ನೋನಿಯಿಂದ ಸಹಜ ಆರೋಗ್ಯ

ನೋನಿಯಿಂದ ಸಹಜ ಆರೋಗ್ಯ ಲಭ್ಯ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ. ತುಳಸಿ ಗಿಡದ ಬಗ್ಗೆ ಎಷ್ಟು ಪ್ರಾಮುಖ್ಯತೆ ಹಾಗೂ ಪವಿತ್ರ ಭಾವನೆಯನ್ನು ಹೊಂದಿದ್ದೇವೆಯೋ ಅಷ್ಟೇ ಗೌರವವನ್ನು ಕೆಲ ದೇಶಗಳ ಆದಿವಾಸಿಗಳು ನೋನಿ ಗಿಡಕ್ಕೆ ನೀಡುತ್ತಾರೆ.

ತಿನ್ನುವ ಅನ್ನಕ್ಕಿಂತಲೂ ಔಷಧ ಸೇವನೆಯೇ ಮುಖ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ದೇವರು ಮನುಷ್ಯನಿಗೆ ಪಂಚೇದ್ರಿಯಗಳನ್ನು ಕೊಟ್ಟಿದ್ದಾನೆ. ಆ ಪಂಚೇದ್ರಿಯಗಳ – ಕಣ್ಣು, ಮೂಗು, ಕಿವಿ, ಚರ್ಮ ಮತ್ತು ನಾಲಗೆ, ಸಮರ್ಪಕ ನಿರ್ವಹಣೆಗೆ ಅಗತ್ಯವಾದ ಅಂಗಾಂಗಗಳನ್ನೂ ದಯಪಾಲಿಸಿದ್ದಾನೆ. ಬಹುತೇಕ ಪ್ರಾಣಿಗಳಿಗೂ ಈ ಐದೂ ಅಂಗಗಳ ಮೂಲಕ ಏನೇನನ್ನೆಲ್ಲ ಒಳಗೆ ತೆಗೆದುಕೊಳ್ಳುತ್ತವೆಯೋ ಅದೇ ಇವುಗಳ ಬದುಕು-ಸಾವಿಗೆ ಕಾರಣವಾಗುತ್ತವೆ. ಬದುಕುವುದಾದರೆ ಎಷ್ಟು ಆರೋಗ್ಯಪೂರ್ಣ ಬದುಕು, ಸಾಯುವುದಾದರೆ ಎಷ್ಟು ಸಹಜ ಸಾವು ಎನ್ನುವುದಕ್ಕೂ ಈ ಒಳ-ತೆಗೆದುಕೊಳ್ಳುವಿಕೆಯೇ ಕಾರಣವಾಗುತ್ತದೆ.

Noni
ಆಧುನಿಕ ಜೀವನ ಶೈಲಿ
ಆದರೆ ಯಾವಾಗ ಆಧುನಿಕ ಜೀವನಶೈಲಿ ಮನುಷ್ಯನನ್ನು ಆಕರ್ಷಿಸಹತ್ತಿತ್ತೋ, ಆಗ ಅವನ ರುಚಿ, ಅಭಿರುಚಿಗಳೆಲ್ಲ ವಿಭಿನ್ನವಾದವು. ಪಂಚೇದ್ರಿಯಗಳಂತೂ ಯಾವಾಗಲೂ ಕಡಿವಾಣ ಹರಿದುಕೊಳ್ಳಲಿಕ್ಕೆ ಹವಣಿಸುವಂಥವೇ. ಬುದ್ಧಿ, ಮನಸ್ಸುಗಳಿಂದ ಅವುಗಳನ್ನು ಬಲವಂತವಾಗಿ ನಿಯಂತ್ರಿಸಿದರೆ ಮಾತ್ರ ಅವು ಅಂಕೆಯಲ್ಲಿ ಉಳಿಯುವುದು ಸಾಧ್ಯ. ಆದರೆ ಮನಸ್ಸು, ಬುದ್ಧಿಗಳೇ ಕಲುಷಿತಗೊಂಡರೆ ಇನ್ನು ಇಂದ್ರಿಯಗಳ ನಿಯಂತ್ರಣ ಎಲ್ಲಿಂದ ಸಾಧ್ಯ?

ಇವತ್ತಿನ ಆಹಾರ ವಿಹಾರಗಳಿಂದ ಸಂಪೂರ್ಣವಾಗಿ ಹೊರಬರುವುದು ನಮಗೆ ಸಾಧ್ಯವೇ ಇಲ್ಲ. ಬೇಕಾದ ಅಕ್ಕಿ, ಬೇಳೆ, ಹುಣಸೆ, ಮೆಣಸಿನಕಾಯಿ, ಎಣ್ಣೆ, ಬೆಣ್ಣೆ, ತರಕಾರಿಗಳನ್ನು ನಾವೇ ಪ್ರಾಕೃತಿಕ ವಿಧಾನದಲ್ಲಿ ಬೆಳೆದು ತಿನ್ನುವುದು ಸಾಧ್ಯವಿದ್ದರೆ ಅದು ಬೇರೆ ಮಾತು. ಅದಂತೂ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಸಹಜವಾಗಿ ಬೆಳೆದ ಸಾವಯವ ಪದಾರ್ಥಗಳು ಸಿಗುತ್ತವೆಂಬುದೇನೋ ನಿಜ. ಆದರೆ ಇವತ್ತಿನ ಕಲಬೆರಕೆ ಯುಗದಲ್ಲಿ ನಿಜಕ್ಕೂ ಅದೆಷ್ಟು ಸಾವಯವ? ಆಯಿತು, ಅದು ನಿಜವಾಗಿ ಸಾವಯವ ಉತ್ಪಾದನೆಯೆಂದೇ ಇಟ್ಟುಕೊಂಡರೂ, ಅದನ್ನು ನೀವು ನಿಮ್ಮ ಮಟ್ಟಿಗೆ, ನಿಮ್ಮ ಮನೆಯ ಮಟ್ಟಿಗೆ ಉಪಯೋಗಿಸಬಹುದು.  ನೀವು ನಾಳೆ ಮದುವೆಗೋ, ಮುಂಜಿಗೋ ಮತ್ತೊಂದಕ್ಕೋ ಹೊರಗೆ ಹೋಗಲೇಬೇಕಾಗುತ್ತದೆ. ಆಗಲೂ ನಿಮಗೆ ಸಾವಯವ ದಿನಸಿ ಧಾನ್ಯಗಳೇ ದೊರೆಯುವುದು ಸಾಧ್ಯವಿಲ್ಲ. ಅನಿವಾರ್ಯವಾಗಿ ಹೊಟೇಲ್‍ಗೆ ಹೋಗಬೇಕಾದರಂತೂ ಕೇಳುವುದೇ ಬೇಡ.

ಇನ್ನು ಸರಿಯಾಗಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ನಾಲ್ಕು ಬಿಳಿ ಪದಾರ್ಥಗಳನ್ನು ನಾವು ಕಡ್ಡಾಯವಾಗಿ ಬಿಡಬೇಕು- ಉಪ್ಪು, ಸಕ್ಕರೆ, ಹಾಲು ಹಾಗೂ ಬಿಳಿ ಅಕ್ಕಿ.

ಕೋಟ್ಯಂತರ ಜನರಿಗೆ ವರದಾನವಾಗಿರುವ ನೋನಿ ಹಣ್ಣು
ನೋನಿ ಒಂದು ಸಸ್ಯವಾಗಿದ್ದು, ಹವಾಯಿ ದ್ವೀಪವಾಸಿಗಳಿಂದ ನೋನಿ ಎಂಬ ಹೆಸರು ಬಂದಿದೆ. ಭಾರತದಲ್ಲಿಯೂ ಬಳಕೆಯಲ್ಲಿದ್ದ ಈ ಸಸ್ಯದ ಉತ್ಪನ್ನಗಳು ನಂತರ ಅದೇಕೋ ನಿರ್ಲಕ್ಷಿಸಲ್ಪಟ್ಟವು. ಸಂಸ್ಕøತದಲ್ಲಿ ಇದನ್ನು ಅಚ್ಚುಕ ಫಲ, ಆಯುಷ್ಕ ಎಂದೆಲ್ಲ ಕರೆಯುತ್ತಾರೆ. ಕೆಲವು ದೇಶಗಳಲ್ಲಿ ಇದನ್ನು `ಪೈನ್ ಕಿಲ್ಲಿಂಗ್ ಟ್ರೀ’ ಎನ್ನುತ್ತಾರೆ. ನಾವು ಭಾರತೀಯರು ಈಗಲೂ ಕುಡ ತುಳಸಿ ಗಿಡದ ಬಗ್ಗೆ ಎಷ್ಟು ಪ್ರಾಮುಖ್ಯತೆ ಹಾಗೂ ಪವಿತ್ರ ಭಾವನೆಯನ್ನು ಹೊಂದಿದ್ದೇವೆಯೋ ಅಷ್ಟೇ ಗೌರವವನ್ನು ಕೆಲ ದೇಶಗಳ ಆದಿವಾಸಿಗಳು ನೋನಿ ಗಿಡಕ್ಕೆ ನೀಡುತ್ತಾರೆ.

ನೋನಿಯ ಬಗ್ಗೆ ವಿಶೇಷವಾದ ಸಂಶೋಧನಾತ್ಮಕ ಪ್ರಯೋಗಗಳು ನಡೆಯತೊಡಗಿದ್ದು 20ನೇ ಶತಮಾನದ ಮಧ್ಯಭಾಗದಲ್ಲಿ. ಅನೇಕ ಸಂಶೋಧಕರು ತಮ್ಮ ಸಂಶೋಧನೆಗಳಿಂದ ನೋನಿಯಲ್ಲಿನ ಔಷಧೀಯ ಗುಣಗಳನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಸಂಶೋಧನೆಯಿಂದ ನೋನಿಯಲ್ಲಿನ ಅತ್ಯರೂಪದ 3 ಪೋಷಕಾಂಶಗಳು ಬೆಳಕಿಗೆ ಬಂದವು. ಇವುಗಳ ಪೈಕಿ ಮೊದಲನೆಯ ಝೆರೋನಿನ್ ಜೀವಸತ್ವ, ಇದನ್ನು ದೈವಕಣ ಎಂದೂ ಕರೆಯಬಹುದು. ಏಕೆಂದರೆ ಇದು ಅನಾರೋಗ್ಯಪೀಡಿತ ಜೀವಕೋಶಗಳನ್ನು ಆರೋಗ್ಯವಂತ ಜೀವಕಣಗಳಾಗಿ ಮಾರ್ಪಡಿಸುವ ಗುಣ ಹೊಂದಿದೆ.

ಪ್ರೊ-ಝೆರೋನಿನ್ ಹಾಗೂ ಪ್ರೊ-ಝೆರೋನೈಸೇಗಳು ಮನುಷ್ಯನ ದೇಹದೊಳಗೆ ಸೇರಿಕೊಂಡ ಮೇಲೆ ಅವು ಸಹ ಝೆರೋನಿನ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದು ನಾವು ತೆಗೆದುಕೊಳ್ಳುವ ಆಹಾರ ಯಾವುದೇ ಇರಲಿ, ಅದರಲ್ಲಿರುವ ಅಗತ್ಯ ಪೋಷಕಾಂಶಗಳನ್ನು ಜೀವಕೋಶದ ಒಳಗೆ ಹೋಗಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಜೀವಕೋಶಗಳೊಳಗೆ ಉತ್ಪತ್ತಿಯಾಗುವ ಟಾಕ್ಸಿನ್‍ಗಳನ್ನು ಸರಾಗವಾಗಿ ಹೊರಹಾಕುತ್ತದೆ. ಇದರಿಂದಾಗಿ ಜೀವಕೋಶಗಳು ಅರೋಗ್ಯದಿಂದ ಕಳಕಳಿಸುತ್ತವೆ. ಮನುಷ್ಯ ಪೂರ್ಣ ಆರೋಗ್ಯವಂತನೆನಿಸಿ ಚಟುವಟಿಕೆಯಿಂದ, ರೋಗರುಜಿನಗಳಿಲ್ಲದಂತೆ ಬಾಳುವುದು ಸಾಧ್ಯವಾಗುತ್ತದೆ.

ನೋನಿ ಬಗ್ಗೆ ಇನ್ನಷ್ಟು
ನೋನಿಯಲ್ಲಿ ಕೇವಲ ದೇವಕಣ ಝೆರೋನಿನ್ ಮಾತ್ರ ಇಲ್ಲ. ಖನಿಜಾಂಶಗಳು, ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು, ಆಲ್ಕಲೈಡ್, ಫ್ಲೇವನಾಯ್ಡ್, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್, ಸ್ಕೋಪೋಲಿಟಿನ್, ಬೀಟಾಸಿಸ್ಟಲ್ ಇತ್ಯಾದಿ ಪೋಷಕಾಂಶಗಳು ಧಾರಾಳವಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ ಎಂದು ನೋನಿ ಸೇವನೆ ಸಂಬಂಧ ಡಾ|| ನೀಲ್ ಸಾಲೋಮನ್ ಕೈಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಓಂ ಶ್ರೀ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಪ್ರೈ. ಲಿ
ಬೆಂಗಳೂರು – 560079
ದೂರವಾಣಿ: 9513613368
ಇಮೇಲ್: info@amrithnoni.com
www.amrithnoni.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!