Vydyaloka

ಶ್ರವಣ ಬೆಳಗೊಳದಲ್ಲಿ ಧನ್ವಂತರಿ ಮಹಾಯಾಗ

ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್ (ರಿ), ಗುರುಹಿರಿಯರ ಧನ್ವಂತರಿ ವನ, ಆಯುರ್ ಹೋಮ್, ಶ್ರವಣಬೆಳಗೊಳ – ಬೆಕ್ಕ ಹಾಸನ ಜಿಲ್ಲೆ.. ಇವರ ಆಶ್ರಯದಲ್ಲಿ ಕಳೆದ ಡಿಸೆಂಬರ್ 24ರಂದು ವಿಶೇಷ ಧನ್ವಂತರಿ ಮಹಾಯಾಗ ಆಯೋಜಿಸಲಾಗಿತ್ತು.

ವೇದಮಾತೆ ಗಾಯತ್ರೀ, ರುದ್ರಮಹಾಕಾಳಿ, ಮಹಾವಿಷ್ಣು ಧನ್ವಂತರಿ ಮಹಾಯಾಗ ಪ್ರಾರಂಭ 6:30 ರಿಂದ10:30 ರೊಳಗೆ ಪೂರ್ಣಾಹುತಿ, ನಂತರ ಗುರುಹಿರಿಯರ ಧನ್ವಂತರಿ ವನದಲ್ಲಿ ಎಲ್ಲರೂ ಸೇರಿ ವನಸ್ಪತಿ ಗಿಡ ನೆಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ವಿಶೇಷಾಧಿಕಾರಿಗಳು ಮಹಾ ಮಸ್ತಕಾಭಿಷೇಕ-2018, ಶ್ರೀಯುತ ಬಿ.ಎಸ್. ವರಪ್ರಸಾದ್ ರೆಡ್ಡಿ ಇವರು ಎಲ್ಲಾ ವೈದ್ಯರನ್ನು ಕುರಿತು ಮಾತನಾಡಿದರು ವೇದ ಬ್ರಹ್ಮಶ್ರೀ ರಾಮಕೃಷ್ಣ ಐಯ್ಯರ್ ಆರ್ಶೀವಚನ ಮತ್ತು ಯಾಗದ. ವಿವರಣೆ ನೀಡಿದರು. ಶ್ರೀಮತಿ ನಂದಿನಿ ಪ್ರಸಾದ್ ಧ್ಯಾನ, ಯೋಗ, ಮುದ್ರಾವಿಜ್ಞಾನ ಬಗ್ಗೆ ಪರಂಪರೆ ವೈದ್ಯರಿಗೆ ತರಬೇತಿ ನೀಡಿದರು. ಸಂಗೀತ ಮಹಾನ್ ವಿದ್ವಾಂಸರಾದ ಅಜ್ಜಯ್ಯ ಅವರ ಶಿಶ್ಯ ಪರ್ವತೇಶ್ ಸಂಗೀತ ಕಚೇರಿ ಗಮನ ಸೆಳೆಯಿತು. ಯೋಗ ಪಟುಗಳಾದ ಮಕ್ಕಳು ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ನಂತರ ಎಲ್ಲ ಪರಂಪರೆ ವೈದ್ಯರಿಗೂ ಗೌರವಿಸಿ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ವಿತರಣೆಮಾಡಲಾಯಿತು. ಪರಂಪರಾ ವೈದ್ಯ ಪರಿಷತ್ ಹಾಸನದ ಕೃಷ್ಣಮೂರ್ತಿ-ಸಂಚಾಲಕರು, ವಿಶ್ವನಾಥ್ ಅಧ್ಯಕ್ಷರು ಹಾಗೂ ಎಲ್ಲಾ ವೈದ್ಯಮಿತ್ರರು ಸೇರಿದ್ದ ಈ ಸಂತೋಷದ ಸಮಾರಂಭ ವಿಜೃಭಂಣೆಯಿಂದ ನೆರವೇರಿತು. ಮೇಲ್ವಿವಿಚಾರಕಾರಾಗಿ ವೈದ್ಯ ಯೋಗೆಶ್ ಪಂಡಿತ್ ಹಾಸನ, ವೈದ್ಯ ಪ್ರತಾಪ್ ಬೆಂಗಳೂರು, ಶೇಖರ್ ಯೋಗ ಮಾಸ್ಟರ್, ಪ್ರತೀಕ್ ಕಾರ್ಯನಿರ್ವಹಿಸಿದರು.

ನಿರೂಪಣೆ ಸಹಕಾರ ಶಶಿದರ್ ವಕೀಲರು ಬೆಂಗಳೂರು ಅವರದ್ದು. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರು ಬೆಂಗಳೂರು, ಜಂಬೋ ಆಟೋ ಕಾರು ಸ್ಥಾಪಕ ಶಿವಮೊಗ್ಗ, ಸಾಹಿತಿಗಳು, ಹಲವು ಗೌರವನ್ವಿತ ವ್ಯಕ್ತಿಗಳು ಸಮಾರಂಭಕೆ ಆಗಮಿಸಿದ್ದರು. ಎಲ್ಲರಿಗೂ ವೈದ್ಯಲೋಕ ಮಾಸಪತ್ರಿಕೆಯನ್ನು ಉಚಿತವಾಗಿ ವಿತರಿಸಲಾಯಿತು.
ನಂತರ ಎಲ್ಲಾ ಪರಂಪರಾ ವೈದ್ಯರು ಉಲ್ಲಸದಿಂದ ವನಸ್ಪತಿ ಔಷಧಿ ಸಸ್ಯಗಳ ವಿಕ್ಷಣೆ ಮಾಡಿದರು.

 

 

 

 

ಶ್ರವಣಬೆಳಗೊಳದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಧನ್ವಂತರಿ ಮಹಾಯಾಗದ ಸಂದರ್ಭದಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ, ಜಿಲ್ಲಾಧಿಕಾರಿಗಳ ಕಛೇರಿ, ಹಾಸನದ ಶ್ರೀ ಬಿ.ಎಸ್. ವರಪ್ರಸಾದ ರೆಡ್ಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Share this: