Vydyaloka

ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್‌ ಆದರ್ಶಗಳನ್ನು ಪಾಲಿಸಿ – ಡಾ||ಎಸ್. ಸಚ್ಚಿದಾನಂದ್‌

ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್‌ ಆದರ್ಶಗಳನ್ನು ಪಾಲಿಸಿ ಎಂದು – ಡಾ||ಎಸ್. ಸಚ್ಚಿದಾನಂದ್‌, ಗೌರವಾನ್ವಿತ ಕುಲಪತಿಗಳು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ಇವರು ವಿಶ್ವವಿದ್ಯಾಲಯದಲ್ಲಿ ನಡೆದ ಡಾ||ಬಿ.ಆರ್. ಅಂಬೇಡ್ಕರ್‌ರವರ 130 ನೇ ಜನ್ಮ ವರ್ಷಾಚರಣೆ ಸಮಾರಂಭದಲ್ಲಿ ಕರೆ ನೀಡಿದರು.

ಬೆಂಗಳೂರು: ಭಾರತ ರತ್ನ ಡಾ||ಬಿ.ಆರ್‌ ಅಂಬೇಡ್ಕರ್‌ ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್‌ ಆದರ್ಶಗಳನ್ನು ಪಾಲಿಸಿ ಎಂದು – ಡಾ||ಎಸ್. ಸಚ್ಚಿದಾನಂದ್‌, ಗೌರವಾನ್ವಿತ ಕುಲಪತಿಗಳು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ಇವರು ವಿಶ್ವವಿದ್ಯಾಲಯದಲ್ಲಿ ನಡೆದ ಡಾ||ಬಿ.ಆರ್. ಅಂಬೇಡ್ಕರ್‌ರವರ 130 ನೇ ಜನ್ಮ ವರ್ಷಾಚರಣೆ ಸಮಾರಂಭದಲ್ಲಿ ಕರೆ ನೀಡಿದರು.


ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಆಡಳಿತ ನಡೆಯುತ್ತಿದೆ ಎಂದರೆ ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದಿಂದ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಗೌರವದಿಂದ ನಡೆಯಬೇಕಾಗಿದೆ. ಜೊತೆಗೆ ಅವರು ಕೈಗೊಂಡ ಹಲವಾರು ಜನಪರ ಕಾಳಜಿ ನಮ್ಮಗೆಲ್ಲರಿಗೂ ಮಾದರಿ. ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗುತ್ತವೆ. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು ಎಂದು – ಡಾ||ಎಸ್. ಸಚ್ಚಿದಾನಂದ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ|| ಎನ್. ರಾಮಕೃಷ್ಣರೆಡ್ಡಿ, ಕುಲಸಚಿವರು, ಶ್ರೀ.ಮಂಜುನಾಥ್ ಹೆಗಡೆ, ಹಣಕಾಸು ಅಧಿಕಾರಿಗಳು, ಹಾಗೂ ಡಾ||ಬಿ.ವಸಂತ ಶೆಟ್ಟಿ, ಉಪಕುಲಸಚಿವರು ಅವರು ಉಪಸ್ಥಿತರಿದ್ದರು.

Share this: