Vydyaloka

ಸೋರಿಯಾಸಿಸ್ ಮುಕ್ತಿಗೆ ಆಯುರ್ವೇದ ಚಿಕಿತ್ಸೆ

ಚರ್ಮವು ದೇಹದ ಒಳ ಅಂಗಗಳನ್ನು ಹೊರಜಗತ್ತಿನಿಂದ ಬೇರ್ಪಡಿಸುವ ಕೇವಲ ಒಂದು ಅಂಗವಲ್ಲ. ದೇಹದ ಹೊರ ಪರಿಸರಕ್ಕೆ ಜೈವಿಕ ಹಾಗೂ ಸಾಮಾಜಿಕ ಸಂಪರ್ಕವನ್ನು ಕಲ್ಪಿಸುವ ಸೂಕ್ಷ್ಮವಾದ ಬಹು ದೊಡ್ಡಅಂಗವಾಗಿದೆ. ಅಂತೆಯೇ ದೇಹದಲ್ಲಾಗುವ ಹಲವು ಬದಲಾವಣೆಗಳ ಪ್ರಭಾವವು ಚರ್ಮದಲ್ಲಿ ವ್ಯಕ್ತವಾಗುತ್ತದೆ, ಮತ್ತು ಹಲವು ಚರ್ಮರೋಗಗಳನ್ನು ಸಹ ವ್ಯಕ್ತಪಡಿಸುತ್ತದೆ.

ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ  ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಓಳಗಾಗುತ್ತಾ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಈ ರೋಗವು ಶೇಕಡ 2-3% ಜನಸಂಖ್ಯೆಯಲ್ಲಿಕಂಡು ಬಂದಿದ್ದು, 20 ವರ್ಷಪ್ರಾಯದವರಲ್ಲಿ ಕಂಡುಬರುತ್ತದೆ. ಸೋರಿಯಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತಲೆಬುರುಡೆಯ ಮೇಲೆ, ಬೆನ್ನು, ಹೊಟ್ಟೆಯ ಮೇಲೆ ಹಾಗೂ ಮೊಣಕೈ, ಮೊಣಕಾಲುಗಳಲ್ಲಿ ಈ ಚರ್ಮ ವ್ಯಾಧಿ ಕಾಣಿಸಿಕೊಳ್ಳುತ್ತದೆ. ಈ ರೋಗದಲ್ಲಿ ಚರ್ಮ ಕಣಗಳ ಉತ್ಪತ್ತಿಯ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ, ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತಹ ಪದರ ಉಂಟಾಗುತ್ತದೆ. ಸಣ್ಣದೊಂದು ಗುಳ್ಳೆ ಅಥವಾ ಗಾಯದ ಹಾಗೆ ಪ್ರಾರಂಭವಾಗಿ, ಕ್ರಮೇಣ ತನ್ನ ಗಾತ್ರವನ್ನು ವಿಸ್ತಾರಗೊಳಿಸುತ್ತಾ ದೇಹದ ಇತರೆ ಭಾಗಗಳಿಗೆ ಹರಡುತ್ತದೆ. ಕೆಲವೊಮ್ಮೆಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯದೆ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾಗು ಮೂಳೆಯ ಸಂದಿಗಳನ್ನು ಹಾನಿಮಾಡಿ ಸೋರಿಯಾಟಿಕ್‍ ಆರ್ಥರೈಟಿಸ್ ಗೆ ಒಳಪಡಿಸುತ್ತದೆ. ಕಾರಣ – ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು ಉಲ್ಬಣಿಸುತ್ತದೆ.

ಆಹಾರ ಪದ್ದತಿ ಹಾಗೂ ಸೇವಿಸುವ ಕ್ರಮ

ಈ ರೋಗದಲ್ಲಿ ಆಹಾರ ಪ್ರಾಮುಖ್ಯತೆ ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ, ಜಿಡ್ಡಿನ ಪ್ರದಾರ್ಥ, ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿಕಾಳು, ಕಫ ವೃದ್ದಿಸುವ ಪದಾರ್ಥಗಳಾದ ಮೊಸರು, ಉದ್ದು, ವಿರುದ್ದ ಆಹಾರ (ವಿರುದ್ದಗುಣ ಉಳ್ಳ ಆಹಾರದ ಸೇವನೆ) ಉದಾ- ಮೊಸರಿನೊಟ್ಟಿಗೆ ಮೀನಿನ ಸೇವನೆ, ಅತಿಯಾದಜಿಡ್ಡಿನ ಪದಾರ್ಥ, ಮಾನಸಿಕ ಒತ್ತಡ, ಧೂಮಪಾನ, ಮಧ್ಯಪಾನ, ದೇಹವನ್ನುಅತಿಯಾಗಿ ಬಿಸಿಲಿಗೆ ಒಡ್ಡುವುದು ಪ್ರಮುಖ ಕಾರಣಗಳು. ಇವುಗಳ ಸುದೀರ್ಘ ಉಪಯೋಗದಿಂದ ದೇಹದಲ್ಲಿನ ಕಫ ಹಾಗೂ ವಾತ ದೋಷದ ಸಮತೋಲನವು ವ್ಯತ್ಯಯಗೊಳ್ಳುತ್ತದೆ. ಟಾಕ್ಸಿನ್ಸ್‍ ಅಥವಾ ನಂಜಿನಾಂಶವನ್ನು ದೇಹದ ಸರ್ವ ಧಾತುಗಳಲ್ಲಿ ಕ್ರಮೇಣ ಶೇಖರಣೆಗೊಂಡು ಸೋರಿಯಾಸಿಸ್ ರೋಗವು ಉತ್ಪತ್ತಿಯಾಗುತ್ತದೆ.

ದೀರ್ಘಕಾಲಿಕವಾಗಿ ಮತ್ತೆಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು, ರೋಗದ ಪ್ರಾರಂಭಿಕ ಅವಸ್ಥೆಯಲ್ಲೆ ಚಿಕೆತ್ಸೆ ಪಡೆಯುವುದು ಉತ್ತಮ. ಆಯುರ್ವೇದದಲ್ಲಿ ಯಾವುದೇ ಅಡ್ದ ಪರಿಣಾಮವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು, ವಿಶೇಷವಾಗಿ ದೇಹವನ್ನು ಶುದ್ದೀಕರಿಸುವ ಪಂಚಕರ್ಮ ಚಿಕಿತ್ಸೆಯನ್ನು ಅಗತ್ಯವಾಗಿ ಮಾಡಲು ನಿರ್ದೇಶಿಸಲಾಗಿದೆ. ಇದರಿಂದ ಟಾಕ್ಸಿನ್ಸ್ ಅಂಶವು ದೇಹದಿಂದ ಹೊರಹೋಗಿ, ಜೀರ್ಣಪ್ರಕ್ರಿಯೆಯು ಪ್ರಾಕೃತಾವಸ್ಥೆಗೆ ತಲುಪಿ, ರೋಗದ ಪುನರುತ್ಪತ್ತಿಯನ್ನು ತಡೆಯುತ್ತದೆ. ತದನಂತರ ವ್ಯಾಧಿನಿರೋಧಕ ಶಕ್ತಿಯನ್ನು ವೃದ್ದಿಸುವ, ಸರ್ವಧಾತುಗಳಿಗೆ ಅಗತ್ಯ ಉತ್ತಮ ಸಾರಾಂಶವನ್ನು ನೀಡಿ, ಧಾತುಗಳಿಗೆ ಪುನರುಜ್ಜೀವನ ಕಲ್ಪಿಸಲು ರಸಾಯನಚಿಕಿತ್ಸೆಯನ್ನು ನೀಡಲಾಗುವುದು. ರೋಗದ ಅವಸ್ಥೆ ಹಾಗೂ ಲಕ್ಷಣಗಳ ಅನುಸರವಾಗಿ ಇತರೆ ಬಾಹ್ಯ ಚಿಕಿತ್ಸೆಗಳಾದ ತಕ್ರಧಾರ, ಗಿಡಮೂಲಿಕೆಗಳ ಲೇಪನ, ಘೃತಪಾನ (ಔಷಧಗಳಿಂದ ಸಂಸ್ಕಾರಿತ ತುಪ್ಪದ ಸೇವನೆ) ಕಷಾಯ ಪರಿಶೇಕ, ಜಲೌಕಚಿಕಿತ್ಸೆ(ಲೀಚ್‍ಥೆರಪಿ), ತೈಲಾಭ್ಯಂಜನವನ್ನು ಮಾಡಲಾಗುವುದು. ಪಥ್ಯಾಹಾರಗಳ ಸೇವನೆಯೊಂದಿಗೆ ರೋಗಿಯು ಉತ್ತಮ ಚಿಕಿತ್ಸಾ ಫಲವನ್ನು ಪಡೆಯುವುದಲ್ಲದೆ ರೋಗದ  ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

ಪಥ್ಯ ಹಾಗೂ ಜೀವನಪದ್ದತಿಯ ಸಲಹೆ

ಇವು ಪಥ್ಯ

ಡಾ. ಮಹೇಶ್ ಶರ್ಮಾ. ಎಂ
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್‍ ಆಫ್‍ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರುರಸ್ತೆ,
ಬೆಂಗಳೂರು – 560074
Mob: 9964022654

Ph: 08022718025
drsharmamysr@gmail.com

Share this: