ದಕ್ಷಿಣ ಭಾರತದ ಮೇಲಿನ ಸಂಭವಿತ ಹೊರೆಯನ್ನು ತಪ್ಪಿಸಲು ಕೇಂದ್ರ ಹಾಗೂ ಉತ್ತರ ಭಾರತದ ರಾಜ್ಯಗಳು ಆರೋಗ್ಯದ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಪ್ರತಿ ವರ್ಷ 5 ಕೋಟಿ ಜನರು ಕೇವಲ ತಮ್ಮ ಕುಟುಂಬದ ಆರೋಗ್ಯ ಚಿಕಿತ್ಸಾ ವೆಚ್ಚದ ಹೊರೆಯಿಂದಾಗಿ ಬಡತನ ರೇಖೆಯ ಕೆಳಗೆ ಜಾರುತ್ತಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದ್ದು, ಈ ಕಾರಣದಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಹಾಗೂ ಇನ್ನಿತಿರ ವೈದ್ಯಕೀಯ ಮಾನವ ಸಂಪನ್ಮೂಲದ ಕೊರತೆಯನ್ನು ಕಾಣಲಾಗುತ್ತಿದೆ ಎಂದರು.
ಈ ಕುರಿತು MCI ತಕ್ಷಣ ಕಾರ್ಯ ಪ್ರವೃತ್ತ ರಾಗ ಬೇಕೆಂದು ಆಗ್ರಹಪಡಿಸಿದರು.
ಕೇಂದ್ರ ಸರ್ಕಾರದ ಪ್ರಸ್ತುತ ಆಯುಷ್ ಮಾನ್ ಯೋಜನೆ ಯಶಸ್ವಿಯಾಗಿ ದೇಶದ ನಾಗರೀಕರಿಗೆ ಉಚಿತ ಆರೋಗ್ಯ ಸೇವೆಗಳು ದೊರಕಬೇಕಾದರೆ ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳು ಪರಸ್ಪರ ಸಹಕಾರ ಹಾಗೂ ವಿಶ್ವಾಸಾರ್ಹ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಬೆಲೆ ಕುಸಿತದಿಂದಾಗಿ ದೇಶದ ಆರೋಗ್ಯ ಸೇವೆಗಳು ದುಬಾರಿಯಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಫಾನ ಅಧ್ಯಕ್ಷರಾದ ಡಾ. ಮದನ್ ಗಾಯಕ್ವಾಡ್, ನಿಯೋಜಿತ ಅಧ್ಯಕ್ಷರಾದ ಡಾ. ಸಿ ಜಯಣ್ಣ, ಕಾರ್ಯದರ್ಶಿ ಡಾ. ರವೀಂದ್ರ ಹಾಗೂ ಖ್ಯಾತ ಶಿಕ್ಷಣ ತಜ್ಞ ರಾದ ಶ್ರೀ ಪ್ರೊ ಕೆ. ಈ ರಾಧಾಕೃಷ್ಣ ಹಾಗೂ ಮತ್ತಿತರ ಗಣ್ಯರು ಈ ಸಮ್ಮೇಳನದಲ್ಲಿ ಭಾಗವಾಹಿಸಿದ್ದರು.