ಮುರುಗಲ ಅಥವಾ ಕೋಕಂ ಎಂಬ ಮರ ಸಾಂಬಾರ

ಮುರುಗಲ ಅಥವಾ ಕೋಕಂ ಎನ್ನುವುದು ಭಾರತ ಮೂಲದ ಒಂದು ಮರ ಜಾತಿ ಸಾಂಬಾರ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ.  ಪುನರ್ಪುಳಿ, ಮುರ್ಗನ, ಅಮಸೋಲು ಮುರುಗಲದ ಇತರೆ ಹೆಸರುಗಳು. ಅಡುಗೆಗಳಲ್ಲಿ ಹುಣಸೆಗೆ ಪರ್ಯಾಯವಾಗಿ ಬಳಸಬಹುದು. ಹಣ್ಣಿನಿಂದ ತೆಗೆದ ರಸವನ್ನು ವಿವಿಧ ಬ್ರ್ಯಾಂಡ್ ಅಡಿಯಲ್ಲಿ ‘ಕೋಕಂ ಜ್ಯೂಸ್’ ಎಂದು ಮಾರಾಟ ಮಾಡಲಾಗುತ್ತದೆ.

ಮುರುಗಲ ಎನ್ನುವುದು ಭಾರತ ಮೂಲದ ಒಂದು ಮರ ಜಾತಿ ಸಾಂಬಾರ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ. ಇದನ್ನು ಕೆಲವರು ಅಪ್ರಧಾನ ಹಣ್ಣಿನ ಬೆಳೆಯೆಂದೂ ಪರಿಗಣಿಸುವುದುಂಟು. ಪುನರ್ಪುಳಿ, ಮುರ್ಗನ, ಅಮಸೋಲು, ಕೋಕಂ ಮುರುಗಲದ ಇತರೆ ಹೆಸರುಗಳು. ದಕ್ಷಿಣ ಮಹಾರಾಷ್ಟ್ರದ ತೀರ ಪ್ರದೇಶಗಳು, ಪಶ್ಚಿಮ ಘಟ್ಟಗಳು, ಕೊಡಗು, ಕೇರಳ, ಗೋವಾ ಹಾಗೂ ಅಸ್ಸಾಂನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವ್ಯವಸ್ಥಿತ ಕೃಷಿ ಇಲ್ಲದ ಕಾರಣ ಇದರ ನಿಖರ ವಿಸ್ತೀರ್ಣ ಹಾಗೂ ಉತ್ಪಾದನೆಯ ವಿವರಗಳು ಲಭ್ಯವಿರುವುದಿಲ್ಲ. ಆದಾಗ್ಯೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಂದಾಜು 15 ಲಕ್ಷ ಕೋಕಂ ಮರಗಳಿರುವುದಾಗಿ ಉಲ್ಲೇಖಿಸಲಾಗಿದೆ.ಕೋಕಂ ಹಣ್ಣಿನ ತಿರುಳನ್ನು ಬೇರ್ಪಡಿಸಿ, ಅದರ ರಸದಲ್ಲಿ ಅದ್ದಿ ಬಿಸಿಲಿನಲ್ಲಿ ಒಣಗಿಸಿದಾಗ ತಯಾರಾಗುವುದೇ ಬಳಕೆಗೆ ಸಿದ್ಧವಾದ ಕೋಕಂ. ಇದನ್ನು ಅಡುಗೆಯಲಿ, ಮುಖ್ಯವಾಗಿ ಮೀನಿನ ಅಡುಗೆಯಲ್ಲಿ ಹುಳಿ ರುಚಿ ಹಾಗೂ ಸುವಾಸನೆಗಾಗಿ ಬಳಸುತ್ತಾರೆ. ಇತರೆ ಅಡುಗೆಗಳಲ್ಲಿ ಹುಣಸೆಗೆ ಪರ್ಯಾಯವಾಗಿ ಬಳಸಬಹುದು. ಹಣ್ಣಿನಿಂದ ತೆಗೆದ ರಸವನ್ನು ವಿವಿಧ ಬ್ರ್ಯಾಂಡ್ ಅಡಿಯಲ್ಲಿ ‘ಕೋಕಂ ಜ್ಯೂಸ್’ ಎಂದು ಮಾರಾಟ ಮಾಡಲಾಗುತ್ತದೆ. ಇದರ ಕಡು ನೇರಳೆ ಬಣ್ಣ ನೋಡಲು ಅತ್ಯಾಕರ್ಷಕ. ಇದರಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್ ಎಂಬ ಆಮ್ಲದಿಂದಾಗಿ ಸ್ಥೂಲಕಾಯದವರಿಗೆ ತೂಕ ಇಳಿಸಿಕೊಳ್ಳಲು ಇದರ ಸೇವನೆ ಉಪಯುಕ್ತವೆಂದು ಸಾಬೀತಾಗಿದೆ.

ಕೋಕಂ ಹಣ್ಣಿನ ಬೀಜವೂ ಸಹ ಉಪಯುಕ್ತವಾಗಿದ್ದು, ಅಧಿಕ ಕೊಬ್ಬಿನ ಅಂಶ ಹೊಂದಿದೆ. ‘ಕೋಕಂ ಬಟರ್’ ಎಂದು ಕರೆಯಲ್ಪಡುವ ಇದನ್ನು ಚಾಕೊಲೇಟ್, ಸಿಹಿ ತಿಂಡಿಗಳು ಹಾಗೂ ವಿವಿಧ ಬಗೆಯ ಪ್ರಸಾದನಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಇಷ್ಟೇ ಅಲ್ಲದೆ, ಔಷಧ ರೂಪದಲ್ಲಿ ಒಡೆದ ತುಟಿಗಳು, ಹಿಮ್ಮಡಿ ಹಾಗೂ ಬಾಯಿಯ ಹುಣ್ಣುಗಳ ಆರೈಕೆಯಲ್ಲಿ ಬಳಸುತ್ತಾರೆ.

ಮುರುಗಲದ ಸಸ್ಯಶಾಸ್ತ್ರೀಯ ನಾಮ ‘ಗಾರ್ಸೀನಿಯ ಇಂಡಿಕಾ’, ಗುಟ್ಟಿಫೆರೆ ಎಂಬ ಸಸ್ಯಕುಟುಂಬಕ್ಕೆ ಸೇರಿದ ಇದೊಂದು ನಿತ್ಯ ಹರಿದ್ವರ್ಣ ಮರವಾಗಿದ್ದು ಬಾಗಿದ ಕೊಂಬೆಗಳಿದ್ದು, ಮರವು ಸುಮಾರು 50 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಎಳೆ ಕಾಯಿಗಳು ಹಸಿರು ಬಣ್ಣದ್ದಿದ್ದು, ಹಣ್ಣಾದಾಗ ಕಡು ನೇರಳೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣು ಸುಮಾರು 1.5 ರಿಂದ 2.0 ಇಂಚು ವ್ಯಾಸವಿದ್ದು, 5 ರಿಂದ 8 ಬೀಜಗಳಿರುತ್ತವೆ.

ಸಮಶೀತೋಷ್ಣ ವಲಯದ ಬೆಳೆಯಾದ್ದರಿಂದ ಬೆಚ್ಚನೆಯ, ಆದ್ರ್ರ ಪ್ರದೇಶಗಳು ಹಾಗೂ ಸಮುದ್ರ ತೀರ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಕನಿಷ್ಠ 250 ಸೆ.ಮೀ. ಮಳೆಯಾಗುವ ಹಾಗೂ ಸಮುದ್ರ ಮಟ್ಟದಿಂದ 800 ಮೀಟರ್ ಎತ್ತರದ ಪ್ರದೇಶಗಳು ಸೂಕ್ತ. ನವೆಂಬರ್ – ಡಿಸೆಂಬರ್ ತಿಂಗಳಿನಲ್ಲಿ ಹೂವಾಗಿ ಏಪ್ರಿಲ್ – ಮೇ ತಿಂಗಳುಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುತ್ತವೆ.

ಸಸ್ಯಾಭಿವೃದ್ಧಿ ಹಾಗೂ ಬೆಳೆಸುವಿಕೆ:

ಬೀಜಗಳಿಂದ ಸಸ್ಯಾಭಿವೃದ್ಧಿ ಸುಲಭ ವಿಧಾನವಾದರೂ, ಮೃದು ಕಾಂಡ (5 ತಿಂಗಳ ಸಸಿಗಳಿಗೆ) ಕಸಿಯಿಂದ ಸಮಾನ, ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯ. ಅಕ್ಟೋಬರ್ ತಿಂಗಳು ಕಸಿ ಮಾಡಲು ಸೂಕ್ತ ಸಮಯ. ಉತ್ತಮ ಕಸಿ ಗಿಡಗಳನ್ನು ಮುಂಗಾರಿನ ಪ್ರಾರಂಭದಲ್ಲಿ 6ಮೀ * 6ಮೀ ಅಂತರದಲ್ಲಿ ನಾಟಿ ಮಾಡಬೇಕು. ತೆಂಗು, ಅಡಿಕೆ, ಗೇರು ಹಾಗೂ ಇತರೆ ಹಣ್ಣಿನ ತೋಟಗಳಲ್ಲಿಯೂ ಸಹ ಇದನ್ನು ಅಂತರ ಬೆಳೆಯಾಗಿ ಬೆಳೆಯಬಹುದು.

ಸಾಮಾನ್ಯವಾಗಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯುತ್ತಾರಾದರೂ ಬೇಸಿಗೆಯಲ್ಲಿ ನೀರುಣಿಸುವುದು ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ವಿಧಾನದಲ್ಲಿ ಬೆಳೆಯಲಾಗುತ್ತದೆ. ಕವಲುಗಳು ಹರಡಿಕೊಳ್ಳುವುದರಿಂದಾಗಿ ಗಿಡಕ್ಕೆ ಆಕಾರ ನೀಡುವುದು ಅತ್ಯಗತ್ಯ. ಗಿಡದ ತುದಿ ಹಾಗೂ ರೆಂಬೆಗಳನ್ನು ಆಗಾಗ್ಗೆ ಸವರುವುದರಿಂದ ಗಿಡದ ಆಕಾರ ಹಾಗೂ ಎತ್ತರವನ್ನು ಬೇಕಾದಷ್ಟು ಮಟ್ಟದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಕೊಯ್ಲು ಮತ್ತು ಇಳುವರಿ:

ಬೀಜದಿಂದ ಬೆಳೆಸಿದ ಗಿಡಗಳಾದಲ್ಲಿ 7 ರಿಂದ 8 ವರ್ಷಗಳಲ್ಲಿ ಹಾಗೂ ಕಸಿ ಗಿಡಗಳಾದಲ್ಲಿ 3 ರಿಂದ 4 ವರ್ಷಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತವೆ. ನಂತರ ಸುಮಾರು 4 ತಿಂಗಳುಗಳಲ್ಲಿ ಹಣ್ಣು ಕೊಯ್ಲಿಗೆ ಬರುತ್ತವೆ. ಎಲ್ಲಾ ಹಣ್ಣುಗಳೂ ಒಮ್ಮೆಲೇ ಕೊಯ್ಲಿಗೆ ಸಿದ್ಧವಾಗದ ಕಾರಣ ಸುಮಾರು 6 ರಿಂದ 8 ಸುತ್ತು ಕೊಯ್ಲು ಮಾಡಬೇಕಾಗುತ್ತದೆ. ಪೂರ್ತಿ ಮಾಗಿದ ಹಣ್ಣುಗಳನ್ನು ಕೊಯ್ಲು ಮಾಡಬೇಕು. ಮರದಿಂದ ಬಿದ್ದ ಹಣ್ಣುಗಳನ್ನು ಹೆಕ್ಕಬಹುದಾದರೂ ಹಣ್ಣಿನ ಗುಣಮಟ್ಟ ಕುಸಿಯುತ್ತದೆ. ನಿರ್ವಹಣೆ ಉತ್ತಮವಾಗಿದ್ದಲ್ಲಿ ಪ್ರತಿ ಗಿಡದಿಂದ ಸುಮಾರು 80 ರಿಂದ 100 ಕೆ.ಜಿ. ಹಣ್ಣುಗಳನ್ನು ನಿರೀಕ್ಷಿಸಲು ಸಾಧ್ಯ. ವರ್ಷದಿಂದ ವರ್ಷಕ್ಕೆ ಇಳುವರಿಯಲ್ಲಿ ವ್ಯತ್ಯಯವಾಗುವುದು ಕಂಡುಬಂದಿದೆ.

ಕೊಯ್ಲಾದ ಹಣ್ಣುಗಳಿಗೆ ಸ್ಥಳೀಯ ಮಾರುಕಟ್ಟೆ ಲಭ್ಯವಿರದ ಕಾರಣ 4 ರಿಂದ 5 ದಿನಗಳೊಳಗೆ ಸಂಸ್ಕರಣೆ ಅತ್ಯಗತ್ಯ. ಸಾಂಪ್ರದಾಯಿಕ ವಿಧಾನದಲ್ಲಿ, ಕೊಯ್ದ ಹಣ್ಣುಗಳನ್ನು ಎರಡು ಹೋಳು ಮಾಡಿ, ಒಳಗಿ ತಿರುಳು ಹಾಗೂ ಬೀಜಗಳನ್ನು ಬೇರ್ಪಡಿಸಿ, ಹಣ್ಣಿನ ಸಿಪ್ಪೆಯನ್ನು ಬಾರಿ ಬಾರಿ ಹಣ್ಣಿನ ರಸದಲ್ಲಿ ಅದ್ದಿ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು. ಹೀಗೆ ಸುಮಾರು 7 ರಿಂದ 8 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿದ ನಂತರ ಅದನ್ನು ವರ್ಷಗಳವರೆಗೆ ಶೇಖರಿಸಿಡಬಹುದು. ಸಿಪ್ಪೆಯನ್ನು ರಸದಲ್ಲಿ ಅದ್ದುವಾಗ ಅದಕ್ಕೆ ಉಪ್ಪು ಹಾಕಿ ಕೂಡ ಒಣಗಿಸಬಹುದು, ಇದರಿಂದ ರುಚಿ ಹಾಗೂ ಶೇಖರಣಾ ಅವಧಿಯನ್ನು ವಿಸ್ತರಿಸಲು ಸಾಧ್ಯ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!