Vydyaloka

ಕನ್ನಡ ವೈದ್ಯಸಾಹಿತ್ಯ ಸೇವೆ – ಡಾ|| ಮುರಲೀಮೋಹನ್ ಚೂಂತಾರು ಅವರಿಗೆ ರಾಜೀವಗಾಂಧಿ ವಿವಿ ಪುರಸ್ಕಾರ

ಕನ್ನಡ ವೈದ್ಯಸಾಹಿತ್ಯ ಸೇವೆ ಗುರುತಿಸಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಡಾ|| ಮುರಲೀಮೋಹನ್ ಚೂಂತಾರು ಅವರನ್ನು ಗೌರವಿಸಲು ತೀರ್ಮಾನಿಸಿದೆ.  ಇದೇ ಸಂದರ್ಭದಲ್ಲಿ ಡಾ|| ಬಿ.ಡಿ.ಸತ್ಯನಾರಾಯಣ, ಡಾ; ಮಹಾಬಲರಾಜು , ಡಾ|| ಸಂತೋಷ್ ಎಂ ಬೆಳವಾಡಿ, ಡಾ|| ಕೆ ಶಿವಪ್ರಸಾದ,  ಡಾ|| ವೃಂದಾ ಬೆಡೇಕರ್ ಹಾಗೂ ಪ್ರೋಫೆಸರ್ ಕೃಷ್ಣಮೂರ್ತಿ ಅವರನ್ನೂ ಸನ್ಮಾನಿಸಲಿದೆ.

Murali-Mohan-Chuntar
ಡಾ|| ಮುರಲಿ ಮೋಹನ್ ಚೂಂತಾರು

ಮಂಗಳೂರು: ಖ್ಯಾತ ದಂತ ವೈದ್ಯರು ವೈದ್ಯ ಸಾಹಿತಿ ಡಾ|| ಮುರಲಿ ಮೋಹನ್ ಚೂಂತಾರು ರವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಗೌರವಿಸಲು ತೀರ್ಮಾನಿಸಿದೆ.

ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಧನ್ವಂತರಿ ಸಭಾಂಗಣದಲ್ಲಿ ನವಂಬರ್ 5ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ: ಕೆ ಸುಧಾಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ|| ಬಿ.ಡಿ.ಸತ್ಯನಾರಾಯಣ, ಡಾ; ಮಹಾಬಲರಾಜು (ವೈದ್ಯಕೀಯ) ಡಾ|| ಸಂತೋಷ್ ಎಂ ಬೆಳವಾಡಿ (ಆಯುರ್ವೇದ) ಡಾ|| ಕೆ ಶಿವಪ್ರಸಾದ, (ಹೋಮಿಯೋಪಡಿತ) ಡಾ|| ವೃಂದಾ ಬೆಡೇಕರ್ (ಯೋಗ ಮತ್ತು ನ್ಯಾಚುರೋಪತಿ) ಹಾಗೂ ಪ್ರೋಫೆಸರ್ ಕೃಷ್ಣಮೂರ್ತಿ (ಶುಶ್ರೂಷ) ಸೇರಿದಂತೆ 12 ವೈದ್ಯರನ್ನೂ ರಾಜೀವಗಾಂಧಿ ಆರೋಗ್ಯ ವಿವಿ ಸನ್ಮಾನಿಸಲಿದೆ.

 

Share this: