Vydyaloka

ಕರ್ನಾಟಕ ಆರೋಗ್ಯ ಸಮ್ಮೇಳನ – 2018

ಕರ್ನಾಟಕ ಖಾಸಗಿ ಆಸ್ಪತ್ರೆಗಳು ಶುಶ್ರೂಷತಾ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆ PHANA, ಇದೇ ಸೆಪ್ಟೆಂಬರ್, 9, ಭಾನುವಾರದಂದು ಒಂದು ದಿನದ “ಕರ್ನಾಟಕ ಆರೋಗ್ಯ ಸಮ್ಮೇಳನ – 2018 ಎಂಬ ಶೃಂಗ ಗೋಷ್ಠಿಯನ್ನು ಸೆಪ್ಟೆಂಬರ್, 9, 2018 , ಹೋಟೆಲ್ ವೆಸ್ಟ್ ಎಂಡ್ ನಲ್ಲಿ ಹಮ್ಮಿಕೊಂಡಿದೆ.

ಸಮ್ಮೇಳನದ  ಅಂಗವಾಗಿ ಬಹು ಚರ್ಚಿತ ಕೇಂದ್ರ ಸರ್ಕಾರದ “ಸಾರ್ವಾತ್ರಿಕ ಆರೋಗ್ಯ ರಕ್ಷಣಾ ವಿದಾಯಕ – ಅವಕಾಶಗಳು ಮತ್ತು ಸವಾಲುಗಳು ಹಾಗೂ ಕರ್ನಾಟಕ ಸರ್ಕಾರದ ಕೆಪಿಎಂಇ ಕಾನೂನು ಮತ್ತು ಆರೋಗ್ಯ ವಿಮೆ ಕುರಿತು ಗೋಷ್ಠಿಗಳನ್ನು ನಡೆಸಲಾಗುವುದು. 

ನಾಡಿನ ವೈದ್ಯಕೀಯ ಲೋಕದ ಗಣ್ಯರು ಮತ್ತು ವಿಧ್ವಾಸರು ವೈದ್ಯಕೀಯ ಸೇವೆಗಳ ಸುಧಾರಿತ ವಿಷಯಗಳ ಕುರಿತು ಅಭಿಪ್ರಾಯ ಮಂಡನೆ, ಚರ್ಚೆ ಹಾಗೂ ಶಿಫಾರಸ್ಸುಗಳನ್ನು ಶುಂಗ ಗೋಷ್ಠಿಯಲ್ಲಿ ಮಂಡಿಸಲಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸಾರ್ವತ್ರಿಕ ವೈದ್ಯಕೀಯ ರಕ್ಷಣಾ ವಿದಾಯಕವನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ದೇಶಾಂದ್ಯಂತ ಪರ ಹಾಗೂ ಗೊಂದಲಗಳ ಬಗ್ಗೆ ಚರ್ಚೆ ನಡೆಯುತ್ತಿದೆ.  ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳನ್ನು ಗಣನೀಯವಾಗಿ ಸಲ್ಲಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಈ ವಿಷಯದ ಕುರಿತು ಹೆಚ್ಚಿನ ಬೆಳಕನ್ನು ಚೆಲ್ಲಲು ಈ ಆರೋಗ್ಯ ಸಮ್ಮೇಳನ ಸಹಕಾರಿಯಾಗಲಿದೆ. 

ವೈದ್ಯಕೀಯ ಸೇವೆಗಳನ್ನು ತ್ವರಿತವಾಗಿ ಕಡಿಮೆ ಖರ್ಚಿನಲ್ಲಿ ಹಾಗೂ ವಿಶ್ವಾಸಯುತವಾಗಿ ತಲುಪಿಸಲು ಅನುಗುಣವಾಗುಂತೆ  ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಗ್ರಾಮೀಣ ಭಾಗದಲ್ಲಿ ವೈದ್ಯರು ಹಾಗೂ ಇತರ ವೈದ್ಯಕೀಯ ಸವಲತ್ತುಗಳ ಕೊರತೆಯನ್ನು ನೀಗುವ ಬಗ್ಗೆಯೂ ಈ ಸಮ್ಮೇಳನದಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಗುವುದು.

ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರು ನೆರವೇರಿಸಲಿದ್ದು ಆರೋಗ್ಯ ಸಚಿವ ಶ್ರೀಯುತ ಶಿವಾನಂದ ಎಸ್. ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮಾಜಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಕೆ. ಸುಜಾತ ರಾವ್ ನಿವೃತ್ತ ಐಎಎಸ್ ಅಧಿಕಾರಿ ಅವರು ಸಮ್ಮೇಳನ ಮುಖ್ಯ ಉದ್ಘಾಟನಾ ಭಾಷಣ ನೀಡಲಿದ್ದಾರೆ.  

ಭಾಗವಹಿಸುವ ಗಣ್ಯರು: ಡಾ. ನಾಗೇಂದ್ರಸ್ವಾಮಿ, ಶ್ರೀಮತಿ ಕೆ. ಸುಜಾತ ರಾವ್, ಶ್ರೀ ಜಾವೇದ್ ಅಖ್ತರ್ ಐಎಎಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಆರೋಗ್ಯ ಇಲಾಖೆ, ಡಾ. ಸಿ.ಎನ್. ಮಂಜುನಾಥ್ ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ಸಂಸ್ಥೆ,

ಕರ್ನಲ್ (ಡಾಕ್ಟರ್) ದಯಾನಂದ್ ಮಾಲೇನಹಳ್ಳಿ, ಜೆಎಸ್ ಎಸ್ ಆಸ್ಪತ್ರೆ, ಮೈಸೂರು, ಡಾ. ಮಲ್ಲೇಶ್ ಹುಲಿಮನಿ, ಅಧ್ಯಕ್ಷರು ಕೆ.ಪಿ.ಎಂ.ಇ.ಎ.  ಹಾಗೂ ಇನ್ನಿತರ ಗಣ್ಯರು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಖಾಸಗಿ ಆಸ್ಪತ್ರೆಗಳು – ಕೆಪಿಎಂಇ ಸಂಬಂಧಿತ ಕಾನೂನು ಹಾಗೂ ಆರೋಗ್ಯ ವಿಮೆ ಸಂಬಂಧಿತ ಗೋಷ್ಠಿಯಲ್ಲಿ ಡಾ. ಎಸ್. ಗಾಯಕ್ವಾಡ್, ಡಾ. ನಂದಕುಮಾರ್ ಅಧ್ಯಕ್ಷರು, ಕೊಲಂಬಿಯಾ ಆಸ್ವತ್ರೆಗಳು, ಭಾರತ. ಅಲೆಗ್ಸ್ಯಾಂಡರ್ ಥಾಮಸ್, ಅಧ್ಯಕ್ಷರು, ಎ.ಹೆಚ್.ಪಿ.ಐ. ಡಾ. ಪ್ರಶಾಂತ್ ಸ್ವಾಸ್ಥ್ಯಾ ಹೆಲ್ತ್ ಸಿಟಿ ಹಾಗೂ ನ್ಯಾಷನಲ್ ಹಾಗೂ ಯುನೈಟೆಂಡ್ ಇನ್ಸುರೆನ್ಸ್ ಕಂಪನಿಗಳ ಹಿರಿಯ ಅಧಿಕಾರಿಗಳು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.  

Share this: