Vydyaloka

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ: ಕೆ.ಆರ್. ಮಾರುಕಟ್ಟೆಯ ಅಂಗಡಿಗಳ ಮೇಲೆ ದಾಳಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಅಧಿಕಾರಿಗಳು ದಿನಾಂಕ: 05-06-2018 ರಂದು ಹಾಗೂ 06-06-2018 ರಂದು ನಗರದ ಕೃಷ್ಣರಾಜ ಮಾರುಕಟ್ಟೆಯ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟಿಕ್ ಚೀಲ, ಚಮಚ, ಲೋಟ, ತಟ್ಟೆ ಮತ್ತು ಥರ್ಮಕೋಲ್ ಬಟ್ಟಲುಗಳನ್ನು ಒಳಗೊಂಡಂತೆ ಒಟ್ಟು 500 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ನಿಯಮಾವಕಾಶದಂತೆ ಒಟ್ಟಾರೆ ರೂ. 21,000/-ಗಳ (ರೂಪಾಯಿ ಇಪ್ಪತ್ತೊಂದು ಸಾವಿರಗಳು ಮಾತ್ರ) ದಂಡ ವಿಧಿಸಲಾಗಿದೆ.

Share this: