Vydyaloka

ರೇನ್‍ಬೊ ಆಸ್ಪತ್ರೆಯಲ್ಲಿ ಭಾರತದ ಅತಿಕಿರಿಯದಾದ ಶಿಶು ಜನನ

ಹೈದರಾಬಾದ್ : ಭಾರತದ ಹೈದರಾಬಾದ್‍ನಲ್ಲಿ ಇನ್ನೊಂದು ವೈದ್ಯಕೀಯ ಅಚ್ಚರಿ ಬೆಳಕಿಗೆ ಬಂದಿದೆ. ದಕ್ಷಿಣ ಏಷಿಯಾದ ಅತಿಕಿರಿಯದಾದ ಶಿಶುವು ಹೈದರಾಬಾದ್‍ನಲ್ಲಿ ಜನಿಸಿದೆ. ಛತ್ತೀಸ್ಗಢ ದಂಪತಿ ನಿತಿಕಾ -ಸೌರಭ್ ಅವರಿಗೆ ಹೆಣ್ಣು ಶಿಶು “ಚೆರ್ರಿ” ಜನಿಸಿದೆ. ಹೈದರಾಬಾದ್‍ನ ರೇನ್‍ಬೋ ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಜನಿಸಿದೆ.
ಸುಮಾರು 25 ವಾರಗಳ ಅವಧಿಗೆ ಜನಸಿದ (ನಿರೀಕ್ಷಿತ ದಿನಕ್ಕಿಂತಲೂ ನಾಲ್ಕು ತಿಂಗಳು ಮೊದಲು) ಜನಿಸಿದ ಈ ಶಿಶುವನ್ನು ಆಸ್ಪತ್ರೆಯ ವೈದ್ಯಕೀಯ ಪರಿಣಿತರಾದ ಡಾ. ದಿನೇಶ್ ಕುಮಾರ್ ಚಿರ್ಲಾ ನೇತೃತ್ವದ ವೈದ್ಯರ ತಂಡ ಸೂಸೂತ್ರವಾಗಿ ಹೆರಿಗೆ ಮಾಡಿಸಿತು. ಶಿಶುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದಾಗ ತೂಕ 1.980 ಕೆ.ಜಿ. ಇತ್ತು.
ಇದು, ನಿಖಿತಾ ಅವರಿಗೆ ಐದನೇ ಮಗು. ಈ ಹಿಂದೆ ಅವರಿಗೆ ನಾಲ್ಕು ಬಾರಿ ಗರ್ಭಸ್ರಾವವಾಗಿತ್ತು. ಇದು, ಅವರಿಗೆ ಶಿಶುವನ್ನು ಹೊಂದಲು ಇದ್ದ ಏಕೈಕ ಅವಕಾಶ. 24 ವಾರಗಳ ಅವಧಿಯ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಶಿಶುವಿನ ಸುತ್ತ ನೀರಿನ ಅಂಶ ಕಡಿಮೆ ಇರುವುದು ಕಂಡುಬಂದಿತು. ಶಿಶು ಕೇವಲ 350 ಗ್ರಾಂ ತೂಕವಿತ್ತು. ತಾಯಿಯಿಂದ ಶಿಶುವಿಗೆ ರಕ್ತದ ಹರಿಯುವಿಕೆಯೂ ಕ್ಷೀಣಿಸುತ್ತಿತ್ತು. ಗರ್ಭದಲ್ಲಿ ಶಿಶು ಉಳಿಯುವ ಯಾವುದೇ ಸಾಧ್ಯತೆಗಳು ಇರಲಿಲ್ಲ. ಪೋಷಕರು ಅನೇಕ ಆಸ್ಪತ್ರೆಗೆಗಳಿಗೆ ಭೇಟಿ ನೀಡಿದ್ದರು. ಯಾರೊಬ್ಬರೂ ಬದುಕಿನ ಭರವಸೆ ನೀಡಲಿಲ್ಲ. ಬಳಿಕ ಅವರನ್ನು ರೇನ್‍ಬೋ ಮಕ್ಕಳ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು.
ಪೋಷಕರು ರೇನ್‍ಬೋ ಮಕ್ಕಳ ಆಸ್ಪತ್ರೆಯ ವೈದ್ಯರನ್ನು ಭೇಟಿಮಾಡಿದ್ದರು. ಇಲ್ಲಿ ಪೋಷಕರಿಗೆ ಆಸ್ಪತ್ರೆಯು 24-25 ವಾರ ಅವಧಿಯ ಶಿಶುವನ್ನು ಆರೈಕೆ ಮಾಡಿರುವ ನಿದರ್ಶನವಿದೆ ಎಂದು ಭರವಸೆ ನೀಡಿದರು. ಈ ಮೊದಲು ಇಲ್ಲಿ ಜನಿಸಿದ ಅತಿಕಿರಿಯದಾದ ಶಿಶುವಿನ ತೂಕ 449 ಗ್ರಾಂ. ಪರಿಸ್ಥಿತಿ ಗಮನಿಸಿದ ವೈದ್ಯರ ತಂಡ ಇದನ್ನು ಗಮನಿಸಿ ಕೊಳ್ಳಲು ಸಜ್ಜಾಯಿತು. ನಿಖಿತಾಗೆ ಆಸ್ಪತ್ರೆಯ ಪೆರಿನಟಲ್ ಕೇಂದ್ರಕ್ಕೆ ದಾಖಲಾಗಲು ಸೂಚಿಸಲಾಯಿತು. ನಿಖಿತಾ ಅವರನ್ನು ಬಳಿಕ ಆಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಕರೆತರಲಾಯಿತು.
ಹಿರಿಯ ಪ್ರಸೂತಿ ತಜ್ಞರು ಇದ್ದ ಪರಿಣಿತರ ವೈದ್ಯರ ತಂಡ ಸವಿವರ ಹೆರಿಗೆ ಚಿಂತನೆಯೊಂದಿಗೆ ಬಂದಿದು, ಫೆಬ್ರುವರಿ 27ರಂದು ನಿಖಿತಾ 375 ಗ್ರಾಂ ತೂಕವಿರುವ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದು, ಮಗುವು ಕೇವಲ 20 ಸೆಂ.ಮೀ ಉದ್ದವಿದ್ದು, ಅಂಗೈಯಲ್ಲಿ ಹಿಡಿದುಕೊಳ್ಳಬಹುದಾಗಿತ್ತು. ಶಿಶುವಿನ ಬೆಳವಣಿಗೆಯನ್ನು ಆಸ್ಪತ್ರೆ ಗಮನಿಸಲಿದೆ ಎಂದು ಪೋಷಕರಿಗೆ ಭರವಸೆ ನೀಡಲಾಯಿತು.
ಚೆರ್ರಿ ಪ್ರಕರಣ ಉಲ್ಲೇಖಿಸಿದ ರೇನ್‍ಬೋ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ರಮೇಶ್ ಕಂಚರ್ಲಾ ಅವರು, `ಅತ್ಯಾಧುನಿಕ ಚಿಕಿತ್ಸಾಸೌಲಭ್ಯದ ಕಾರಣ ಹೆರಿಗೆಯ ನಂತರ ನಾವು 375 ಗ್ರಾಂ ತೂಕದ ಶಿಶುವನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆವು ಎಂದರು.
20 ವರ್ಷಗಳ ಸತತ ಶ್ರಮದ ಪರಿಣಾಮ ಇಂಥದೊಂದು ಪರಿಣಿತ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗಿದೆ. ನಾವು ಪರಿಣಿತ ಪ್ರಸೂತಿ ತಜ್ಞರು, ಮಹಿಳಾ ರೋಗ ತಜ್ಞರು ಸೇರಿ ವಿವಿಧ ತಜ್ಞರನ್ನು ಒಳಗೊಂಡಿದ್ದೇವೆ. ಸೇವಾ ಬದ್ಧ ಶುಶ್ರೂಷಕರ ತಂಡವಿದೆ. ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕವು ಅತ್ಯಾಧುನಿಕವಾಗಿದ್ದು, ಸಕಲ ಸೌಲಭ್ಯವನ್ನು ಹೊಂದಿದೆ. ರೇನ್‍ಬೋ ನವಜಾತ ಶಿಶುಗಳ ಆರೈಕೆಯಲ್ಲಿ ಪರಿಣಿತಿಯನ್ನು ಪಡೆದಿದೆ. ಪ್ರಸೂತಿ ಆರೈಕೆ ವಿಷಯದಲ್ಲಿ ಹೊಸ ಮೈಲುಗಲ್ಲು ಸಾಧಿಸುತ್ತಿದೆ ಎಂದರು.
ಪ್ರಕರಣವನ್ನು ವಿವರಿಸಿದ ರೇನ್‍ಬೋ ಆಸ್ಪತ್ರೆಯ ತೀವ್ರ ನಿಗಾ ಘಟಕದ ನಿರ್ದೇಶಕ ಡಾ.ದಿನೇಶ್ ಕುಮಾರ್ ಚಿರ್ಲಾ ಅವರು, `’ಶಿಶುವಿನ ಜನನದ ನಂತರದ 3-4 ದಿನಗಳು ಶಿಶುವಿಗೆ ನಿರ್ಣಾಯಕವಾಗಿ ಇರುತ್ತವೆ. ವಿಶೇಷವಾಗಿ ಈ ಪ್ರಕರಣದಲ್ಲಿ ಆಮ್ಲಜನಕ ಪ್ರಮಾಣ ಕುಗ್ಗುವುದು, ಬಿಪಿ ಮಟ್ಟ ಇಳಿಯುವುದು ಹೀಗೆ ವಿವಿಧ ಸವಾಲುಗಳು ಇದ್ದವು. ನಾವು ಲಭ್ಯವಿರುವ ಅತಿ ಸಣ್ಣದಾದ ಕೊಳವೆಯನ್ನು ಶಿಶುವಿನ ಉಸಿರಾಟದ ಸಮಸ್ಯೆ ನೀಗಿಸಲು ಬಳಸಿದೆವು. ಶಿಶುವಿಗೆ ಶ್ರವಣ ದೋಷವೂ ಇತ್ತು ಜನನರ ನಂತರ ಸಾಮಾನ್ಯವಾಗಿ ಮುಚ್ಚಿಕೊಳ್ಳುವ ಭಾಗವು ಚೆರ್ರಿ ವಿಷಯದಲ್ಲಿ ಆಗಿರಲಿಲ್ಲ. ಶಿಶುವನ್ನು ವೆಂಟಿಲೇಟರ್‍ನಲ್ಲಿ ಇಟ್ಟು ವಿಶೇಷ ಆರೈಕೆ ಮಾಡಲಾಯಿತು. ಅದೃಷ್ಟವಶಾತ್ ಶಿಶುವಿಗೆ ಮೆದುಳಿನಲ್ಲಿ ರಕ್ತಸ್ರಾವ ಆಗಿರಲಿಲ್ಲ.
5ನೇ ದಿನ ಚೆರ್ರಿಯ ಶ್ವಾಸಕೋಶದಲ್ಲಿ ರಕ್ತಸ್ರಾವ ಕಂಡುಬಂದಿದ್ದು, ವಿಶೇಷ ವೆಂಟಿಲೇಟರ್‍ಗೆ ಸ್ಥಳಾಂತರ ಮಾಡಲಾಯಿತು. ಅಲ್ಲಿ ಶಿಶುವಿನ ಯಶಸ್ವಿ ನಿರ್ವಹಣೆ ನಡೆಯಿತು. ಆದರೆ, ಶಿಶುವಿಗೆ ವೆಂಟಿಲೇಟರ್ ಸುಮಾರು 105 ದಿನ ಬೇಕಾಗಿತ್ತು. ಅನೇಕ ತುರ್ತು ಸಂದರ್ಭಗಳನ್ನು ಶಿಶುವು ಯಶಸ್ವಿಯಾಗಿ ದಾಟಿತು.
ಚೆರ್ರಿ ಪ್ರಕರಣವು ವಿಶೇಷ ಹಾಗು ಸಂಕೀರ್ಣವಾಗಿತ್ತು. ಜಾಂಡೀಸ್, ಹಾಲುಣಿಸುವ ಸಮಸ್ಯೆ, ರಕ್ತ ಸಂಚಲನ, ಶ್ವಾಸಕೋಶದ ಸೋಂಕು ಇತ್ತು. ವಿಶೇಷ ಆರೈಕೆಯಿಂದಾಗಿ ಚೆರ್ರಿ ಇವುಗಳಿಂದ ಬೇಗ ಚೇತರಿಸಿಕೊಂಡಿತು. ಶಿಶುವನ್ನು ಆಸ್ಪತ್ರಯಿಂದ ಜನಿಸಿದ 128 ದಿನಗಳ ನಂತರ ಬಿಡುಗಡೆ ಮಾಡಲಾಯಿತು. ಚೆರ್ರಿ ಈಗ ಇತರೆ ಸಾಮಾನ್ಯ ಶಿಶುಗಳಂತೇ ಇದ್ದಾಳೆ. ಆಕೆಯ ತೂಕ 2.14 ಕೆ.ಜಿಗೆ ತಲುಪಿದೆ.
ಸಂತಸ ವ್ಯಕ್ತಪಡಿಸಿದ ಚೆರ್ರಿ ತಾಯಿ ನಿಖಿತಾ, `ರೇನ್‍ಬೋ ಆಶ್ಪತ್ರೆಯ ವೈದ್ಯರನ್ನು ಭೇಟಿ ಮಾಡುವವರೆಗೆ ನಾನು ವಿಶ್ವಾಸವನ್ನೇ ಕಳೆದುಕೊಂಡಿದ್ದೆ. ಮಗುವನ್ನು ಜೀವಂತ ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಅನೇಕ ತೊಡಕುಗಳ ನಂತರ ಆಕೆ ಮನೆಗೆ ಬರುತ್ತಿದ್ದಾಳೆ. ರೇನ್‍ಬೋ ಆಸ್ಪತ್ರೆಯ ಪರಿಣಿತ ವೈದ್ಯರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಆಸ್ಪತ್ರೆ ಇವಳಿಗಾಗಿ ಸಾಕಷ್ಟು ಶ್ರಮ ತೆಗೆದುಕೊಂಡಿದೆ. ನಾವು ಅವಳಿಗೆ ಚೆರ್ರಿ ಎಂದು ಹೆಸರಿಡಲು ಬಯಸುತ್ತೇವೆ’ ಎಂದರು.
ಚೆರ್ರಿ ಮನೆಗೆ ಮರಳುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾ. ದಿನೇಶ್ ಕುಮಾರ್ ಚಿರ್ಲಾ ಅವರು, `ಒಂದು ತಂಡದ ಕಾರ್ಯದ ಫಲವಾಗಿ ನಾವು ಇಂದು ಚೆರ್ರಿಯನ್ನು ಮನೆಗೆ ಕಳುಹಿಸಲು ಶಕ್ತರಾಗಿದ್ದೇವೆ. ಆಸ್ಪತ್ರೆಯಲ್ಲಿ ದಿನದ 24 ಗಂಟೆ ಗುಣಮಟ್ಟದ ಸೇವೆ ಲಭ್ಯವಿದೆ. ಪ್ರಸೂತಿ ತಜ್ಞರ ತಂಡ ಚೆರ್ರಿಯನ್ನು ಮನೆಗೆ ಕಳುಹಿಸುವಲ್ಲಿ ಶ್ರಮಿಸಿದೆ ಎಂದರು.

ಆಸ್ಪತ್ರೆಯು ಸ್ಥಾಪನೆಯಾದಂದಿನಿಂದ ಸುಮಾರು 5000 ಕ್ಕಿಂತ ಹೆಚ್ಚು ಅವಧಿಪೂರ್ವ ಶಿಶುಗಳನ್ನು ರಕ್ಷಿಸಿದೆ. ಕೆಲವೊಂದು ಶಿಶುಗಳು ಬದುಕಲಾರದಷ್ಟೂ ಸಣ್ಣದಾಗಿದ್ದವು. ವಿಶ್ವ ಅವಧಿಪೂರ್ಣ ದಿನ ಆಯೋಜನೆ ನಿಮಿತ್ತ ರೇನ್‍ಬೋ ಆಸ್ಪತ್ರೆಯು 2016ರಲ್ಲಿ ಒಂದೇ ದಿನ 445 ಅವಧಿಪೂರ್ವ ಶಿಶುಗಳನ್ನು ಒಂದೇ ಚಾವಣಿಡಿಗೆ ತಂದಿತ್ತು. ಇದು, ಇದುವರೆಗಿನ ಅತಿಹೆಚ್ಚು ಸಂಖ್ಯೆಯ ಒಂದುಗೂಡುವಿಕೆ. ಇದು, 2012ರಲಿ ಅರ್ಜೆಂಟೀನಾದಲ್ಲಿ ಒಂದೇ ದಿನ 386 ಶಿಶುಗಳು ಒಟ್ಟುಗೂಡಿದ್ದ ದಾಖಲೆಯನ್ನು ಅಳಿಸಿಹಾಕಿತು. ಈ ದಾಖಲೆಯು ಆಸ್ಪತ್ರೆಯ ಪರಿಣಿತ ಸೇವೆಗೆ ಸಂದ ಹೆಮ್ಮೆಯಾಗಿದೆ. 

 

Share this: