Vydyaloka

“ಸಂಗಾತಿ” ಜ್ವರ ಸಂಹಿತೆ ಪುಸ್ತಕ ಬಿಡುಗಡೆ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 2ನೇ ಹವ್ಯಕ ಸಮ್ಮೇಳದ ಸಂದರ್ಭದಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಬರೆದ ಪುಸ್ತಕ “ಸಂಗಾತಿ” ಜ್ವರ ಸಂಹಿತೆ ಬಿಡುಗಡೆಯಾಯಿತು. ಇದೇ ದಿನ ಒಂದೇ ವೇದಿಕೆಯಲ್ಲಿ ಸುಮಾರು 75 ಮಂದಿ ಲೇಖಕರಿಗೆ ಸಮ್ಮಾನ ನಡೆದು, 100 ಪುಸ್ತಕಗಳು ಲೋಕಾರ್ಪಣೆಗೊಂಡಿತು.

“ಸಂಗಾತಿ” ವಿಶಿಷ್ಟ ಪುಸ್ತಕವಾಗಿದ್ದು, ಸುಮಾರು 25 ಬಗೆಯ ಜ್ವರಗಳ ಬಗ್ಗೆ ಬಹಳ ಸರಳವಾದ ಭಾಷೆಯಲ್ಲಿ ವಿವರಣೆ ನೀಡಲಾಗಿದ್ದು, ವಿವಿಧ ನಮೂನೆಯ ಜ್ವರಗಳ ಬಗ್ಗೆ ಸವಿವರವಾದ ವಿವರಣೆ ಮತ್ತು ರೋಗ ತಡೆಗಟ್ಟುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಇದು ಡಾ|| ಮುರಲೀ ಮೋಹನ್ ಚೂಂತಾರು ಇವರ 8ನೇ ಕೃತಿಯಾಗಿದೆ. ಈ ಹಿಂದೆ ಅವರು ‘ರಕ್ತದಾನ ಜೀವದಾನ’, ಕಚಗುಳಿ, ಸಂಜೀವಿನಿ ಭಾಗ -1, ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ -2, ಚಿತ್ರಾನ್ನ, ಅರಿವು, ಎಂಬ 7 ಪುಸ್ತಗಳನ್ನು ಬರೆದು, ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಪ್ರಕಟಿಸಿರುತ್ತಾರೆ. ಸಂಗಾತಿ ಜ್ವರ ಸಂಹಿತೆ ಶ್ರೀ ಅಖಿಲ ಹವ್ಯಕ ಮಹಾಸಭಾ ಇದರ ವತಿಯಿಂದ ಪ್ರಕಟಿತವಾಗಿರುತ್ತದೆ.

Share this: