ಪ್ರಸವಾನಂತರದ ಖಿನ್ನತೆ ಸಮಸ್ಯೆ ಏಕೆ ಹೆಚ್ಚುತ್ತಿದೆ?

ಪ್ರಸವಾನಂತರದ ಖಿನ್ನತೆ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇದು ದೀರ್ಘಾವಧಿ ಕಾಡುವ ಸಮಸ್ಯೆಯಾಗಿದ್ದು, ಗಂಭೀರ ಸ್ಥಿತಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.ಪತ್ನಿಯಲ್ಲಿ ಕಂಡುಬರುವ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಿಸುತ್ತದೆ. 

ಒಂದು ಮಗುವಿನ ಜನನ ದಂಪತಿ ಪಾಲಿಗೆ ಬದುಕಿನಲ್ಲೇ ಒಂದು ಅವಿಸ್ಮರಣೀಯ ಕ್ಷಣ. ಆದರೆ ಕೆಲವೇ ಕೆಲವು ದಂಪತಿ ಈ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಪಾಲಕರಲ್ಲಿ ಅದರಲ್ಲಿಯೂ ತಾಯಿಗೆ ಈ ಖಿನ್ನತೆ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಎದುರಾಗುವ ವೇದನೆಯನ್ನು ಪ್ರಸವಾನಂತರದ ಖಿನ್ನತೆ ಎಂದು ಬಣ್ಣಿಸಲಾಗುತ್ತದೆ. ಮಗುವಿನ ಜನನದ ನಂತರ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಇದರಿಂದಾಗಿ ತಾಯಿಯ ಶರೀರದ ಹಾರ್ಮೋನುಗಳಲ್ಲಿ ಒಂದಿಷ್ಟು ವ್ಯತ್ಯಾಸ ಉಂಟಾಗುತ್ತದೆ. ಈ ಅಸಮತೋಲನದ ಪರಿಣಾಮವೇ ಪ್ರಸವಾನಂತರದ ಖಿನ್ನತೆಗೆ (ಪಿಪಿಡಿ- Postpartum depression – PPD) ಪ್ರಮುಖ ಕಾರಣವಾಗಿ ಪರಿಣಮಿಸುತ್ತದೆ. ಇದು ದೀರ್ಘಾವಧಿ ಕಾಡುವ ಸಮಸ್ಯೆಯಾಗಿದ್ದು, ಗಂಭೀರ ಸ್ಥಿತಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.

new-baby

ಪ್ರಸವಾನಂತರದ ಖಿನ್ನತೆಯು ಹಲವಾರು ರೋಗ ಲಕ್ಷಣವನ್ನು ಪ್ರಚುರಪಡಿಸುತ್ತದೆ. ಇದರಲ್ಲಿ ಕಿರಿಕಿರಿ, ತೀವ್ರ ದುಃಖ ಅಥವಾ ಹತಾಶೆ, ಅನಿಯಮಿತ ಆಹಾರ ಸೇವನೆ, ಶಕ್ತಿಹೀನತೆ, ಮೂಡಿ ಅಥವಾ ಪ್ರಕ್ಷುಬ್ಧತೆ, ಆಗಾಗ್ಗೆ ಕಾಡುವ ತಲೆನೋವು, ದೈಹಿಕ ನೋವುಗಳು, ಮಗುವಿನೊಂದಿಗೆ ಒಂದೇ ಕಡೆ ಕೂತಿರುವ ತೊಂದರೆ ಹಾಗೂ ಮಗುವಿನ ಆರೈಕೆ ಮಾಡುವ ಸಾಮಥ್ರ್ಯದ ಕುರಿತು ಕೂಡ ಹಲವರಲ್ಲಿ ಅನುಮಾನ ವ್ಯಕ್ತವಾಗುವುದು ಸಮಸ್ಯೆಯ ಪ್ರಮುಖ ಲಕ್ಷಣಗಳು. ಈ ಖಿನ್ನತೆ ಸಮಸ್ಯೆಯು ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇನ್ನು ಕೆಲ ಪ್ರಕರಣಗಳಲ್ಲಿ ಪ್ರಸವಾನಂತರ ಒಂದು ತಿಂಗಳಲ್ಲಿ ಇಲ್ಲವೇ ಪ್ರಸವ ಪೂರ್ವ ಒಂದು ತಿಂಗಳ ಮುನ್ನ ಕಾಡುತ್ತದೆ. ಒಂದೊಮ್ಮೆ ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದ ಸಂದರ್ಭ, ತಿಂಗಳುಗಳ ಕಾಲ, ವರ್ಷಗಳ ಕಾಲ ಇದರ ಕಾಟ ಇರುತ್ತದೆ. ಗಮನಾರ್ಹ ಸಂಗತಿಯೆಂದರೆ ಇದು ತಾಯಿ ಹಾಗೂ ಮಗುವಿನ ಪ್ರಾಣಕ್ಕೇ ಅಪಾಯ ತಂದಿಡುವ ಸಾಧ್ಯತೆ ಇರುತ್ತದೆ.

ಪ್ರಸವಾನಂತರದ ಖಿನ್ನತೆಯ ಈ ಸಮಸ್ಯೆಯ ಮೇಲಿನ ಎಲ್ಲಾ ಲಕ್ಷಣಗಳೂ ಪಾಲಕರಲ್ಲಿ ಕಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಈ ಸಮಸ್ಯೆಯಿರುವುದು ದೃಢಪಡಬೇಕಾದರೆ ವೈದ್ಯರನ್ನು ಸಂಪರ್ಕಿಸಬೇಕು. ಅವರು ನೀಡಿದ ಸಲಹೆ, ಸೂಚನೆ ಹಾಗೂ ಚಿಕಿತ್ಸಾ ವಿಧಾನವನ್ನು ಪರಿಪಾಲಿಸಬೇಕು. ತಾಯಂದಿರಲ್ಲಿ ಹಾರ್ಮೋನು ಬದಲಾವಣೆ ಗರ್ಭಾವಸ್ತೆಯ ಮೊದಲು ಹಾಗೂ ಪ್ರಸವದ ನಂತರ ಆಗುತ್ತದೆ. ಈ ಸಂದರ್ಭಗಳು ಖಿನ್ನತೆಯ ಸಮಸ್ಯೆ ಹುಟ್ಟಲು ಪ್ರಮುಖ ಕಾರಣವಾಗಿರುತ್ತದೆ. ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಪ್ರಮಾಣ ಗರ್ಭಾವಸ್ಥೆಯಲ್ಲಿರುವ ಸಂದರ್ಭ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಪ್ರಸವವಾದ ತಕ್ಷಣ ಈ ಹಾರ್ಮೋನುಗಳು ದೀಢೀರ್ ಇಳಿಮುಖವಾಗುತ್ತವೆ. ಇದು ಈ ಸ್ಥಿತಿಗೆ ತಂದಿಡಲು ಪ್ರಮುಖ ಕಾರಣವಾಗುತ್ತದೆ.

ಸಾಮಾನ್ಯವಾಗಿ ತಾಯಂದಿರು ಪಿಪಿಡಿ ಜತೆ ಸಂಬಂಧ ಹೊಂದಿರುತ್ತಾರೆ. ತಂದೆ ಕೂಡ ಖಿನ್ನತೆಯ ಲಕ್ಷಣಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ ಇವರು ಭಾವನಾತ್ಮಕ ಕ್ಷೋಭೆಗೆ ಒಳಗಾಗುತ್ತಾರೆ. ಪತ್ನಿಯಲ್ಲಿ ಕಂಡುಬರುವ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಿಸುತ್ತದೆ. ಅರ್ಧದಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಿಕೊಳ್ಳಲು ಪುರುಷರು ಮುಂದಾಗದಿದ್ದರೆ, ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಲಾಗದೇ ಮಕ್ಕಳ ಮೇಲೆ ಹಿಂಸಾತ್ಮಕವಾಗಿ ಇವರು ತಿರುಗುತ್ತಾರೆ. ಮಕ್ಕಳನ್ನು ಸದ್ಯ ಬಯಸದ ದಂಪತಿಗೆ ಅನಿರೀಕ್ಷಿತವಾಗಿ ಪಾಲಕರಾಗುವ ಸ್ಥಿತಿ ಎದುರಾದಾಗ ಬರುವ ಒತ್ತಡವನ್ನು ಹಲವರು ಸಹಿಸಿಕೊಳ್ಳಲಾಗದೇ ಹೋಗುತ್ತಾರೆ. ಹೆಚ್ಚು ಒತ್ತಡಕ್ಕೆ ಒಳಗಾಗುವ ಹಾಗೂ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಪಿಪಿಡಿಯು ಇಲ್ಲಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳು ಕೂಡ ತಾಯಂದಿರಿಂದ ದೂರ ಸರಿಯುವ ಇಲ್ಲವೇ ತಾಯಂದಿರೇ ಮಕ್ಕಳ ಬಗ್ಗೆ ಬೇಸರ ಪಡುವ ಸಾಧ್ಯತೆ ಇರುತ್ತದೆ. ಇದು ಮಕ್ಕಳ ಸರಿಯಾದ ಬೆಳವಣಿಗೆ ಮೇಲೆ ಕೂಡ ಪರಿಣಾಮ ಬೀರಬಹುದು. ಇದು ಅವರನ್ನು ಜನರತ್ತ ಆತಂಕ, ಭಯಭೀತ ಹಾಗೂ ಸ್ಪಂಧನಾರಹಿತರನ್ನಾಗಿಸುವತ್ತ ದಾರಿ ಮಾಡಿಕೊಡುವ ಆತಂಕ ಇರುತ್ತದೆ. ಸಂಶೋಧನೆಯಿಂದ ತಿಳಿದು ಬಂದಿರುವ ಇನ್ನೊಂದು ಅಂಶವೆಂದರೆ, ಪಿಪಿಡಿ ಸಮಸ್ಯೆಯಿಂದ ಬಳಲುತ್ತಿರುವ ತಾಯಿಯ ಎದೆಹಾಲು ಸೇವಿಸುವ ಮಗುವಿನ ತೂಕ ಹೆಚ್ಚಳ ಸಾಮಾನ್ಯ ತಾಯಿಯ ಎದೆಹಾಲು ಸೇವಿಸುವ ಮಗುವಿನ ತೂಕ ಹೆಚ್ಚಳಕ್ಕೆ ಹೋಲಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಕಡಿಮೆ ಇರುತ್ತದೆ ಎಂದು ತಿಳಿಸಲಾಗಿದೆ.

ಆದಾಗ್ಯೂ ಖಿನ್ನತೆ ಶಮನಕಾರಿಗಳು ಹಾಗೂ ಇತರೆ ಔಷಧಿಗಳು ಪಿಪಿಡಿ ಸಮಸ್ಯೆ ನಿವಾರಣೆಗೆ ಬಳಕೆಗೆ ಸೂಚಿಸಲಾಗುತ್ತದೆ. ಏನೇ ಇರಲಿ ಅತ್ಯಂತ ಪ್ರಮುಖವಾಗಿ ನೀಡಬಹುದಾದ ಸಲಹೆ ಎಂದರೆ ಪಾಲಕರು ವೃತ್ತಿಪರ ಮನಃಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನೇ ಸಂಪರ್ಕಿಸುವುದು ಹಾಗೂ ಅವರ ಸಹಕಾರ ಪಡೆಯುವುದು ಉತ್ತಮ. ಏಕೆಂದರೆ ಖಿನ್ನತೆಯ ಶಮನಕಾರಿ ಔಷಧ, ಚಿಕಿತ್ಸೆಯು ಹಲವು ಋಣಾತ್ಮಕ ಹಾಗೂ ಅಡ್ಡ ಪರಿಣಾಮವನ್ನು ಬೀರುತ್ತವೆ. ಈ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ತಮ್ಮ ಹೆಸರನ್ನು ಇದಕ್ಕೆ ಸಹಕರಿಸುವ ಸಮುದಾಯದಲ್ಲಿ ನಮೂದಿಸಿಕೊಳ್ಳುವುದು ಉತ್ತಮ. ಏಕೆಂದರೆ ಇಲ್ಲಿ ಬರುವ ಇತರೆ ಕುಟುಂಬ ಸದಸ್ಯರ ಅನುಭವನ್ನು ತಿಳಿದುಕೊಳ್ಳಬಹುದು. ಅಲ್ಲದೇ ಇಲ್ಲಿ ನಡೆಯುವ ಸಮಾಲೋಚನಾ ಸಭೆಗಳಲ್ಲಿ ಕೂಡ ಪಾಲ್ಗೊಳ್ಳಬಹುದಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಹಾಗೂ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಕೂಡ ಈ ಸಮಸ್ಯೆಗೆ ಪರಿಹಾರ ಎಂದು ಪರಿಗಣಿಸಲಾಗಿದೆ. ಖಿನ್ನತೆಯ ಸಮಸ್ಯೆಯಿಂದ ಹೊರ ಬರಲು ಇದು ಸಹಕರಿಸುತ್ತದೆ. ಒಂದು ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಸೂಕ್ತವಾದ ನಿದ್ರೆ ಕೂಡ ಪಿಪಿಡಿ ಇರುವವರಿಗೆ ಹಾಗೂ ನಿವಾರಿಸಿಕೊಳ್ಳಲು ಬಯಸುವವರಿಗೆ ಅತ್ಯಂತ ಪ್ರಮುಖವಾಗಿರುತ್ತದೆ.

Also Read: ಹೆರಿಗೆ ನಂತರದ ಖಿನ್ನತೆ – ಬೇಬಿ ಬ್ಲೂಸ್

ಡಾ. ನವೀನ್ ಜಯರಾಮ್

ಮನೋವೈದ್ಯ ಸಲಹೆಗಾರರು

ಮನೋವೈದ್ಯ ಶಾಸ್ತ್ರ ವಿಭಾಗ, ಸಕ್ರ ವರ್ಡ್ ಹಾಸ್ಪಿಟಲ್
ದೇವರಬೀಸನಹಳ್ಳಿ, ಹೊರವರ್ತುಲ ರಸ್ತೆ, ವರ್ತೂರು ಹೋಬಳಿ,

ಬೆಂಗಳೂರು-560 103  ದೂ. : 080 49694969

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!