ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು

ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಮಳೆಗಾಲ ಆರೋಗ್ಯಕ್ಕೆ ಹಿತಕರವೆಂದು ಪರಿಗಣಿಸಲಾಗಿಲ್ಲ.ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗ.
ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳುಮುಂಗಾರು ಋತುವಿನ ವೇಳೆ ಆರೋಗ್ಯಕರವಾಗಿ ಇರಬೇಕಾದರೆ ವಿಶೇಷ ಆರೈಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಮಳೆಗಾಲ ಆರೋಗ್ಯಕ್ಕೆ ಹಿತಕರವೆಂದು ಪರಿಗಣಿಸಲಾಗಿಲ್ಲ. ವರ್ಷಋತುವಿನಲ್ಲಿ ಮಳೆ ಮತ್ತು ನೀರಿನಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಸುಲಭವಾಗುತ್ತದೆ. ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗ.
ಮಳೆಗಾಲದ ಆತಂಕಗಳು
ಮಳೆಗಾಲದಲ್ಲಿ ಕಂಡುಬರುವ ಅನೇಕ ಅನಾರೋಗ್ಯ ಸಮಸ್ಯೆಗಳು ಆತಂಕ ಸೃಷ್ಟಿಸುತ್ತವೆ. ಕೆಮ್ಮು, ನೆಗಡಿ, ಮತ್ತು ವಿಷಮಶೀತ ಜ್ವರ, ಪ್ರತಿಕೂಲ ಹವಾಮಾನ, ಡೆಂಘಿ, ಮಲೇರಿಯಾದಂಥ ಸೊಳ್ಳೆಗಳಿಂದ ಉಂಟಾಗುವ ರೋಗಗಳು ವರ್ಷಋತುವಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಸೊಳ್ಳೆಗಳ ದಾಳಿಯಿಂದ ಸೂಕ್ತ ರಕ್ಷಣೆ ಪಡೆಯಬೇಕು. ಅನಾರೋಗ್ಯ ಉಂಟು ಮಾಡುವ ಆಹಾರವನ್ನು ತಪ್ಪಿಸಿ ಶಿಫಾರಸು ಮಾಡಿದ ಆರೋಗ್ಯಕರ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು.
ಶಿಫಾರಸು ಮಾಢಿದ ಆಹಾರಗಳು
ಹಣ್ಣು, ತರಕಾರಿ ಮತ್ತು ಕಾಳು ಧಾನ್ಯಗಳಂಥ ಹಗುರವಾದ ಆಹಾರವನ್ನು ಸೇವಿಸಬೇಕು. ಒಣ ಸ್ವರೂಪದಲ್ಲಿರುವ ಆಹಾರ ಮಳೆಗಾಲದಲ್ಲಿ ಸೂಕ್ತ. ಉದಾಹರಣಗೆ ಮೆಕ್ಕೆಜೋಳ, ಚೆನ್ನಾ, ಬೇಸನ್, ಓಟ್ಸ್, ಹಾಗಲಕಾಯಿಯಂಥ ಕಹಿ ತರಕಾರಿಗಳನ್ನು ಹಾಗೂ ನಿಂಬೆ, ತುಳಸಿ, ಮೇಥಿ ಬೀಜಗಳು, ಅರಿಶಿಣದಂಥ ಕಹಿ ಗಿಡಮೂಲಿಕೆಯನ್ನು ಹೆಚ್ಚಾಗಿ ಸೇವಿಸಿದರೆ ಸೋಂಕು ರೋಗವನ್ನು ತಡೆಗಟ್ಟಬಹುದು.
ಅನಾರೋಗ್ಯಕರ ಆಹಾರಗಳು
ಆಲೂಗಡ್ಡೆ, ಹೂಕೋಸು, ಕ್ಲಸ್ಟರ್, ಬೀನ್ಸ್ ಮತ್ತು ಬೆಂಡೇಕಾಯಿ ಈ ತರಕಾರಿಗಳು ಮಳೆಗಾಲದಲ್ಲಿ ಆರೋಗ್ಯಕೆ ಅಷ್ಟು ಹಿತವಲ್ಲ. ಡಬಲ್ ಬೀನ್ಸ್, ಪೀಜನ್ ಬೀನ್ಸ್ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಅಧಿಕ ಉಪ್ಪು ಇರುವ ಆಹಾರ ಪದಾರ್ಥಗಳ ಸೇವನೆ ಬೇಡ. ಇದು ಆನಾರೋಗ್ಯಕರ ನೀರು ದೇಹದಲ್ಲಿ ಉಳಿಯುವಂತೆ ಮಾಡುತ್ತದೆ. ಅತಿಯಾದ ಮಾಂಸ ಮತ್ತು ಮೀನು ಸೇವಿಸಬಾರದು. ಹುಣಿಸೆಹಣ್ಣಿನಂಥ ಹುಳಿ ಪದಾರ್ಥಗಳು, ಚಟ್ನಿಗಳು ಮತ್ತು ಉಪ್ಪಿನಕಾಯಿಗಳಿಂದ ಆದಷ್ಟೂ ದೂರವಿರಿ.
ಚೈತನ್ಯವರ್ಧನೆ ಕ್ರಮಗಳು 
ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳುಈ ಋತುವಿನಲ್ಲಿ ಜೀರ್ಣಶಕ್ತಿ ಸಾಮಾನ್ಯವಾಗಿ ದುರ್ಬಲವಾಗಿರುತ್ತದೆ. ಆದ್ದರಿಂದ ಮಿತವಾದ ಆಹಾರ ಸೇವಿಸಬೇಕು. ವಾರಕ್ಕೆ ಅಥವಾ ೧೫ ದಿನಕ್ಕೊಮ್ಮೆ ಉಪವಾಸ ಮಾಡುವುದು ಉತ್ತಮ. ಹಸಿರು ಹುಲ್ಲಿನ ಮೇಲೆ ನಡೆದಾಡುವುದರಿಂದ ಅನೇಕ ಪ್ರಯೋಜನಗಳಿವೆ.

1. ಹಗಲು ವೇಳೆ ನಿದ್ರಿಸುವುದನ್ನು ತಪ್ಪಿಸಿ.

2. ಅತಿಯಾದ ದೈಹಿಕ ವ್ಯಾಯಾಮ ಬೇಡ.

3. ಅಗಾಗ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದು ಬೇಡ.

4. ನೀವು ಭಾರಿ ಮಳೆಯಿಂದ ನೆನೆದು ಒದ್ದೆಯಾಗಿದ್ದರೆ, ಆದಷ್ಟು ಬೇಗ ಒಣಗಿಸಿಕೊಳ್ಳಿ ಅಥವಾ ಮೊದಲು ಸ್ನಾನ ಮಾಡಿ ಚೆನ್ನಾಗಿ ಒಣಗಿಸಿಕೊಂಡು ಬಿಸಿಯಾದ ಪೇಯ ಸೇವಿಸಿ.

5. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ, ನಿರ್ಮಲವಾಗಿ ಹಾಗೂ ಒಣ ವಾತಾವರಣದಲ್ಲಿರುವಂತೆ ನೋಡಿಕೊಳ್ಳಿ.

6. ವೈರಾಣುಗಳು ನಿಮ್ಮ ದೇಹದ ಮೇಲೆ ತಕ್ಷಣ ಆಕ್ರಮಣ ಮಾಡುವುದರಿಂದ ನಿಮ್ಮ ದೇಹ ಯಾವಾಗಲೂ ಬೆಚ್ಚಗಿರಲಿ.

7. ನಿಮ್ಮ ಕಾಲುಗಳು ಒದ್ದೆಯಾದಾಗ ಮೃದುವಾದ ಒಣ ಬಟ್ಟೆಯಿಂದ ಪಾದಗಳನ್ನು ಸ್ವಚ್ಚಗೊಳಿಸಿ ಒಣಗಿಸಿ.

8. ಸಾಕಷ್ಟು ನೀರು ಸೇವಿಸಿ, ನಿಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಿ.

Also watch our video: ಮಳೆಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಣೆ ಹೇಗೆ?

D-A-Kalpaja
ಡಿ.ಎ. ಕಲ್ಪಜ
ಪ್ರಧಾನ ಸಂಪಾದಕರು
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366
http://www.vims.ac.in/
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!