ಹಲ್ಲುನೋವಿಗೆ ಶಮನ – ಸಾಸಿವೆ ?

ಹಲ್ಲುನೋವಿಗೆ ಶಮನ - ಸಾಸಿವೆ ?ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ ಗುಜುಗುಜು ಸದ್ದು.
ಯಶೋದಮ್ಮ ತಾನು ಮದುಮಗನ ತಾಯಿ ಎಂದು ಗಾಂಭೀರ್ಯದ ಮುಖಮುದ್ರೆ ಹೊತ್ತು ಓಡಾಡುತ್ತ ಬಂದ ಅತಿಥಿ ಅಭ್ಯಾಗತರನ್ನು ವಿಚಾರಿಸಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಆರು ವರ್ಷದ ಪುಟ್ಟ ಬಾಲಕಿ ಜ್ಯೋತ್ಳ್ನಾ ಅಳುತ್ತಾ ಅಜ್ಜಿ……ಅಜ್ಜೀ… ಎಂದು ಯಶೋದಮ್ಮನ ಬಳಿಗೆ ಬಂದಳು.
“ಏನಾಯ್ತಮ್ಮ …. ಯಾಕೆ ಅಳುತ್ತಿದ್ದಿ ? ಎಂದು ಯಶೋದಮ್ಮ ವಿಷಾರಿಸಿದರು.
ಜ್ಯೋತ್ಸ್ನಾ ತನ್ನ ಪುಟ್ಟ ಕೈಯನ್ನು ದವಡೆ ಮೇಲಿಟ್ಟು ಯಶೋದಮ್ಮನ ಮುಖ ನೋಡುತ್ತಾ ಅಳತೊಡಗಿದಳು ತಾನು ಮಾತಡನಾಡುತ್ತಿದ್ದ ನೆಂಟರನ್ನು ಕುರಿತು ಒಂದು ನಿಮಿಷ ಬಂದೆ, ಒಳಗೆ ನಡೆಯಿರಿ ಎಂದು ಹೇಳುತ್ತಾ ತನ್ನ ಮೊಮ್ಮಗಳ ಕೈಹಿಡಿದು ವರನ ಕೋಣೆ ಕಡೆ ಹೆಜ್ಜೆ ಹಾಕಿದರು.
ಜ್ಯೋತ್ಸ್ನಾಳ ತಾಯಿ ಜಲಜಾಕ್ಷಿ ಮದುಮಗನ ಸಿಂಗಾರ ಮಾಡುವ ಅವರಸರದಲ್ಲಿದ್ದುದು ಕಂಡು ಬಂತು. ಅದಕ್ಕೆ ಯಶೋದಮ್ಮ ಅವಳನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಅಲ್ಲೇ ಹಾಸಿದ್ದ ಚಾಪೆಯ ಮೇಲೆ ತಾನು ಕುಳಿತರು. ಜ್ಯೋತ್ಸ್ನಾಳ ಕೈ ಎಳೆದು ಪಕ್ಕದಲ್ಲಿ ಕೂರಿಸಿಕೊಂಡರು.
ಬಾಯಿ ತೆರೆ ಮಗು, ನಂಗೆ ತೋರಿಸು, ಏನಾಗಿದೆ ಎಂದು ನೋಡುತ್ತೇನೆ ಎಂದು ಹೇಳಿದರು ಯಶೋದಮ್ಮ. ಪುಟ್ಟ ಜ್ಯೋತ್ಸ್ನಾ ಬಾಯಿ ಅಗಲವಾಗಿ ತೆರೆದು ಯಶೋದಮ್ಮ ನಿಗೆ ತೋರಿಸಿದಳು.
ಹಲ್ಲು ಹುಳುಕಾಗಿತ್ತು, ಒಸಡು ಸಹ ಕೆಂಪಾಗಿ ಊದಿಕೊಂಡಿರುವುದು ಕಾಣಿಸಿತು. ಈಗ ವೈದ್ಯರ ಬಳಿಗೆ ಹೋಗಲು ಸಾಧ್ಯವಾಗದು. ಏನು ಮಾಡಲಿ? ಎಂದು ಕ್ಷಣ ಕಾಲ ಯೋಚಿಸಿದರು ಯಶೋದಮ್ಮ. ಏನೋ ನೆನಪಾದಂತೆ ಕೂತಲ್ಲಿಂದ ಎದ್ದು ನೇರವಾಗಿ ಛತ್ರದಲ್ಲಿದ್ದ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದರು.

ಸಾಸಿವೆ ಹಲ್ಲುನೋವಿಗೆ ಪರಿಹಾರ :

ಭಟ್ರೇ…….ಭಟ್ರೇ ಎಂದು ಶಂಕರಭಟ್ರನ್ನು ಕರೆದರು. ಯಶೋದಮ್ಮನ ಧ್ವನಿ ಕೇಳಿ ಶಂಕರಭಟ್ರು ಹೊರ ಬಂದು “ಕರೆದ್ರಾ ಅಮ್ಮಾ? ಎಂದು ವಿಚಾರಿಸಿದರು. ಹೌದು ಭಟ್ರೇ. ನನ್ನ ಮೊಮ್ಮಗು ಜ್ಯೋತ್ಸ್ನಾಳಿಗೆ ಹಲ್ಲು ನೋವಂತೆ. ನಿಮ್ಮಲ್ಲಿ ಸ್ವಲ್ವ ಸಾಸಿವೆ ಕಾಳು ತೆಗೆದು ಕೊಂಡು ಹೋಗೋಣ ಎಂದು ಕರೆದೆ ಎಂದರು ಯಶೋದಮ್ಮ.
ಸಾಸಿವೆ ಕಾಳಿನಲ್ಲಿ ಏನು ಮಾಡ್ತೀರಿ? ಎಂದು ಕೇಳಿದರು ಶಂಕರಭಟ್ರು.
ಸಾಸಿವೆ ಕಾಳಿನ್ನು ಜಜ್ಜಿ ನೋವಿರುವ ಹಲ್ಲಿಗೆ ಪಟ್ಟಿ ಹಾಕಿ 10 ನಿಮಿಷದ ನಂತರ ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ತಕ್ಷಣ ಕಮ್ಮಿ ಆಗುತ್ತದೆ ಎಂದರು ಯಶೋದಮ್ಮ. ಹೌದೆ? ನನಗೂ ಚಿಕ್ಕವನಿದ್ದಾಗ ನನ್ನ ಅಜ್ಜಿ ಹೀಗೆ ಮಾಡಿದ್ದು ನೆನಪಾಯಿತು. ಈಗ ಯಾರೂ ಮನೆ ಮದ್ದು ಮಾಡುವುದಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ದೊಡ್ಡ ದೊಡ್ಡ ಆಸ್ವತ್ರೆ-ವೈದ್ಯರಲ್ಲಿಗೆ ಹೋಗುವುದು ರೂಢಿಯಾಗಿದೆ ಎಂದು ಹೇಳಿದರು ಶಂಕರ ಭಟ್ಟರು. ನಂತರ ಮಾಣೀ . . … ಏ ಮಾಣೀ ಅಲ್ಲಿಂದ ಒಂದು ಸ್ವಲ್ವ ಸಾಸಿವೆ ಕಾಳು ತಾ ಎಂದು ಕೂಗಿ ಹೇಳಿದರು ಶಂಕರ ಭಟ್ರರು.
ಮಾಣಿ ತಂದ ಸಾಸಿವೆ ಕಾಳನ್ನು ಯಶೋದಮ್ಮನ ಕೈಗೆ ಇತ್ತರು ಶಂಕರಭಟ್ರು.
mustardಉಪಕಾರವಾಯ್ತು ಭಟ್ರೆ ಎಂದು ಹೇಳಿ ಯಶೋದಮ್ಮ ಜ್ಯೋತ್ಸ್ನಾಳ ಕಡೆ ನೋಡಿದರು. ಜ್ಯೋತ್ಸ್ನಾ ಇದು ಮದುವೆ ಛತ್ರ. ಇಲ್ಲಿ ಸಾಸಿವೆ ಕಾಳನ್ನು ಕುಟ್ಟಲು ಕುಠಾಣಿ ಇದೆಯೋ ಇಲ್ಲವೋ ಗೊತ್ತಿಲವಲ್ಲಾ. ನೀನು ಒಂದು ಕೆಲಸ ಮಾಡು. ನಿನ್ನ ಬಾಯಿಗೆ ಈ ಸಾಸಿವೆ ಕಾಳನ್ನು ಹಾಕುತೇನೆ. ಎಲ್ಲಿ ನೋವಿದೆಯೋ ಅಲ್ಲೇ ಈ ಕಾಳನ್ನು ಜಗಿದು, ಹಲ್ಲಿನಿಂದ ಸಾಸಿವೆ ಕಾಳನ್ನು ಕಚ್ಚಿ ಹಿಡಿ, ಹತ್ತು ನಿಮಿಷದಲ್ಲಿ ನಿನ್ನ ನೋವು ಹೋಗುತ್ತದೆ. ಅಳಬೇಡಾ ಕಂದ, ಎಂದು ಹೇಳುತ್ತಾ ತನ್ನ ಸೊಂಟಕ್ಕೆ ಸಿಕ್ಕಿಸಿದ್ದ ಕರವಸ್ತ್ರವನ್ನು ಎಳೆದು ಜ್ಯೋತ್ಸ್ನಾಳ ಕಣ್ಣು ಒರೆಸಿದರು ಯಶೋದಮ್ಮ. ನಂತರ ಜ್ಯೋತ್ಸ್ನಾಳನ್ನು ಬಾಯಿ ತೆರೆಯುವಂತೆ ಹೇಳಿ 1\4 ಚಮಚದಷ್ಟು ಸಾಸಿವೆ ಕಾಳನ್ನು ಅವಳ ಬಾಯಿಗೆ ಹಾಕಿದರು.
ಅಜ್ಜಿ ಹೇಳಿದಂತೆ ಜ್ಯೋತ್ಸ್ನಾ ಸಾಸಿವೆ ಕಾಳನ್ನು ನೋವಿರುವ ಹಲ್ಲಿನಲ್ಲಿ ಜಿಗಿದು ಕಚ್ಚಿ ಹಿಡಿದಳು.
ಹಲ್ಲಿನಲ್ಲಿ ಕಚ್ಚಿಕೊಂಡು ಖಾರ …… ಎಂದು ಹೇಳುತ್ತಾ ಕೈ ಒದರಿದಳು ಜ್ಯೋತ್ಸ್ನಾ.
ಹಠ ಮಾಡಬಾರದು ಪುಟ್ಟ. ಮದುವೆ ಛತ್ರ ಅಲ್ಲವೇ ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿರುತ್ತಾರೆ. ನೀನು ಹತ್ತು ನಿಮಿಷ ತಡೆದುಕೋ ಎಂದು ಹೇಳುತ್ತಾ ಸಮಾಧಾನದಿಂದ ಮೊಮ್ಮಗಳ ತಲೆ ನೇವರಿಸಿದರು ಯಶೋದಮ್ಮ.
ಆಯಿತು ಎಂದು ಜ್ಯೋತ್ಸ್ನಾ ತಲೆ ಆಡಿಸಿದಾಗ ಯಶೋದಮ್ಮ ಪ್ರೀತಿಯಿಂದ ಅವಳ ಹಣಿಗೆ ಮುತ್ತಿಟ್ಟರು.
ಜ್ಯೋತ್ಸ್ನಾಳನ್ನು ಮದುವೆ ಮಂಟಪದ ಒಂದು ಪಕ್ಕದಲ್ಲಿ ಕೂರಿಸಿದರು ಯಶೋದಮ್ಮ. ಇಲ್ಲೇ ಕುಳಿತು ಮಾವನ ಮದುವೆ ನೋಡು. ನಿಂಗೊಬ್ಬಳು ಅತ್ತೆ ಬರ್ತಾರೆ. ಎಂದು ಹೇಳಿದರು ಯಶೋದಮ್ಮ.
ಮುಗುಳ್ನಕ್ಕ ಜ್ಯೋತ್ಸ್ನಾಳ ಗಲ್ಲವನ್ನು ನೇವರಿಸಿ ಯಶೋದಮ್ಮ ವರನ ಕೋಣಿಯ ಕಡೆ ಹೆಜ್ಜೆ ಹಾಕಿದರು.
ಎಲ್ಲಮ್ಮ ಹೋಗಿದ್ದೇ? ಎಲ್ಲರೂ ನಿನ್ನನ್ನೇ ಕೇಳ್ತಾ ಇದ್ದರು. ಎಲ್ಲರೂ ಇಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ಗಣೀಶನಿಗೆ ಪೂಜೆ ಮಾಡಿ ಹಣ್ಣು ಕಾಯಿ ಸಮರ್ಪಿಸಿ ಬರಲು ಹೋಗಿದ್ದಾರೆ. ನೋಡಿ, ಬಂದೇ ಬಿಟ್ಟರು ಮಂಟಪಕ್ಕೆ ಹೋಗೋಣ ನಡೆಯಿರಿ ಎಂದು ಹೇಳುತ್ತ ಆತುರಪಡಿಸಿದಳು ಜಲಜಾಕ್ಷಿ.
ಜಲಜಾಕ್ಷಿ ಮತ್ತು ಯಶೋದಮ್ಮ ಮಂಟಪದ ಬಳಿಗೆ ಬಂದರು. ಮದುವೆ ಶಾಸ್ತ್ರ ಪ್ರಾರಂಭವಾಯ್ತು. ಯಶೋದಮ್ಮನಿಗೆ ಜ್ಯೋತ್ಸ್ನಾಳ ಬಗ್ಗೆ ಮರೆತೇ ಹೋಗಿತ್ತು. ಮದುವೆ ಶಾಸ್ತ್ರ ಮುಗಿದು ಊಟವಾದ ನಂತರ ಜ್ಯೋತ್ಸ್ನಾಳ ಹಲ್ಲು ನೋವು ನೆನಪಾಗಿ ಯಶೋದಮ್ಮ ಜ್ಯೋತ್ಸ್ನಾಳಿಗಾಗಿ ಹುಡುಕಾಡಿದರು.
ಜ್ಯೋತ್ಸ್ನಾ ಸ್ನೇಹಿತರೊಂದಿಗೆ ಕುಳಿತು ಅಂತ್ಯಾಕ್ಷರಿ ಹಾಡುತ್ತ ಖುಷಿಯಾಗಿದ್ದುದನ್ನು ದೂರದಿಂದಲೇ ಗಮನಿಸಿದರು ಯಶೋದಮ್ಮ.
ಜ್ಯೋತ್ಸ್ನಾಳ ಬಳಿಗೆ ಬಂದು, ಹಲ್ಲು ನೋವು ಎಂದು ಅಳುತ್ತಿದ್ದೆ. ಈಗ ಹೇಗಿದೆ? ಎಂದು ಕೇಳಿದರು ಯಶೋದಮ್ಮ.
ಅಜ್ಜಿ ಹಲ್ಲು ನೋವೂ ಇಲ್ಲ. ಗಿಲ್ಲು ನೋವೂ ಇಲ್ಲಾ….. ಎಂದು ರಾಗವಾಗಿ ಹಾಡಿ… ಲೇ ನೀನು “ಲ” ಅಕ್ಷರದಿಂದ ಪ್ರಾರಂಭವಾಗುವ ಹಾಡನ್ನು ಹಾಡಬೇಕು ಇಂದು ತನ್ನ ಗೆಳತಿಗೆ ಹೇಳುತ್ತಾ, ಯಶೋದಮ್ಮನ ಕಡೆ ನೋಡಿ ಕಣ್ಣು ಮಿಟುಕಿಸಿ ತುಂಟ ನಗೆ ಬೀರಿದಳು ಜ್ಯೋತ್ಸ್ನಾ.
ಜ್ಯೋತ್ಸ್ನಾಳ ಹಲ್ಲು ನೋವು ಸಾಸಿವೆ ಕಾಳಿಂದ ಪರಿಹಾರವಾಯ್ತಲ್ಲ ಎಂದು ನೆಮ್ಮದಿಯಿಂದ ಎದೆ ಮೇಲೆ ಕೈಯಿಟ್ಟು, ಅಪ್ಪಾ ದೇವರೆ, ಎಂದು ಹೇಳಿ ಮುಂದಿನ ಕೆಲಸ ಕಾರ್ಯಗಳ ಕಡೆಗೆ ಗಮನ ಹರಿಸಿದರು ಯಶೋದಮ್ಮ.

ನಾರಾಯಣಿ ಭಟ್

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!