ಧೂಮಪಾನದ ಥ್ರಿಲ್ ತುಂಬಾ ಒಳ್ಳೆಯದಲ್ಲ!

ಧೂಮಪಾನದ  ಥ್ರಿಲ್  ಆರೋಗ್ಯಕ್ಕೆ  ಹಾನಿಕಾರಕ. ತಂಬಾಕು ತನ್ನಲ್ಲಿ 7000ಕ್ಕೂ ಅಧಿಕ ವಿಷ ಮತ್ತು 70ಕ್ಕೂ ಅಧಿಕ ಕಾರ್ಸಿನೊಜೆನ್‍ಗಳನ್ನು (ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರಾಸಾಯನಿಕಗಳು) ಒಳಗೊಂಡಿರುತ್ತದೆ.ಇನ್ನು ಮುಂದೆ ಧೂಮಪಾನ ಮಾಡುವ ಪ್ರಚೋದನೆ ಮನಸ್ಸಲ್ಲಿ ಮೂಡಿದಾಗ ಒಂದು ನಿಮಿಷ ನಿಂತು ನಿಮ್ಮ ಬಯಕೆಯ ಈಡೇರಿಕೆಯಿಂದ ಮುಂದೆ ಆಗುವ ಪರಿಣಾಮದ ಕುರಿತು ಗಂಭೀರವಾಗಿ ಯೋಚಿಸಿ.

ಧೂಮಪಾನದಿಂದ ಮನಸ್ಸು ನಿರಾಳವಾಗುತ್ತದೆ, ಈ ಒಂದು ಕನಿಷ್ಠ ನಂಬಿಕೆಯಿಂದ ಅಥವಾ ನಂಬಿಸುವ ಉದ್ದೇಶದಿಂದ ಬಹುತೇಕ ಧೂಮಪಾನಿಗಳು ವ್ಯಸನಕ್ಕೆ ದಾಸರಾಗುತ್ತಾರೆ. ಆದರೆ ಇದರಲ್ಲಿ ತಾವು ಈ ಚಟಕ್ಕೆ ಎಷ್ಟು ಪ್ರಮಾಣದಲ್ಲಿ ದಾಸರಾಗಿ ಬಿಡುತ್ತೇವೆ ಎನ್ನುವ ಅರಿವು ಅವರಿಗಿರುವುದಿಲ್ಲ. ಅಲ್ಲದೇ ತಂಬಾಕು ತಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎನ್ನುವ ತಿಳುವಳಿಕೆ ಕೂಡ ಮೂಡುವುದಿಲ್ಲ.

ಧೂಮಪಾನದ ಥ್ರಿಲ್ ತುಂಬಾ ಒಳ್ಳೆಯದಲ್ಲ!

ತಂಬಾಕು ತನ್ನಲ್ಲಿ 7000ಕ್ಕೂ ಅಧಿಕ ವಿಷ ಮತ್ತು 70ಕ್ಕೂ ಅಧಿಕ ಕಾರ್ಸಿನೊಜೆನ್ಗಳನ್ನು (ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರಾಸಾಯನಿಕಗಳು) ಒಳಗೊಂಡಿರುತ್ತದೆ. ಅಲ್ಲದೇ ಇದು ಶರೀರದ ವಿವಿಧ ಅಂಗಗಳಿಗೂ ಹಾನಿ ಉಂಟುಮಾಡುತ್ತದೆ. ಧೂಮಪಾನ ವ್ಯಕ್ತಿಯ ದೇಹದ ಮೇಲೆ ಎಷ್ಟೊಂದು ಅಪಾಯಕಾರಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿ.

ಮೆದುಳು:

ವಿಶ್ರಾಂತಿಗೆ ಇದು ಸಹಾಯಮಾಡುತ್ತದೆ ಎನ್ನುವುದು ಧೂಮಪಾನಿಗಳು ತಮ್ಮ ಚಟದ ಬಗ್ಗೆ ಪ್ರಾಥಮಿಕವಾಗಿ ನೀಡುವ ಮಾಹಿತಿ ಅಥವಾ ಸಮರ್ಥನೆ. ಅಲ್ಪಾವಧಿಗೆ ಹೋಲಿಸಿದರೆ ಇದು ನಿಜ. ಧೂಮಪಾನ ನಿರಾಳರಾಗಲು ಸಹಕರಿಸುತ್ತದೆ. ಆದರೆ ಇದಕ್ಕೆ ನಂತರ ದೊಡ್ಡ ಬೆಲೆ ತೆರಬೇಕಾಗುತ್ತದೆ. ಧೂಮಪಾನದ ಕೆಟ್ಟ ಪರಿಣಾಮವೆಂದರೆ, ವ್ಯಸನಿಗಳನ್ನಾಗಿಸುತ್ತದೆ. ಜತೆಗೆ ಉದ್ವೇಗಕ್ಕೆ, ಆತಂಕಕ್ಕೆ ಒಳಗಾಗುವಂತ ಸ್ಥಿತಿ ತರುತ್ತದೆ. ಮೆದುಳಿನ ಪರಿಚಲನೆಯನ್ನೇ ಬದಲಿಸುತ್ತದೆ ಮತ್ತು ಮೆದುಳು ಪಾಶ್ರ್ವವಾಯುವಿಗೂ ಕಾರಣವಾಗಬಹುದು.

ಕಣ್ಣು:

ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಅತಿಯಾದ ಧೂಮಪಾನದಿಂದ ಬರುತ್ತದೆ. ಕಣ್ಣಿನಲ್ಲಿ ಚುಚ್ಚಿದಂತೆ ಅನುಭವವಾಗುವುದು, ಕಣ್ಣಲ್ಲಿ ಅತಿಯಾಗಿ ನೀರು ಸೋರುವುದು, ಗ್ಲುಕೊಮಾ ಅಥವಾ ಕಣ್ಣಿನ ಪೊರೆ ಸಮಸ್ಯೆ ಕಾಡಬಹುದು. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಅಥವಾ ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರೆ ಭಾಗಶಃ ಅಥವಾ ಸಂಪೂರ್ಣ ಅಂಧತ್ವ ಸಮಸ್ಯೆ ಕಾಡಬಹುದು.

ಬಾಯಿ ಹಾಗೂ ಗಂಟಲು:

ಧೂಮಪಾನಿಗಳು ಸಾಮಾನ್ಯವಾಗಿ ಬಾಯಿ ಹಾಗೂ ಗಂಟಲಿನ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಈ ಚಟದಿಂದಾಗಿ, ಅಂಟು ರೋಗಗಳು, ಅಕಾಲಿಕ ಹಲ್ಲು ನಷ್ಟ, ಹಲ್ಲುಗಳು ಬಣ್ಣ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆ ಕೂಡ ಎದುರಾಗುತ್ತದೆ.

ಶ್ವಾಸಕೋಶ:

ಧೂಮಪಾನಿಗಳ ಸಾವಿಗೆ ವಿಶ್ವದಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ಅತಿದೊಡ್ಡ ಕಾರಣವಾಗಿದೆ. ಅಲ್ಲದೇ ಇದು ಪ್ರಸ್ತುತ ಸಮಸ್ಯೆ ನಿವಾರಣೆಯಾಗಿಸಲು ಸಾಧ್ಯವಾಗದ ಸವಾಲಾಗಿ ಕಾಡುತ್ತಿದೆ. ದೀರ್ಘಕಾಲಿಕ ಅಬ್‍ಸ್ಟ್ರಕ್ಟಿವ್ ಪಲ್ಮನರಿ ಕಾಯಿಲೆ (ಸಿಒಪಿಡಿ) ಸಮಸ್ಯೆ ಕಾಡಿದರೆ ಉಸಿರಾಡುವುದು ತುಂಬಾ ಕಷ್ಟವಾಗುತ್ತದೆ. ಧೂಮಪಾನಿಗಳಲ್ಲಿ ಕ್ಯಾನ್ಸರ್ ಬಂದು ಸಾವನ್ನಪ್ಪುವ ವಿಚಾರದಲ್ಲಿ ಇದರ ಪಾತ್ರ ಕೂಡ ದೊಡ್ಡದಿದೆ. ದೀರ್ಘಕಾಲದ ಬ್ರಾಂಕೈಟಿಸ್ ನಿಂದಾಗಿ ಶ್ವಾಸಕೋಶದ ನಾಳಗಳಲ್ಲಿ ಉರಿಯೂತ ಕಂಡುಬಂದು, ಉಸಿರಾಡುವುದು ಕಷ್ಟವಾಗಬಹುದು. ಅತಿ ಮುಖ್ಯವಾಗಿ ಇದು ಧೂಮಪಾನದಿಂದ ಕಾಡುವ ದೊಡ್ಡ ಸಮಸ್ಯೆ. ಧೂಮಪಾನವು ನ್ಯುಮೋನಿಯಾ, ಕ್ಷಯ ಮುಂತಾದ ಸಮಸ್ಯೆಗಳು ಕಾಡಲು ಕಾರಣವಾಗುತ್ತದೆ.

 ಹೃದಯ:

ಹೃದಯ ಸಂಬಂಧಿ ಸಮಸ್ಯೆಗಳು ಕಾಡಲು ಧೂಮಪಾನ ಪ್ರಮುಖ ಕಾರಣವಾಗಿದೆ. ನಿರಂತರ ಧೂಮಪಾನಿಗಳು ಹಾಗೂ ಎರಡನೇ ಧೂಮಪಾನಿಗಳು (ಸೇವಿಸಿದವರು ಬಿಟ್ಟ ಹೊಗೆ ಸೇವಿಸುವವರು) ಹೃದಯ ಸಂಬಂಧಿ ಕಾಯಿಲೆ ಎದುರಿಸುವ ದೊಡ್ಡ ಅಪಾಯವನ್ನು ಹೊಂದಿರುತ್ತಾರೆ. ತಂಬಾಕು ಸೇವನೆ ಕೂಡ ಹೃದಯದಲ್ಲಿರುವ ಒಳ್ಳೆಯ ಕೊಬ್ಬಿನಂಶವನ್ನು (ಎಚ್‍ಡಿಎಲ್) ಕರಗಿಸಿ ಅಪಾಯ ತಂದಿಡುತ್ತದೆ. ಇದಕ್ಕೆ ಬದಲಾಗಿ ಕೆಟ್ಟ ಕೊಬ್ಬಿನಂಶವನ್ನು (ಎಲ್‍ಡಿಎಲ್ ಹಾಗೂ ಟ್ರೈಗ್ಲಿಸರೈಡ್‍ಗಳು) ಶರೀರದಲ್ಲಿ ಕಡಿಮೆ ಮಾಡುತ್ತದೆ.

ಉದರ (ಹೊಟ್ಟೆ):

ಧೂಮಪಾನ ಹಸಿವನ್ನು ಕಡಿಮೆ ಮಾಡುತ್ತದೆ. ಈ ಚಟದ ದಾಸರಾಗುವುದರಿಂದ ಶರೀರದಲ್ಲಿ ನ್ಯೂಟ್ರಿಶಿಯನ್ ಅಂಶ ಕಡಿಮೆ ಆಗಿ ದೇಹ ದುರ್ಭಲವಾಗುತ್ತದೆ. ಶರೀರದಲ್ಲಿ ಇನ್ಸುಲಿನ್ ಪೋಷಣೆಯನ್ನು ತಡೆಯುತ್ತದೆ. ಇದರಿಂದ ಟೈಪ್ 2 ಮಧುಮೇಹ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಾರ್ಯ ಕೂಡ ಮಾಡುತ್ತದೆ. ಹಾಗೂ ಹೊಟ್ಟೆ ಮತ್ತು ಕರುಳಿನಲ್ಲಿ ಹುಣ್ಣುಗಳು ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. 

ಲೈಂಗಿಕ ಸಮಸ್ಯೆ:

ಪುರುಷರಲ್ಲಿ ಧೂಮಪಾನದ ಅಡ್ಡ ಪರಿಣಾಮ ದೊಡ್ಡದಾಗಿ ಆಗುತ್ತದೆ. ಇದರ ಪರಿಣಾಮ ವೀರ್ಯದ ಅಸಹಜತೆ, ದುರ್ಭಲತೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹಾಗೂ ಪ್ರಾಸ್ಪೇಟ್ ಕ್ಯಾನ್ಸರ್ ಕಾಡುವ ಭೀತಿ ಇದೆ. ಇನ್ನು ಮಹಿಳೆಯರಲ್ಲಿ ಧೂಮಪಾನದ ಅಡ್ಡ ಪರಿಣಾಮ ನೋಡುವುದಾದರೆ, ಗರ್ಭಪಾತ, ಆರಂಭಿಕ ಋತುಬಂಧ, ಗರ್ಭಕಂಠದ ಹಾಗೂ ಅಂಡಾಶಯದ ಕ್ಯಾನ್ಸರ್ ಕಾಡುವ ಸಾಧ್ಯತೆ ಇರುತ್ತದೆ. ಧೂಮಪಾನವು ಭವಿಷ್ಯದ ಜನಾಂಗದ ಮೇಲೆ ಕೂಡ ಪರಿಣಾಮ ಬೀರುತ್ತದೆ. ದೈಹಿಕ ವಿರೂಪತೆ ಹಾಗೂ ಹಠಾತ್ ಶಿಶು ಮರಣಕ್ಕೂ ಕಾರಣವಾಗುತ್ತಿದೆ.

Also Read: ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು : ಲೈಂಗಿಕ ಆರೋಗ್ಯಕ್ಕೆ ಹತ್ತು  ಸೂತ್ರಗಳು 

ಮೂತ್ರಪಿಂಡ:

ಶರೀರದ ಕಲ್ಮಶಗಳನ್ನು ಹೊರಹಾಕುವ ದೇಹದ ಪ್ರಮುಖ ಅಂಗ ಮೂತ್ರಪಿಂಡ. ಅತಿಯಾದ ಧೂಮಪಾನ ಈ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು. ಮೂತ್ರಕೋಶದ ಕ್ಯಾನ್ಸರ್ ಹಾಗೂ ಇತರೆ ಮೂತ್ರ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು.

ಮೂಳೆಗಳು:

ಶರೀರಕ್ಕೆ ಒಂದು ಆಕಾರವನ್ನು ಮೂಳೆಗಳು ನೀಡುತ್ತವೆ. ತಂಬಾಕಿನಲ್ಲಿರುವ ಟಾಕ್ಸಿನ್ ಪ್ರಮಾಣದಿಂದಾಗಿ ಧೂಮಪಾನವು ಆಸ್ಟಿಯೊಪೊರೋಸಿಸ್ (ಶರೀರದ ಮೂಳೆಗಳು ದುರ್ಭಲಗೊಳ್ಳುವುದು) ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದಾಗಿ ಪ್ರಷ್ಟದ ಮೂಳೆ ಮುರಿತ, ಬೆನ್ನುಮೂಳೆ ಸಂಬಂಧಿ ಸಮಸ್ಯೆಗಳು, ಮೂಳೆ ಮಜ್ಜೆ ಕ್ಯಾನ್ಸರ್ ಹಾಗೂ ರುಮಟಾಯ್ಡ್ ಸಂಧಿವಾತ ಸಮಸ್ಯೆ ಕಾಡಬಹುದು.

Also Read:  ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ – ಅಕ್ಟೋಬರ್ 20 : ಅಸ್ಥಿರಂದ್ರತೆ ಅಥವಾ ಆಸ್ಟಿಯೊಪೊರೋಸಿಸ್ ತಡೆಗಟ್ಟುವುದು ಹೇಗೆ?

ಈ ಮೇಲೆ ತಿಳಿಸಲಾದ ಸಮಸ್ಯೆಗಳಲ್ಲದೇ ತಂಬಾಕು ಇನ್ನೂ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅಕಾಲಿಕ ವಯಸ್ಸಾಗುವಿಕೆ, ಕೂದಲುದುರುವುದು, ದುರ್ಭಲ ಇಮ್ಯುನಿಟಿ ಸಮಸ್ಯೆ ಇತ್ಯಾದಿ ತೊಂದರೆ ಕಾಡಬಹುದು.

ಡಾ. ಸಚಿನ್‍ಕುಮಾರ್

ಹಿರಿಯ ಪುಲ್ಮನೋಲಜಿ ತಜ್ಞ

ಸಕ್ರ ವರ್ಡ್ ಹಾಸ್ಪಿಟಲ್
ದೇವರಬೀಸನಹಳ್ಳಿ, ವರ್ತೂರು ಹೋಬಳಿ

ಬೆಂಗಳೂರು-560 103 

ದೂ. : 080 49694969

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!