Vydyaloka

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋ ಆಗಿ ಡಾ|| ಚೂಂತಾರು   ಆಯ್ಕೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇದರ ಫೆಲೋ ಆಗಿ ಡಾ|| ಮುರಲೀ ಮೋಹನ್ ಚೂಂತಾರು  ಆಯ್ಕೆಯಾಗಿರುತ್ತಾರೆ. ಇವರ ಸಾಹಿತ್ಯ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ  ನೀಡಿರುತ್ತಾರೆ. 

ಬೆಂಗಳೂರು: ದಿನಾಂಕ 22-02-2022 ನೇ ಮಂಗಳವಾರದಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ.ಯು.ಆರ್ ರಾವ್ ವಿಜ್ಞಾನ ಭವನ ಬೆಂಗಳೂರು, ಇಲ್ಲಿ ವಿಜ್ಞಾನ ಸಂವಹನ ಹಬ್ಬದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶ್ರೀ. ಎಸ್. ಆರ್. ವಿಶ್ವನಾಥ್, ಮಾನ್ಯ ವಿಧಾನಸಭಾ ಸದಸ್ಯರು, ಯಲಹಂಕ ಕ್ಷೇತ್ರ/ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಡಾ|| ಅಶ್ವಥ್ ನಾರಾಯಣ ಸಿ. ಎಸ್, ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಕಾಡೆಮಿ  ಅಧ್ಯಕ್ಷರಾದ ಪ್ರೊ.ಎಸ್. ಅಯ್ಯಪ್ಪನ್, ಇವರು ಸ್ವಾಗತ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇದರ 2022ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಫೆಲೋ ಆಗಿ ಆಯ್ಕೆಯಾಗಿರುತ್ತಾರೆ. ಇವರ ಸಾಹಿತ್ಯ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ಪ್ರದಾನವನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಅಶ್ವಥ್ ನಾರಾಯಣ ಸಿ.ಎಸ್ ಇವರು ನೀಡಿರುತ್ತಾರೆ.  ವಿಶೇಷ ಅತಿಥಿಗಳಾಗಿ ಮಾನ್ಯ ಲೋಕಸಭಾ ಸದಸ್ಯರು, ಬೆಂಗಳೂರು ಉತ್ತರ ಕ್ಷೇತ್ರ/ ಮಾಜಿ ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡ ಇವರು ಭಾಗವಹಿಸಿದ್ದರು.

ಗೌರವಾನ್ವಿತ ಅತಿಥಿಗಳಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಕೆ. ವಿಜಯರಾಘವನ್ ಮತ್ತು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ/ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ|| ಇ.ವಿ. ರಮಣರೆಡ್ಡಿ, ಭಾ, ಆ.ಸೇ ಇವರುಗಳು ಆಗಮಿಸಿದ್ದರು. ಡಾ|| ಎ.ಎಂ ರಮೇಶ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಕ.ವಿ.ತಂ.ಅ ಇವರು ವಂದನಾರ್ಪಣೆ ಮಾಡಿದರು.

Share this: