ಗರ್ಭಿಣಿಯರಲ್ಲಿ ಕ್ಷಯ : ತಡೆಯುವುದು ಹೇಗೆ?

ಗರ್ಭಿಣಿಯರಲ್ಲಿ ಕ್ಷಯ : ತಡೆಯುವುದು ಹೇಗೆ?

ಗರ್ಭಿಣಿಯರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ ಗರ್ಭಪಾತ, ಅವಧಿಪೂರ್ವ ಹೆರಿಗೆ, ರಕ್ತದೊತ್ತಡದಲ್ಲಿ ಏರಿಕೆ, ಕಡಿಮೆ ತೂಕದ ಶಿಶು, ಗರ್ಭಸ್ಥ ಶಿಶು ಸಾವು ಸಾಧ್ಯ.

ಇಂದಿನ ಜಂಜಾಟದ ಜೀವನದ ಮಧ್ಯೆ ಅತ್ಯಂತ ಆತಂಕದ ಘಟನೆ ಗರ್ಭಾವಸ್ಥೆ ಮತ್ತು ಹೆರಿಗೆ. ಗರ್ಭಾವಧಿ ಮತ್ತು ಹೆರಿಗೆ ಸುಗಮವಾಗಿ ಕೊನೆಗೊಂಡರೆ ಪುನರ್‍ಜನ್ಮ ಎಂಬ ಮಾತು ಇಂದಿಗೂ ಸತ್ಯ. ನಮ್ಮ ದೇಶದಲ್ಲಿ ಗರ್ಭಿಣಿಯರ ಸಾವು ಅತ್ಯಧಿಕ. ಇದಕ್ಕೆ ಕ್ಷಯ ರೋಗವು ಕೂಡ ಕಾರಣ. ಗರ್ಭಿಣಿಗೆ ಕ್ಷಯ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಕ್ಷಯದಿಂದ ಗರ್ಭಿಣಿ ಬಳಲುವುದು ಇತ್ತೀಚೆಗೆ ಹೆಚ್ಚು. ಕ್ಷಯ ಚಿಕಿತ್ಸೆಗಾಗಿ ಬಳಸುವ ಕೆಲವು ಔಷಧಿಗಳು, ಗರ್ಭಸ್ಥ ಶಿಶುವಿಗೆ ಅಪಾಯವಾಗುವುದರಿಂದ  ಔಷಧಗಳನ್ನು ಗರ್ಭಿಣಿಗೆ ನೀಡುವಂತಿಲ್ಲ. ಕುಂಠಿತ ರೋಗ ನಿರೋಧಕ ಶಕ್ತಿ, ಅಪೌಷ್ಠಿಕತೆ, ರಕ್ತಹೀನತೆ ಇವು ಗರ್ಭಿಣಿಯರಲ್ಲಿ ಸಾಮಾನ್ಯವಾಗಿದ್ದು, ಇವು ಕ್ಷಯ ರೋಗಕ್ಕೆ ಪೂರಕವಾಗಿವೆ.

ಲಕ್ಷಣಗಳೇನು?

ಗರ್ಭಿಣಿಯರಲ್ಲಿ ಕ್ಷಯದ ಸಂಭವ ಶೇ.0.5ರಿಂದ 4 ರಷ್ಟಿದೆ. ಕ್ಷಯ ರೋಗದಲ್ಲಿ ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತರ (ಪುಪ್ಪಸ ಹೊರತುಪಡಿಸಿ ಇತರೆ ಅಂಗಾಂಗಗಳಾದ ಗ್ರಂಥಿ, ಕರುಳು, ಮೂಳೆ, ಮೆದುಳು ಕ್ಷಯ) ಕ್ಷಯ ವಿಧಗಳಿದ್ದು, ಬಹುತೇಕ ಗರ್ಭಿಣಿಯರು ಸಾಮಾನ್ಯವಾಗಿ ಶ್ವಾಸಕೋಶದ ಕ್ಷಯದಿಂದ ಬಳಲುತ್ತಾರೆ. ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು, ಕಫ ಮತ್ತು ಇವುಗಳ ಜೊತೆ ಒಂದು ಅಥವಾ ಹೆಚ್ಚಿನ ಲಕ್ಷಣಗಳು (ತೂಕದಲ್ಲಿ ಇಳಿತ, ಎದೆನೋವು, ನಿಶ್ಶಕ್ತಿ, ಉಸಿರಾಡಲು ತೊಂದರೆ, ಸಂಜೆಯಲ್ಲಿ ಜ್ವರ, ಕಫದಲ್ಲಿ ರಕ್ತ, ಹಸಿವಾಗದಿರುವುದು, ರಾತ್ರಿಯಲ್ಲಿ ಬೆವರು) ಮತ್ತು ಗರ್ಭಿಣಿಯ ತೂಕ, ಹೊಟ್ಟೆಯ ಗಾತ್ರದಲ್ಲಿ ಹೆಚ್ಚಳವಾಗದಿದ್ದರೆ ತಪಾಸಣೆ ಅವಶ್ಯ.`ಮೈಕ್ರೋಬ್ಯಾಕ್ಟೀರಿಯಮ್ ಮತ್ತು ಟೂಬರ್‍ಕುಲೋಸಿಸ್’ ಎಂಬ ರೋಗಾಣು ಕ್ಷಯಕ್ಕೆ ಕಾರಣವಾಗಿದ್ದು ಕೆಮ್ಮು, ಸೀನುವಾಗ ತುಂತುರು ಹನಿಗಳ ಮೂಲಕ ಇತರರಿಗೆ ಹರಡುತ್ತದೆ. ಲೈಂಗಿಕ ಸಂಪರ್ಕದಿಂದ ಶೇ. 1ರಷ್ಟು ಮಾತ್ರ ಸಾಧ್ಯ. ಆದರೂ ಇದು ಅಪರೂಪ.

ಪತ್ತೆ ಹೇಗೆ?

ಎರಡು ಬಾರಿ ಕಫ ಪರೀಕ್ಷೆ, ಮ್ಯಾಂಟೆಕ್ಸ್ ಚರ್ಮ ಪರೀಕ್ಷೆ, ಕ್ಯಾಟೆಪೆರಾನ್ ಗೋಲ್ಡ್ ಹಾಗೂ ಎಲಿಸ್ಟಾಟ್ ರಕ್ತ ಪರೀಕ್ಷೆಯಿಂದ ಕ್ಷಯ ಗುರುತಿಸಬಹುದು. ಕ್ಷ-ಕಿರಣ ತಪಾಸಣೆಯಿಂದ ಗರ್ಭಸ್ಥ ಶಿಶುವಿಗೆ ಅಪಾಯವಿರುವುದರಿಂದ ವೈದ್ಯರ ಸಲಹೆ ಇಲ್ಲದೆ ಈ ತಪಾಸಣೆ ಬೇಡ.

ಎಚ್ಚರ ಅಗತ್ಯ

ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ ಗರ್ಭಪಾತ, ಅವಧಿಪೂರ್ವ ಹೆರಿಗೆ, ರಕ್ತದೊತ್ತಡದಲ್ಲಿ ಏರಿಕೆ, ಕಡಿಮೆ ತೂಕದ ಶಿಶು, ಗರ್ಭಸ್ಥ ಶಿಶು ಸಾವು ಸಾಧ್ಯ. ಶೇ.60ರಿಂದ 80 ಪ್ರಸಂಗಗಳಲ್ಲಿ ಸಹಜ ಹೆರಿಗೆಯಾದರೆ, ಶೇ. 6ರಿಂದ 3ರಷ್ಟು ಶಸ್ತ್ರಕ್ರಿಯೆ ಮೂಲಕ ಹೆರಿಗೆ ಸಂಭವವಿದೆ.ತಾಯಿ ರಕ್ತದ ಮೂಲಕ ಅಥವಾ ಅಮ್ಮಿಯಾಟಿಕ್ ದ್ರವನ್ನು (ಗರ್ಭಸ್ಥ ಶಿಶುವಿನ ಸುತ್ತಲಿನ ದ್ರವ) ಶಿಶು ಸೇವಿಸಿದರೆ ಶಿಶುವಿಗೆ ಕ್ಷಯ ತಗಲುವ ಅಪಾಯವಿದೆ.

ತಡೆಯುವುದು ಹೇಗೆ?

1.ಗರ್ಭಿಣಿಯಾಗುವುದಕ್ಕಿಂತ ಮುಂಚೆ ಕ್ಷಯ ಇಲ್ಲವೆಂದು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

2.ಕ್ಷಯದ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಒಳ್ಳೆಯದು.

3.ಜನಿಸಿದ ಎಲ್ಲ ಮಕ್ಕಳಿಗೆ ಬಿಸಿಜಿ ಕ್ಷಯ ರೋಗ ನಿರೋಧಕ ಲಸಿಕೆ ಕೊಡಿಸಿರಿ.

4.ಕ್ಷಯದಿಂದ ಬಳಲುತ್ತಿದ್ದರೂ ಎದೆಹಾಲು ಉಣಿಸುವುದನ್ನು ಮುಂದುವರೆಸಿರಿ.

5.ಎದೆಹಾಲು ಉಣಿಸುವಾಗ ಬಾಯಿ ಮುಂದೆ ಬಟ್ಟೆ ಇಟ್ಟುಕೊಳ್ಳಬೇಕು.

6.ಕ್ಷಯ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಲ್ಲದು. ಕ್ಷಯದಿಂದ ಬಳಲುತ್ತಿರುವವರ ಸಂಪರ್ಕದಿಂದ ಮಕ್ಕಳನ್ನು ದೂರವಿಡಬೇಕು.

7.ಆರು ವರ್ಷದೊಳಗಿನ ಎಲ್ಲ ಆರೋಗ್ಯವಂತ ಮಕ್ಕಳಿಗೆ ಮುಂಜಾಗ್ರತೆಯಾಗಿ ಔಷಧವನ್ನು ಆರು ತಿಂಗಳುಗಳ ಕಾಲ ನೀಡಬೇಕಾಗುತ್ತದೆ.

8.ಮುಖ್ಯವಾಗಿ ಕ್ಷಯದ ಬಗ್ಗೆ ಮುನ್ನಚ್ಚರಿಕೆ ಅಗತ್ಯ ಮತ್ತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು.

Also Read: ಕ್ಷಯ ರೋಗ ಅಕ್ಷಯವಾಗದಿರಲಿ – ವಿಶ್ವ ಕ್ಷಯ ರೋಗ ದಿನ ಮಾರ್ಚ್ 24 

ಡಾ. ಅಲಮೇಲು ಹರನ್
ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು, ಕ್ಷಯ ಮತ್ತು ಎದೆ ರೋಗ ವಿಭಾಗ
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066,
ಫೋನ್: 080-28413381/2/3/4 www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!