉಂಟಾಗಿ ಈ ಥರನಾದ ಜೀವನ ಜೀವಿಸೋದಕ್ಕಿಂತ ಅಂತ್ಯ ಮಾಡಿಕೊಳ್ಳುವುದೆ ಒಳ್ಳೆಯದು ಎಂಬ ತೀರ್ಮಾನ. ಇದನ್ನ ಪಾಲಕರಲ್ಲಿ ವ್ಯಕ್ತಪಡಿಸುತ್ತಾಳೆ. ಆಗ ಪಾಲಕರು ಇದನ್ನ ಅಲಕ್ಷ್ಯ ಮಾಡದೆ ಮನೋವೈದ್ಯರಾದ ನಮ್ಮ ಗಮನಕ್ಕೆ ತಂದಾಗ ಇದು ಒಂದು ತೀವ್ರ ಖಿನ್ನತೆಯ ಲಕ್ಷಣವಾಗಿದ್ದು ಇದಕ್ಕೆ ವಿದ್ಯುತ್ ಕಂಪನ ಚಿಕಿತ್ಸೆ ಉತ್ತಮ ಹಾಗು ತೀವ್ರ ಪರಿಣಾಮ ನೀಡುವಂತಹುದು ಎಂದು ಸಾಂತ್ವನದ ಮಾತು ಹೇಳಿದಾಗ ಪಾಲಕರು ನೆಮ್ಮದಿಯ ಉಸಿರು ತೆಗೆದುಕೊಂಡರು.

ಡಾ ಭಾಸ್ಕರ್ ಮಾರಾ
ಮನೋವೈದ್ಯರು ಮತ್ತು ಯೋಗ ಪ್ರವೀಣರು, ಕ್ಷೇಮ ಮಲ್ಟೀಸ್ಪೆಶಾಲಿಟಿ ಕ್ಲಿನಿಕ್
ಕಂಠಿ ಸರ್ಕಲ್, ಇಳಕಲ್ ಜಿಲ್ಲೆ: ಬಾಗಲಕೋಟ-587125
MOB: 9620635142

Back To Top