ದೇಹದಾರ್ಢ್ಯ ಪಟುಗಳು ಮತ್ತು ಕ್ರೀಡಾಪಟುಗಳಿಗೆ ಶುಭಸುದ್ದಿ
ಶ್ರೇಷ್ಠ ಗುಣಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು
ಪಿಸಿಎ ಭಾರತದಾದ್ಯಂತ ಗುಣಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳ ಸರಣಿ ಆಯೋಜಿಸಲಿದೆ ಮತ್ತು ಕ್ರೀಡಾಪಟುಗಳಿಗೆ ವೇದಿಕೆ ಸೃಷ್ಟಿಸಲಿದೆ; ಆಗ ಕ್ರೀಡಾಪಟುಗಳು ಇತರೆ ಒತ್ತಡಗಳಿಂದ ಮುಕ್ತರಾಗಿ ದೇಹದಾರ್ಢ್ಯತೆಗೆ ಗಮನ ನೀಡಬಹುದು. ಇದರೊಂದಿಗೆ ಕ್ರೀಡಾಪಟುಗಳು ಉತ್ತಮ ಸ್ಪರ್ಧೆಗಳು, ಪಾರದರ್ಶಕ ತೀರ್ಪು,ಉತ್ತಮ ಬಹುಮಾನಗಳ ಮೂಲಕ ಅವರನ್ನು ಬೆಳೆಸಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಈ ಪ್ರಾರಂಭದ ಸಂದರ್ಭದಲ್ಲಿ ಪಿಸಿಎ ಬಾಡಿ ಪವರ್ ಅಂಡ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್‍ನ ಸಿಇಒ ಮತ್ತು ಸಂಸ್ಥಾಪಕ ನಿಕ್ ಓರ್ಟನ್, `ನಾನು ಭಾರತದಲ್ಲಿ ದೇಹದಾರ್ಢ್ಯ ಸ್ಪರ್ಧೆಗಳ ಸರಣಿ ನಡೆಸಲು ಬಹಳ ಉತ್ಸುಕನಾಗಿದ್ದೇನೆ. ಇದು ಶ್ರೇಷ್ಠ ಕ್ರೀಡಾಪಟುಗಳಿಗೆ ಪುರಸ್ಕರಿಸಲಿದೆ. ಪಿಸಿಎ ಇಂಡಿಯಾ ಅಧ್ಯಕ್ಷ ಶ್ರೀ ರಘುನಂದನ್ ಈ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ ಮತ್ತು ನಮ್ಮ ಪೂರ್ಣ ಬೆಂಬಲ ನೀಡಲಿದ್ದೇವೆ‘ ಎಂದರು.
ಪ್ರಮುಖ ಮೈಲಿಗಲ್ಲು
ದೇಹದಾಢ್ರ್ಯದಲ್ಲಿ ಜಾಗತಿಕ ನಾಯಕ
ಪಿಸಿಎ ಬ್ರಿಟನ್‍ನಲ್ಲಿ ಜಿಮ್ ಮಾಲೀಕರಾದ ರ್ಯಾನ್ ಅಲೆಕ್ಸಾಂಡರ್ ಮತ್ತು ವಾರೆನ್ ಡೈಸನ್ ಅವರಿಂದ ಪ್ರಾರಂಭಗೊಂಡಿದ್ದು ಯಾವುದೇ ಪೂರ್ವಾಗ್ರಹವಿಲ್ಲದೆ ದೇಹದಾರ್ಢ್ಯ ಪಟುಗಳನ್ನು ಗುರುತಿಸುವ ಮತ್ತು ದೇಹದಾರ್ಢ್ಯ ಪಟುಗಳ ಸಂಘಟನೆ ಮಾಡುವ ಉದ್ದೇಶ ಹೊಂದಿದೆ. ಪಿಸಿಎ ವಿಶ್ವದಾದ್ಯಂತ ವಿಸ್ತರಿಸಿದ್ದು ಈಗ ದಕ್ಷಿಣ ಆಫ್ರಿಕಾ, ಅಮೆರಿಕಾ ಮತ್ತು ಆಸ್ಟ್ರೇಲಿಯಾದಿಂದ ದಕ್ಷಿಣ ಕೊರಿಯಾ, ಚೀನಾ, ಯೂರೋಪ್ಗೆ ವಿಸ್ತರಿಸಿದೆ. ಪಿಸಿಎ ದೇಹದಾರ್ಢ್ಯ ಮತ್ತು ಫಿಟ್‍ನೆಸ್ ಉದ್ಯಮದಲ್ಲಿ ಜಾಗತಿಕ ಮುಂಚೂಣಿಯಲ್ಲಿದ್ದು ಕ್ರೀಡಾ ಜೀವನಶೈಲಿಯ ಬದ್ಧತೆ ಹೊಂದಿದ್ದು ಬ್ರಾಂಡ್ ಅನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶ ಹೊಂದಿದ್ದು ಸ್ಪರ್ಧಿ ಹಾಗೂ ಪ್ರೇಕ್ಷಕರ ಅನುಭವ ವಿಸ್ತರಿಸಲಿದೆ. ಪಿಸಿಎ ಸ್ಪರ್ಧೆಗಳಲ್ಲಿ ಪುರಸ್ಕರಿಸುವುದು ಮತ್ತು ಅತ್ಯುತ್ತಮ ತಾಣಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. 2017ರಲ್ಲಿ 16 ದೇಶಗ ಳ ಬಾಡಿ ಪವರ್ ಶೋ ಎಕ್ಸ್‍ಪೊದಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದು ಐದು ಹೊಸ ದೇಶಗಳು ಅಮೆರಿಕಾ, ಆಸ್ಟ್ರೇಲಿಯಾ, ಪೋಲೆಂಡ್, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರ್ಪಡೆಯಾಗಿವೆ.
ತತ್ವ ಮತ್ತು ಸಿದ್ಧಾಂತಗಳು
- ಪಿಸಿಎ ಹಲವಾರು ಪ್ರಮುಖ ಉದ್ಯಮದ ನಾಯಕರೊಂದಿಗೆ ಸೇರಿದ್ದು ನಾಲ್ಕು ಪ್ರಮುಖ ತತ್ವಗಳ ಅಡಿ ಕಾರ್ಯ ನಿರ್ವಹಿಸುತ್ತದೆ:
- ಏಕತೆ ಮತ್ತು ಮೌಲ್ಯಗಳು: ಪ್ರಾಮಾಣಿಕತೆ, ಮುಕ್ತತೆ, ನೈತಿಕತೆ ಮತ್ತು ಪಾರದರ್ಶಕತೆ
- ವೈವಿಧ್ಯತೆ: ವಿಭಿನ್ನ ಆಲೋಚನೆಗಳು, ಸಾಮಥ್ರ್ಯಗಳು ಮತ್ತು ಆಸಕ್ತಿಗಳೊಂದಿಗೆ ಆರೋಗ್ಯಕರ ಚರ್ಚೆಗೆ ಉತ್ತೇಜನ
- ಚಲನಶೀಲತೆ ಮತ್ತು ಆವಿಷ್ಕಾರ: ಫಿಟ್‍ನೆಸ್ ಮತ್ತು ದೇಹದಾರ್ಢ್ಯ ಕ್ಷೇತ್ರವನ್ನು ಸತತ ತಂತ್ರಜ್ಞಾನದ ಅಳವಡಿಕೆ ಮತ್ತು ಸಂಸ್ಥೆಯ ಗುಣಮಟ್ಟ, ನೋಟ ಮತ್ತು ಇಮೇಜ್ ವೃದ್ಧಿಸುವ ಮೂಲಕ ಸುಧಾರಣೆ.
ಬಯಕೆ: ಸಂಸ್ಥೆಯ ಹೃದಯದಲ್ಲಿದೆ
ನಿಕ್ ಓರ್ಟನ್-ಸಿಇಒ ಮತ್ತು ಸಂಸ್ಥಾಪಕರು-ಬಾಡಿ ಪವರ್ ಅಂಡ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್, ಪಿಸಿಎ. ರಘುನಂದನ್- ಅಧ್ಯಕ್ಷರು,ಪಿಸಿಎ ಇಂಡಿಯಾ, ಜೋಷ್ ಮಾಲೆ-ಮಿ.ಯೂನಿವರ್ಸ್, ಪಿಸಿಎ ಚಾಂಪಿಯನ್, ಡಾನ್ ವೇನ್ಸ್- ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಫಿಟ್‍ನೆಸ್ ಮಾಡೆಲ್,ಕಿಶೋರ್ ಕುಮಾರ್- ಫಿಟ್‍ಫ್ಯಾಕ್ಟರ್ ಇಂಡಿಯಾ ವಿಜೇತರು, ಸೊನಾಲಿ ಸ್ವಾಮಿ-ಫಿಟ್‍ಫ್ಯಾಕ್ಟರ್ ಇಂಡಿಯಾ ವಿಜೇತರು, ಅಂತಾರಾಷ್ಟ್ರೀಯ ದೇಹದಾಢ್ರ್ಯ ಪಟು ಪ್ರಸಾದ್ ಕುಮಾರ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕøತ ಮತ್ತು ಬಾಲಕೃಷ್ಣ-ಮಿ.ಏಷ್ಯಾ ಮತ್ತು ಪಿಸಿಎ ಕ್ರೀಡಾಪಟು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.