ಆಟಿಸಮ್ ಮೈಂಡ್‌ಗೆ ಸ್ಟೆಮ್ ಸೆಲ್ ಥೆರಪಿ

ಆಟಿಸಮ್ ಮೈಂಡ್‌ಗೆ ಸ್ಟೆಮ್ ಸೆಲ್ ಥೆರಪಿ

ಆಟಿಸಮ್ ಸಮಸ್ಯೆಯಿಂದ ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ.

ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ. ಯಾವುದೂ ಬೇಡ. ಇನ್ಯಾವುದೋ ಬೇಕು. ಎಲ್ಲ ಮಕ್ಕಳಂತೆ ಅವರಿರುವುದಿಲ್ಲ. ಹಾಗಂತ ಅವರಲ್ಲಿ ಸಾಮರ್ಥ್ಯವೇ ಇರುವುದಿಲ್ಲ ಅಂತಲ್ಲ, ಆದರೆ ವಿಶೇಷ ಆರೈಕೆ ಬಯಸುವ ಮಕ್ಕಳು ಆಟಿಸಂ ಸಮಸ್ಯೆಗೆ ಒಳಗಾದವರಾಗಿ ಒಂದು ಸೀಮಿತ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಮಾನಸಿಕ ಬೆಳವಣಿಗೆಯ ಅಸಾಮರ್ಥ್ಯದ ಸಮಸ್ಯೆ ಒಂದು ರೀತಿಯ ನರ ಸಮಸ್ಯೆ. ಈ ಸಮಸ್ಯೆಯಲ್ಲಿ ಹಲವು ಪ್ರಬೇಧಗಳಿದ್ದು ಆಟಿಸ್ಟಿಕ್ ಡಿಸಾರ್ಡರ್, ಆಸ್ಪರ್ಗರ್ ಸಿಂಡ್ರೋಮ, ಚೈಲ್ಡ್‌ಹುಡ್ ಡಿಸ್‌ಇಂಟೆಗ್ರೇಟಿವ್ ಡಿಸಾರ್ಡರ್ ಹಾಗೂ ಪೆರ್ವಾಸಿವ್ ಡೆವೆಲಪ್ಮೆಂಟಲ್ ಡಿಸಾರ್ಡರ್ ವಿತ್ ಸಿಂಪ್ಟಂಸ್ ಇತ್ಯಾದಿ. ಈ  ಸಮಸ್ಯೆಗಳ ಗಂಭೀರತೆ ಮಕ್ಕಳಿಂದ ಮಕ್ಕಳಿಗೆ ಬೇರೆಯ ಸ್ವರೂಪದ್ದಾಗಿರುತ್ತದೆ. ಅಂದಾಜು ಮೂರು ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆಯು ಮಕ್ಕಳ ಬುದ್ಧಿ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.

ಇಂತಹ ಸಮಸ್ಯೆಯಿಂದ ಬಳಲುವ ಮಕ್ಕಳು ಸಾಮಾಜಿಕವಾಗಿ ಹೆಚ್ಚು ಬೆರೆಯುವುದು ಹಾಗೂ ವಿವಿಧ ಚಟುವಟಿಕೆಗಳಲ್ಲಿ ನಿರುತ್ಸಾಹ ತೋರುತ್ತಾರೆ. ಒಂದು ವೇಳೆ ಚಿಕಿತ್ಸೆ ತಡ ಮಾಡಿದಲ್ಲಿ ಮಾತನಾಡಲು ಸಾಧ್ಯವಾಗದೇ ಇರುವುದು, ಅಲ್ಲದೆ ಮಾತನಾಡಲು ಪ್ರಯತ್ನಿಸದೇ ಇರುವುದು, ಪದೇಪದೆ ಹೇಳಿದ ಮಾತುಗಳನ್ನು ಪುನರಾವರ್ತಿಸುವುದು, ವಿಚಿತ್ರ ರೀತಿಯ ಹಾವಭಾವಗಳು ಹಾಗೂ ಕಲಿಕೆಯಲ್ಲಿ ಹಿಂದುಳಿಯುವ ಮೊದಲಾದ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.  ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ.

ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿ ಆಟಿಸಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಂಶವಾಹಿಯಾಗಿ ಹಾಗೂ ಮ್ಯೂಟೇಟೆಡ್ ಜೀನ್ಸ್ ಹಾಗೂ ವಾತಾವರಣದ ಕಾರಣಗಳಿಂದಲೂ ಕೂಡ ಈ ರೀತಿಯ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಧ್ಯಯನಗಳ ಮೂಲಕ ತಿಳಿದು ಬಂದಿರುವ ವಿಚಾರವೆಂದರೆ ವಾತಾವರಣದ ವೈಪರೀತ್ಯದ ಕಾರಣಗಳ ಹೊರತಾಗಿ ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಂದಿರು ಪೋಷಕಾಂಶದ ಕೊರತೆ ಅನುಭವಿಸಿದಲ್ಲಿ ಹಾಗೂ ರಾಸಾಯನಿಕ ವಸ್ತುಗಳಿಗೆ ಎದುರಾದಲ್ಲಿಯೂ ಕೂಡ ಹುಟ್ಟುವ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಎದುರಾಗುವಂತಹ ಸೋಂಕು ಹಾಗೂ ಆಂಟಿ ಡಿಪ್ರೆಸೆಂಟ್ಸ್ ಕೂಡ ಆಟಿಸಮ್‌ಗೆ ಕಾರಣವಾಗುತ್ತದೆ.

ಆಟಿಸಮ್ ಮೈಂಡ್‌ಗೆ ಸ್ಟೆಮ್ ಸೆಲ್ ಥೆರಪಿ

ಸೂಕ್ತ ಚಿಕಿತ್ಸೆ – ಸ್ಟೆಮ್ ಸೆಲ್ ಥೆರಪಿ:

ಆಟಿಸಮ್ ಸಮಸ್ಯೆ ಗುಣಪಡಿಸಲಾಗದಂತಹ ನರ ಸಮಸ್ಯೆಯಾಗಿ ಉಳಿದಿತ್ತು. ಆಟಿಸಮ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಂದು ಆಕ್ಯುಪೇಷನಲ್ ಥೆರಪಿ, ಬಿಹೇವಿಯರಲ್ ಥೆರಪಿ ಹಾಗೂ ಸ್ಪೀಚ್ ಥೆರಪಿ ನೆರವಾಗಲಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಉದ್ವೇಗ ಹಾಗೂ ಆತಂಕ ಸೇರಿದಂತಹ ಹಾವಭಾವಗಳ ಗಂಭೀರ ಸ್ವರೂಪವನ್ನು ತಗ್ಗಿಸಲು ಔಷದೋಪಚಾರ ನಡೆಸುವ ಅಗತ್ಯ ಇರುತ್ತದೆ. ಇನ್ನು ಈ ಚಿಕಿತ್ಸೆಗಳನ್ನು ಆಟಿಸಮ್ ಸಮಸ್ಯೆಯ ಗಂಭೀರತೆಯನ್ನು ಅರಿತು ನೀಡಲಾಗುತ್ತದೆ. ಎರಡು ದಶಕಗಳ ಅವಧಿಯಲ್ಲಿ ಸ್ಟೆಮ್ ಸೆಲ್ ಥೆರಪಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಚಿಕಿತ್ಸೆಯು ಆಟಿಸಮ್ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಚಿಕಿತ್ಸೆಯಾಗಿ ಹೊರಹೊಮ್ಮಿದೆ.

ಈ ಸ್ಟೆಮ್ ಸೆಲ್ ಥೆರಪಿಯು ಸಮಸ್ಯೆಯನ್ನು ಆಳದಿಂದ ಗುಣಪಡಿಸುತ್ತದೆ. ಈ ಮೂಲಕ ಮಿದುಳಿನಲ್ಲಿ ಹಾನಿಗೊಳಗಾದ ಭಾಗವನ್ನು ಮೊದಲಿಗೆ ಸರಿಪಡಿಸುತ್ತಾ ಬರುತ್ತದೆ. ಸ್ಟೆಮ್ ಸೆಲ್‌ಗಳು ಮದರ್ ಸೆಲ್‌ಗಳಂತೆ. ಇದರಿಂದ ವಿವಿಧ ಬಗೆಯ ಸೆಲ್‌ಗಳ ಉತ್ಪಾದನೆ ಸಾಧ್ಯವಾಗುತ್ತದೆ. ಉದಾಹರಣೆಗೆ ಮಿದುಳು, ಹೃದಯ, ಲಿವರ್, ಚರ್ಮ, ಮೂಳೆ ಹೀಗೆ ಮೊದಲಾದ ಸೆಲ್‌ಗಳನ್ನು ಅಭಿವದ್ಧಿ ಪಡಿಸಲು ಈ ಸ್ಟೆಮ್ ಸೆಲ್‌ಗಳು ನೆರವಾಗುತ್ತದೆ. ಈ ಸ್ಟೆಮ್ ಸೆಲ್‌ಗಳನ್ನು ಎಂಬ್ರಿಯೋ ಹಾಗೂ ಕರುಳ ಬಳ್ಳಿಯ ಮೂಲಕ ಅಥವಾ ವ್ಯಕ್ತಿಯ ಅಸ್ತಿರುಜುವಿನಲ್ಲಿ ಪಡೆದುಕೊಳ್ಳಲಾಗುತ್ತದೆ.

ಸ್ಟೆಮ್ ಸೆಲ್‌ಗಳನ್ನು ಸಿಜಿಎಂಟಿ ಮೂಲಕ ಪ್ರತ್ಯೇಕವನ್ನಾಗಿಸಿ ಕ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದು ಪರಿಗಣಿಸದ ಬಳಿಕವಷ್ಟೇ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಈ ರೀತಿ ಪಡೆಯಲಾದ ಸ್ಟೆಮ್ ಸೆಲ್ಗಳನ್ನು ರೋಗಿಯ ಮಿದುಳಿಗೆ ಕಸಿ ಮಾಡಲಾಗುತ್ತದೆ. ಬಳಿಕ ಈ ಸ್ಟೆಮ್ ಸೆಲ್‌ಗಳು ಮಿದುಳಿನಲ್ಲಿ ಬೆರೆತು ಬೆಳವಣಿಗೆಯನ್ನು ಸಾಧ್ಯವನ್ನಾಗಿಸುತ್ತದೆ. ಹಾನಿಗೊಳಗಾದ ಸೆಲ್‌ಗಳನ್ನು ಈ ಸ್ಟೆಮ್ ಸೆಲ್‌ಗಳು ಸರಿಪಡಿಸಿ, ಆರೋಗ್ಯ ಪೂರ್ಣ ಸೆಲ್‌ಗಳ ಅಭಿವೃದ್ಧಿಗೆ ನೆರವಾಗುತ್ತದೆ. ಈ ಚಿಕಿತ್ಸೆ ಎಷ್ಟು ಅತ್ಯಾಧುನಿಕವಾಗಿದೆ ಎಂದರೆ ಚಿಕಿತ್ಸೆ ಪಡೆದ ರೋಗಿಯು ಮರುದಿನವೇ ಆಸ್ಪತ್ರೆಯಿಂದ ಮನೆಗೆ ತೆರಳಬಹುದು. ಬಳಿಕ ನಿತ್ಯ ತಪಾಸಣೆಯ ಅಗತ್ಯ ಇರುತ್ತದೆ. ಇದು ರೋಗದ ಗಂಭೀರತೆಯನ್ನು ಆಧರಿಸಿರುತ್ತದೆ. ಅಲ್ಲದೆ ಹೆಚ್ಚಿನ ಸ್ಟೆಮ್ ಸೆಲ್‌ಗಳ ಅಗತ್ಯವೂ ಇರುತ್ತದೆ.

ಡಾ.ದಿನಕರ್ ವೈದೇಹಿ ಹಾಸ್ಪಿಟಲ್ ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, # ೮೨, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066 ಫೋನ್ : 080-28413381/2/3/4      ಮೊ.: 97422 74849

ಡಾ.ದಿನಕರ್
ವೈದೇಹಿ ಹಾಸ್ಪಿಟಲ್
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, # ೮೨, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್: 080- 49069000 Extn: 1147/1366 ಮೊ.: 97422 74849

http://www.vims.ac.in/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!